ಒಟ್ಟು 68 ಕಡೆಗಳಲ್ಲಿ , 30 ದಾಸರು , 68 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಗಾವಿಯನುಟ್ಟು ದುಂಡು ಮುತ್ತನೆಕಟ್ಟಿ|ಪೆಂಡೆಯರುಳಿಯನಿಟ್ಟು ||ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ ಪಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ |ಮೇಲಿನ ಕೇರಿಯಲಿ ||ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು |ಹಾಲು ನಿಲ್ಲಿಸೆಂದನು 1ಕೊಂಡವನು ನೀನಲ್ಲ ಡಂಭಕರ ಮಾತೇಕೊ |ಗಂಡನುಳ್ಳವಳ ಕೂಡ ||ಮಂಡಲವಾಳುವ ಅರಸಿನ ಮುಂದೆ ಹೇಳಿ |ದಂಡವ ತೆರಸುವೆನೊ 2ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ |ತಡೆದವ ನೀನಾರೊ? ||ನಡೆ ಊರ ಮುಂದಕೆ ತಳವಾರರೈದಾರೆ |ಗಡನೆ ಪೇಳುವೆನೆಂದಳು 3ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ |ಎಲ್ಲಿಹ ತಳವಾರನೆ ||ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು |ಅಲ್ಲಲ್ಲಿ ದೊರದಿರೆ 4ಕೋಲು ಕೈಯಲಿ ಪಣೆಯಲಿ ಸಿರಿನಾಮವು |ಆಲದ ಮರದಡಿಯೆ ||ಕಾಲಮೊದಲು ಹಾಲ ಮಾರಿದ ಸುಂಕರೆ |ನಿಲ್ಲೆಂದು ಸೆರಗ ಪಿಡಿದ 5ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ |ಅಪ್ಪಯ್ಯ ಸೆರಗ ಬಿಡೊ ||ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿ-|ಮ್ಮಪ್ಪನ ಅಳಿಯ ಕಾಣೆ 6ಮಾವ ಸೆರಗ ಬಿಡೊ,ಭಾವಸೆರಗ ಬಿಡೊ |ಭಾವಯ್ಯ ಸೆರಗ ಬಿಡೊ ||ಮಾವನು ನಾನಲ್ಲ, ಭಾವನು ನಾನಲ್ಲ |ಮಾವನ ಮಗನು ಕಾಣೆ 7ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ |ಅಣ್ಣಯ್ಯ ಸೆರಗ ಬಿಡೊ ||ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿ-|ಮ್ಮಣ್ಣನಭಾವಕಾಣೆ8ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ |ಕಂದಯ್ಯ ಸೆರಗ ಬಿಡೊ ||ಕಂದನು ನಾನಲ್ಲ, ತಂದೆಯು ನಾನಲ್ಲ |ಕಂದನ ತಂದೆ ಕಾಣೆ 9ನೆತ್ತಿಮೇಲಿನ ಕೊಡ ಎತ್ತಿ ಈಡಾಡುತ |ಎತ್ತಿಕೊಂಡಳು ಕೃಷ್ಣನ ||ಭಕ್ತರ ಸಲಹುವ ಪುರಂದರವಿಠಲ |ವತ್ಸವೆಂಕಟರಾಯನ10
--------------
ಪುರಂದರದಾಸರು
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನುಹಿಡಿಯೈ ವೈಕುಂಠ ಚಾವಡಿಯವನಡಿಯ ಪ.ಎಳೆತನ ಯೌವನ ಮುಪ್ಪೆಂದಲಸಿಸಿ ಹೆಬ್ಬುಲಿಯಂಥ ಮೃತ್ಯುಗಂಟಲ ಬಲೆಗೆಸಿಲುಕಿ ಸಿಲುಕಿ ಸಂದುಗಡಿಯದ ಲೇಖವನಳಿಯೆ ರಾಮನ ಪೊಗಳೆಲೆಲೆ ಜೀವವೆ 1ಅಹಂಕಾರ ವಾರಿಧಿಯಲ್ಲೀಸಾಡಿ ಬರೆಬಹಿರ ಸದ್ಗುಣದಿ ನಿರಯಕೆ ಸಾಗದೆಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ 2ಯೋಚನೆಗೊದಗದ ಅನಂತ ಮಹಿಮನೆಂದುವಾಚಿಸ್ಯವನ ಕರ್ಮಗುಣ ನಾಮವಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕಟಾಚಲಪತಿ ಮುಂದೆ ಕುಣಿದಾಡು ಗಡ 3
--------------
ಪ್ರಸನ್ನವೆಂಕಟದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ವಿವೇಕವೆಂಬ ಘೌಜದು ಮುತ್ತಲುಉಳಿವು ಅಸುರರಿಗಿಲ್ಲಾಯ್ತುಸವರಿಯೆ ಹೋದರು ದುಷ್ಟರು ನುಣ್ಣಗೆಸಂತೋಷವು ನಗರಕ್ಕಾಯ್ತುಪಭೂತ ದಯನು ಶಾಂತಾತ್ಮ ವಿಚಾರನುಬ್ರಹ್ಮನಿಷ್ಠವಿರತೆನಿಸುವನುಖ್ಯಾತಿಗೆ ಬಂದಿಹ ಹಿರಿಯ ವಜೀರರುಕವಿದರು ತನುಪುರದುರ್ಗವನು1ಧಮಧಮ ನಾದದ ನಗಾರಿ ಬಾರಿಸೆದಿಂಡೆಯರಸುಗಳು ನೆಲಕೊರಗೆಅಮಮ ಅಡರಿಯೆ ದುರ್ಗವ ಕೊಂಡರುಅರೆದರು ದುಷ್ಟರು ಊರೊಳಗೆ2ಕಡಿದರು ಕಾಮನ ಹೊಡೆದರು ಡಂಭನಕೆಡಹಿಯೆ ಕೊಯ್ದರು ಚಂಚಲನಹುಡಿಮಾಡಿದರು ಅಹಂಕಾರ ಕ್ರೋಧರಹುರಿದರು ಖಳರು ಬೀಜವನು3ಆದನು ಪುರಕೆ ವಿವೇಕ ಮಂತ್ರಿಯುಆದನು ವಿರತಿಯು ದಳವಾಯಿಆದನು ಶಾಂತನು ಸಮಸ್ತ ವೃತ್ತಿಗೆಆಯಿತು ನಗರಕೆ ಅದು ಹಾಯಿ4ಜೀವ ರಾಜನು ಹಿಡಿದೆ ಬೋಧಿಸಿಜಡನಾದಸುರ ಪ್ರಕೃತಿ ಎಂದುಜೀವ ಚಿದಾನಂದ ಸ್ವಾಮಿಯೆನೀನೆಂದು ದರಬಾರನೆ ಕಾಯ್ದರಂದು5
--------------
ಚಿದಾನಂದ ಅವಧೂತರು
ಸುಳ್ಳು ಮಾತಿನ ನಿನ್ನಾಚಾರವು ತಿಳಿವಿಕೆ ಏನೇನಿಲ್ಲಎಲ್ಲ ಡಂಭವು ನಡತೆಯ ವಿವರವು ಗತಿಗೆನೀ ದೂರಾದೆಯಲ್ಲಪಮಂಡೆಯ ಬೋಳಿಸಿ ಕಣ್ಣನೆ ಮುಚ್ಚುವಿಪಿಟಿಪಿಟಿ ಏನದು ಮಂತ್ರದಂಡವೇತಕೆ ಮನಸದು ಚಂಚಲಏತಕೆ ಮಾಡುವಿ ತಂತ್ರ1ಕೈಯಣ ಗಿಂಡಿಯ ಕಂಕುಳ ಪೆಟ್ಟಿಗೆಕಟ್ಟಿಯಿಹುದು ತಲೆಗಟ್ಟುಬೈಗಳೆಂಬುವು ಪರಿಪರಿ ನೋಡಲುಕೋತಿ ಹಾರಿಕೆಯಳವಟ್ಟು2ಜ್ಞಾನವದಿಲ್ಲವು ಪುಸ್ತಕ ಮನೆಯೊಳುಹೋಳಿಗೆ ತುಪ್ಪದ ಗಬಕುಧ್ಯಾನವಿಲ್ಲವು ಮೌನವಿಲ್ಲವು ಯಮನಕೈಯಿಂದ ದುಬುಕು3ನಿರಿವಿಡಿದುಟ್ಟಿಹ ಪಂಚೆಕಚ್ಚೆಯಧೋತ್ರನಾಮ ವಿಭೂತಿಯ ಬೆಳಕುಪರಮಾನ್ನವ ಸಕ್ಕರೆಯನು ಕಲಸಿನುಂಗುವೆ ಗುಳುಕು ಗುಳುಕು4ಮುಂದೆ ಹೇಳುವನ ಮೆಟ್ಟಿಕೊಂಡುಂಬುದುಇಂತಿದು ನಿನ್ನಯ ಬದುಕುಸುಂದರ ಚಿದಾನಂದ ಸ್ವರೂಪವ ತಿಳಿವುದುಎಂದುಎಂದಿಗೆ ಬಲುಧಡಕ5
--------------
ಚಿದಾನಂದ ಅವಧೂತರು
ಹರಿಹರಿಯೆನಲಿಕ್ಕೆ ಹೊತ್ತಿಲ್ಲ-ರಂಗಯ್ಯ |ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪಧಾರಣೆಯ ಮಾಡುವಾಗ ಪಾರಣೆಯ ಚಿಂತೆ |ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ 1ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |ಎತ್ತ ನೋಡಿದರತ್ತ ಉದರದ ಚಿಂತೆ 2ಸ್ನಾನವನ್ನು ಮಾಡುವಾಗಮಾನಿನಿಮೇಲಿನ ಚಿಂತೆದಾನವನ್ನು ಕೊಡುವಾಗಧನದಮೇಲಿನ ಚಿಂತೆ3ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|ದಾವಾಗ ನೋಡಿದರು ಪರರ ಕೇಡಿನ ಚಿಂತೆ 4ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ 5ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ 6
--------------
ಪುರಂದರದಾಸರು
ಹೀಗಿದ್ದರೆ ಲೇಸು ಜ್ಞಾನಿಗೆಹೀಗಿದ್ದರೆ ಲೇಸು ಪ.ಸತಿಇದ್ದರೆ ಸಮಹಿತದವಳಾಗಿಸುತನಿದ್ದರೆ ನಿಜಮತದವನಾಗಿ 1ಧನವಿದ್ದರೆ ಸಜ್ಜನಕೆ ವಿಭಾಗಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ 2ಭಕುತಿ ಇದ್ದರೆ ಡಂಭಕವನಳಿದು ವಿರಕುತಿದ್ದರೆ ಭವದಾಶೆಯ ಕಳೆದು 3ಮತಿ ಇದ್ದರೆ ಶುಭಮತಿಯವನಾಗಿಧೃತಿ ಇದ್ದರೆ ದುಷ್ಕøತಿಗಳನೀಗಿ4ಪ್ರಸನ್ವೆಂಕಟೇಶನ ಪ್ರಸಾದವನುಣುತವಿಷಮ ಜನನ ಮೃತಿ ಗಸಣೆ ತಪ್ಪಿಸುತ 5
--------------
ಪ್ರಸನ್ನವೆಂಕಟದಾಸರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು