ಧನ್ಯ ಧನ್ಯವಾಯಿತು ಎನ್ನ ಜನುಮ
ತನ್ನಿಂದ ತಾನೊಲಿದ ಘನ ಮಹಿಮ
ಎನ್ನೊಳಗೆ ದೋರಿತಾನಂದೊ ಬ್ರಹ್ಮ
ಕಣ್ಣಾರೆ ಕಂಡೆನು ಸದ್ಗುರು ಧರ್ಮ 1
ಬ್ರಹ್ಮಸುಖ ಹೊಳೆಯಿತು ಸಾಧುಸಂಗ
ಚುಮು ಚುಮು ಕೊಡುತಿದೆಕೊ ಸರ್ವಾಂಗ
ಧಿಮಿ ಧಿಮಿಗುಡುತ ತಾಲ ಮೃದಂಗ
ಸಮಾರಂಭವಾಯಿತು ಬಾಹ್ಯಂತರಂಗ 2
ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ
ಒದಗಿ ಕೈಗೂಡಿತೆನಗೆ ತ್ವರಿತ
ಸಾಧಿಸಿತು ಮಹಿಪತಿಯ ಮನೋರಥ
ಸದ್ಗುರು ಕೃಪೆಯಾಯಿತು ತಾ ಸದೋದಿತ 3