ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ
ಜಯವಿನುತ ವಾಣೀಶ ಜಯ ರುಕ್ಮಿಣೀಶ |ಜಯಜಯ ಪ
ಕಮಲಭವನುತಿಪಾತ್ರ ಕಮಲಸಖನಿಭಗಾತ್ರ
ಕಮಲರಿಪು ಸಮವಸ್ತ್ರ ಕಮಲದಳ ನೇತ್ರ
ಕಮಲ ಕರಧೃತಗೋತ್ರ ಕಮನೀಯ ಸುಚರಿತ್ರ
ಕಮಲಾರಿ ಧರ ಮಿತ್ರ ಕಮಲಾಕಳತ್ರ 1
ನವನೀತ ದಧಿ ಚೋರ
ಸುಂದರೀ ಕುಲಜಾರ ಸ್ಮರಸಮರ ಶೂರ
ಕಂದರ್ಪಸಹಕಾರ ಕಾಮಿನೀ ಪರಿವಾರ
ಬೃಂದಾವನ ವಿಹಾರ ಭಕ್ತ ಮಂದಾರ 2
ಧರಣೀ ಧರಾಸ್ಫಾಲ ದಮನಕರ ನಿಜಲೀಲ
ನರಪೌತ್ರ ಪರಿಪಾಲ ನವ್ಯ ವನಮಾಲಾ
ಮುರನರಕ ಶಿಶುಪಾಲ ಮುಖದನುಜ ಕುಲ ಕಾಲ
ವರವ್ಯಾಘ್ರಗಿರಿಲೋಲ ವರದಾರ್ಯವಿಠಲಾ 3