ಶ್ರೀಹರಿ ಸಂಕೀರ್ತನ
ಅನ್ಯರಿಲ್ಲ ಗತಿ
ಅಚ್ಯುತನಾನಂತ ಶ್ರೀಪತಿ
ಅಜಪಿತ ಮಹಾಮತಿ ಪ.
ಸತ್ಯಜ್ಞಾನಾನಂತುಗುಣಸಿಂಧು
ಭಾಗವತಜನಬಂಧು ರಕ್ಷಿಸಿಂದು
ಪ್ರತ್ಯಗಾತ್ಮ ಸುಹೃತ್ತಮ ಜರಾ-
ಮೃತ್ಯುರಹಿತನೆ ಚಿತ್ತಸಾಕ್ಷಿಯೆ 1
ವಾಸುದೇವ ದಿನೇಶಕೋಟಿಪ್ರಭ
ಪೂಜಿತವಿಬುಧ ಮೌನಿಸಭ ಪದ್ಮನಾಭ
ದಾಸಜನಹೃದಯಾಶ್ರಯಸ್ಥಿತ
ದೋಷಗಂಧವಿದೂರ ಶ್ರೀವರ 2
ಸಕಲ ಜಗದಾಧಾರಮೂರುತಿಯೆ
ವಿಜಯರಥ ಸಾರಥಿಯೆ ಹರಿಯೆ ದೊರೆಯೆ
ಶಕಟಮರ್ದನ ಶಾಙ್ರ್ಗಧರ ಶ್ರೀ
ಲಕುಮಿನಾರಾಯಣ ನಮೋಸ್ತುತೇ 3