ಒಟ್ಟು 84 ಕಡೆಗಳಲ್ಲಿ , 35 ದಾಸರು , 65 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು
ದಾಸನ ಮಾಡಿಕೋ ಎನ್ನ - ಇಷ್ಟುಗಾಸಿಮಾಡುವುದೇಕೆ ದಯದಿ ಸಂಪನ್ನಪದುರುಳಬುದ್ದಿಗಳೆಲ್ಲ ಬಿಡಿಸೋ - ನಿನ್ನಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||ಚರಣದ ಸೇವೆಯ ಕೊಡಿಸೋ - ಅಭಯ-ಕರಮೇಲಿನಕುಸುಮಶಿರದ ಮೇಲಿರಿಸೋ1ದೃಢಭಕ್ತಿಯಿಂದ ನಾ ಬೇಡಿ - ನಿನ್ನಅಡಿಯೊಳೆರಗುವೆನಯ್ಯಅನುದಿನಪಾಡಿ ||ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆಕೊಡು ನಿನ್ನಪರಭಕ್ತಿಮನ ಮಡಿ ಮಾಡಿ2ಮೊರೆಹೊಕ್ಕವರಕಾವಬಿರುದು ನೀನುಕರುಣದಿ ರಕ್ಷಣೆ ಮಾಡೆನ್ನ ಪೊರೆದು ||ದುರಿತರಾಶಿಗಳೆಲ್ಲ ತರೆದು ಒಡೆಯಪುರಂದರವಿಠಲನೆ ಹರುಷದಿ ಕರೆದು 3
--------------
ಪುರಂದರದಾಸರು
ವಿವೇಕವ ಪಡೆಯಿರೋ ವಿಭುಗಳ ಕೃಪೆಯಿಂದವಿವೇಕವ ಪಡೆದರೆ ಈಶ್ವರಗಿಂ ಮಿಗಿಲಯ್ಯಪಮನವು ನಿಲ್ಲದು ಎಂದು ಮರುಗುವಿರೇಕಯ್ಯಮನವು ನಿಲ್ಲಲಿಕೆ ನಿಮ್ಮಧೀನವೆಮನವು ಆದಾತನಾನೇ ಮಹತ್ತು ಆದಾತನಾನೇಮನಕೆ ವಿರಹಿತುಮಾಪತಿಯು ತಾನೆಂದು1ಪಾಪವ ಮಾಡಿದೆನೆಂದು ಹಿರಿದು ಮರುಗಲದೇಕೆಪಾಪ ಪುಣ್ಯವು ಪ್ರಕೃತಿಯಲಾದವುಪಾಪವೆಲ್ಲಿಹವೆಲೆ ಪುಣ್ಯವೆಲ್ಲಿಹವೆಂದುಪರಪುರುಷ ತಾನಾಗದೆಂದೂ2ಆತ್ಮನರಿಪೆನೆಂದು ಅತಿ ಕಷ್ಟಬಡಲೇಕೆಆತ್ಮನ ವಿವರಿಸೆ ಅವನಲ್ಲವೆಆತ್ಮನೇ ತಾಕಂಡ್ಯಾಅಗಣಿತಮಹಿಮನುಆತ್ಮ ಅನಂತನಾಮನೆ ತಾನೆಂದು3ಅರಿವುಮರೆವೆ ಎಂಬ ಅಜ್ಞಾನವೇತಕೆಅರಿವುಮರೆವುಅಂಗದಧರ್ಮವುಅರಿವುಮರೆವೆಯುಂಟೆ ಆತ್ಮತಾನಾದವನಿಗೆಅರಿವುಮರೆವುಅಂಬುಧಿತೆರೆಯುಂಟು4ಇಂತು ವಿವೇಕವನ್ನು ವಿಭುಗಳಿಂದಲರಿದುಚಿಂತೆ ಹರಿದು ಚಿದಾನಂದ ಗುರುವಾಮುಂತೆ ದೃಷ್ಟಿಸಿಕೊಂಡು ಮರೆತು ತನುವನು ನಿ-ಶ್ಚಿಂತ ರಾಗಿಯೆ ನಿಜವಿದೆಯಂತೆಂದು5
--------------
ಚಿದಾನಂದ ಅವಧೂತರು
ಸಾಧನವೇಕೆ ಸಾಧನವೇಕೆಸದ್ಗುರುನಾಥ ಸನಿಹದಿ ಇರಲಿಕೆಪಯಮನಿಯಮಾಸನ ಎಂಬಿವು ಯಾಕೆಕಮಲಾಸನವನು ಬಲಿಯಲದೇಕೆಶ್ರಮದಲಿ ವಾಯುವ ಬಿಗಿಯಲದೇಕೆಭ್ರಮಿತದಿ ಬ್ರಹ್ಮನ ಕಾಣುವುದೇಕೆ1ಮಿತ ಆಹಾರವ ಮಾಡಲದೇಕೆಅತಿ ವೈರಾಗ್ಯವು ದೇಹಕೆ ಯಾಕೆಸತತವು ಕಾಡನು ಸೇರುವುದೇಕೆಮತಿ ತಿಳಿಯದೆ ತಿರುಗಾಡುವುದೇಕೆ2ಶರಧಿಯು ತಾನಿರೆ ಒರತೆಯದೇಕೆತರಣಿಯೆ ತಾನಿರೆ ದೀಪವದೇಕೆಗುರುಚಿದಾನಂದನಿರೆ ಯೋಗಗಳೇಕೆಗುರುಕೃಪೆ ದೊರೆತರೆ ಭಯ ತಾನೇಕೆ3
--------------
ಚಿದಾನಂದ ಅವಧೂತರು
ಸ್ವಾಮಿ ಶಂಕರನಿರಲಿಕ್ಕೆಕಾಮದಕಳವಳಿಕೇಕೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರುನಾಮ ನಿಧಾನಿರಲಿಕ್ಕೆ | ಎನಗಿಲ್ಲೆಂಬುವದೇಕೆ ಅ.ಪ.ಅನಾಥ ಬಂಧುಅನುದಿನಎನಗಿರೆ |ಅನುಕೂಲದ ಚಿಂತ್ಯಾಕೆ |ತನುಮನಧನದೊಳು ತಾನೆ ತಾನಿರಲು |ಅನುಮಾನಿಸಲಿನ್ಯಾಕೆ ಸ್ವಾಮಿ1ದಾತನೊಬ್ಬ ಶ್ರೀನಾಥ ಎನಗಿರಲು |ಯಾತಕೆ ಪರರ ದುರಾಶೇ |ಮಾತು ಮಾತಿಗೆ ತೋರುವಸದ್ಗುರು ತೇಜಃ ಪುಂಜಗಳ್ಯಾಕೆ ಸ್ವಾಮಿ2ದೊಡ್ಡದು ಸಣ್ಣದು ಧಡ್ಡನು ಜಾಣನು |ಎಂದೆಣಿಸುವದಿನ್ಯಾಕೆ | ಗುಡ್ಡದ್ಹಾಂಗಶ್ರೀ ಶಂಕರನಿರಲು ದುಡ್ಡಿನ ಹಂಗುಗಳ್ಯಾಕೆ ಸ್ವಾಮಿ3
--------------
ಜಕ್ಕಪ್ಪಯ್ಯನವರು