ಒಟ್ಟು 97 ಕಡೆಗಳಲ್ಲಿ , 28 ದಾಸರು , 72 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೇಗೆ ಕಳಕೋಬೇಕೋ ಹರಿಹರಿ ನೀನೆ ಕಳೆಯಬೇಕೊ ಪ ಹ್ಯಾಗೆ ತೊಳಕೋ ಬೇಕು ತಿಳಿಯದು ಎನಗಿದು ನೀಗದಂಥ ಈ ಅಗಾಧ ರಿಣಮುಟ್ಟು ಅ.ಪ ಹೆತ್ತಮುಟ್ಟು ಅಲ್ಲ ತೊಳಕೊಳ್ಳ ಲ್ಸತ್ತ ಸೂತಕಲ್ಲ ಭವ ಸುತ್ತಿಸುತ್ತಿ ಬೆ ನ್ನ್ಹತ್ತಿ ಬಿಡದೆ ಕಾಡುತ್ತ ನೋಯಿಪ ರಿಣ1 ನಿಶ್ಚಲಯಿರಗೊಡದು ಜಗದೊಳು ತುಚ್ಛನ ಮಾಡುವುದು ಮುಚ್ಚು ಮರಿಯಾದೆಯ ಬಿಚ್ಚಿಟ್ಟು ಬಯಲಿಗೆ ಹಚ್ಚಿ ಮಾರುವಂಥ ಉಚ್ಚಿಷ್ಠ ರಿಣಮುಟ್ಟು 2 ಭಕ್ತವತ್ಸಲರಾಮ ನೀನೆ ಮುಕ್ತಿಪಥಕೆ ಸೋಮ ನಿತ್ಯ ನಿರ್ಮಲಮನ ಭಕ್ತನಿಗಿತ್ತು ರಿಣ ಮುಕ್ತನ ಮಾಡಿ ಬೇಗಂತಃಕರಣ ನೀಡೊ 3
--------------
ರಾಮದಾಸರು
ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ ಹೇಗೆ ಕಳಿಲಿ ಭವಸಾಗರದಲಿ ಮನ ನೀಗದು ಚಂಚಲ ಸಾಗರನಿಲಯ ಅ.ಪ ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು 1 ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ ಜನರ ಸೇವೆಯೊಳು ದಣಿಸಿತು ಪಾಪಿ 2 ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ ತನುಮನಧನ ನಿನಗರ್ಪಿಸಿ ಬೇಡುವೆ ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ 3
--------------
ರಾಮದಾಸರು
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ ಸಾಗರಶಯನ ಕೃಷ್ಣಾ ಪ ಭಾಗವತರ ಸಂಗ ಬೇಗದಿಂದಲಿ ಇತ್ತು ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ ಬಾಲೇರ ಸಲುವಾಗಿ ಕೀಳು ಜನರಲ್ಲಿ ಶೀಲ ಜರಿದು ಯಾಚಿಸಿ ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ 1 ಅಂಗಜನಾಟಕೆ ಹಗಲಿರುಳೆನ್ನದೆ ಪರ ಅಂಗನೆರ ಕೂಡಿ ಮಂಗಳಮಹಿಮ ತುರಂಗ ವದನ ದೇವ ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ 2 ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ ಕಾರುಣ್ಯದಲಿ ಭಕ್ತನ ಅರಿಷಟ್ಕರನೆ ಕೊಂದು ಕರಿವರದನೆ ಘೋರ ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ 3
--------------
ಪ್ರದ್ಯುಮ್ನತೀರ್ಥರು
ಆರೋಗಣೆಯ ಮಾಡೇಳಯ್ಯ ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
--------------
ಪುರಂದರದಾಸರು
ಇದಿರಾರೊ-ಗುರುವೆ-ಸಮರಾರೊ ಪಮದನಜನಕಪ್ರಿಯ ಗುರುಮಧ್ವರಾಯಅ.ಪಸನ್ನುತಮಹಿಮ ಪ್ರಸನ್ನವದನ ನಿನ-ಗನ್ಯನಲ್ಲವೊ ನೀಯೆನ್ನ ರಕ್ಷಿಸಬೇಕೋ ||ನಿನ್ನ ನೋಡಿದವರ್ಧನ್ಯರಾಗುವರುಎನ್ನ ದಯಾಮೂರ್ತಿ ಮನ್ನಿಸಿ ನೋಡೋ 1ದುರ್ಜನರನು ಗರ್ಜೆನೆಯಿಂದ ಓಡಿಸಿಸಜ್ಜನರನು ಸಂರಕ್ಷಿಸಿದಾತನೆ |ಈ ಜಗದಲಿ ಮಧ್ಯಗೇಹರ ಪತ್ನಿಯಪೂಜ್ಯ ಜಠರದಲಿ ಜನಿಸಿದ ಧೀರ 2ವೇದಶಾಸ್ತ್ರಗಳಿಂದ ಮಾಯಿಗಳ ಖಂಡಿಸಿಸಾಧಿಸಿ ಹರಿಯೆ ಸರ್ವೋತ್ತಮನೆಂದು ||ಮೋದಭರಿತವಾದ ದಿವ್ಯಶಾಸ್ತ್ರವ ಗೈದಮೋದತೀರ್ಥ-ಪುರಂದರವಿಠಲದಾಸ3
--------------
ಪುರಂದರದಾಸರು
ನಾನೇನ ಮಾಡಿದೆನೊ-ರಂಗಯ್ಯ ರಂಗನೀನೆನ್ನ ಕಾಯಬೇಕೋ ಪಮಾನಾಭಿಮಾನವು ನಿನ್ನದು ಎನಗೇನುದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥ರಕ್ಕಸತನುಜನಲ್ಲೇ - ಪ್ರಹ್ಲಾದನುಚಿಕ್ಕ ಪ್ರಾಯದ ಧ್ರುವನು ||ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನಅಕ್ಕನ ಮಗನು ಮಗನು ಏನೋ -ರಂಗಯ್ಯ 1ಕರಿರಾಜ ಕರಿಸಿದನೇ - ದ್ರೌಪದಿದೇವಿಬರದೋಲೆ ಕಳುಹಿದಳೇ ||ಕರುಣದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲವೋ -ರಂಗಯ್ಯಒಪ್ಪಿಡಿಯವಲಕ್ಕಿಯ -ನಿನಗೆ ತಂದುಒಪ್ಪಿಸಿದವಗೊಲಿದೆ ||ಒಪ್ಪುವೆ ನಿನಗೆ ಶ್ರೀಪುರಂದರವಿಠಲವರಪ್ಪಂತೆ ಎನ್ನ ಕಾಯೋ -ರಂಗಯ್ಯ 3
--------------
ಪುರಂದರದಾಸರು
ನಿನ್ನ ನೋಡಿ ಧನ್ಯನಾದೆನೊ - ಹೇ ಶ್ರೀನಿವಾಸ ಪನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ಅ.ಪಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು 1ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ 2ಕಂತುಜನಕಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯಹೊಂತಕಾರಿಪುರಂದರವಿಠಲ
--------------
ಪುರಂದರದಾಸರು
ಬರಬೇಕೋ ರಂಗಯ್ಯ ನೀ - ಬರಬೇಕೊ ಪಬರಬೇಕೊ ಬಂದು ಒದಗಬೇಕೊ ಮಮಗುರು |ನರಹರಿ ನಾರಾಯಣ ನೀನಾ ಸಮಯಕೆ ಅ.ಪಕಂಠಕೆ ಪ್ರಾಣ ಬಂದಾಗ - ಎನ್ನ |ನಂಟರಿಷ್ಟರು ಬಂದಳುವಾಗ ||ಗಂಟು ಹುಟ್ಟಿನ ಕಾಲಬಂಟರು ಕವಿದೆನ್ನ |ಗಂಟಲೌಕುವಾಗ ವೈಕುಂಠನಾರಾಯಣ 1ನಾರಿಯು ಪುತ್ರ ಮಿತ್ರರು -ಬಂಧುಗಳು |ಆರೆನ್ನ ಸಂಗಡ ಬಾರರು ||ಆರಿಗಾರಿಲ್ಲ ಯಮನಾರುಭಟಕೆ ಅಸು-|ರಾರಿ ಮೈಮರೆದಾಗ ನೀರೇರುಹನಾಭ 2ಕರಿಪ್ರಹಲ್ಲಾದಾದಿ ಭಕ್ತರ -ಪತಿ|ಕರಿಸಲು ಒದಗಿದೆ ಶ್ರೀಧರ ||ನೆರೆಹೀನನೆನ್ನ ಉದ್ಧರಿಸಿಅಚ್ಯುತನಿನ್ನ |ಚರಣದೊಳಿಂಬಿಡೊ ಪುರಂದರವಿಠಲ 3
--------------
ಪುರಂದರದಾಸರು
ಶರಣು ನಿನ್ನ ಚರಣಗಳಿಗೆ ಭಾರತೀಶನೆ |ಕರವಪಿಡಿದು ಸಲಹೋ ಬಿಡದೆ ಭಾರತೀಶನೆ ಪಎಲ್ಲ ಕಡೆಗೆ ವ್ಯಾಪ್ತ ನೀನೆ ಭಾರತೀಶನೆ |ಅಲ್ಲಿ ವಿಷವ ಕುಡಿದೆಯೆಂದು ಭಾರತೀಶನೆ ||ಗೆಲ್ಲಿಸಿದೆಯೊ ಸರ್ವ ಸುರರ ಭಾರತೀಶನೆ |ಬಲ್ಲಿದನು ನಿನಗೆಣೆ ಯಾರೋ ಭಾರತೀಶನೆ1ಅಂಜನಾ ಕುಮಾರನಾಗಿ ಭಾರತೀಶನೆ |ಕಂಜನಾಭನಂಘ್ರಿ ಭಜಿಸಿ ಭಾರತೀಶನೆ ||ಲಿಂಜದುದಧಿದಾಟಿ ಪೋಗಿ ಭಾರತೀಶನೆ |ಸಂಜಿ ಚರರ ಸಂಹರಿಸಿದೆಯೊ ಭಾರತೀಶನೆ2ಕುಂತಿ ಜಠರದಿಂದ ಜನಿಸಿ ಭಾರತೀಶನೆ |ಹಂತ ಕೌರವರನ ತರಿದಿ ಭಾರತೀಶನೆ ||ಕಂತುಪಿತನ ಕರುಣ ಪಡೆದೆ ಭಾರತೀಶನೆ |ಅಂತಗಾಣೆ ನಿನ್ನ ಮಹಿಮೆಗೆ ಭಾರತೀಶನೆ 3ಯತಿಯರೂಪಇಳಿಯೊಳಾಗಿ ಭಾರತೀಶ£ É |ಮತಿಯ ಸರ್ವ ಬುಧಂಗಿತ್ತೆ ಭಾರತೀಶನೆ ||ಸತತ ನಿನ್ನ ಪೂಜಿಪರಿಗೆ ಭಾರತೀಶನೆ |ಗತಿಯ ಕೊಡುವೆ ದೋಷ ಕಳೆದು ಭಾರತೀಶನೆ 4ಘನ್ನ ಪ್ರಾಣೇಶ ವಿಠಲ ನಾಳೆ ಭಾರತೀಶನೆ |ಬಿನ್ನಪವನು ಲಾಲಿಸುವದೋ ಭಾರತೀಶನೆ ||ನಿನ್ನ ದಾಸನೆನಿಸಬೇಕೋ ಭಾರತೀಶನೆ |ಅನ್ಯ ವಿಷಯವೊಂದನೊಲ್ಲೆ ಭಾರತೀಶನೆ 5
--------------
ಪ್ರಾಣೇಶದಾಸರು
ಸಲ್ಲದೋ ಕೃಷ್ಣ ಸಲ್ಲದೋಸಿರಿವಲ್ಲಭಇದನೋಡುಪಾಲಿಸಬೇಕೋಪಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡನು ಬಿಟ್ಟು ಮೆಲ್ಲಿಸುವುದು 1ಸಾವಿರ ಹೊನ್ನಿಕ್ಕಿ ಸದನವ ಸಾಧಿಸಿಪಾವಕನುರಿಗೆ ನೀನೊಪ್ಪಿಸಿ ಕೊಡುವುದು 2ಕುಶಲದಿ ಬಣ್ಣಿಸಿ ಬರೆದು ಚಿತ್ತಾರವಮಸಿ ಮಣ್ಣ ಮಾಡಿ ನೀ ಕೆಡಿಸುವುದು 3ಬಲುಕಾಲ ಮುದ್ದಿಸಿ ಕಲಿಸಿ ಮಾತುಗಳನುಗಿಳಿಯ ಸಾಕಿ ಬಾವುಗಗೆ ಒಪ್ಪಿಸುವುದು 4ಕರುಣಿಸುಸಿರಿಪುರಂದರವಿಠಲ ನಮ್ಮಹಿರಿದು ಮಾಡಿ ಮತ್ತೆ ಕಿರಿದು ಮಾಡುವುದು 5
--------------
ಪುರಂದರದಾಸರು
ಹೀಗೆ ಮಾಡಬೇಕೋ-ವಿಠಲ ತಂದೆಹೀಗೆ ಮಾಡಬೇಕೋ ಪಹೇಗಾದರು ದುರಿತಗಳೆನ್ನ ಕಾಡದಹಾಗೆ ಮಾಡ ಬೇಕೋ ಅ.ಪಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮಮುಂದೆ ನಾ ತಾಯ ಉದರದಲಿ ಜನಿಸದಹಾಗೆ ಮಡಬೇಕೋ ವಿಠಲ ತಂದೆ 1ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆಹೀನ ಮಾನವರಿಗೆ ನಾನು ಕೈಯಾನದಹಾಗೆ ಮಾಡಬೇಕೋ - ವಿಠಲ ತಂದೆ 2ಕರುಣಿಪುರಂದರವಿಠಲ ತಂದೆನೆರೆನಂಬಿದೆ ನಿನ್ನಶರಣ ರಕ್ಷಕನೆಂಬ ಬಿರುದು ಬೇಕಾದರೆಹೀಗೆ ಮಾಡಬೇಕೋ - ವಿಠಲ ತಂದೆ 3
--------------
ಪುರಂದರದಾಸರು
ಹೆಂಡತಿಯ ಮಾಡಿಕೊಂಡೆ ಯಾಕೋ ಕಟ್ಟಿ-ಕೊಂಡುಮಂಡೆತುರುಸುವುದ್ಯಾಕೋಪಮಕ್ಕಳಿಲ್ಲವೆಂದು ಬಳಲುವುದೇಕೋ ಎಲ್ಲಮಕ್ಕಳಳಿದರೆಂದು ಅಳುವುದೇತಕೋ1ಎಲ್ಲವ ಉಳಿದು ಹೋಹೆಯಾಕೋ ಮೋಹನವಲ್ಲಭೆಯ ಬಿಟ್ಟು ತೆರಳುವೆ ಯಾಕೋ2ಒಪ್ಪಿಸಯೋ ಸತಿಯ ಸುತರನ್ಯಾಕೋ ನೀನುಬರ್ಪಣಿಲ್ಲ ಪರಾಂಬರಿಕೆ ಯಾತಕೋ3ದುಡ್ಡನೀಗ ಕೈಲಿ ಕೊಟ್ಟೆಯಾತಕೋ ನೀನುದೊಡ್ಡ ಚೇಳು ಕಡಿಸಿಕೊಂಬೆಯಾತಕೋ4ಹೆಂಡತಿಯ ಸಂಗತಿ ಸಾಕೋಮುಂದೆ ಚೆನ್ನ ಚಿದಾನಂದನಾಗಬೇಕೋ5
--------------
ಚಿದಾನಂದ ಅವಧೂತರು