ನಮ್ಮ ಗಿರಿಯ ತಿಮ್ಮ ಪರಬೊಮ್ಮನಮ್ಮ ಒಮ್ಮೆ ಕಾಯೋದ(ತ?)ಮ್ಮ ಪ.
ಭಂಗ ಗುಣ ತ-ರಂಗ ಜಗದೊಳಗೆ ನೀನೆ ಸರ್ವೋತ್ತುಂಗ 1
ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯನೀಡೋ ಎನ್ನ ಪೊರೆವನೆಂಬ ಮಾತನಾಡೊ 2
ಏಳು ಎನ್ನ ಮಾತ ಕೇಳು ಕಡು ಕೃ-ಪಾಳು ನಿನ್ನ ಹದನ ಎನಗೊಲಿದು ಪೇಳು 3
ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ-ವಿಂದ ಎಂಬುದಿನ್ನು ನಿನಗೆ ಚೆಂದ 4
ಪ್ರಿಯ ಎನ್ನ ಕಾಯೊ ಜೀಯ ಮುಕ್ತ್ಯು-ಪಾಯ ಹಯವದನ ಶೇಷಗಿರಿರಾಯ5