ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತುಗಾಣಿ ಧ್ರುವ
ಅದ್ವೈತ ಅ-
ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ 1
ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ
ಎಂದಿಗಾದರು ತಿಳಿಯಗುಡದು ಪೂರ್ಣ 2
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ 3
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ
ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ 4
ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ
ಅರ್ತು ಸ್ಥಾಪಿಸುವದು ಮನುಜಗಲ್ಲ 5
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವರೆ ತರ್ಕಸ್ಯಾಡುವ ಸೊಲ್ಲ 6
ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು 7