ಒಟ್ಟು 117 ಕಡೆಗಳಲ್ಲಿ , 42 ದಾಸರು , 116 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲ ಭವಭಯ ಹರನೆ ಭಕ್ತಿ ಮುಕ್ತಿದ ಪರಿಪಾಲಿಸು ಧೀರನೆ ಪ. ಪ್ರತಿದಿನ ಉದಯಾರಂಭಿಸಿ ನಾ ಮಾಡುವ ಪಾಪ ತತಿಗಳನೆಲ್ಲವ ಭಸಿತಗೈಸಿ ಪತಿತಪಾವನ ಪರಮಾತ್ಮನ ರೂಪ ಶ್ರೀ- ಪಾದ ಸಂಸ್ಮøತಿಯಿತ್ತು ಕರುಣಿಸು 1 ವರದೇಶ ನಿನ್ನಯ ಚರಣಾರವಿಂದವ ಶರಣೆಂದು ನಂಬಿದ ನರರಿಗಿನ್ನು ಪುರುಷಾರ್ಥಗಳ ಸೇರಿ ಬರುವರಾಶ್ಚರಿಯವೆ ಕರಿರಾಜಗೊಲಿದ ಶ್ರೀಕರಮೂರ್ತಿ ದಯವಾಗು 2 ಘೋರ ಸಂಸೃತಿ ಪಾರಾವಾರ ದಾಟಿಸಲು ಬೇರಾರಿಲ್ಲ ನಿಜ ದಾಸೋದ್ಧಾರ ಹರೆ ವಾರಿಜಾಂಬಕ ವೆಂಕಟಾಚಲನಾಯಕ ಗಾರುಮಾಡದೆ ಬೇಗ ಬಾರೋ ಹೃತ್ಕಮಲದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭದ್ರ ಗೀತಾವಳಿ (ಮದುವೆ ಹಾಡುಗಳು) ಜಯಜನಕಜಾಮಾತ ಜಯಜಾನಕೀ ಕಾಂತ ಮದನ ತಾತ ಜಲಜಾಪ್ತಸಂಕಾಶ ವಿಲಸದ್ಗುಣಾವೇಶ ಲಲಿತ ಸನ್ಮøದುಭಾಷ ಪರಮಪುರುಷ ನತಕಾಮಸುರಧ್ರುಮ ದಿತಿಜಾಬ್ಜಕುಲಸೋಮ ಕ್ಷಿತಿನಾಥ ರಘುರಾಮ ಸಮರಭೀಮ ಪಿತೃವಾಕ್ಯಪರಿಪಾಲ ಸತ್ಯವ್ರತ ಸುಶೀಲ ವಿನುತ ಮಹಿತ ಚರಿತ ಭವಭಯಾಂಭುದಿ ತರಣ ಭಕ್ತಭರಣ ಸೇವ್ಯ ದೇವದೇವ ಸುವಿಮಲ ಯಶಶ್ಚಂದ್ರ ರಾಮಚಂದ್ರ
--------------
ನಂಜನಗೂಡು ತಿರುಮಲಾಂಬಾ
ಭಯ ನಿಜ ನೋಡೊ ಧ್ರುವ ನೋಡದೆ ನೀ ಗುಣದೋಷ ಮಾಡೊ ಸದ್ಗುರು ಉಪದೇಶ ಕಡಿವದು ಭವಭಯಪಾಶ ಕೊಡುವದಾನಂದದ ಹರುಷ 1 ಉಪಾಯದ ಗುಣವರಿಯ ಸುಪಥದೋರು ಶ್ರೀಹರಿಯೆ ಉಪಕಾರವು ನಾ ಮರೆಯೆ ಕೃಪೆಯುಳ್ಳ ನೀ ಧೊರಿಯೆ 2 ತರಣೋಪಾಯದ ಸುಖಬೆರಿಯೊ ಮಹಿಪತಿಯ ನೀ ಹೊರಿಯೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಭವಭಯಹರ ಶ್ರೀ ಮುಕ್ಕುಂದ ಭವರೋಗಕ್ವೈದ್ಯ ಶ್ರೀ ಗೋವಿಂದ ಪ ಧ್ರುವ ದ್ರುಪದತನುಜಾತೆಯೊರೆದ ಹರಿ ಶಿವನುತ ಸಚ್ಚಿತ್ತಾನಂದ ಅ.ಪ ಪಂಕಜಾನಪಿತ ಗೋವಿಂದ ಕಿಂಕರಾಶ್ರಿತ ಗೋವಿಂದ ಶಂಖಧಾರಣ ಸಿರಿಗೋವಿಂದ ಶಂಖಾಸುರನ ಹರ ಗೋವಿಂದ ಮಂಕು ದನುಜಕುಲ ಬಿಂಕ ಮುರಿದ ಅಕ ಳಂಕಮಹಿಮ ಮಹ ಗೋವಿಂದ1 ಸ್ಮರಿಪ ನೆರೆವಾಸ ಗೋವಿಂದ ದುರುಳರ ಕುಲನಾಶ ಗೋವಿಂದ ದುರಿತ ನಿವಾರಣ ಗೋವಿಂದ ಶರಣಜನರಪ್ರಾಣ ಗೋವಿಂದ ತರಳನೋದ್ಧಾರಣ ಕರಿರಾಜವರದನ ತರುಣೆಯ ರಕ್ಷಣ ಗೋವಿಂದ 2 ಜಗದಾಧಾರನೆ ಗೋವಿಂದ ಸುಗಣಗುಣಾಂತರಂಗ ಗೋವಿಂದ ರಘುಕುಲಪಾವನ ಗೋವಿಂದ ಖಗಪತಿವಾಹನ ಗೋವಿಂದ ನಿಗಮಕೆ ಸಿಲುಕದ ಅಗಾಧ ಮಹಿಮ ಜಗತ್ರಯ ಮೋಹನ ಗೋವಿಂದ 3 ನೀಲಮೇಘಶ್ಯಾಮ ಗೋವಿಂದ ಕಾಲಕಾಲಹರ ಗೋವಿಂದ ಪಾಲಸಾಗರಶಾಯಿ ಗೋವಿಂದ ಲೋಲ ವಿಶ್ವರೂಪ ಗೋವಿಂದ ಪಾಲಭಜಕ ಭವ ಜಾಲಹರಣ ಸರ್ವ ಮೂಲಮಂತ್ರ ಹರಿ ಗೋವಿಂದ 4 ಭೂಮಿಜಾತೆಪತಿ ಗೋವಿಂದ ಕಾಮಜನಕ ಶ್ರೀಶ ಗೋವಿಂದ ಕೋಮಲಾಂಗ ರಂಗ ಗೋವಿಂದ ಸ್ವಾಮಿ ಪುಣ್ಯನಾಮ ಗೋವಿಂದ ಶಾಮವರ್ಣನುತ ಪ್ರೇಮಮಂದಿರ ಶ್ರೀ ರಾಮ ದಾಮೋದರ ಗೋವಿಂದ 5
--------------
ರಾಮದಾಸರು
ಭವಭಯಹರ ಸಿರಿಧವ ನರಹರಿ ಪೊರೆ ಭವಭವದಲಿ ನೀಡು ತವಪಾದ ಸೇವೆಯ ಪ ಮನುಮುನಿ ಘನಸುರ ವಿನಮಿತ ಸುಜನರ ಅನುಪಮ ಪ್ರಿಯಕರ ಜನಕಜೆ ಮನೋಹರ 1 ದುರಿತವಿನಾಶ ಪರಮಪ್ರಕಾಶ ಗಿರಿಧರ ಪರಾತ್ಪರ ಪರತರ ಲಕಮೀಶ 2 ಅಸುರಕುಲಾಂತಕ ವಸುಧೆಯುದ್ಧಾರಕ ಅಸಮ ಶ್ರೀರಾಮ ಮಹ ಮುಕ್ತಿಪ್ರದಾಯಕ 3
--------------
ರಾಮದಾಸರು
ಭವಭಯಹಾರ ನಮ್ಮ ಭು'ರಂಗಸ್ವಾ'ು ಗುರುವ ಭಜಿಸಿ ಪೂಜಿಪಬನ್ನಿ ಪಭಾಗವತೋತ್ತಮರು ಭಾಗ್ಯದಣ್ಣಯ್ಯಸುತರುಭೋಗತ್ಯಾಗವಮಾಡಿದ ಭಗವತ್ಸ್ವರೂಪರು 1ಸಾಧ್ವೀಗುರ್ರಮ್ಮಾಂಬಾ ಗರ್ಭೋದ್ಭವರಾಗಿಸದ್ವಿವೇಕವಕೊಟ್ಟು ಸರ್ವರ ಪೊರೆಯುವಾ 2ಸದ್ಗುರು ತುಲಸೀರಾಮರ ಸನ್ನಿಧಿಯೊಳ್ ಪ್ರತ್ಠಿಸಿಸದ್ವಿಲಾಸದೊಳು ಸಂಚರಿಸುತಲಿರ್ಪಾ 3ಸಾರತತ್ವಾ'ಚಾರ ಸರಸದಿ ಸದಾಚಾರಸೂರಿಜನಪರಿವಾರ ಸತ್ಯಾನಂದಾಧೀರಾ 4ಸರಳಕ'ತ್ವಧಾರಾ ಸಕಲಶಾಸ್ತ್ರಾ'ಚಾರ ಸರಿಕಾಣದಾುಹದೀ ಸರ್ವಪತಿತೋದ್ದಾರಾ 5ವರಗುರು ತುಲಸೀರಾಮಾ ಚರಿತಾ ಸ'ಸ್ತರಿಸಿಸಿರಿಚನ್ನಪುರಿಯಲ್ಲೀ ವರಕೀರ್ತಿ ಸ್ಥಿರದಿ ವ'ಸಿ 6'ರಾಜಿಸುತಲಿರ್ಪಾ ವರಗುರುನಿಜವೆಂದೂಪುರದಿ ಸರ್ವಜನರೂ ಪರಿಪರಿಪೊಗಳುವರೂ 7ರಾಮನುಪಾಸನೆಯಾ ಪ್ರೇಮದಿಮಾಡಿದಾರಾಮತುಲಸೀಗುರು ಸ್ವಾ'ುಯಂದದಿಬಂದಿಹಾ 8ಪಾಮರನಾದ ರಾಮಕೃಷ್ಣ ದಾಸೋದ್ಧಾರಾುೀ ಮ'ಯಲ್ಲಿ ಪ್ರಖ್ಯಾತಯಶೋಸಾರ* 9
--------------
ಮಳಿಗೆ ರಂಗಸ್ವಾಮಿದಾಸರು
ಭಾವಯ ಭವಭಾವಿತ ಚರಣಂ ಭವಭಯಾಪರಿಹರಣಂ ಪ ಭಾವದಂ ಹೃದಿ ಅ.ಪ ವ್ಯಾಘ್ರಭೂಮಿಧರಾಗ್ರ ವಿಹರಣ ಮಗ್ರಜನಶರಣ್ಯಂ ಶೀಘ್ರಫಲದಮುದಗ್ರಪೌರುಷ ವಿಗ್ರಹಂ ಸುರಾಗ್ರಗಣ್ಯಂ 1 ಕುಂಡಲೀ ಫಣ ಮಂಡಲಾಶೃತ ಮಂಡಜಾತಗಮನಂ ಹಿಮಕರ ಮಂಡಲ ವದನಂ2 ರಾಮಮಿನಕುಲ ಸೋಮಮಾಶ್ರಿತ ಪ್ರೇಮಮಾಂಜಿಭೀಮಂ ಶ್ಯಾಮಜಲಧರ ಕೋಮಲಂ ಗುಣ ಧಾಮಮೀಸ ಪ್ರೇಮನಾಮಂ 3 ನಂದನಂದನ ಮಿಂದಿರಾ ಹೃದಳಿಂದ ಲೋಲ ಮಿಳಿಂದಂ ಕುಂದರದನ ಮಮಂದ ಕರುಣಾನಂದಿತಾ ಶಿಲಲೋಕವೃಂದಂ 4 ಸಾರನಿಗಮವಿಹಾರ ಕುಶಲಮುದಾರ ವರದ ವಿಠಲಂ ಭೂರಮಾಕುಚಕೊರ ಕಾಂಚಿತ ಚಾರುಮುಕ್ತಹಾರ ಪಟಿಲಂ 5
--------------
ಸರಗೂರು ವೆಂಕಟವರದಾರ್ಯರು
ಭಾವಯೆ ಭವಭಾವಿತಚರಣಂ ಭವಭಯಾಪರಿಹರಣಂ ಪ ಕೋವಿದಂ ನಿಜ ಭಾವದಂ ಹೃದಿಅ.ಪ ವ್ಯಾಘ್ರಭೂಮಿಧರಾಗ್ರವಿಹರಣಮಗ್ರಜನ ಶರಣ್ಯಂ ಶೀಘ್ರ ಫಲದಮುದಗ್ರಪೌರುಷವಿಗ್ರಹಂ ಸುರಾಗ್ರಗಣ್ಯಂ1 ಕುಂಡಲೀಫಣಮಂಡಲಾಕೃತಮಂಡಜಾತಗಮನಂ ಹಿಮಕರಮಂಡಲವದನಂ 2 ರಾಮಮಿನಕುಲಸೋಮಮಾಶ್ರಿತ ಪ್ರೇಮಮಾಜಿಭೀಮಂ ಶ್ಯಾಮಜಲಧರಕೋಮಲಂಗುಣಧಾಮಮೀಶಪ್ರೇಮನಾಮಂ3 ನಂದನಂದನಮಿಂದಿರಾ ಹೃದಳಿಂದ ಲೋಲಮಿಳಿಂದಂ ಕುಂದರದನಮಮಂದಕರುಣಾನಂದಿತಾಖಿಲಲೋಕವೃಂದಂ4 ಸಾರನಿಗಮವಿಹಾರ ಕುಶಲಮುದಾರ ವರದವಿಠಲಂ ಭೂರಮಾಕುಚಕೋರಕಾಂಚಿತ ಚಾರುಮುಕ್ತಾಹಾರ ಪಟಲಂ 5
--------------
ವೆಂಕಟವರದಾರ್ಯರು
ಭೀಮಾ ಭವಭಯಕತಿದೂರಾ ಭೀಮಾಶಂಕರನವತಾರಾ |ಭೀಮಾತೀರದಲಿಹ ವಾಯುಕುಮಾರಾ ಸಮರಂಗಣಧೀರಾ 1 ಮಾಯಾ ಮಾಯಾ ಪಾಶದ ಸಂಗಮವನು ಬಿಟ್ಟಾ |ಲಂಕಾಪುರಿ ಸುಟ್ಟಾ 2 ಶರಣಾಗತ ಭಕ್ತರ ಕಾವಾ | ಶರಣ ಜನರಂತರ್ಭಾವಾ | ಶರಣಾ ಬ್ರಹ್ಮಾದಿಗಳಿಗೆ ಮಹದೇವಾ ಸಂಜೀವನ ತಾವಾ 3 ಕರ್ತಾ ನೆಲವಿಗಿ ಪುರದೊಳಗೆ | ಕರ್ತಾ ರಾಮರ ಸ್ಥಳದೊಳಗೆ | ಕರ್ತಾನುಷ್ಠಾನಿಕ ಸೇವಕರಿಗೆ | ಭಾವನ ಇದ್ಧಾಂಗೆ 4 ರಾಮಾ ಲಕ್ಷ್ಮಣನ ಬಂಧೂ | ರಾಮನ ಸೇವಕನೆಂದೂ |ರಾಮಾಶಂಕರ ಭೇದಿಲ್ಲೆಂದೂ | ತಿಳಿದವ ಸುಖಸಿಂಧೂ 5
--------------
ಭೀಮಾಶಂಕರ
ಮಹಾಲಕ್ಷ್ಮಿ ಇಂದಿರೆ ಮಂದಿರದೊಳು ನಿಂದಿರೆ ಪ. ನಿತ್ಯ ಎನ್ನ ಆಹಾಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ ಅ.ಪ. ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರನಾದ ಅಂಘ್ರಿಚಲಿಸುವ ದಿವ್ಯಸುಸ್ವಾದ ಆಹಾಕಾಲಂದಿಗೆ ಗೆಜ್ಜೆ ಝಳಪಿಸುತ್ತ ನ-ಮ್ಮಾಲಯದೊಳು ನಿಲ್ಲೆ ಪಾಲವಾರಿಧಿಕನ್ನೆ 1 ಸಿರಿ ಅರಳೆಲೆ ಕುಂಕುಮಹೆರಳಗೊ[ಂ]ಡೆಗಳಿಂದ ಹರಿಯ ಮೋದಿಸುವೆ 2 ಜಯ ಜಯ ವಿಜಯಸಂಪೂರ್ಣೆ ಭಕ್ತಭಯನಿವಾರಣೆ ಎಣೆಗಾಣೆ ಎನ್ನಕಾಯುವರನ್ಯರ ಕಾಣೆ ಶೇಷ-ಶಯನನ್ನ ತೋರೆ ಸುಶ್ರೇಣೆ ಆಹಾಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿಹಯವದನನ ದಯವ ಪಾಲಿಸೆ ಲಕ್ಷ್ಮಿ 3
--------------
ವಾದಿರಾಜ
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾರುತಿಪಾದವ ಸ್ಮರಿಸಿರೋ ಸಾರದುರಿತ ಪರಹರಿಸ್ಪೊರೆಯುವ ಧೀರ ಪ ದುರುಳದಾನವನ ವರನಗರುರುಹಿತಾ ಪರತರ ವಿಭೀಷಣನೊರ ಕರುಣದಿ ಕಾಯ್ದ 1 ಬುವಿಯಂ ಕೈಲಾಸಕ್ಕೆ ಜವದಿ ಜಿಗಿದು ವೀರ ಭವಭಯಹರ ವರ ಶಿವನ ಚಿತ್ತರಿದಂಥ 2 ಭಕ್ತವತ್ಸಲ ವರ ಮುಕ್ತಿಕರ್ತ ಗುರು ದತ್ತ ಶ್ರೀರಾಮನ ಭೃತ್ಯನೆನಿಸಿಕೊಂಡ 3
--------------
ರಾಮದಾಸರು
ಮೂಕನಾಗೋ ಮನವೆ ನಿನಗೆ ಯಾಕೀ ಲೋಕ ಗೊಡವೆ ಪ ಮೂಕನಾಗಿ ಬಹುಜೋಕೆಯಿಂದ ನಡಿ ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ ಹೇಳಿದರೇನಾದೋ ನೀ ಬಲು ಕೇಳಿದರೇನಾದೊ ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು ನೀಲಶಾಮನ ಮನದಾಲಯದೊಳಗಿಟ್ಟು 1 ಅವನಿ ಗೊಡವೆ ಯಾಕೋ ಹರಿಯೆಂದು ಭವಭಯವನು ಕಳಕೋ ದಿವನಿಶಿ ನಿಜದನುಭವದೊಳಗಾಡುತ ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2 ಪಾದ ಪಿಡಿಯೋ ಮುಂದಿನ್ನು ಹುಟ್ಟು ಸಾವು ಗೆಲಿಯೊ ದುಷ್ಟಮತಿಗಳ ಗೋಷ್ಠಿಗೆ ಹೋಗದೆ ಬಿಟ್ಟಗಲದೆ ನಿಜಪಿಡಿದು ನೀತಿ 3 ಮತ್ರ್ಯಜನರ ಇದಿರು ನೀ ಬಲು ಗುಪ್ತದಿಂದಿರು ಚದುರ ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4 ನಂಬಿಗಿಲ್ಲದಲ್ಲಿ ಸುಬೋಧ ಡಂಬವೆನಿಪುದಲ್ಲಿ ಜಂಬವಡಿಯದೆ ಕುಂಭಿನಿಯೊಳು ನೀ ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5
--------------
ರಾಮದಾಸರು
ಮೂರ್ತಿ ರಕ್ಷಿಸೋ ನೀನು |ನಿನ್ನ ಪಾದವ ನಂಬಿದೆ ನಾನು ಪ ಪೂರ್ವಾರ್ಜಿತ ಪ್ರಾರಬ್ಧದಿಂದೆ |ತಾಯಿ ಉದರದಲಿ ನಾ ಬಂದೆ ||ಮಲಮೂತ್ರ ಜಠರಾಗ್ನಿಯಲಿ ನೊಂದೆ |ಒಂಬತ್ತು ತಿಂಗಳೊಳಗೆ ಬೆಂದೆ 1 ಬಾಲತ್ವದಲಿ ದುರ್ಬಲನಾದೆ |ಯೌವನ ಕಾಲಕೆ ಅಹಂಮತನಾದೆ ||ಮುಪ್ಪು ಬರಲು ಚಿಂತೆಯೊಳಗಾದೆ |ಸ್ವಾಮಿ ಭಜನೆಗೆ ಅಂತರನಾದೆ 2 ಧರೆಯೊಳಗೆ ದೊಡ್ಡವನೆಂದು |ಭವಭಯಕಂಜಿ ಬೆನ್ನನೆ ಬಿದ್ದೆ ||ದೀನೋದ್ಧಾರಕನೆಂದು ಶರಣು ಬಂದೆ |ಭೀಮಾಶಂಕರನ ಧ್ಯಾನಕೆ ತಂದೆ 3
--------------
ಭೀಮಾಶಂಕರ