ಒಟ್ಟು 68 ಕಡೆಗಳಲ್ಲಿ , 29 ದಾಸರು , 66 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು 1ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು 2ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು 3ಕಾಲಿಕೆಕಟ್ಟಾಣಿಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು 4ಹೇಳಿದರೆ ಮಾತುಕೇಳಿಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು 5ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು 6ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||ಆ ದಿನ ನಾವೇಕತ್ರದಲ್ಲಿರೆಗಂಡಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು7ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||ನೆತ್ತಿಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು 8ಒಂದಾಡುತೊಂದಾಡುವರುನಿಂದುನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು 9ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆವೇಣುಕೇಳಿಸುವುದು ||ಪನ್ನಗಶಯನನಾಜೆÕಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು 10ಕರಿಸಿಂಹಗಳು ಹುಲಿತುರುತುರುಗಮಹಿಷಿ|ಮರೆದು ವೈರತ್ವ ಹರಿಸ್ವರ ಕೇಳುತಿಹವು ||ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು11ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರುನಿಂದುಪ್ರಾರ್ಥಿಸುವರು ||ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು 12ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು13ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು 14ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು 15ಹರಿಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತುಕ್ಲೇಶ|ಹರದೆರಚ್ಯುತನರಸುತವನಹೊಕ್ಕರು 16ಹರಿಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿಹರಿ! ಜೀವಿಸುವದೆಂತು ಹೇಳಿರೆಂಬೊರು 17ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು 18ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನಸುಖ ಬಡಿಸುತ ದಕ್ಕಿದಂತಿರುವನು 19ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||ಮಾವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ20ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು 21ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆನವನೀತ|ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||ಘೋರಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರುಮಾಡಿದರೆ ಬಟ್ಟಬವಣೆಹೇಳಿದಳು22ಸಮದುಃಖಿಗಳಾಗಿಹರಿಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶಮುಂಚಿನಂತೆಲ್ಲರೊಳಾಡಿದನು 23
--------------
ಪ್ರಾಣೇಶದಾಸರು
ವೀರ ಬಂದ ವೀರ ಬಂದಘೋರಹಮ್ಮುಎಂಬ ದಕ್ಷನತೋರ ಶಿರವರಿಯಲೋಸುಗಪಭಯನಿವಾರಣವೆಂಬ ಕಾಸೆಯನೆ ಹೊಯ್ದಜಯಶೇಖರನೆಂಬ ವೀರ ಕಂಕಣಕಟ್ಟಿನಿಯತ ಸಾಹಸವೆಂಬ ರತ್ನ ಮುಕುಟವಿಟ್ಟುಸ್ವಯಂ ಸೋಹಂ ಎಂಬ ಕುಂಡಲವ ತೂಗುತ1ಆಡಲೇನದ ಶುದ್ಧವೆಂಬ ಭಸಿತವಿಟ್ಟುರೂಢಿಯ ಸತ್ಪವೆಂದೆಂಬ ಹಲಗೆಯಾಂತುಇಡಾಪಿಂಗಳವೆಂಬ ಪಾವುಗೆಗಳ ಮೆಟ್ಟಿಗಾಢ ಧೈರ್ಯವೆಂಬ ಖಡುಗ ಝಳಪಿಸುತ2ಒಂದೊಂದೆ ಹೆಜ್ಜೆಯನಂದು ಪಾಲಿಸುತಾಗಹಿಂದೆಡಬಲ ನೋಡದೆ ಮುಂದು ನಿಟ್ಟಿಸಿಛಂದಛಂದದಲಾಗುವಣಿ ಲಗುವಿನಿಂದಬಂದನು ಬಹು ಶೂರಧೀರ ಮಹಾವೀರ3ದಾರಿ ಊರುಗಳನೆ ಧೂಳಿಗೋಂಟೆಯ ಮಾಡಿಆರಾಧರೇನು ಶಿಕ್ಷಿಸುವೆನೆಂದೆನುತಭೇರಿಕರಡಿ ಸಮ್ಮೇಳಗಳೊಡಗೂಡಿಕಾರಣವಹ ಯಜÕಮಂಟಪದೆಡೆಗಾಗಿ4ಸುಷುಮ್ನವೆಂದೆಂಬ ಬಾಗಿಲ ಮುರಿಯುತ ಆಸಮಯದಿ ಬಂದ ಅಸುರರ ಕೊಲ್ಲುತಭೇಸರಿಸುವ ದೊರೆ ದೊರೆಗಳನಿರಿಯುತದ್ವೇಷರೆನಿಪ ಷಡುರಥಿಕರ ಕಟ್ಟುತ5ಅಷ್ಟಸಿದ್ಧಿಗಳೆಂಬ ದಿಕ್ಪಾಲಕರ ನಟ್ಟಿಭ್ರಷ್ಟ ಮೋಹವದೆಂಬ ಯಮನ ಹಲ್ಮುರಿದೆತ್ತಿನಷ್ಟಮನವೆಂಬ ಬೃಗುವಿನ ಮೀಸೆಯ ಕಿತ್ತುಶಿಷ್ಟಶಿಷ್ಟರನು ಎಲ್ಲರ ಕೆಡೆಮೆಟ್ಟಿ6ಹಮ್ಮುತಾನಾಗಿರುತಹಉನ್ಮತ್ತದಕ್ಷನ ಶಿರವನು ತರಿಯುತಲಾಗಗಮ್ಮನೆ ತ್ರಿಕೂಟ ಯಜÕಕುಂಡದೊಳುಸುಮ್ಮನಾಹುತಿಯಿಟ್ಟು ಸುಲಭದಲಿ ನಲಿಯುತ7ಪಾಪರೂಪನಾದ ಜೀವದಕ್ಷನನುಈ ಪರಿಯಲಿ ಕೊಂದು ನಾಟ್ಯವಾಡಲುಭಾಪುರೇ ಎಂದು ಸಾಧು ಪ್ರಮಥರು ಹೊಗಳಲುತಾಪಹರನಾಗಿ ಶಾಂತಿಯ ಹೊಂದುತ8ನಿರುಪಮನಿತ್ಯನಿರಾಳನೆ ತಾನಾಗಿಪರಮೇಶಪರವಸ್ತುಪರತರವೆಯಾಗಿಭರಿತ ಚೇತನ ಪ್ರತ್ಯಗಾತ್ಮನೆ ತಾನಾಗಿನಿರುತ ನಿತ್ಯಾನಂದ ಚಿದಾನಂದಯೋಗಿ9
--------------
ಚಿದಾನಂದ ಅವಧೂತರು
ಶೋಭಾನವೇ ಬಗಳಾಮುಖಿ ದೇವಿಗೆಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿಪಸುತ್ತಿದ ಸರಿಗೆಯು ಒತ್ತಿದ ಚಿಂತಾಕೆತ್ತಿದ ರಾಗಟೆ ಹತ್ತಿದ ಚವುರಿಮತ್ತೆ ತುರುಬಿಗೆ ಪಂಚಕ ಮುಡಿದಿಹಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ1ಶ್ರವಣ ಮನನ ನಿಧಿಧ್ಯಾಸನ ಸಾಧಿಸಿಭವಭವಗಳ ತರಿದೆಲ್ಲವ ಛೇದಿಸಿಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆಪವಳದಾರತಿಯೆ ಬೆಳಗಿರೆ2ವಾಲೆಬಳೆಗಳು ತಾಳಿಯು ಮೂಗುತಿಸಾಲಿನ ಅಡ್ಡಿಕೆ ತಾಯಿತ ಸರಪಳಿಮೇಲು ಪದಕವೆ ಮೆರೆದಿಹ ಮೆರೆದಿಹ ಬಗಳಾಮುಖಿಗೆಲೋಲದಾರತಿ ಬೆಳಗಿರೆ3ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿಧರಿಸಿಹ ಸದ್ಗುರುನಾಥಗೆತೈಲದಾರತಿಯ ಬೆಳಗಿರೆ4ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆಜಸವುಂಗರ ಮೀನೆಸೆದಿಹಮುದ್ರಿಕೆಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆಶೀಲದಾರತಿಯ ಬೆಳಗಿರೆ5ಧಗಧಗಿಸುವ ಪೀತಾಂಬರದುಡುಗೆಯಝಗ ಝಗಿಸುವ ಮಹಾಸ್ವರ್ಣದ ಕಂಚುಕಿನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆಸುಗಮದಾರತಿಯ ಬೆಳಗಿರೆ6ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿಮೊಗೆ ಮೊಗೆದು ದಶನಾದವ ಸೇವಿಸಿಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆಸುಗಮದಾರತಿಯ ಬೆಳಗಿರೆ7ಸಪ್ತಾವರಣ ಭಸ್ಮವ ಮಾಡಿಸಪ್ತಭೂಮಿಕೆ ಪಾವಟಿಗೆಯನೇರಿಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆತೃಪ್ತದಾರತಿಯ ಬೆಳಗಿರೆ8ಕಂಕಣ ಹರಡಿಯ ಹಸ್ತದ ಕೈಯ್ಯಲಿಅಂಕುರಪಟ್ಟಿಯು ಪರಿಘವು ಶರಧನುಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗೆಪಂಕಜದಾರತಿಯ ಬೆಳಗಿರೆ9ಸಾರಿಯೆ ತ್ವಂ ಪದ ತತ್ವಮಸಿ ಪದಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ10ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ11ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆಅಭಯವ ನೀಡುತ ಭಕ್ತಿರಿಗಾಧಾರವಾಗಿ ಕರುಣಿಪಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ12ಚಿದಾನಂದ ಪರಬ್ರಹ್ಮವು ತಾನೇಮದಮುಖನು ಸಂಹರಿಸಲೋಸುಗಸದನಬ್ರಹ್ಮ ರಂಧ್ರದಿ ಸ್ಥಾನವಾಯ್ತುಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ13ಸಿದ್ದ ಪರ್ವತವಾಗಿಹ ಪ್ರ-ಸಿದ್ಧ ಬಗಳಾಮುಖಿಯೆಂದೆಣಿಸುವಸಿದ್ಧ ಚಿದಾನಂದಾವಧೂತಅವಧೂತಸದ್ಗುರುನಾಥಗೆಸಿದ್ಧದಾರತಿಯ ಬೆಳಗಿರೆ14
--------------
ಚಿದಾನಂದ ಅವಧೂತರು
ಷಡ್ವರ್ಗ ಸುಳಾದಿಝಂಪೆತಾಳಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರನೆನವಿನಲಿ ಜನುಮಗಳ ತಂದೀವ ಕಾಮಕನಕಗಿರಿ ಕೈಸಾರ್ದಡಂಪರಸುದೊರೆದಡಂಇನಿತು ತೃಪುತಿಯೈದದೆನ್ನ ಮನೋಕಾಮಜನಪರ ಸಿರಿಬಯಕೆ ಜಾಣೆಯರ ಸಂಗತಿಯಕನಸಿನೊಳಗಾದಡಂ ಬಿಡದಿಹುದು ಕಾಮತನಗಲ್ಲದ್ಹವಣದಿಹ ಕಾಮಕಾಮಿನಿಭೂತಕೆನಿತಶನ ಸಾಲದಾಯಿತೈ ಪೂರ್ಣಕಾಮಮುನಿನಾರಿಯಳ ಕಲ್ಲಮೈಯನೆತ್ತಿದಪಾದವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನಜ್ಞಾನ ಭಕುತಿ ವೈರಾಗ್ಯ ಕಾಮವನೀಯೊದಿನಕರಕುಲೋದ್ದಾಮ ಪ್ರಸನ್ವೆಂಕಟ ರಾಮ1ಮಠ್ಯತಾಳಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧಬರಿಯಹಂಕಾರದಿ ಬೆರತಘರಾಶಿಯನೆರಹಿಸಿ ನಿರಯವನುಣಿಸುವ ಕ್ರೋಧಮರುಳನ ದುರುಳನ ಮಾಡುವ ಕ್ರೋಧಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿಶಿರದ ಮ್ಯಾಲಿಡು ಗಡ ಗರುಡಾದಿ ಪ್ರಸನ್ವೆಂಕಟ ತಾಂಡವ ಕೃಷ್ಣ 2ರೂಪಕತಾಳಹೀನ ಧರ್ಮನ ಮಾಡಿಸುರಋಷಿಪಿತೃ ಋಣವೇನು ಕಳಿಯಲಿಲ್ಲವೆನ್ನ ಲೋಭಜೇನನೊಣನ ವೋಲು ತಾನುಣ್ಣನೊದಗಿಸಿನಾನಾಲಾಭದಲಿ ತುಂಬದು ಲೋಭಭಾಂಡದಾನವ ಬೇಡಿಳೆಯಾಜಾಂಡವನೊಡೆದಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನುನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾಮನ್ನ ಉದಾರಿಶಿಖಾಮಣಿಭಾಗ್ರ್ವಾ3ಪಂಚಘಾತ ಮಠ್ಯಅನ್ನಕೆ ಉಬ್ಬಿ ಯೌವನ ರೂಪಕೆ ಕೊಬ್ಬಿಧÀನ್ನಕೆ ಮೊಬ್ಬೇರಿಸಿತೆನ್ನ ಮದವುಎನ್ನ ಸವಿಸುವ ಪರಿವಾರ ಭುಜಬಲೆಂಬುನ್ನತಿಯಿಂದುನ್ಮತ್ತನ ಮಾಳ್ಪ ಮದವುದಾನವೇಂದ್ರನ ಮೌಳಿಯನ್ನು ತುಳಿದ ಪದದಿಎನ್ನ ಮದರಾಜನ ಮೆಟ್ಟಿಯಾಳೆಲೆ ದೇವನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರಸನ್ವೆಂಕಟ ಉರುಕ್ರಮ ಧನ್ಯರೊಡೆಯ 4ತ್ರಿವಿಡಿತಾಳಉತ್ತಮರ ಅವಗುಣವೆಣಿಸುತಹೊತ್ತು ಯಮಪುರಕೊಯ್ವ ಮತ್ಸರಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತು ಮತ್ಸರವುಚಿತ್ತಜನ ಶರ ಮತ್ಸರಿಸುತಿರೆಮೊತ್ತ ಗೋಪೇರ ಕುಚದ ಪೀಠದಿಒತ್ತಿ ಸುಖವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ 5ಅಟ್ಟತಾಳಇಂದುಮುಖಿಯರ ಕಂಡಂದಗೆಡಿಪ ಮೋಹಕಂದಗಳಾಡಿಸಿ ಕರುಣ ಉಕ್ಕಿಪ ಮೋಹತಂದೆ ತಾಯಿ ಬಂಧುವರ್ಗದ ಮೋಹಮುಂದಣಗತಿಗೆ ಮೂರ್ಛೆಯನಿತ್ತ ಮೋಹಕಂದರ್ಪನ ಗೆದ್ದಯೋಗಿಜನರ ಹೃದಯಾಂಧಕಾರವ ಗೆದ್ದು ತವಪಾದನಖಪೂರ್ಣಚಂದ್ರ ಚಂದ್ರಿಕೆದೋರಿ ಅಭಿಜÕನ ಮಾಡೆನ್ನ ದಯಾಸಿಂಧುಪ್ರಸನ್ನವೆಂಕಟ ಮುನಿಜನವಂದ್ಯ6ಏಕತಾಳಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದಎನ್ನ ಮದವೆಂಬ ಗಜಕಂಕುಶಾಂಕಿತ ಪದಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರಸನ್ನವೆಂಕಟನ ದಿವ್ಯಪಾದಪಾಂಕಿತ ಪದಜತೆಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತು ಸಂತತ ಶ್ರೀಚರಣ ಸ್ಮರಣೆಮುಂತಾದೌಷಧವನಿತ್ತೆನ್ನ ರಕ್ಷಿಸು ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ
--------------
ಪ್ರಸನ್ನವೆಂಕಟದಾಸರು
ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನಸೋತೆ ನಾನವಗೆ ಪ.ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ಕಾದಿದಮತ್ತೆ ಕೆಡಹಿದ ಅವನಂಗವಸತಿಗಿತ್ತನು ಆಲಿಂಗನವ 1ಹದಿನಾರು ಸಾವಿರ ನಾರಿಯರ ಸೆರೆಮುದದಿಂದ ಬಿಡಿಸಿಮಾಮನೋಹರಅದಿತಿಯಕುಂಡಲತಳೆದಾ ಹರವಿಧಿಸುರ ನೃಪರನು ಸಲಹಿದ2ಉತ್ತಮ ಪ್ರಾಗ್ಜೋತಿಷ ಪುರವ ಭಗದತ್ತಗೆ ಕೊಟ್ಟ ವರಾಭಯವಕರ್ತಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ 3ನರಕ ಚತುರ್ದಶಿ ಪರ್ವವಹರಿಹರುಷದಿ ಪ್ರಕಟಿಸಿದನು ದೇವಶರಣಾಗತಜನ ವತ್ಸಲ ರಂಗಪರಮಭಾಗವತರ ಪ್ರತಿಪಾಲ4ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿನಗರದ ಅರಸನ ಕೀರ್ತಿಯಜಗದೀಶ ಪ್ರಸನ್ವೆಂಕಟೇಶನೆ ಭಕ್ತರಘಹಾರಿ ರವಿಕೋಟಿಕಾಶನೆ 5
--------------
ಪ್ರಸನ್ನವೆಂಕಟದಾಸರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
--------------
ಗಲಗಲಿಅವ್ವನವರು