ಒಟ್ಟು 93 ಕಡೆಗಳಲ್ಲಿ , 34 ದಾಸರು , 86 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜಾಸನವಿನುತ ಸರಸ ಕರುಣಾಭರಿತ ಪರಮಪಾವನ ಚರಿತ ಪುಣ್ಯಗಾತ್ರ ಭಾರ್ಗವ ಮದಾಪಹ ಭುವನ ಮೋಹಕ ದೇಹ ಭಗರ ಕಾರ್ಮಕಭಂಗ ಮಂಗಳಾಂಗ ಇನಕುಲಾರ್ಣವ ಸೋಮ ತ್ರಿನಯನ ಮನಃ ಪ್ರೇಮ ಜನನಿಲಯ ಸುವಿರಾಮ ದಿವ್ಯನಾಮ ಸಾಕೇತಪುರಧಾಮ ಕಾಕುತ್ಯರಾಮ ರಾಕೇಂಧು ನಿಭವದನ ದುರಿತದಮನ ಶ್ರೀಕಾಂತ ಶೇಷಾದ್ರಿನಿಲಯ ಸದಯ
--------------
ನಂಜನಗೂಡು ತಿರುಮಲಾಂಬಾ
ಸಾಕೇತಾಧಿಪ ಸತ್ವಸ್ವರೂಪ ಶ್ರೀಕರರೂಪ ಜಿತಕೋಪ ಪ ಕರಧೃತಚಾಪ ಖಂಡಿತತಾಪ ಪರಂತಪ ಪಾಹಿ ಕವಿಜನಾಲಾಪ 1 ಅರಿಜನ ಭೀಕರ ಕರಿವರ ಶ್ರೀಧರ ವರದಾಭಯಕರ ಪರಮಕೃಪಾಕರ 2 ಇನಕುಲಮಂಡನ ಭಕ್ತಾರ್ತಿಭಂಜನ ವನರುಹಲೋಚನ ಭವಬಂಧಮೋಚನ 3 ಕ್ಷಿತಿನಾಥ ರಾಘವ ಸತತ ಸುವೈಭವ ನುತಶೇಷಗಿರೀಧವ ವಿಜಿತಮನೋಭವ 4
--------------
ನಂಜನಗೂಡು ತಿರುಮಲಾಂಬಾ
ಸಾಗರಕನ್ನಿಕೆಯ ಪ್ರಾಣಮನೋಹರ ಪ ಕಿಂಕರೋದ್ಧಾರಣ ಜಿಂಕೆಸಂಹರಣ ಲಂಕಾಪುರನಾಶನ ಶಂಖ ಚಕ್ರಧಾರಣ ಶಂಕರಾದಿವಂದನ ಪಂಕಜನಯನ 1 ತಾಪತ್ರನಿರ್ಮೂಲ ಪಾಪಮೋಚನ ಶೀಲ ಗೋಪೇರಾನಂದ ಲೀಲ ಗೋಪಾಲಬಾಲ ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ 2 ದೀನಜನಮಂದಾರ ಧ್ಯಾನಿಪರ ಪ್ರಿಯಕರ ಜ್ಞಾನಿಗಳ ಆಧಾರ ವನಮಾಲಧರ ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ ಜಾನಕೀರಮಣ ಶ್ರೀರಾಮಪ್ರಭು ಸುಂದರ 3
--------------
ರಾಮದಾಸರು
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಹನುಮ - ಭೀಮ - ಮಧ್ವರು ಆದರ್ಶಕನೋ ಹರಿ ತನ್ನಾಧರಿಸಿದವರಿ ಗಾದರ್ಶಕನೋ ಹರಿ ಪ. ಈ ಧರೆಯೊಳು ತನ್ನಾಧರಿಸಿದ ಪಾದ ಸೇವಕ ಪಾಂಡವರಿಗೆ ಹರಿ ಅ.ಪ. ತನುಮನಧನ ನಿನದೆನೆ ಹರುಷಿಪ ಹನುಮನೇನಿತ್ತನೋ ಘನರಾಮ ರಾಘವಚಂದ್ರಗೆ ವನರುಹಲೋಚನ ಇನಕುಲಚಂದ್ರನ ತನ ಹೃದಯದಿ ದಿನ ನೆನೆದನಲ್ಲದೆ 1 ಕುರುಕುಲ ಧ್ವಂಸನು ಕುರುಹು ಕೃಷ್ಣನೇ ಎನೆ ಭೀಮ ನೆರೆದಾ ನೃಪ ನಿಸ್ಸೀಮನನ ಕರಿಬಲ ಸಮ ಕರುಣಿಸಿ ಭೀಮಗೆ ಕರೆದಾದರಿಶಿದ ರಣ ಅಧ್ವರದಲಿ ಹರಿ 2 ಮಧ್ವಾಂತರ್ಗತ ಮುದ್ದು ಶ್ರೀ ಶ್ರೀನಿವಾಸ ಇದ್ದ ಸ್ಥಳವು ಶುದ್ಧ ಎನುತ ಪೇಳಿ ಸದ್ವೈಷ್ಣವರ ಉದ್ಧರಿಸಲವರ ಹೃದ್ಗಮಲದಿ ಕೃಷ್ಣಾ ಇದ್ದಾನೆಂದು 3
--------------
ಸರಸ್ವತಿ ಬಾಯಿ
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹಸ್ತಿ ಮಾದಲಾದಉತ್ತಮ ರಥವು ಸಂದಣಿಸಿತು ಕೋಲ ಪ. ಇಂದ್ರನು ತಾನೊಂದು ಗಜೇಂದ್ರನೇರಿಕೊಂಡುಮಂದಗಮನೆಯರ ಶಚಿ ಸಹಿತ ಕೋಲಮಂದಗಮನೆಯರ ಶಚಿ ಸಹಿತ ವಜ್ರಾಯುಧಉಪೇಂದ್ರನ ಮನೆಗೆ ಬರುತಾನೆ ಕೋಲ 1 ಹುತಭುಕ್ತನು ತಾನುಸತಿ ಸ್ವಾಹಾದೇವಿಯ ಕೂಡಿಅತಿಶಯವಾದ ಮೇಷವೇರಿಅತಿಶಯವಾದ ಮೇಷವೇರಿ ಶಕ್ತಿಯ ಧರಿಸಿಕ್ರತುಪತಿ ಮನೆಗೆ ಬರುತಾನೆ ಕೋಲ 2 ಜಾಣ ಯಮನು ತಾನು ಕೋಣ ವೇರಿಕೊಂಡುರಾಣಿ ಶಾಮಲೆಯ ಸಹಿತಾಗಿ ಕೋಲರಾಣಿ ಶಾಮಲೆಯ ಸಹಿತಾಗಿ ದಂಡವ ಧರಿಸಿಪ್ರಾಣೇಶನ ಮನೆಗೆ ಬರುತಾನೆ ಕೋಲ 3 ನಿರುತಿ ತಾನೊಂದು ನರನ ಪೆಗಲನೇರಿತರುಣಿಯ ಸಹಿತ ಆಯುಧ ಧರಿಸಿ ಕೋಲತರುಣಿಯ ಸಹಿತ ಆಯುಧ ಧರಿಸಿನರಹರಿ ಮನೆಗೆ ಬರುತಾನೆ ಕೋಲ4 ಮಕರ ಮೇಲೇರಿ ಶ್ರೀ ಭಾಗೀರಥಿಯ ಒಡಗೂಡಿ ಕೋಲಶ್ರೀ ಭಾಗೀರಥಿಯ ಒಡಗೂಡಿ ಪಾಶವ ಧರಿಸಿದರಾಧರನ ಮನೆಗೆ ಬರುತಾನ ಕೋಲ 5 ಮರುತನು ತಾನೊಂದು ಎರಳಿ ಮೇಲೇರಿತರುಣಿ ಪ್ರವಹಿ ಒಡಗೂಡಿ ಕೋಲತರುಣಿ ಪ್ರವಹಿ ಒಡಗೂಡಿ ಗದೆಯ ಧರಿಸಿಮುರಹರನ ಮನೆಗೆ ಬರುತಾನ ಕೋಲ 6 ವಿತ್ತಪನು ತಾನೊಂದು ಉತ್ತಮ ಹಯವೇರಿಚಿತ್ತದೊಲ್ಲಭೆಯ ಒಡಗೊಡಿ ಕೋಲಚಿತ್ತದೊಲ್ಲಭೆಯ ಒಡಗೊಡಿ ಖಡ್ಗವ ಧರಿಸಿಪೃಥ್ವೀಶನ ಮನೆಗೆ ಬರುತಾನೆ ಕೋಲ7 ಈಶನು ತಾನೊಂದು ವೃಷಭನ ಮೇಲೇರಿಶ್ರೀ ಸತಿದೇವಿ ಒಡಗೂಡಿಕೋಲಶ್ರೀ ಸತಿದೇವಿ ಒಡಗೂಡಿ ತ್ರಿಶೂಲವ ಧರಿಸಿನರಸಿಂಹನ ಮನೆಗೆ ಬರುತಾನೆ ಕೋಲ8 ಧರ್ಮ ಭೀಮಾರ್ಜುನ ನಕುಲ ಸಹದೇವರುಪ್ರೇಮದಿಂದಲೆ ಪೊರ ಹೊರಟು ಕೋಲಪ್ರೇಮದಿಂದಲೆ ಪೊರ ಹೊರಟು ಬರುತಾರೆ ರಮಿಯರಸನ ಅರಮನೆಗೆ ಕೋಲ 9
--------------
ಗಲಗಲಿಅವ್ವನವರು
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ 1 ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ 2 ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ 3 ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ 4 ಶುಕ ಜನಕ ಸನಕಾದಿಗಳೇನೊ | ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ 5 ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ 6 ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ 7 ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ8 ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ9 ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ 10 ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು11
--------------
ವಿಜಯದಾಸ
ಇಂದುಮಂಗಳಇಂದುಮಂಗಳಇಂದಿರೆಅರಸಗೆಇಂದುಕುಲಕೆಇಂದುದ್ರುಹಿಣಇಂದುಧರೇಶಗೆಪ.ನೀರಹೊಕ್ಕು ನೀರ ಕಡೆದು ನೀರ ಕದಡಿ ಖಳನ ಕೆನ್ನೀರ ತೆಗೆದು ಬಲಿಯ ಪಾತ್ರೆ ನೀರನ್ಹೆಚ್ಚಿಸಿನೀರ ಸೆಳೆದು ನೀರಕಟ್ಟಿ ನೀರೇರೊಳಿದ್ದು ಮೂರುಪೊಳಲನೀರೇರ್ಗೊಲಿದು ನೀಲಹಯವನೇರಿ ಮೆರೆವಗೆ 1ಧರೆಯನಾವೆ ನೆಗಹಿ ಧರಾಧರರ ಒರೆಸಿ ಧರೆಯನಪ್ಪಿಧರಿಸಿ ಶಿಶುವಾಧರೆಯನಳೆದ ಧರೆಯ ಭಾರವನಿಳುಹಿದಧರೆಯ ಮಗಳನಾಳ್ದು ಕೊಂದು ಧರೆಯಮಗನ ಮತ್ತೆ ಬೋಧರನ್ನ ಮೋಹಿಪ ವರಣೋದ್ಧರಣ ಮಾಳ್ಪಗೆ 2ಇನಜಗೊಲಿದು ಇನಗೆ ಪೊರೆದು ಇನಿಯಳೆತ್ತಿ ಇನನ ಕಂಪಿಸಿಇನಗೆ ಮೀರಿ ಬೆಳೆದುಸೋಮಇನಜರನ್ನುಜರಿದುತಾಇನಕುಲಜನಾಗಿ ತಾ ಇನಿಯರಾಳಿದ ಇನಿತು ಲಜ್ಜೆಯಿಲ್ಲದಕಲಿಯನ್ನು ಸದೆದÀ ಪ್ರಸನ್ನವೆಂಕಟ ಇನಗತಾತ್ಮಗೆ 3
--------------
ಪ್ರಸನ್ನವೆಂಕಟದಾಸರು
ಎತ್ತಿರೆಕೋಲಅರ್ಥಿಲೆಕೆಲದೆಯರು ಸತ್ಯ ಕನ್ಯಳೆ ದ್ರೌಪತಿ ಎಂದು ಪ.ಮತ್ತೆ ಅಭಿಮಾನಿಯೆಂದುನಿತ್ಯಉತ್ಪತ್ತಿಯೆಂದುಸತ್ಯ ಕನ್ಯಳೆ ದ್ರೌಪತಿಯೆಂದು 1ಒಂದೇ ಮಂದಿರದಲ್ಲಿ ಪೊಂದಿದ್ದ ಜನರಂತೆಅವರಿಂದ ಹೊರಗಾಗುವಳೆ ಜಾಣೆ 2ಧರ್ಮ ಶ್ಯಾಮಲೆ ಬೆರಿಯೆ ಅಮ್ಮ ದ್ರೌಪತಾದೇವಿಸುಮ್ಮನಿಹಳೇ ಬಾರೆ ನೀರೆ 3ವನಜಾಕ್ಷಿ ಭೀಮ ಬರಲು ತನುಮನ ಸೂರೆಗೊಂಡುಘನಮಹಿಮನ ಬೆರೆಯೋಳೆ4ಅರ್ಜುನ ಶಚಿಯು ಬೆರಿಯೆ ನಿರ್ಜರೋತ್ತಮಳು ತಾನುವರ್ಜಿಸಿ ಸುಖವ ದೂರಾಗಿಹೋಳು 5ಮತ್ತೆ ಸಹದೇವ ನಕುಲ ಪತ್ನಿಯ ಬೆರೆಯಲುಪ್ರತ್ಯಕ್ಷ ಇಹಳು ಚತುರಳು 6ಕಾಂತ ರಮಣನುಕೇಳಿಸಂತೊಷ ಬಡಲು ಭಾಗ್ಯಸಂತಾನ ಕೊಡುವ ರಮಿ ಅರಸು 7
--------------
ಗಲಗಲಿಅವ್ವನವರು
ಎನ್ನ ರಕ್ಷಿಸೊ ನೀನು - ದೇವರ ದೇವ ಪಎನ್ನ ರಕ್ಷಿಸೊ ನೀನು ಯಾದವ ಕುಲಮಣಿಮುನ್ನ ದ್ರೌಪದಿಯಭಿಮಾನ ಕಾಯ್ದ ಕೃಷ್ಣ ಅ.ಪ.ಬಾಲನ ಮೊರೆಯನುಕೇಳಿಕೃಪೆಯಿಂದಪಾಲಿಸಿದೆಯೊ ನರಸಿಂಹ ರೂಪದಿಂದ 1ಪಾಷಾಣಚರಣದಿ ಯೋಷಿದ್ರೂಪವ ಗೈದೆದೋಷ ಸಂಹಾರ ನಿರ್ದೋಷಗುಣಪೂರ್ಣನೆ 2ಇನಕುಲಾಂಬುಧಿ ಚಂದ್ರ ಘನಶುಭಗುಣಸಾಂದ್ರಸನಕಾದಿ ಮುನಿವಂದ್ಯಪುರಂದರವಿಠಲ3
--------------
ಪುರಂದರದಾಸರು
ಏನು ಮರುಳಾದೆಯೇ ಎಲೆ ರುಕ್ಮಿಣಿ |ಹೀನಕುಲ ಗೊಲ್ಲ ಶ್ರೀ ಗೋಪಾಲಗೆ ಪಹಾಸಿಕಿಲ್ಲದೆ ಪೋಗಿ ಹಾವಿನೊಳು ಪವಡಿಸಿದ |ಹೇಸಿಕಿಲ್ಲದೆ ಕರಡಿಯನುಕೂಡಿದ||ಗ್ರಾಸಕಿಲ್ಲದೆ ಪೋಗಿ ದಾಸನ ಮನೆಯಲುಂಡ |ದೋಷಕಂಜದೆಮಾನವಶಿರವ ತರಿದವಗೆ1ಕುಂಡಗೋಳಕರ ಮನೆ ಕುಲದೈವವೆನಿಸಿದನು |ಮಂಡೆಬೋಳಾದವರ ಮನೆದೈವವು ||ಹಿಂಡುಗೋವಳರೊಳಗೆ ಹಿರಿಯ ಗೋವಳನೀತ |ಭಂಡಾಟಗಾರನಿವ ಭುವನದೊಳಗೆಲ್ಲ 2ಒಬ್ಬರಲಿ ಪುಟ್ಟಿದನು ಒಬ್ಬರಲಿ ಬೆಳೆದನು |ಒಬ್ಬರಿಗೆ ಮಗನಲ್ಲ ಭುವನದೊಳಗೆ ||ಅಬ್ಬರದ ದೈವಸಿರಿ ಪುರಂದರವಿಠಲನ |ಉಬ್ಬುಬ್ಬಿ ಮರುಳಾದೆ ಉತ್ಸಾಹದಿಂದ 3
--------------
ಪುರಂದರದಾಸರು
ಕರುಣಾಸಾಗರನ ನೋಡಿರೈ ಪತರುಣಾಕರ್Àನಿಭ ಸುಪರಣವಾಹನಗುಣ-ವರಣನ ಮಾಡುವ ಕರ್ಣಹೀನಾಂಶನ ಅ.ಪನಾನಾವಿಧದ ಫಲ ದಾನಮಾಡುವ ಸುರ -ಧೇನುನಿನಗೆ ಸೋತು ಪೋಯಿತಯ್ಯಾಮಾನನಿಧಿಯೆ ಎನ್ನ ನೀನೆ ಕಾ -ನಾನಯ್ಯ ಇದಕೇನುಪಾಯಾದೀನ- ಜನ-ಮಂದಾರ- ಶಾಶ್ವತದಾನಿ ನಿನಪದಧ್ಯಾನ ಮಾಡಿಸೋ 1ಸೇವಕ - ಜನರನ್ನ ಕಾವೋನೀತನು ಎಂಬೊನೀನಿರಲುನಿತ್ಯಆವ ಭಯ ಎನಗೇನು ಇಲ್ಲಾಈ ವಿಧದಿ ಮಹಿಮವ ತೋರಿ ಮೆರೆವ 2ಪಾತಕವನಕುಲ - ವೀತಿಹೋತ್ರನು ಎನಿಸೀದಾತಗುರುಜಗನ್ನಾಥ ವಿಠಲಗತಿಜಾತರೂಪಸುಶಯ್ಯತನಯದೂತನಾದವಗೇನು ಭಯ ನಿ -ರ್ಭೀತನಾಗಿದ್ದೆಲ್ಲ ಕಾರ್ಯವ -ನೀತೆರದಿ ತಾ ಮಾಡುತಿರುವಾ 3
--------------
ಗುರುಜಗನ್ನಾಥದಾಸರು
ಕೊಟ್ಟ ಉಡುಗೊರೆಉತ್ಕøಷ್ಟ ಗೋಪಾಲಧಿಟ್ಟ ಪಾಂಡವರಿಗೆ ಉಚಿತವಕೆಲದಿಪ.ಏಸವೊ ಮಾಣಿಕದೊಸ್ತ ದೆಸೆಗೆಲ್ಲ ಬೆಳಗುವ ವಸ್ತಹೊಸ ಮುತ್ತಿನ ರಥ ಹಿಡಿದೇಜಿಕೆಲದಿಹೊಸ ಮುತ್ತಿನ ರಥ ಹಿಡಿದೇಜಿ ಶೂರಪಾಲಿಅಶ್ವತ್ಥ ನರಸಿಂಹಗೆಹರಿಕೊಟ್ಟಕೆಲದಿ1ಪಟ್ಟಾವಳಿಯ ಸೀರೆ ಧಿಟ್ಟಾದ ಪಲ್ಲಕ್ಕಿಬಟಮುತ್ತಿನ ರಥ ಹಿಡಿದೇಜಿಬಟಮುತ್ತಿನ ರಥ ಹಿಡಿದೇಜಿ ಶೂರಪಾಲಿಕೃಷ್ಣಾ ಭಾಗೀರಥಿಗೆ ಹರಿಕೊಟ್ಟಕೆಲದಿ2ಏಸವೊ ಮಾಣಿಕದೊಸ್ತ ಹಸಿರು ಪಟ್ಟಾವಳಿವಸ್ತ್ರಕುಶಲದ ಪುಸ್ತಕವ ನಡುವಿಟ್ಟುಕೆಲದಿಕುಶಲದ ಪುಸ್ತಕವ ನಡುವಿಟ್ಟು ಶ್ರೀಕೃಷ್ಣಋಷಿಗಳಿಗುಚಿತವಹರಿಕೊಟ್ಟಕೆಲದಿ3ಸಾರಾವಳಿ ಸೀರೆ ಥೋರ ಮುತ್ತಿನ ಸರಹಾರ ಭಾರಗಳು ನಡುವಿಟ್ಟುಕೆಲದಿಹಾರ ಭಾರಗಳು ನಡುವಿಟ್ಟು ಉಚಿತವನಾರಿ ಕುಂತೆಮ್ಮಗೆ ಹರಿಕೊಟ್ಟಕೆಲದಿ4ಲೆಕ್ಕವಿಲ್ಲದೆ ವಸ್ತ್ರ ಸಂಖೆವಿಲ್ಲದ ರಥಆಕ್ಷಆನೆಗಳು ರಥಗಳುಕೆಲದಿಅಕ್ಷಅನೆ ರಥಗಳು ಬಿಲ್ಲು ಬಾಣಮುಖ್ಯ ಧರ್ಮನಿಗೆಹರಿಕೊಟ್ಟಕೆಲದಿ5ಮಿತಿಯಿಲ್ಲದೆ ಬಾಣ ಬಿಲ್ಲುಗಳು ರಥ ಕುದುರೆಗಳುಅತಿಶಯ ಬೆಳಗುವ ಆಭರಣಕೆಲದಿಅತಿಶಯ ಬೆಳಗುವ ಆಭರಣಪಟ್ಟಾವಳಿಕುಂತಿಸುತ ಭೀಮ ರಾಯಗೆ ಹರಿಕೊಟ್ಟಕೆಲದಿ6ಮದ ಸೊಕ್ಕಿದಾನೆಗಳು ರಥ ಬಿಲ್ಲುಗಳು ಬಾಣಅದ್ಬುತ ಬೆಳಗುವ ಆಭರಣವಕೆಲದಿಅದ್ಬುತವಾಗಿ ಬೆಳಗುವ ಪೀತಾಂಬರಚದುರ ಪಾರ್ಥಗೆ ಹರಿಕೊಟ್ಟಕೆಲದಿ7ಆನೆಹಯರಥಗಳು ಏನೆಂಬೊ ಬಿಲ್ಲಾಳುನಾನಾ ರತ್ನಗಳು ಆಭರಣವೆಕೆಲದಿನಾನಾ ರತ್ನ ಆಭರಣವೆ ನಕುಲಗೆಮಾನದ ವಸ್ತ್ರಗಳು ಹರಿಕೊಟ್ಟಕೆಲದಿ8ಉತ್ತಮ ಕುದುರೆಗಳು ಹತ್ತುವ ರಥ ಕೋಟಿಮತ್ತೆ ಬಿಲ್ಲುಗಳು ಆಭರಣಕೆಲದಿಮತ್ತೆ ಬಿಲ್ಲು ಆಭರಣವಸ್ತ್ರಗಳಸಹದೇವಗೆಅರ್ಥಿಲೆ ರಾಮೇಶ ಇವು ಕೊಟ್ಟಕೆಲದಿ9
--------------
ಗಲಗಲಿಅವ್ವನವರು
ಕೋಲೆಂದು ಪಾಡಿರೆಕೋಮಲೆಯರೆಲ್ಲಗೋಪಾಲರಾಯನಮಡದಿಯರುಕೋಲಪ.ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
--------------
ಗಲಗಲಿಅವ್ವನವರು