ಮಂಗಳ ಮಂಗಳ ಜಯಮಂಗಳ ಶುಭಮಂಗಳ
ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ
ವಿದುರವಂದಿತ ವಿಶ್ವಪಾಲಗ ಮಂಗಳ
ಬುಧಜನ ಸಹಕಾರಗ ಮಂಗಳ
ಯದುಕುಲೋತ್ತಮ ಶ್ರೀಧರಗ ಮಂಗಳ
ಮದನಮೋಹನ ಮೂರುತಿಗೆ ಮಂಗಳ 1
ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ
ಮಸ್ತಕಲಿಹ್ಯ ಮಣಿಮುಗಟಗ ಮಂಗಳ
ಕೌಸ್ತುಭಧರ ಭೂಷಣಗ ಮಂಗಳ
ಹಸ್ತಿಗೊಲಿದು ಸುವಸ್ತುಗ ಮಂಗಳ 2
ಭಾಸ್ಕರಕೋಟಿ ಪ್ರಕಾಶಗ ಮಂಗಳ
ಭಾಸುವ ಭಾವಭೋಕ್ತಗ ಮಂಗಳ
ವಾಸವಾಗಿ ಹ್ಯ ಸದೋದಿತಗ ಮಂಗಳ
ದಾಸ ಮಹಿಪತಿ ಸ್ವಾಮಿಗ ಮಂಗಳ 3