ತಿಳಿವಿಕೆ ನೋಡಣ್ಣಾ ಪ
ಉಬ್ಬುಸಗೊಳುತಲಿ ಹುಡುಕುತ ತಂದು |
ಒಬ್ಬರ ಪದ ಪದ್ಯಗಳನೇ ಹಳಿದು |
ಉಬ್ಬುಬ್ಬಿ, ಹೇಳುವ ತನ್ನದೆಂದು 1
ಹಂಬಲಿಸದೆ ಮೃದು ತಂಪಿನ ಯಲಿಯಾ |
ಬೆಂಬಿಸ ದಾರಿಸಿ ಮುಳ್ಳಿನ ಕೊನೆಯಾ |
ತಿಂಬುವ ಒಂಟೆಯ ಮತಿಪರಿಯಾ 2
ಪರಿಪರಿ ಶೃಂಗಾರದ ಕಲೆಯಂಗಳು |
ಪರಿ ಅರೆಯದೆ ಇರಲು |
ಕೊರತೇನು ಪತಿವ್ರತೆ ಗುಣಗಳು 3
ಸಾರಸ ತಿಳಿಯದೇ ನೋಡಾ|
ನಿಬ್ಬಿರೆನುತಾ ಬಿಟ್ಟವ ಬಲು ಮೂಢಾ |
ಹಬ್ಬುವಾ ಚಾತುರತನ ಕೂಡಾ 4
ಬರೆ ಬೀರುತ ಮಾತುಗಳನೆ ಬಚ್ಚಾ |
ಧರೆಯೊಳು ಹೆಮ್ಮಿಗೆ ಬಿದ್ದನು ಹುಚ್ಚಾ |
ಗುರು ಮಹಿಪತಿ ಸುತ ಪ್ರಭು ಮೆಚ್ಚಾ 5