ಉದೋ ಉದೋ ಉದೋ ಉದೋ ಉದೋ ಯನ್ನಲು
ಉದ ಮುದೋ ಪ
ತಮ್ಮನು ಪೊಗಳಿ ಪಾಲೆನೆ ಅಮ್ಮೊಮ್ಮಾ |
ಮೊಮ್ಮನ ಪಡೆದಿಹ ಜಗದಯ್ಯಾ |
ಸುಮ್ಮನ ಹೊಂದಿಹ ಬಾಲಕ ನಿಮ್ಮಾ |
ಝಮ್ಮನೆ ಸ್ಮರಣೆಗೆ ಬಾನಮ್ಮಾ 1
ಛಂದ ವಿವೇಕದ ಚೌಡಕಿ ಹಿಡಿದು |
ಒಂದೇ ನಿಷ್ಠೆಯ ತಂತಿಯ ಬಿಗಿದು |
ಸುಂದರ ಭಕ್ತಿಯ ರಂಗಕ ಬಂದು |
ಗೊಂದಳ ಹಾಕುವೆ ನಾನಿಂದು 2
ನಾಮಾವಳಿ ಕವಡೆಯ ಸರಥರಿಸಿ |
ಪ್ರೇಮದ ಬಂಡಾರವ ಸುರಿಸಿ |
ಆಮಹಾಜ್ಞಾನದ ಹೊತ್ತ ಪ್ರಜ್ವಲಿಸಿ |
ನಾಮಗೆಜ್ಜಿಲಿ ಕುಣಿವೆನು ಘಲಿಸಿ 3
ಆವನಿಯ ಸುಜನರ ಮೊರೆಯನು ಕೇಳಿ |
ಪರಿ ತಾಳಿ |
ಭವ ಮಹಿಷಾಸುರ ನಸುವನು ಹೋಳಿ |
ಜವದಲಿ ಮಾಡಿದೆ ತುನುಶೀಳಿ 4
ಮುನಿ ಮಾನಸ ತುಳಜಾಪೂರ ಗೇಹಿ |
ಖೂನದೊರಿಸೀ ನಿಜ ಸೋಹೀ |
ಏನೇ ನರಿಯದವನೆಂದರಿತು ಕಾಯೀ |
ಘನಗುರು ಮಹಿಪತಿ ವರದಾಯಿ 5