ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ |
ಭೋಕ್ತ ಗುರು ಮಹಿಪತಿ ನಿಮ್ಮ ಶರಣರು ಪ
ಒಡಲೊಳಗಿದ್ದ ಶಿಶು ಹೊರಗ ಬಂದ ಮ್ಯಾಲ
ಒಡ ಮೂಡುವದು ನೋಡಿ ಜನನಿ ಮೋಹಾ
ಪೊಡವಿಯೊಳಿಹನ ಕರೆದೊಡಲೋಳಿಟ್ಟುಕೊಂಡು
ಕುಡಿಸಿ ಬೋಧಾಮೃತವ ಸಲಹುವ ಗುರುಮಾತಾ 1
ಸತಿಯಲಿ ವೀರ್ಯವನಿಟ್ಟು ಬೆಳಸಿ ಘನ
ಯುತನಾದರಾಗ ತಂದೆಯ ಮೋಹವು
ಕ್ಷಿತಿಯೊಳು ನಿಜವೀರ್ಯ ಕಳಿಯದೆ ಮೂಢ
ಭಕ್ತಿರಿಗೊಲಿದು ಬೀರುವ ದಯ ಗುರು ತಂದೆ 2
ತನುವ ನಿರ್ಮಿಸಲು ತಾ ತನುವಿನೊಡೆಯ ನೀನು
ಮನವ ನೀಡಲು ಚೇತನಾತ್ಮ ನೀನು
ಧನವ ನೀಡಲು ಇಹ ಪರವೀವ ಧೊರಿ ನೀನು
ನೆನೆವರ ಶ್ರಯಧೇಯ ಕಾಯೋ ನಂದನ ಪ್ರಭು3