ಒಟ್ಟು 65 ಕಡೆಗಳಲ್ಲಿ , 26 ದಾಸರು , 64 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪೋಸು ಹೋದುವಲ್ಲ - ಸ್ವಾಮಿ ಎನ್ನ -ಪಾಪೋಸು ಹೋದುವಲ್ಲ................... ಪ.ಅಪಾರ ಜನುಮದಿ ಆರ್ಚನೆಯ ಮಾಡಿದ ..........ಅಪಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |ಪರಿಪರಿ ತೀರ್ಥ ಸ್ನಾನಗಳ ಮಾಡೆ ||ಹರಿದಾಸರ ಕೊಡಿ ಶ್ರೀನಿವಾಸನ ಸಂ -ದರುಶನದಲ್ಲಿ ಮೈಮರೆದಿದ್ದೆನೊ ಎನ್ನ 1ಪರಮ ಭಾಗವತರು ಹರಿಕಥೆ ಪೇಳಲು |ಪರಮ ಭಕುತಿಯಲಿ ಕೇಳುತಿದ್ದೆ ||ಪರಮ ಪಾಪಿಷ್ಠರ ಪಾಲಿಗೆ ಪೋದವು |ಪರಮಾತ್ಮನ ಮನಸಿಗೆ ಬಂತು ಹೀಗೆ ............. 2ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |ದಾಯಾದಿಗಳು ನೋಡಿ ಸಹಿಸಲಿಲ್ಲ ||ಮಾಯಾ ರಮಣ ನೋಡಿ ಪುರಂದರವಿಠಲಮಾಯೆಯಿಂದ ಮಟ್ಟಮಾಯವಾದವು ಈಗ 3
--------------
ಪುರಂದರದಾಸರು
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ1ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ 2ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ3ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ4ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ 5
--------------
ಪ್ರಾಣೇಶದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು
ಶುಭವು ಶ್ರೀಹರಿಯ ನಾಮವು ಸುಜನರಿಗೆಲ್ಲಶುಭವು ಶ್ರೀಹರಿಯ ನಾಮವು ಪಶುಭವು ಶ್ರೀಹರಿಯ ನಾಮವಿಭವದಿಂ ಪೊಗಳಲುಶುಭಕೃತು ನಾಮ ಸಂವತ್ಸರದಲಿಶುಭಶುಭವೆನ್ನುತ ಪಾಡುವರನು ಸಲಹುವಅ.ಪಸಿಂಧುಶಯನ ಹರಿಯಇಂದಿರೆಸಹಿತಚಂದದಿ ಭಜಿಸುವರಮಂದರಧರಅರವಿಂದನಯನ ಶ್ರೀಮು-ಕುಂದಭಕ್ತರ ಭವಬಂಧನ ಬಿಡಿಸುವಪೊಂದಿ ಭಜಿಸುವರಾನಂದದಿ ಸಲಹುವಸುಂದರವದನಶುಭಾಂಗನು ಮುದದಲಿಇಂದ್ರಾದಿಗಳು ಆನಂದದಿ ಪೊಗಳೆ ಗೋ-ವಿಂದ ಆನಂದ ಹೃನ್ಮಂದಿರ ವಾಸನು 1ಶುಭವು ಭಕ್ತರಕಾರ್ಯಕೆ ಶ್ರೀಹರಿಯನಾಮಶುಭವು ಮುಕ್ತಿಸಾಧನಕೆಶುಭವು ಬಂಧುಗಳಿಂದ ಸದನದಿ ವೆÀುರೆಯಲುಶುಭವು ಭಕ್ತರ ವೃಂದ ಕೂಡಿ ನಲಿದಾಡಲುಶುಭಗುಣ ಶೀಲನ ಶುಭಗುಣಗಳು ಸ-ನ್ಮುದದಲಿ ಪಾಡಲು ಶುಭಕೊಡುವನುಶುಭಶುಭಶುಭವೆನ್ನುತ ನಲಿದಾಡೆ ಅ-ಶುಭಗಳನೋಡಿಸಿ ಶುಭವೀವನುಹರಿ2ಶುಭವು ಶೋಭನ ಶ್ರೀಶಗೆ ಶ್ರೀ ಸಹಿತದಿವೆÀುರೆವ ಮಹಾನುಭಾವಗೇಶುಭವೆಂದು ಪಾಡಲುಅಗಣಿತಮಹಿಮನಬಗೆಬಗೆಯಿಂದವರಘ ಪರಿಹರಿಸುವಖಗವಾಹನಶ್ರೀ ಕಮಲನಾಭ ವಿಠ್ಠಲನನು ಪಾಡುವ ಸುಜನರ ಸಲಹುವಹಗಲಿರುಳೆನ್ನದೆ ಭಜಿಸುತ ಪಾಡಿರೊಕಡಲೊಡೆಯನಪಾದಧೃಡ ಭಕುತಿಯಲಿ3
--------------
ನಿಡಗುರುಕಿ ಜೀವೂಬಾಯಿ