ಒಟ್ಟು 97 ಕಡೆಗಳಲ್ಲಿ , 34 ದಾಸರು , 94 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯಕಾರಳೆ ಕಾಯೊ ಕರುಣದಿ ಬಾಯಿ ಬಿಡುವೆನೆ ರುದ್ರಾಣಿ ಪ ನೋಯಲಾರದೆ ದೇವಿ ಮರೆಹೊಕ್ಕೆ ನೋವು ಕಳೆಯಮ್ಮ ಭವಾನಿ ಅ.ಪ ಭಕ್ತಜನರಿಗೆ ಆಪ್ತಮಾತೃ ನೀ ನಿತ್ಯೆ ನಿರ್ಮಲರೂಪಿಣೀ ಭೃತ್ಯನೊಳು ದಯವಿತ್ತು ಪೊರೆ ಆದಿ ಶಕ್ತಿ ದೈತ್ಯಸಂಹಾರಿಣಿ 1 ಶುಂಭ ನಿಶುಂಭರೆಂಬ ಖಳರ ಜಂಬ ಮುರಿದೌ ಚಂಡಿಕೆ ಅಂಬೆನಿನ್ನನು ನಂಬಿ ಭಜಿಪೆ ಇಂಬುಗೊಟ್ಟು ಸಲಹಂಬಿಕೆ 2 ಸುರರ ಮೊರೆಕೇಳಿ ದುರುಳÀರ್ಹಾವಳಿ ದೂರಮಾಡಿ ಶೌರಿಯೆ ನೀ(ರಟ)ಸಿದವರಿಗೆ ವರವ ಕರುಣಿಸಿ ಕರುಣ ದೋರಿದೌದರಿಯೆ 3 ಅನ್ನಪೂರ್ಣೆಯೆ ನಿನ್ನ ಪಾದ ವನ್ನು ಭಜಿಸುವೆ ಕಲ್ಯಾಣಿ ಭಿನ್ನವಿಲ್ಲದೆ ನಿನ್ನ ಸುತಗೆ ಸುಖ ವನ್ನು ಕೊಡೆ ನಾರಾಯಣೆ 4 ರಾಮದಾಸರ ಪ್ರೇಮ ಜನನಿಯೆ ನೇಮದಿಂ ನಿನ್ನ ಪಾಡುವೆ ಹೈಮಾವತಿ ಎನ್ನ ಕಾಮಿತಾರ್ಥವ ಪ್ರೇಮದಿಂ ನೀಡು ಕರುಣಿಯೆ 5
--------------
ರಾಮದಾಸರು
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ ಧೀರ ಹನುಮ ಘೋರ ರೂಪವ ತೋರಿ ಪಾರಲು ದೂರ ನಾ ಸಾರೆನು ಅ.ಪ. ಭಾರ ಧರಿಸಿ ಕೋರೆ ತೋರುತ ಘೋರ ರೂಪದಿ ಪೋರನೆನ್ನಿಸಿ ನಾರಿ ಹತ್ಯದಿ ಚಾರುವನವ ಸೇರಿದವನ 1 ಜಾರನೆನ್ನಿಸಿ ನಾರಿ ಮಾನವ ಸೂರೆಗೊಳ್ಳುತ ಪಾರಿಪೋಗುವ ಶೂರ ತೇಜಿಯನೇರಿ ಮೆರೆದ ವಾರಿಜಾಕ್ಷನ ಧೀರ ಕಲ್ಕಿಯ 2 ದಾರಿ ತೋರದೆ ಸಾರಿ ನಿನ್ನನು ಕೋರಿ ಭಜಿಪೆನು ಬಾರಿ ಬಾರಿಗೆ ಭಾರತೀಶನೆ ತೋರು ಕರುಣದಿ ಸಾರಸಾಕ್ಷ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮುದ್ದು ಮುಖದ ಲಕುಮಿ ಎನಗೆ ಶುದ್ಧ ಜ್ಞಾನವÀ ನೀಡೆ ಪ. ಬಿದ್ದಿಹೆ ನಿನ್ನ ಪದದಲಿ ನಿರುತ ಮದ್ಬಿಂಬನ ತೋರೆ ಅ.ಪ. ಹರಿಸರ್ವೋತ್ತಮ ಸುರರಕ್ಷಕನೆಂಬ ಖರೆಯ ಜ್ಞಾನವ ನೀಡೆ ಕರಕರೆಗೊಳಿಸದೆ ದುರ್ವಿಷಯದಲೆನ್ನ ಹರಿಯ ಧ್ಯಾನವನೀಡೆ 1 ನಗೆಮೊಗ ಚಲುವೆ ಖಗವಾಹನ ಪ್ರಿಯೆ ಜಗದೊಡೆಯನ ತೋರೆ ನಿತ್ಯ ಬಗೆ ಬಗೆ ಲೀಲೆಯ ಸುಗುಣವಂತೆ ತಿಳಿಸೆ 2 ಸೃಷ್ಟಿಕರ್ತಗೆ ಪಟ್ಟದ ನಾರಿಯೆ ದೃಷ್ಟ ಇಂದ್ರಿಯವಳಿಯೆ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲ ಸತಿಯೆ 3
--------------
ಅಂಬಾಬಾಯಿ
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು
ಯತಿವರ್ಯ | ಯತಿವರ್ಯ ಪ ಯತಿ ಸುಧೀಂದ್ರಕರ | ಸುತನೆಂದೆನಿಸಿದ ಅ.ಪ. ಪರ | ಮಾರ್ಥವ ಯಾಚಿಪೆ 1 ಪಾದ್ಯ ಹರಿ | ಗುಣ ಸಂಪೂರ್ಣನಗುಣವರ್ಣನ ಸು | ಜ್ಞಾನವ ನೀಯೋ 2 ಪರಿಮಳಾರ್ಯ ತವ | ಚರಣಾರಾಧನೆಕರುಣಿಸಿ ಸುಧೆರಸ | ಎರೆವುದೆನಗೆ ಗುರು 3 ಅನ್ಯನಲ್ಲ ನಾ | ನಿನ್ನವರವನೈಘನ್ನ ಮಹಿಮ ಸಂ | ಪನ್ನ ಪೊರೆಯೊ ಗುರು 4 ಯೋಗಿವರ್ಯ ತವ | ಅಘಹರನಾಮಕೆಮಿಗಿಲಿಲ್ಲವೊ ಗುರು | ಬಾಗಿ ಭಜಿಪೆ ನಿನ 5 ಪರಿ | ಕಾಮ ಫಲಪ್ರದಪಾಮರ ಮನುಜನ | ನೀ ಮಾಣದೆ ಪೊರೆ 6 ಭೂಮಾರ್ಣವ ಗುರು | ಗೋವಿಂದ ವಿಠಲನಕಾಮಿಪೆ ಮೆನ್ಮನ | ಸೀಮೆಯಲಿರಿಸೋ 7
--------------
ಗುರುಗೋವಿಂದವಿಠಲರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ವಂದಿಸುವೆ ಭಾರ್ಗವೀಶ ಸುಂದರಾಂಗ ಲೋಕಾಧೀಶ ಪ ವಂದ್ಯಮಾನ ಪಾದಕಮಲ ಇಂದಿರಾ ಮನೋವಿಹಾರ ಅ ಪ. ಅಷ್ಟಮೂರ್ತಿ ಕಷ್ಟಹರಣ ಕೃಷ್ಣಮೂರ್ತಿ ಶ್ರೀ ಕೇಶವ ದುಷ್ಟದನುಜ ಕುಲವಿನಾಶ ಸೃಷ್ಟಿಪಾಲದೇವಾಧೀಶ 1 ನಿನ್ನ ಪಾದವನ್ನು ಭಜಿಪೆ ಚೆನ್ನಕೇಶವ ಪಾಲಿಸೆನ್ನ ಇನ್ನೂ ಭವದಿ ಶೋಕಗೊಂಬೆ ನಿನ್ನ ಹೊರತಿನ್ಯಾರ ಕಾಣೆ 2 ಪುಟ್ಟ ಧ್ರುವಗೆ ಪಟ್ಟಗಟ್ಟಿ ದಿಟ್ಟತನದಿ ಪೊರೆದ ನೀನು ಕಷ್ಟದಿಂದಜಾಮಿಳನು ಕೂಗೆ ಇಷ್ಟವರವ ನಿತ್ತೆ ದೇವ 3 ಕಾನನದಿ ಸ್ನಾನಗೈದು ಜಪವ ಮಾಡಲಾರೆ ನಾನು ಧೇನುನಗರ ಪತಿಯೆ ನಿನ್ನ ಧ್ಯಾನದಿಂದ ಜ್ಞಾನವೆಂದು 4
--------------
ಬೇಟೆರಾಯ ದೀಕ್ಷಿತರು
ವಾಣಿನಾಥ ನಿನ್ನ ಮಹಿಮೆಕ್ಷೋಣಿಯೊಳಗೆ ಪೊಗಳುವೆನು ಪ ಶ್ರೀನಿವಾಸನಮಲ ಮುಖವಾಮಾನಸಾದಿ ತೋರಿಸೀಗ ಅ.ಪ. ಹರಿಯ ನಾಭಿ ಕಮಲದಲ್ಲಿ ಧರಿಸಿ ತನುವ ತಪತಪೆಂದುಎರಡುವರ್ಣ ಕೇಳಿ ಚರಿಸೆಪರಮಪುರುಷನನ್ನು ಕಂಡೆ 1 ಸಣ್ಣಬಾಲ ನಾಮ ಹರಿಯತಿನ್ನಬೇಡ ನಿನಗೆ ಬಹಳಅನ್ನಮಾಡಿಕೊಡುವೆನೆಂದುಧನ್ಯ ಜಗವ ನಿರ್ಮಿಸಿದೆಯಾ 2 ಕರ್ಮ ಮಾಡದಲೆಇಂದಿರೇಶ ನಿನ್ನ ಮನದಿಪೊಂದಿ ಭಜಿಪೆ ಪಾವನಾತ್ಮಾ 3
--------------
ಇಂದಿರೇಶರು
ವಿಜಯ ಗುರು ಕರಜಾತ | ಮೋಹನ್ನರಾಯಾ ಪ ಪಾದ ರಜಕಾಗಿ | ಭಜಿಪೆ ತವ ಚರಣಾ ಅ.ಪ. ಸುಖತೀರ್ಥ ಸಿದ್ಧಾಂತ | ಪ್ರಾಕೃತದಿ ರಚಿಸಿ ಅಜಭೃಕುಟ ಸಂಜಾತ | ಸುರಮುಖರು ಹರಿಪದಕೇ |ಮುಕುಟಗಳ ಚಾಚಿ ಸದ್ | ಭಕುತಿ ಬೇಡುವರೆಂಬಉಕುತಿ ತರತಮ ಪೇಳಿ | ಮುಕುತಿ ಪಥತೋರ್ದ 1 ಗುರು ಚರಣ ಸರಸಿಜ | ದ್ವಯಕೆರಗಿಬಿನ್ನವಿಸಿ |ಶರಣಜನ ಸಂತತಿಯ | ನೆರೆ ಪೊರೆಯಲೂ |ವರಅಭಯದಿಂ ಚಿನ್ನಿ | ವರದ ಕುಲಸ್ಥಿರ ಮಾಡ್ದಪರಿಸರ ಕುಲೋತ್ಪನ್ನ | ಪೊರೆಯೊ ಮೋಹನ್ನಾ 2 ಭವ ಕಾಯ ಬಳಲಿಹುದೂ |ಶ್ರೀಯರಸ ನಮ್ಮ ಗುರು | ಗೋವಿಂದ ವಿಠಲಪದಪ್ರೀಯದಲಿ ತೋರಯ್ಯ | ಜೀಯದಮ್ಮಯ್ಯಾ 3
--------------
ಗುರುಗೋವಿಂದವಿಠಲರು
ವಿಠಲ ನಮೋ ವಿಠಲ ಮುಟ್ಟಿಭಜಿಪ ದೀನನಿಷ್ಟಾರ್ಥ ಪಾಲಿಸು ಪ ಹೇಸಿಪ್ರಪಂಚದಿ ನಿಂದು ಮಹ ಕ್ಲೇಶಪಂಚಕದಲಿ ಬೆಂದು ಕೆಟ್ಟ ವಾಸನತ್ರಯದಿಂದ ನೊಂದು ಬಲು ಘಾಸಿಯಾದೆ ದಯಾಸಿಂಧು ಆಹ ದೋಷದೂರನೆ ಎನ್ನ ದೋಷನಾಶನ ಗೈದು ಪೋಷಿಸು ಅನುಮೇಶ ದಾಸನೊಳ್ದಯವಾಗಿ 1 ಮರವೆಯೆಂಬುವ ಕವಚ ತೊಟ್ಟು ಬಲು ದುರುಳತನಕೆ ಮನಗೊಟ್ಟು ಮಹ ದರಿವಿನ ಅರಮನೆ ಸುಟ್ಟು ಆಹ ಪರಮದುರಿತದಿ ಬಿದ್ದು ಮರುಳನಾಗಿ ನಿಮ್ಮ ಚರಣಸರೋಜಕ್ಕೆ ಮರೆಹೊಕ್ಕೆ ಕರುಣಿಸು 2 ಹೊಂದಿ ಭಜಿಪೆ ನಿನ್ನ ಬೇಡಿ ಎನ್ನ ಮಂದಮತಿಯ ಕಡೆಮಾಡಿ ನಿಜಾ ನಂದ ಸುಜ್ಞಾನಪದ ನೀಡಿ ಭವ ಬಂಧ ಸಂಕೋಲೆ ಗಡ ಕಡಿ ಆಹ ಸಿಂಧುನಿಲಯ ಬೇಗ ದಂದುಗ ಪರಿಹರಿಸಿ ಕಂದನ್ನ ಉದ್ಧರಿಸು ತಂದೆ ಶ್ರೀರಾಮಯ್ಯ 3
--------------
ರಾಮದಾಸರು
ವ್ಯಾಸರಾಯರು ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ ನಮ್ಮ ಗುರು ವ್ಯಾಸಮುನಿರಾಯ ಪ. ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು ಭಿಲಾಷೆಗಳ ಪೂರೈಸೊ ಅ.ಪ. ಹಿಂದೇಳ ಜನ್ಮಗಳು ಬಂದು ಪೋದವಯ್ಯಾ ಇಂದು ವಸುಧಿಯೊಳಗೆ ಬಂದೆನಯ್ಯಾ ಭವದೊಳಗೆ ನೊಂದೆನಯ್ಯಾ ಬಹಳ ಬೆಂದೆನಯ್ಯ ಅಘಕೂಪದೊಳು ಬಿದ್ದೆನಯ್ಯ ಉದ್ಧರಿಸು ಜೀಯ್ಯಾ 1 ವಂದಿಸುವೆನು ನಿಮಗೆ ನವವೃಂದ ವನದಲಿ ಇರುವೋರು ಇಂದಿರೇಶನ ನೋಡುವೋರು ಆನಂದಪಡುವೋರು ಸಿಂಧುಶಯನ ತಂದು ತೋರಿಸೋ ಇಂದು ನಿಮ್ಮಯ ಪಾದವೊಂದೆ ಭಜಿಪೆ ತಂದೆ ಮಾಡೆಲೊ ಸತ್ಕøಪೆ 2 ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ ವೈಷ್ಣವಾ ಜನ್ಮ ದೊರಕಿತು ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
--------------
ಕಳಸದ ಸುಂದರಮ್ಮ
ವ್ಯಾಸಾ ಬದರಿ ನಿವಾಸಾ | ಎನ್ನಯ | ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ | ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಪ ಸತ್ಯವತಿ ವರಸೂನು ಭವತಿಮಿರ ಭಾನು | ಭೃತ್ಯವರ್ಗದ ಸುರಧೇನು | ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು || ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು | ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು | ಎತ್ತ ನೋಡಲು ವ್ಯಾಪುತ ಸದಾಗಮ 1 ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ | ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | ಬೇಕೆಂದು ಭಜಿಪೆ ನಿಲಸಿ | ಜೋಕೆ ಮಾಡುವುದ | ನೇಕ ಪರಿಯಿಂದ | ನಿಕರ ತರಿಸದೆ | ಭೂಕಾಂತರು ನೋಡೆ | ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ2 ನಿರುತ ಎನ್ನಯ ಅರಿಷ್ಟ | ಮೆರೆವ ಉನ್ನತ ವಿಶಿಷ್ಟ | ಉರಗ ಕಿನ್ನರ ಗಂಧರ್ವರ | ಕರಕಮಲಗಳಿಂದ | ವರಪೂಜೆಗೊಂಬ | ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ | ಶರಸುತ ಬಲು ವಿಸ್ತರ ಜ್ಞಾನಾಂಬುಧೆ || 3
--------------
ವಿಜಯದಾಸ
ಶೇಷದೇವರು ಸ್ಮರಿಸುವೆ ಹರ ವಟತರುಣ ಮೂಲದಿ ಮೃಗಚರ್ಮತಳದಿ ಕೂತು ಹರಿಯ ಭಜಿಪೆನೆ ಪ ನಾಲ್ಕು ರೂಪಗಳನ್ನು ಸ್ವೀಕರಿಸುತ ದಕ್ಷಆ ಕಥಾರಂಭದಿ ಕೂತು ಕೇಳಿದನೇ 1 ಶುಕ ಕೂಸು ದ್ರೋಣನು ದೂ-ರ್ವಾಸ ಮುನಿಪ ಜೈಗೀಷವತಾರಾ 2 ಈಸು ಕರುಣಕೆನ್ನ ಏಸು ಜನ್ಮದ ಪುಣ್ಯಶೇಷ ಒದಗೆ ಇಂದಿರೇಶನ ಶಯ್ಯಾ 3
--------------
ಇಂದಿರೇಶರು
ಶ್ರೀ ಮಧ್ವಾಚಾರ್ಯರು ಸ್ಮರಿಸು ಸಂತತ ಗುರುಗಳಾ ಬಿಡದೆ ಅನುದಿನಾ ಪ ವಾತ ಭೀಮನ ಒಡೆಯ ವೇದವ್ಯಾಸಯುತ ಸಾರಂಗಧರನಆ ಪ್ರೇಮದಿಂದಲಿ ಭಜಿಪೆನಡಿಗಳ ಬಿಡದೆ ಅ.ಪ. ಮಂದ್ರಜಾಸನ ಸುತನ ವಚನ ಕೊಂಡು ಧರೆಯೊಳು ಬಂದು ಭಜಿಸುತ ಪೊಂದಿಪವರ ವೃಂದ ಹರಿಸಿ ಸುಗುಣ ಸುವೃಂದಗಳಿಗೆ ಬಂಧುಪರ ಗೋವಿಂದನೆಂಬುದ ಬೋಧಿಸಿದನ 1 ಮಂಗಳಾಂಗನ ಕೊಂಡು ತುಂಗಕುಲ ತೀರ್ಥರ ಶರದೀ ಬಂದೂ ಭೂಮಿಯೊಳು ಅನಂಗಪಿತನ ಒಲಿಸಿರಂಗರಾಜನ ದೂತನಿಂದಾ ವಿದ್ಯವಾ ಕೊಂಡು ಬಂದು ಪರಮಾದರದಿ ವ್ಯಾಸತ್ರಯಯುತ ಸುಧೆಯನಗರದನಂಘ್ರಿಯಾ 2 ರಘುಕುಲಾ ಜಲಧೀಗೆ ಜಲಜವೈರಿಯಂತೊಪ್ಪುವಾಮಾರನಯ್ಯ ಶಿರಿ ಪರಶು ಪಾಣೀ ಯಾತ ಜಡೆಧಾರ ತುರೀಯನಾಶ್ರಯಿಸೀ ಬಾಣರೂಪವಾ ಬಿಡದೆಬಾಣವಾ ಗುರಿ ಮಾಡಿಬಾಣವರದನ ಸರಿಯೆಂದೆನಿಸಿ ಬಾಣ ಭೇದವನೆ ಬೋಧಿಸಿಬೋಧತೀರ್ಥರ ಮತಾಧಿಪನ ತಂದೆವರದಗೋಪಾಲವಿಠಲನಭಜಕಾ 3
--------------
ತಂದೆವರದಗೋಪಾಲವಿಠಲರು