ಎಲೆ ಸಖಿಯೆ ಪೋಗು ವಿಠಲನ ಬಳಿಗೆಬೇಗವನ ತಾರೆ ಎನ್ನ ಮನೆಗೆಪ.
ಚಂದ್ರ ಉದಿಸುತಲಿ ಬಂದ ರಂಜಿಸುತರ-ವಿಂದಬಾಣ ನಡೆತಂದಮಂದಮಾರುತ ಮುಂದೆ ನಿಂದ ಅವ ಕುಸುಮ-ಗಂಧದಿಂದಲೆನ್ನ ಕೊಂದ1
ಕೀರ ನುಡಿಯುತಿದೆ ಧೀರ ಕೋಕಿಲಿಯಸ್ವರ ಕರ್ಣಕಠೋರಮಾರ ಬೇಗ ಹರಿಬಾರದಿರೆ ಕೆಳದಿಕ್ರೂರ ಎನ್ನ ಕೊಲ್ಲದಿರ 2
ಜೀಯ ಸುಜನರ ಸಹಾಯ ನಿಗಮಕುಲಗೇಯ ನಿರ್ಧೂತ ಹೇಯಪ್ರಿಯ ಹಯವದನರಾಯ ಸಖಿ ಎನ್ನಕಾಯಲಿನ್ನೇನು ಉಪಾಯ 3