ತಿಳಿಯದಾಯಿತು ವಯಸು ಕಳೆದು ಹೋಯಿತು ಪ
ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ
ಸತಿಸುತರೆಂಬ ಬಲೆಗೆ ಸಿಲುಕಿ
ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು
ಪತಿತನಾಗಿ ನಿಜದ ಮರ್ಮಾ 1
ಕೆಲದಿನ ಆಟದಿ ಲಲನೆಯರ ಕೂಟದಿ
ಹಲವು ವಿದ್ಯೆಯ ಕಲಿತು ಪರರ
ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ
ಹಲುಬಿ ಹಲುಬಿ ಬಾಯಿನೊಂದು 2
ನೀತಿ ಹೇಳುತಾ ಪರರ ನಿಂದೆಗೆಯ್ಯುತಾ
ಗುರುಮುಖದಲಿ ಪರಮತತ್ವ 3
ಮತ್ತನಾಗುತ ದುರಾಸಕ್ತನೆನಿಸುತ
ನಿತ್ಯಕರ್ಮವನ್ನು ತೊರೆದು
ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ
ಚಿಂತಿಸುತಲಿ ನಿಜದ ನೆಲೆಯ 4
ಗುರುರಾಮವಿಠಲನ ಶ್ರೀಚರಣಕಮಲ
ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ
ಚರಿಸಿ ಸೌಖ್ಯಪಡೆವ ಬಗೆಯ 5