ಒಟ್ಟು 77 ಕಡೆಗಳಲ್ಲಿ , 30 ದಾಸರು , 69 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರತನ್ನ ಕರದಲಿ ಪ್ರಾಣಲಿಂಗವನು ಧರಿಸಿಪ್ಪನೆಂಬುದ ಕೇಳಿ ರಾವಣನು ತರುವೆನೆನುತ ಪೋಗಿ ಭಜಿಸೆ ಶಂಕರನ ಕರುಣಿಸಲಾತನ ಮನದಭೀಷ್ಟವನು ದುರುಳ ಖಳತಾ ಕೊಂಡು ಲಿಂಗವ ಪುರಕೆ ಗಮಿಸುವ ವ್ಯಾಳ್ಯದಲಿ ವಿಧಿ ಸುರಪ ಮುಖ್ಯ ಅಮರರು ನಿಮ್ಮಯ ಸ್ಮರಿಸೆ ಮೆಚ್ಚಿದ ಪಾರ ಮಹಿಮನೆ ಮೊರೆ ಹೊಕ್ಕೆ ನಿಮ್ಮ ಪಾದವನು ವಿಘ್ನೇಶ 1 ಕರುಣಿಸೋ ಎನ್ನ ವಾಂಛಿತವ ಸರ್ವೇಶ ಪರಮ ಪಾವನ ವೇಷ ಮುನಿ ಜನರ ಪೋಷಾ ನಿರುತ ಭಕ್ತ ವಿಲಾಸ ನಿರೂಪ ಮಹೇಶ ಹರಿ ಮುಂತಾದವರೆಲ್ಲ ನುತಿ ಸುತ್ತಲಿಂದು ಕರಿವಕ್ತ್ರ ನೀ ಕೇಳು ಪರಮೇಶನಂದು ಕರದ ಲಿಂಗವ ನಿತ್ತನಾ ದಶಶಿರಗೆ ವರ ದೈವ ದ್ರೋಹಿ ರಕ್ಕಸನಾತನಿಂಗೆ ವರ ಮಹಾಲಿಂಗವದು ಸೇರಲು ತಿರುಗಿಡುವಯತ್ನವನು ಪೇಳಿಯೋ ಪೊರೆಯ ಬೇಕೆನಲ ಭಯನಿತ್ತ ನಾ ಮೊರೆಹೊಕ್ಕೆ 2 ಇವಗೆ ಚಕ್ರವನಾಗಹರಿ ಪಿಡಿದಿರಲು ಧನುಜೇಶ ಸಂಧ್ಯಾವಂದನೆಗೆ ಯೋಚಿಸಲು ಘನ ಮಹಿಮನೆ ನೀನು ವಟುರೂಪಿನಿಂದ ಮಣಗುತ್ತಿರಲು ಕಂಡು ಖಳ ಕರದಿಂದ ಅಣುಗನಿಮ್ಮಯ ಮಹಿಮೆಯರಿಯದೆ ಪೇಳೆ ವಿನಯದಿಂ ಲಿಂಗವನು ಖಳಬರುವ ತನಕ ಕರದಲಿ ಪಿಡಿದಂತಹ ಪರಮ ಮಹಿಮನೆ 3
--------------
ಕವಿ ಪರಮದೇವದಾಸರು
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ ಮರಣಕಾಲದಿ ಸಂಸ್ಮರಣ ಮಾತ್ರದಿ ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ 1 ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು ನರಹರಿಯ ರೂಪದಿಂ ಭರದಿ ಕಂಬದಿ ಬಂದು ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ 2 ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ ಉಳಿದಳು ಮಾನದಿಂ ಖುಲ್ಲನ ಸಭೆಯಲಿ ಅನುದಿನ ಚಲಿಸದೆ ಮನವಂ ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ 3
--------------
ರಾಮದಾಸರು
ಹಿಂದೂ ದಾಸ ಇಂದೂ ದಾಸ ಮುಂದೆ ಎಂದೆಂದಿಗೂ ಅರ- ವಿಂದನಾಭ ವಿಠಲನೆ ಗತಿಯೋ ನೀ ಅವನ ದಾಸ ಪ ಬಂಧನದಿ ಬಳಲಿದಿ ಬಂದ ದುಃಖವ ನಾಶಿಸಿ ಹೊಂದಿದಿ ಶ್ರೀ ಹರಿಪಾದ ದಾಸ್ಯವಾ ಮಂದಿರವನ್ನಗಲಿದಿ ಮೂತಿ ಯಾಕೋ ಭವದ ಭೀತಿ1 ಹುಟ್ಟಿದಿ ಹರಿಮತದಿ ಇಟ್ಟ ಹರಿಚಿನ್ಹೆಫಾಲದಿ ಮುಟ್ಟಿ ಭಜಿಸೆಲೋ ದಿಟ್ಟ ಕೃಷ್ಣನ್ನಾ ಇಟ್ಟ ಕಲ್ಲಮೇಲೆ ಪಾದವಿಟ್ಟ ವಿಠ್ಠಲನು ಪೊರೆವಾ 2 ಶಿರಿವರ ನರಸಿಂಹವಿಠ್ಠಲ ಕರುಣದಿ ಪೇಳಿದಾ ನಿನಗೆ ಮರೆಯದೆ ಸೇವಿಸೋ ಹರಿಮೂರ್ತಿಯಾ ಮೂರ್ತಿ ನಿರುತ ಸೇವೆಯ ಕೈಕೊಳ್ಳುವಾ 3
--------------
ನರಸಿಂಹವಿಠಲರು
ಹೇಗಿದ್ದು ಹೇಗಾದೆಯೊ ಆತ್ಮಯೋಗೀಶನಾನಂದಪುರದಲಿರುವುದ ಬಿಟ್ಟು ಪ ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದುಕುಸುಕಾಡಿ ನುಡಿದು ನೆಲಬಟ್ಟೆವಿಡಿದುಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದುವಸುಧೆಯಲಿ ದಿನಗಳೆದೆಯಲ್ಲ ಆತ್ಮ 1 ಎಳಗೆರೆಯಲಿ ಆಡಿ ಯೌವನದೂರಿಗೆ ಬಂದುಥಳಥಳಿಪ ಹಸ್ತಾದ್ರಿ ನೆಳಲ ಸೇರಿಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದುಹಳೆಯ ಬೀಡಿಗೆ ಪಯಣವೇ ಆತ್ಮ 2 ಗನ್ನಗತಕದ ಮಾತು ಇನ್ನು ನಿನಗೇತಕೋಮುನ್ನ ಮಾಡಿದ ಕರ್ಮಭರದೊಡಲಿದೆಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ-ಸನ್ನ ಮೂರುತಿಯ ಭಜಿಸೆಲೊ ಆತ್ಮ 3
--------------
ಕನಕದಾಸ
ಆನಂದಂ ಮಹದಾನಂದಂಹರಿಯ ಭಜನ ಬ್ರಹ್ಮಾನಂದಂ ಪಸತ್ಯ ನುಡಿಯುವುದೆ ಆನಂದಂ ತನ್ನಗುರ್ತ ತಿಳಿಯುವುದೆ ಆನಂದಂನಿತ್ಯನಿರ್ಮಲನ ಸತ್ಯ ಗುಣಂಗಳನುಭಕ್ತಿಯಿಂ ಭಜಿಸೆ ನಿತ್ಯಾನಂದಂಸತ್ಯ ಸತ್ಯ ಸರ್ವೋತ್ತಮ ಹರಿಯೆಂದುಅರ್ತಿಯಿಂ ಭಜಿಸೆ ಅತ್ಯಾನಂದಂ 1ಆಶ ನೀಗುವುದೆ ಆನಂದಂಭವಪಾಶಗೆಲಿಯುವುದೆ ಆನಂದಂಶ್ರೀಶ ಕೇಶವನ ಸಾಸಿರ ನಾಮದಧ್ಯಾಸದಿರುವುದೆ ಲೇಸಾನಂದಂದೋಷದೂರ ಭವಪಾಶಹರನ ಅನುಮೇಷ ಪÀಠಿಸೆ ಸ್ಥಿರದಾನಂದಂ 2ಹಮ್ಮನಳಿವುದೇ ಆನಂದಂ ತಾಸುಮ್ಮನಿರುವುದೆ ಆನಂದಂಕರ್ಮರಹಿತನಾಗಿ ಬ್ರಹ್ಮಪಿತನಪಾದಒಮ್ಮನದೊಳಗಸಮಾನಂದಂಧರ್ಮವಿಡಿದು ಪರಬ್ರಹ್ಮ ಶ್ರೀರಾಮನಮರ್ಮ ತಿಳಿಯೆ ನಿರ್ಮಲಾನಂದಂ 3
--------------
ರಾಮದಾಸರು
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
--------------
ಗೋವಿಂದದಾಸ
ಶ್ರೀ ತತ್ತ್ವವಾದ ಮತವ ಪಶ್ರೀ ತತ್ತ್ವವಾದ ಮತವಾರ್ದಿಶುಭಚಂದ್ರಮನ |ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳಸಲಿಸುವವಾತಜಾತನ ಸ್ಮರಿಸಿರೈ ಅ.ಪಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿಸ್ವಾಮಿಯಾಜೆÕಯನೆ ಕೊಂಡು |ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |ಆ ಮಹದ್ವನದ ದನುಜರನೆಲ್ಲವಳಿದ - ನಿಸ್ಸೀಮ -ಹನುಮನ ಭಜಿಸಿರೈ 1ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |ದ್ವಾಪರನ ಯುಕ್ತಯಿಂದುತ್ಕøಷ್ಟರಾಗಿದ್ದ |ಪಾಪಿಗಳನಳಿದು ಕೀಚಕ - ಜರಾಸಂಧಾದಿಭೂಪಾಲಕರನು ತರಿದು ||ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ -ಲಾಪಥದೊಳಸುರಮಣಿಮಂತಕದನವ ಮಾಡೆ|ಕೋಪದಿಂದವನ ಮರ್ದಿಸಿದನತಿಬಲವಂತನಾ ಪುರುಷನಂ ಭಜಿಸಿರೈ 2ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂದಿಳೆಯೊಳವತರಿಸಿ ಸೋಹಂ ಎಂಬ ಶಂಕರನಹುಲುಮತಂಗಳಜರಿದುಮಾಯಿಗಳಗೆಲಿದು ಮೋಹನ ಶಾಸ್ತ್ರಬಲೆಯನರಿದುಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡುಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾಅಲವಭೋದರ ಭಜಿಸಿರೈ 3ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-ತತ ಧರೆಯೊಳದ್ವೈತವಂಕುರಿಸದಂತೆ ದು-ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳಮತಗಳ ಮತ ಹೆಚ್ಚದಂತೆ ||ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದಯತಿರಾಯರು ಭಜಿಸಿರೈ 4ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆಸರಿಗಾಣೆ ಲೋಕದೊಳಗೆ ||ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |ಪೂರ್ಣಪ್ರಜÕರ ಭಜಿಸಿರೈ 5ಅಕಳಂಕ ಚರಿತನೆ ಮುಮುಕ್ಷ ಮಸ್ತಕದಮಣಿ|ನಿಖಿಳಪೌರಾಣಶ್ರುತಿ ಶಾಸ್ತ್ರದಾಗಮದಖಣಿ|ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದಆಣಿಭಾಗವತಚಿಂತಾಮಣಿ ||ಯುಕುತಿ ಪರಿಪೂರ್ಣಯತ್ಯಾಶ್ರಮಕೆಕಟ್ಟಾಣಿ|ಪ್ರಕಟ ಕವಿಜನಕಮಲವ್ಯೂಹಕೆಗಗನಮಣಿ|ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿಮುಖ್ಯಪ್ರಾಣರ ಭಜಿಸಿರೈ 6ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |ಸಂದೇಹವಿಲ್ಲ ತಪ್ಪದು ವೇದವಾಕ್ಯವಿದುಹಿಂದೆ ಶ್ರೀಹರಿಸೇವೆಯ ||ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ -ನಂದು ಮಾಡಿದಸುಕೃತ- ಫಲದಿಂದ ಬ್ರಹ್ಮತ್ವ |ಬಂದು ಯುಗ -ಯುಗದೊಳವರಿತರಿಸಿ ದೃಷ್ಟವತೋರ್ಪನಂದ ಮುನಿಪರ ಭಜಿಸಿರೈ 7
--------------
ಪುರಂದರದಾಸರು
ಶ್ರೀ ವಿಜಯದಾಸರು134ವಿಜಯದಾಸರೆ ನಿಮ್ಮ ಪಾದವನಜಗಳನ್ನುಭಜಿಸೆ ಭಾಗ್ಯವದೆಂದು ಸಾಧುಜನಮತವು ಪವಸುಧೆವೈಕುಂಠಪತಿವಿಜಯವೆಂಕಟಕೃಷ್ಣಬಿಸಜಭವಪಿತ ಬಿಂದು ಮಾಧವಗೆ ಪ್ರಿಯವಾಸವಾಹ್ವಯ ದಾಸಶ್ರೇಷ್ಠರಿಗೆ ಪ್ರಿಯತಮರೆದಾಸವರ ಸುರವರ್ಯ ವಿಜಯಾರ್ಯ ಶರಣು 1ಮೃತ್ಯು ಅಪಮೃತ್ಯುಗಳ ತರಿದು ನಂಬಿದವರಿಗೆಸತ್ಯಾರಮಣನೊಲುಮೆ ಒದಗಿಸಿದಿರಿಮತ್ರ್ಯರಲಿ ನಾಮಂದನಿಮ್ಮ ನಂಬಿದೆ ಎನ್ನಭೃತ್ಯನೆಂದೆನಿಸಿ ವಾತ್ಸಲ್ಯದಿ ಪಾಲಿಪುದು 2ಎನ್ನ ಸರ್ವೇಂದ್ರಿಯವು ಹೀನವಿಷಯದಿ ರತವುಬಿನ್ನಹವ ಮಾಡಲ್ಕೆ ಬಗೆ ಏನು ಕಾಣೆಘನಔದಾರ್ಯನಿಧಿ ನಿಮಗೆ ಶರಣೆಂಬುವುದುಒಂದನ್ನೆ ನಾ ಬಲ್ಲೆ ಶರಣುಸುರಧೇನು3ಇಷ್ಟಧನ ಆಯುಷ್ಯ ಕೀರ್ತಿ ಉನ್ನತಜಯದುಷ್ಟಭಯ ಬಂಧನಿಗ್ರಹವು ವೈರಾಗ್ಯಉತ್ಕøಷ್ಟ ಹರಿಭಕ್ತಿ ಜ್ಞಾನವೀವುವು ನಿಮ್ಮಶ್ರೇಷ್ಠಪದ ಕೀರ್ತನೆ ನಾಮ ಸಂಸ್ಮರಣೆ 4ಅಜನ ಜನಕನು ಶ್ರೀ ಪ್ರಸನ್ನ ಶ್ರೀನಿವಾಸನುಅಜಿತ ಅಜನಂದಿನೀಪಿತನು ಗೋಪಾಲಅಬ್ಜಶಂಖವ ಪಿಡಿದವರಅಭಯಹಸ್ತ ಶ್ರೀವಿಜಯವಿಜಯಾಪತಿಯ ದಾಸರಿಗೆ ಶರಣು5
--------------
ಪ್ರಸನ್ನ ಶ್ರೀನಿವಾಸದಾಸರು