ಒಟ್ಟು 388 ಕಡೆಗಳಲ್ಲಿ , 66 ದಾಸರು , 256 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ 1 ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು 2 ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ 3 ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು 4 ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ- ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ 5
--------------
ಗುರುರಾಮವಿಠಲ
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ ಪಾಲಾಬ್ಧಿ ಬಾಲೆ ಶೀಲೆ ಪ ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1 ದಾತೆ ಖ್ಯಾತೆ ಮಾತೆ | ಸುಜನೋಪಕಾರಿ ಪಾವನಿ ಪ್ರೀತೆ ಸದಯೆ 2 ಸ್ತೋಮವಂದಿತೆ ತ್ರಿಗುಣಮಾನಿ ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
--------------
ಶಾಮಸುಂದರ ವಿಠಲ
ಜಲಧಿ ಜಾತೆ ಬಾಲೆ ಸಾರಸಾಕ್ಷಿ ಮಂಗಳೆ ಹಾರನೂಪುರಾದಿ ಲೋಲೆ ಬಾರೆ ಕಮಲೆ ನಿರ್ಮಲೆ ಪ ರಾಜ ರಾಜ ಪೂಜಿತಾಂಘ್ರಿ ರಾಜಗೃಹ ನಿವಾಸಿನಿ ರಾಜಕಾಂತಿ ಕೋಮಲಾಂಗಿ ರಜಿಸೌ ಮಹಾತ್ಮಳೆ 1 ಮಂಗಳಾಂಗಿ ಭೃಂಗವೇಣಿ ಅಂಗನಾ ಶಿರೋಮಣಿ ಅಂಗಭವ ಸುಮಾತೆ ಪೊರೆಯೆ ಸಂಗತಾರ್ತಿಹಾರಿಣಿ 2 ದೀನನನ್ನು ನೋಡು ದಯದಿಂ ಸಾನುರಾಗದಿಂದಲಿ ಧೇನುನಗರ ಪಾಲಿನಿ ಶ್ರೀ ಮಾನಿನೀ ಹರಿಪ್ರಿಯೆ 3
--------------
ಬೇಟೆರಾಯ ದೀಕ್ಷಿತರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜೋ ಜೋ ಪ ಬಾರೆಯ್ಯ ಗೋವಿಂದಾ ಅರವಿಂದ ನಯನಾತೋರೆಯ್ಯ ಇಂದಿರಾ ಚುಂಬಿತಾ ಚರಣಾಸಾರಯ್ಯ ತೊಟ್ಟಿಲ ಶ್ರೀ ದೇವಿ ಮದನಾಸಾಕಯ್ಯ ಬೀದೀಲಿ ಹುಡುಗರ ಕದನಾ 1 ಬಾಯೆನ್ನ ಕಂದಾ ಬಾ ಎನ್ನ ನಂದಾಬಾ ಇನ್ನು ಮಲಗುವೆ ಮುದ್ದು ಕಂದಾಬಾಯಲ್ಲಿ ತೋರಿದ ಜಗದ ಆನಂದಾಬಾ ಇನ್ನು ತೂಗುವೆ ಮುಚಕುಂದ ವರದಾ 2 ಮಾರ ಸುಕುಮಾರಒತ್ತಿತೂಗುವನಯ್ಯಾ ತಂದೆ ಶ್ರೀ ನರಹರಿ 3
--------------
ತಂದೆ ಶ್ರೀನರಹರಿ
ಡಂಕಿ ಹೊಯ್ಸಿದ ನಮ್ಮ ವೆಂಕಟರಾಯನು ಪಂಕಜಾಕ್ಷರ ಮುಯ್ಯ ತಿರುಗಿಸಿ ಅಸಂಖ್ಯ ರಾಜರು ಬರಬೇಕೆಂದುಪ. ಸುರರು ಮೊದಲೆ ತೀವ್ರದಿಂದ ಬರಬೇಕೆಂದುಭೇರಿನಾದವ ಮಾಡಿದ ಕೃಷ್ಣಬಾರೆ ಬಾರೆ ಭಾಗ್ಯನಿಧಿಯೆ1 ಬೊಮ್ಮಮೊದಲಾದ ಸುರರುತಮ್ಮ ತಮ್ಮ ಸತಿಯರಿಂದ ಝಮ್ಮನೆ ಮುಯ್ಯಕ್ಕೆ ಬರಬೇಕೆಂದುರಮ್ಯಕಾಳಿ ಹಿಡಿಸಿದ ಕೃಷ್ಣ2 ಇಂದ್ರ ಮೊದಲಾದ ಸುರರುಚಂದ್ರ ಸೂರ್ಯರೊಡಗೂಡಿತಂದೆ ರಾಮೇಶನರಮನೆಗೆಒಂದು ಕ್ಷಣದಿ ಬರಬೇಕೆಂದು3
--------------
ಗಲಗಲಿಅವ್ವನವರು
ತಡವ ಮಾಡಲಿ ಬೇಡ ಹಡೆದವ್ವ ಎ ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ ತಡವ ಮಾಡದೆ ಪೊಡವಿಯೊಳು ಕಡು ಸಡಗರಾರ್ಯನ ಹುಡುಕಿ ತಂದರೆ ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ ಕಾಯಸೊರಗಿ ಕ್ಷೀಣವಾಯ್ತೆವ್ವ ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ ಕಾಯರಹಿತ ಕಾರುಣ್ಯನಿಧಿ ಮಾಯತಿಳಿಯುವರಿಲ್ಲ ಆತನ ದಿವ್ಯಚರಿತ ನೆನೆದು ನೆನೆದು ಬಾಯ ಬಿಡುವೆನೆ ಆಯತಾಂಬಕಿ 1 ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ ಮುತ್ತುಯಿಲ್ಲದ ಮೋರೆಯಾಕವ್ವ ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು ಅತ್ತ ಇತ್ತೆಂದೆಳೆಯುತಿಹ್ಯರವ್ವ ಮತ್ತೆ ಬೇಡಲು ದೊರೆಯದಂಥ ಹೊತ್ತು ಸುಮ್ಮನೆ ಹೋಗುತಿದೆ ಕರ್ತ ತುರ್ತು ದೊರೆಯದನಕ ಚಿತ್ತ ಸ್ವಸ್ಥವಾಗದವ್ವ 2 ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು ಕಾಮಿತವನೀಗರಿತುಕೊಂಡೆನವ್ವ ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ ಪ್ರೇಮದಿಂದ ಸುಳಿಯದಿಹ್ಯನವ್ವ ಭಾಮೆಬಾರೆಂದು ಬದಿಲಿಕರೆದು ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ ರಾಮ ನಾನೆಂದ್ಹೇಳಲು ಕ್ಷೇಮ ಪಡೆದು ಬಾಳ್ವೆನವ್ವ 3
--------------
ರಾಮದಾಸರು
ತಡವ ಮಾಡುವಿಯಾಕೊ ಒಡೆಯ ಗೋವಿಂದ ಬಡವನ ಮೇಲಿನ್ನು ಮುನಿಸೆ ಮುಕುಂದ ಪ. ಕೆಟ್ಟ ಕೃತ್ಯಗಳತ್ಯುತ್ಕøಷ್ಟವಾದುದರಿಂದ ಮಂಡೆ ಕುಟ್ಟುವ ತೆರದಿ ಸಿಟ್ಟಿನಿಂದಲಿ ಬಹು ಕಷ್ಟಗೊಳಿಸಿದಿ ಕಟ್ಟ ಕಡೆಯಲಿ ನೀ ಕಟ್ಟ ಬಿಡಿಸಿದಿ 1 ದುಷ್ಟ ಬಾಧೆಯ ಮುರಿದಟ್ಟಿದಿ ದಯದಿ ಘಟ್ಟ ಬೆಟ್ಟಗಳನ್ನು ಮೆಟ್ಟಿ ನಾ ಭರದಿ ನಿಟ್ಟುಸುರಲಿ ಬಾರೆ ಕೃಷ್ಣ ನೀ ಕರುಣದಿ ತೊಟ್ಟಿಲ ಶಿಶುವಿನಂದದಲಿ ಪಾಲಿಸಿದಿ 2 ಜನರ ಸಹಾಯವ ಕನಸಿಲಿ ಕಾಣೆ ಧನಬಲವೆಂದೆಂದಿಗಿಲ್ಲ ನಿನ್ನಾಣೆ ವನರುಹೇಕ್ಷಣ ನಿನ್ನ ನಾಮ ಒಂದೆ ಹೊಣೆ ಯೆನುತ ನಂಬಿದುದರ ಫಲವಿನ್ನು ಕಾಣೆ 3 ಜಗದ ಸಜ್ಜನರಿದು ಮಿಗೆ ಮೀರಿತೆನಲು ಹಗೆಗಳೆಲ್ಲರು ಬಹು ಸೊಗಸಾಯಿತೆನಲು ನಗಲು ಎನ್ನನು ನೋಡಿ ನಗಧರ ನೀ ಬಂದು ಅಘಟಿತ ಘಟನ ಮಾಡಿದಿ ದೀನಬಂಧು 4 ಈ ಪರಿಯಲಿ ನಿರುಪಾಧಿಯೊಳೆನ್ನ ಕಾಪಾಡಿ ಕಡೆಯೊಳೀ ಕಷ್ಟಗಳನ್ನ ನೀ ಪರಿಹರಿಸಲೇಬೇಕು ಪ್ರಸನ್ನ ಶ್ರೀಪತಿ ಶೇಷಾದ್ರಿವಾಸ ಮೋಹನ 5
--------------
ತುಪಾಕಿ ವೆಂಕಟರಮಣಾಚಾರ್ಯ
ತರಕಾರಿ ಹಾಡು ನಿನ್ನ ದಾಸರ ಬಿಟ್ಟನಾ ಬಾಳೆ ಕಾಯೋ ಪ ಮಾರ ಜನಕನೆ ಅಳಿದ ಮಾವನ್ನ ಕಾಯೋ ಸಾರಿ ಕರೆದರೆ ನೀ ಬಾರೆ ಕಾಯೋ ಮಾರ ಜನಕ ನರಸಿಂಹ ವಿಠಲ ನೀ ಮಾಡಿದ್ದೆಲ್ಲವು ಎನಗೆ ಸಮತೆ ಕಾಯೋ 1
--------------
ಓರಬಾಯಿ ಲಕ್ಷ್ಮೀದೇವಮ್ಮ
ತರುಣಿಯರೆಲ್ಲರು ಬಾರೆಂದು ಕರೆವರು ವರಮಣಿಪೀಠಕೆ ಮುದದಿ ಪ. ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಮಾರಜನಕದಯಿತೆ ಸಾರಸಾನನೆ ಮದ ವಾರಣಗಮನೆ ನಿನ್ನಅ.ಪ ಇಂದು ಕುಂದಣದ ಹಸೆಗೆ ಮಂದಹಾಸವ ತೋರಿ ಬಂದೆಮ್ಮ ಮನೆಯೊಳೆಂದೆಂದಿಗು ಕುಂದದಾನಂದವ ಬೀರೆಂದು 1 ಗಾಡಿಕಾರನಾ ಕೃಷ್ಣನ ದೃಢಭಕ್ತರ ಕೈ ಬಿಡದಾಧರಿಸುತ್ತ 2 ನಿರುತಸೇವಿಪ ವರವ ವರಶೇಷಗಿರಿವಾಸನರಸಿ ನೀನಲಿದಿಂದು 3
--------------
ನಂಜನಗೂಡು ತಿರುಮಲಾಂಬಾ
ತೆಪ್ಪದುತ್ಸವ ನಿನಗೆ ಏನು ಹಿತವೋ ಅಪ್ಪ ಹನುಮಯ್ಯ ನಿನ್ನಾಟಕೇನೆಂತೆಂಬೆ ಪ. ರಾಮ ಉಂಗುರ ಸತಿಗೆ ಕಂಡಿತ್ತು ಬಾರೆನಲು ನೇಮದಿಂದಲಿ ನೂರು ಯೋಜನುದಧಿ ಪ್ರೇಮದಿಂದಲಿ ಹಾರಿ ಕುರುಹು ತಂದಾ ಮಹಿಮ ಈ ಮಡುವಿನ ಜಲದಿ ಈ ಆಟವಾಡುವುದು 1 ಕುರುಕುಲಾರ್ಣವವೆಂಬ ಘನ ಶತ್ರು ಸೈನ್ಯವನು ಒರಸಿ ಕ್ಷಣದಲಿ ಭುಜಬಲದ ಶೌರ್ಯದಲಿ ಧುರವೆಂಬ ಶರಧಿಯನು ಲೀಲೆಯಲಿ ದಾಟಿದಗೆ ವರ ಸರೋವರದ ಈ ಜಲದಾಟವಾಡುವುದು 2 ಅನ್ಯ ದುರ್ಮತ ಮಹಾರ್ಣವನು ಶೋಷಿಸುತ ಬಹು ಉನ್ನತದ ವೇದ ಶಾಸ್ತ್ರಾರ್ಣವದಲಿ ಚೆನ್ನಾಗಿ ಈಜಿ ಶ್ರೀ ಹರಿಚರಣ ದಡ ಸೇರ್ದ ಘನ್ನ ಮಹಿಮನಿಗೆ ಈ ಚಿನ್ನ ಮಡುವೀಜುವುದು 3 ಮುಕ್ತಿಯೊಗ್ಯರ ಕರ್ಮಶರಧಿಯನು ದಾಟಿಸುತ ಮುಕ್ತರಾಶ್ರನ ಪುರ ಸೇರಿಸುವನೆ ಅತ್ಯಂತ ಅಲ್ಪ ಈ ಜಲದಾಟವಾಡಿದರೆ ಭಕ್ತರಾದಂತ ದಾಸರು ನಗರೆ ಹನುಮ 4 ವರ ಕದರುಂಡಲಿಯಲ್ಲಿ ನೆಲಸಿರುವ ಭಕ್ತರಿಗೆ ಮರುಳುಗೊಳಿಸುತ ಮಹಾ ಮಹಿಮನೆನಿಸಿ ಪರಿಪರಿಯ ಉತ್ಸವಪಡುವೆ ಶ್ರೀ ಕಾಂತೇಶ ಸಿರಿರಮಣ ಗೋಪಾಲಕೃಷ್ಣವಿಠ್ಠಲನ ದಾಸ 5
--------------
ಅಂಬಾಬಾಯಿ
ತೆರಳಿದ ನಮ್ಮರಂಗ ಅರಳುಮಲ್ಲಿಗೆ ಹೂವತರುಳೆ ಸೂರ್ಯಾಡಿ ಬಾರೆ ಪ. ರಾಜ ರಾಜರು ಸಹಿತ ಭೋಜನ ಮಾಡಿ ಕೃಷ್ಣರಾಜ ಗೋಪಾಲನೀಗ ತೆರಳಿದ 1 ಕಂಬು ಕಂದರನೀಗ ತೆರಳಿದ 2 ಇಂದಿರೇಶ ತಾನು ಚಂದ್ರ ಸಾಲಿಗ ಳಿಳಿದು ತಂದಿ ಭಕ್ತರ ಮನೆಗೆ ತೆರಳಿದ3 ಪ್ರೇಮದಿ ಕೃಷ್ಣರಾಯ ಸೋಮ ಸಾಲಿಗ ಳಿಳಿದು ಸ್ವಾಮಿ ಭಕ್ತರ ಮನೆಗೆ ತೆರಳಿದ 4 ಕುಂತಿ ದೇವಿಯರ ಪುಣ್ಯ ಎಂತು ವರ್ಣಿಸಬೇಕು ಶ್ರೀಕಾಂತನು ಅವರ ಅರಮನೆಗೆ ತೆರಳಿದ5 ಮತ್ತೆಪಾಂಡವರ ಪುಣ್ಯ ವಿಸ್ತರಿಸಲೊಶವಲ್ಲಚಿತ್ತಜನೈಯನೀಗ ತೆರಳಿದ6 ಪಕ್ಷಿವಾಹನ ಸ್ವಾಮಿ ಲಕ್ಷರೂಪವೆ ಧರಿಸಿ ಲಕ್ಷ್ಮಿರಮಣ ನೀಗ ತೆರಳಿದ 7 ಹಾಟಗಾಂಬರ ಧಾರಿ ಕೋಟಿ ರೂಪದಿ ಜಗನ್ನಾಟಕ ಕೃಷ್ಣನೀಗ ತೆರಳಿದ 8 ಚನ್ನರಾಮೇಶ ತಾನು ಅನಂತ ರೂಪವಧರಿಸಿತನ್ನ ಭಕ್ತರ ಮನೆಗೆ ತೆರಳಿದ 9
--------------
ಗಲಗಲಿಅವ್ವನವರು
ತ್ವರಿತದಿ ಬಾರೆ ಸಖಿ ಸುನೇತ್ರೆ | ಹರುಷದಿ ಪೀಠಕೆ ಮಂಗಳಗೀತೆ ಪ ಮಿನುಗುವ ನಯನಾ ಕನಕಾಭರಣಾ | ಮಣಿಮುತ್ತಿನ ವನಮಾಲೆಯು ಧರಿಸುತ 1 ರತ್ನದಹಾರ ದಿವ್ಯಾಂಬರದಿ | ಮಿತ್ರಿ ನೀಶೋಭಿಸುತ ಪೀಠಕೆ ಮುದದಿ 2 ಕೋಮಲೆ ಬಾಲೆ ಸುಶೀಲೆ ಶಾಮಸುಂದರನ ನಾಮವ ಪಾಡುತ 3
--------------
ಶಾಮಸುಂದರ ವಿಠಲ
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ. ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1 ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2 ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3 ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4 ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5 ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6 ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7 ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8 ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
--------------
ಗಲಗಲಿಅವ್ವನವರು
ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ ಧರೆಯೊಳು ಸುಜನರಾ ಪೊರೆಯಲೋಸುಗ ನೀನು ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1 ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ ದೇಶ ದೇಶದಿ ಜನರು ಬಂದು ಕಾದಿಹರೋ2 ಕರೆದಾರೆ ಬರುವಂಥ ಕರುಣಸಾಗರ ನೀನು ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3 ಬೇಡಿದಳಾ ವರಗಳ ಕೊಡುವ ನೀನೆನುತಲಿ ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4 ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5
--------------
ರಾಧಾಬಾಯಿ