ನೀನೆ ನಾನೆಂಬುವ ಮಾನವಾಧಮನನ್ನು
ಏನು ಮಾಡಲು ಬೇಕು ನಾನರಿಯೆನೊ ರಂಗ ಪ
ದಾನವಾರಿಯೆ ಎನ್ನನೇನೆಂದರೂ ಅನಲಿ
ನಾ ನಿನ್ನ ನಿಂದಿಸುವರಾನನವ ನೋಡೆನೋಅ.ಪ.
ಆನೆಕಾಲಿಗೆ ಕಟ್ಟಿ ಬೀದಿಯೊಳೆಳೆಸಲೆ
ಕಾನನಕೆ ಕೊಂಡೊಯ್ದು ಕೈಕಾಲು ಕಡಿಸಲೆ
ಮೀನು ಮೊಸಳೆಗಳಿರುವ ಮಡುವೀಲಿ ನೂಕಿಸಲೆ
ನೇಣುಗಳಿಂದಲಿ ಬಿಗಿದು ಶೂಲಕೇರಿಸಲೆ 1
ಜೀವದೊರಸೆ ಅವನ ಹೂಳಿಸಿರೆಂದ್ಹೇಳಲೆ
ಹಾವುಗಳ ಹಿಂಡಿನೊಳು ನೂಕಿರೆಂದ್ಹೇಳಲೆ
ನೋವು ಬಹಳಾಗಲು ಸೂಜಿಗಳಿಂದಿರಿಸಲೆ
ಪಾವಕನೊಳು ಕಾಲ್ಕಟ್ಟಿ ಎತ್ತಿ ಹಾಕಿಸಲೇ 2
ಗಿರಿಯ ತುದಿಯಲಿ ನಿಲಿಸಿ ಜರಿಯೊಳಗೆ ನೂಕಿಸಲೆ
ಭರದಿ ಕಣ್ಕಟ್ಟಿ ಕಾದತೈಲದೊಳಿಡಿಸಲೆ
ಸಿರಿಹರಿಯೆ ಪೇಳೆಂದು ರಂಗೇಶವಿಠಲನೊಳು
ತರಣಿನಂದನ ತಾನು ಬಿನ್ನೈಸಿದನಂದು 3