ಬದುಕು ಬದುಕು ನಂಜುಂಡಾ ಮ
ಪರಿಯಂತ ಪ
ಜನನಿಯ ಮಾತನು ಮೀರದೆ ಪರ
ವನಿತೆಯರಿಗೆ ಮನಸೋಲದೆ
ಬಿನುಗು ದೈವಂಗಳಿಗೆರಗದೆ ದು
ರ್ಜನರ ಸಂಗಗಳ ನೀ ಮಾಡದೆ ನಂಜಾ 1
ತಪ್ಪುದಾರಿಯಲಿ ನೀ ಪೋಗದೆ ಆರು
ಒಪ್ಪದ ಕರ್ಮವ ಮಾಡದೇ
ತಪ್ಪು ಕಥೆಗಳನು ಕೇಳದೆ ಬಲು
ಸಪ್ಪೆ ವಾಕ್ಯಂಗಳನಾಡದೆ ನಂಜಾ 2
ಹರಿಗೆರಗುತ ಹರಿಶರಣರ್ಗೆ ನಮಿಸುತ
ಹರಿಯ ಕಥೆಗಳನ್ನು ಕೇಳುತಾ
ಹರಿಯೆ ಸರ್ವೋತ್ತಮನೆಂದು ನೀನಿರುಕಂಡ್ಯ
ಸಿರಿ ವೈಕುಂಠಕೇಶವ ರಕ್ಷಿಪ ನಂಜಾ 3