ಒಟ್ಟು 661 ಕಡೆಗಳಲ್ಲಿ , 84 ದಾಸರು , 550 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಮ್ಮ ಮನಿಲಿ ಬ್ರಹ್ಮಾನಂದ ಬಂದು ಭಾವ ಪೂರಿಸಿದ ಮುಕುಂದ ಧ್ರುವ ಎನ್ನಮನಕೆ ಮಾಡಿದ ಮನೋಹರ ಚೆನ್ನಾಗೊಲಿದು ದೋರಿದ ಸಹಕಾರ ಮನ್ನಿಸೆನಗೆ ಬೀರಿದ ನಿಜಸಾರ ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1 ದಯದಿಂದ ಪಿಡಿದು ಎನ್ನ ಕೈಯ ಶ್ರೇಯ ಸುಖ ನೀಡಿದ ಪ್ರಾಣಪ್ರಿಯ ತ್ರಯ ಗುಣಾತೀತದ ಸುಖಾಶ್ರಯ ತ್ರೈಲೋಕದೊಳೆನಗೆ ವಿಜಯ 2 ಕಣ್ಣು ಪಾರಣಗೈಸಿದೆನ್ನ ನೋಡಿ ಎನ್ನೊಳನುಭವಾಮೃತಸಾರ ನೀಡಿ ಚಿಣ್ಣಮಹಿಪತಿ ಕೈವಶಗೂಡಿ ಧನ್ಯಧನ್ಯಗೈಸಿದ ದಯಮಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಬಲು ಸುಖದಾಟ ಸಾಧಿಸಿ ನೋಡಿರೋ ನೀಟ ಧ್ರುವ ಕರ್ಮಕಮಂಧವಿಲ್ಲ ವರ್ಮ ತಿಳಿದವ ಬಲ್ಲ ಧರ್ಮ ಗುರುವಿನ ಸರಿ ಇಲ್ಲ ನಿರ್ಮಲ ನಿಜವೆಲ್ಲ 1 ಅನುಭವಕನುಭವದ ಅನಂದೋ ಬ್ರಹ್ಮದ ಬೋಧ ಏನೇಂದ್ಹೇಳಲಿ ಸುಸ್ವಾದ ತಾನೆ ತಾನಾದ 2 ಸಾಧಿಸಿದಲ್ಲದೆ ಖೂನ ಇದರಿಟ್ಟು ಮಹಿಪತಿ ಪೂರ್ಣ ಒದಗಿ ಕೈಗೂಡದು ಧನ ಸದ್ಗುರು ಚರಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಯಾತರ ಬಾಳೋಣಾ | ಮನವೇಗತಿ ಹಾದಿಯಾ ನೆನೆದೇನಾ ಪ ನರಜನ್ಮದಲಿ ಬಂದು ಪರಿಪರಿಯಲಿ ನೊಂದು | ಬರಿಯಾವಡಲ ಹೊರೆದೇನಾ 1 ತಲೆವೂರಿ ತಪಗೂಡಿ ಹಲವ ಕಾಲವ ಮಾಡಿ | ನೆಲೆಯ ಲೇಶವ ಪಡೆದೇನಾ 2 ತಂದೆ ಮಹಿಪತಿ ನಂದನ ಸಾರಥಿ ಹೊಂದುವದು ಇನ್ನಾರೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದುವದನೆ ಪಾರ್ವತಿಯೆ ನಾ ಇಲ್ಲಿಗೆ ಬಂದೆನು ಬಾಗಿಲು ತೆಗೆಯೆ ಜಾಣೆ ಬಂದೆನು ಬಾಗಿಲು ತೆಗೆಯೆ 1 ಬಂದವರ್ಯಾರೀ ವ್ಯಾಳ್ಯದಿ ಬಾಗಿಲು ಬಂದು ತೆಗೆಯೊರ್ಯಾರಿಲ್ಲ ಈಗ ಬಂದು ತೆಗೆಯೊರ್ಯಾರಿಲ್ಲ 2 ಅಂಗನಾಮಣಿ ಕೇಳೆ ಗಂಗಾಧರೆನಿಸಿದ ಚಂದ್ರಶೇಖರ ನಾ ಬಂದೀನೆ ಜಾಣೆ ಚಂದ್ರಶೇಖರ ನಾ ಬಂದೀನೆ 3 ಸಿಂಧುರಾಜನ ಸತಿಸುತರನ್ಹೊತ್ತಿಲ್ಲಿಗೆ ಬಂದ ಕಾರಣವೇನು ನೀನು ಅವ ರಿಂದ ಕಾರಣ ಮತ್ತೇನು 4 ಪಶುಪತಿ ನಾ ಬಂದೆ ಕುಶಲದಿ ಬಾಗಿಲು ತೆಗೆಯೆ ಜಾಣೆ ಕುಶಲದಿ ಬಾಗಿಲು ತೆಗೆಯೆ 5 ಪಶುಗಳಿಗೆಲ್ಲ ಪತಿಯಾದರೆ ನಿನ ಕೊಂಬು ಹಸನಾಗಿ ತೋರಿಸೊ ಎನಗೆ ಕೊಂಬು ಹಸನಾಗಿ ತೋರಿಸೊ ಎನಗೆ 6 ಸರ್ವಶರೀರದಲ್ಲೆತ್ತಿಕೊಂಡಿರುವಂಥ ಶ್ರೇಷ್ಠ ಶಿವನು ನಾ ಬಂದೀನೆ ಜಾಣೆ ಶ್ರೇಷ್ಠ ಶಿವನು ನಾ ಬಂದೀನೆ 7 ಸರ್ವ ಸೇರಿರುವಂಥ ಹುತ್ತ ನೀನಾದರೆ ಇತ್ತ ಬರುವೋದುಚಿತಲ್ಲ ಪೋಗೊ ಇತ್ತ ಬರುವೋದುಚಿತಲ್ಲ 8 ಕಾಂತೆ ಪಾರ್ವತಿ ನೀಲಕಂಠ ನಾ ಬಂದೀನಿ ಸಂತೋಷದಿ ಬಾಗಿಲು ತೆಗೆಯೆ ಸಂತೋಷದಿ ಬಾಗಿಲು ತೆಗೆಯೆ 9 ಕಂಠದೊಳಗೆ ಕಪ್ಪಿದ್ದರೆ ನೀ ನವಿ- ಲಂತೆ ಕುಣಿದು ತೋರಿಸೆನಗೆ ನವಿ- ಲಂತೆ ಕುಣಿದು ತೋರಿಸೆನಗೆ 10 ಫಾಲಾಕ್ಷ ನಾ ರುಂಡಮಾಲೆ ಧರಿಸಿದಂಥ ಶೂಲಿಯು ನಾನು ಬಂದೀನೆ ತ್ರಿ- ಶೂಲಿಯು ನಾ ಬಂದೀನೆ11 ಮೂರು ಶೂಲೆಗಳ್ಯಾವ್ಯಾವ ಕಡೆಯಲುಂಟು ಭಾಳ ಬಲ್ಲವರಲ್ಲೆ ಪೋಗಯ್ಯ ನೀ ಭಾಳ ಬಲ್ಲವರಲ್ಲೆ ಪೋಗಯ್ಯ 12 ಸ್ಥಾಣು ನಾ ಬಂದೀನಿ ಜಾಣೆ ನೀ ಬಾಗಿಲು ತೆಗೆಯೆ ಒಳ್ಳೆ ಜಾಣೆ ನೀ ಬಾಗಿಲು ತೆಗೆಯೆ 13 ಸ್ಥಾಣು ನೀನಾದರೆ ವೇಣುಮದ್ದಲೆ ಮಾಡೊ ಜಾಣರ ಮನೆಗೆ ನೀ ಪೋಗಯ್ಯ ಒಳ್ಳೆ ಜಾಣರ ಮನೆಗೆ ನೀ ಪೋಗಯ್ಯ 14 ಗಜ ಚ- ರ್ಮಾಂಬರಧಾರನು ನಾನೇ ಚ- ರ್ಮಾಂಬರಧಾರನು ನಾನೇ 15 ವೈರಿ ಭಸ್ಮಾಂಗವ ಧರಿಸಿz À ಸಾಮಜ ವಸನವ ನೋಡಿ ಇರ- ಲಾರೆನು ನಿನ್ನೊಡಗೂಡಿ 16 ಭೂತಗಣಂಗಳ ನಾಥನಾಗಿರುವೊ ಪ್ರ- ಖ್ಯಾತನು ನಾನು ಬಂದೀನೆ ಸದ್ಯೋ- ಜಾತನು ನಾನು ಬಂದೀನೆ 17 ಭೂತಗಣವ ಕೂಡಿ ಯಾತಕೆ ಬರುವುದು ಭೀತಿ ಬಡುವೆ ಮುಂಚೆ ಸಾಗೋ ನಾ ಭೀತಿ ಬಡುವೆ ಮುಂಚೆ ಸಾಗೋ18 ಮಾತಿಗೆ ಮಾತನಾಡುವೋರೆ ಪಾರ್ವತಿ ಕೇಳೆ ಮೂಕನಂತಿರುವೆನೆ ನಾನು ಇನ್ನು ಮೂಕನಂತಿರುವೆನೆ ನಾನು 19 ಮೂಕನಂತಿರುವುದ್ವಿವೇಕ ಭೀಮೇಶಕೃಷ್ಣ- ನ್ನ ಕಾರುಣಕೆ ಪಾತ್ರಳೇನೋ ನಿನಗೆ ನಾ ಕೈಯ ಮುಗಿವೆ ಬಾ ನೀನು 20
--------------
ಹರಪನಹಳ್ಳಿಭೀಮವ್ವ
ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ಮೂರ್ತಿಎಂಬುದೆ ಅಮೂರ್ತಿ ನಾಮರೂಪ ನಿಜ ಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯನಿರ್ಗುಣ ನಿರ್ವಿಕಲ್ಪ ಸತ್ಯಸದ್ಗುರು ಸ್ವರೂಪ ನಿತ್ಯ ನಿತ್ಯದಿತ್ಯರ್ಥ ಸುದೀಪ ತತ್ವಙÁ್ಞನ ಮನಮಂಟಪ 2 ಸ್ವಾನುಭವ ಸ್ವಾದೋದಕ ಙÁ್ಞನ ಭಾಗೀರಥಿ ಅಭಿಷೇಕ ಮೌನ ಮೌನ್ಯ ವಸ್ತ್ರಾಮೋಲಿಕ ಧಾನ್ಯವೆಂಬುದೆ ಸೇವಿ ಅನೇಕ 3 ಗಂಧಾಕ್ಷತಿ ಪರಿಮಳ ಫಲಪುಷ್ಪ ಬುದ್ಧಿ ಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪ ದೀಪ ಸದ್ಭಾವನೆ ನೈವೇದ್ಯ ಮೋಪ 4 ಫಲತಾಂಬೂಲವೆ ಸದ್ಭಕ್ತಿ ಮೂಲಜೀವ ಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನಮ್ಮ ಶ್ರೀ ಹರಿ ಕೀರ್ತನಿ ಸಾಧು ಸಜ್ಜನರ ಮೃತಸಂಜೀವನಿ ಸದ್ಗೈಸುವ ದಿವ್ಯ ಸುಸಾಧನಿ ಸದ್ಗುರು ಸುಮೂರ್ತಿ ಪ್ರಾರ್ಥನಿ ಧ್ರುವ ಶಮದಮವೆಂಬೆರಡು ತಾಳಗೂಡಿ ಪ್ರೇಮ ಭಾವನೆ ಧ್ರುಪÀದಿಗಳ ಮಾಡಿ ಸಮರಸವೆ ಮೃದಂಗವಿದು ನೋಡಿ ಸಮದೃಷ್ಟಿಲಿವೆ ನಾಮ ಕೊಂಡಾಡಿ 1 ಸಾವಧಾನವೆಂಬ ನಿರೋಪಣಿ ನಿವಾಂತ ಕೇಳು ವಿಚಾರಣಿ ಈ ವಾಕ್ಯಬಲ್ಲ ಲಕ್ಷಕೊಬ್ಬ ಙÁ್ಞನಿ ಭಾವ ಬಲ್ಲುದೆ ಮುಖ್ಯ ಸಾಧನಿ 2 ಮನಸ್ವಸ್ತ ಮಾಡಿ ನೀವಿನ್ನು ಕೇಳಿ ಅನುಮಾನ ಬಿಟ್ಟಿ ಇಕ್ಕಿ ಚಪ್ಪಾಳಿ ಗನಗುರು ಪಾದದಲ್ಯೊಮ್ಮೆ ಹೊರಳಿ ಹಣಿಗ್ಹಚ್ಚಿಕೊಂಬಾ ಗುರುಪಾದಧೂಳಿ 3 ಚಿತ್ತ ಚಂಚಲಾಗ ಬಾರದು ನೋಡಿ ವಸ್ತು ಬಾಹುದು ಬ್ಯಾಗೆ ಕೈಗೂಡಿ ಮಿಥ್ಯಾ ಪ್ರಪಂಚ ಈಡ್ಯಾಡಿ ನಿತ್ಯ ನಿರ್ಗುಣಾನಂದ ಸ್ತುತಿಪಾಡಿ 4 ಪುಣ್ಯಕೀರ್ತನೆ ಕೇಳಿ ಸಂಭ್ರಮ ಧನ್ಯ ಧನ್ಯ ಕೇಳಿದವರ ಜನ್ಮ ಕಣ್ಣಾರೆ ಕಾಂಬುವ ನಿಜವರ್ಮ ಚಿಣ್ಣ ಮಹಿಪತಿಗಾನಂದೋ ಬ್ರಹ್ಮ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನಿತ್ಯನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ಧ್ರುವ ಬಿಡದಿಹುದೇ ಸತ್ಸಂಗಾ ನೋಡಿ ಇದೇವೆ ಶಿರಸಾಷ್ಟಾಂಗಾ ಕಡದ್ಹೋಯಿತು ಭವದುಸ್ಸಂಗಾ ದೃಢಮಾಡಿ ಅಂತರಂಗಾ1 ನಮೃತಲಿಹುದೆ ನಮನಾ ನೇಮದಿಂದ ನಡೆದವರು ದಿನಾ ಬ್ರಹ್ಮಾನಂದದೋರುವ ಸಾಧನ 2 ಗುರ್ವಿನಂಘ್ರಿಗೆ ಎಡೆಮಾಡಿ ಅರ್ವಿನೊಳಾದ ಮಹಿಪತಿ ನೋಡಿ ಗರ್ವ ಪುಣ್ಯೆಂಬುದು ಈಡ್ಯಾಡಿ ಸರ್ವಪಾಪ ಹೋಯಿತು ನೋಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿ ಸ್ವತಶುದ್ಧ ವiಡಿ ಸದಾ ಸರ್ವದಾ ಇದೇ ಮಾಡಿ ಧ್ರುವ ಅರಹು ಎಂಬುದೆ ಮಡಿ ಉಡಿ ಮರಹು ಮೈಲಗಿ ಮುಟ್ಟಬ್ಯಾಡಿ ಗುರುಸ್ಮರಣೆ ನಿಷ್ಠೆಯೊಳುಗೂಡಿ ಪರಬ್ರಹ್ಮ ಸ್ವರೂಪದ ನೋಡಿ 1 ಕಾಮಕ್ರೋಧದ ಸ್ವರ್ಶವ ಬ್ಯಾಡಿ ನೇಮನಿತ್ಯ ಇದನೇ ಮಾಡಿ ಶಮದಮೆಂಬುದು ಕೈಗೂಡಿ ಪ್ರೇಮಭಾವ ಭಕ್ತಿಯ ಮಾಡಿ 2 ಮಿಥ್ಯಾ ಭೂತಕ ಮಡಿಮಾಡಬ್ಯಾಡಿ ಚಿತ್ತಚಿದ್ಛನ ಸಮರಸ ನೋಡಿ ನಿತ್ಯ ಮಹಿಪತಿಗಿದೆ ಮಡಿ ನೋಡಿ
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ 1 ಭಕ್ತಿವೈರಾಗ್ಯೊಲಿಹೂಡಿ ನಿತ್ಯಙÁ್ಞನಾಗ್ನಿ ಒಡಗೂಡಿ ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ2 ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ ಶೋಧಿಸಿ ನೋಡಲಿಕ್ಕೆ ಛೆÉೀದಿಸಿಹೋಗುದು ಭವಕರ್ಮ ಧ್ರುವ ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ 1 ದೋರದ ನೋಡಬ್ಯಾಡಿ ದೋರಿಸುವದು ನೋಡಿ ದೋರಿಸಿದೋರಗುಡದಿಹುದ ಖೂನ ನಿಜಮಾಡಿ 2 ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ 3 ಆಡದ ನೋಡಬ್ಯಾಡಿ ಅಡಿಸುವದ ನೋಡಿ ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ 4 ನುಡದ ನೋಡಬ್ಯಾಡಿ ನುಡಿಸುವದ ನೋಡಿ ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ 5 ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ 6 ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಪೂಜೆಯ ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ನಾಮಸ್ವರೂಪದ ನಿಜಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯ ನಿರ್ಗುಣ ನಿರ್ವಿಕಲ್ಪಾ ಸತ್ಯಸದ್ಗುರು ಸ್ವರೂಪಾ ನಿತ್ಯ ನಿತ್ಯರ್ಥ ಸುದೀಪಾ ತತ್ವಜ್ಞಾನ ಮನಮಂಟಪಾ 2 ಸ್ವಾದೋದಕ ಙÁ್ಞನ ಭಾಗೀರಥೀ ಅಭಿಷೇಕ ಮೌನಮೌನ್ಯವಸ್ತ್ರಾ ಮೋಲಿಕಾ ಧಾನ್ಯವೆಂಬುದೇ ಸೇವೆ ಅನೇಕಾ 3 ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪಾ ಸದ್ವಾಸನ್ಯಾಯಿತು ಧೂಪದೀಪ ಸದ್ಭಾವನೆ ನೈವೇದ್ಯಮೋಪಾ 4 ಫಲತಾಂಬೋಲವೆ ಸದ್ಭಕ್ತಿ ಮ್ಯಾಲಭಿಭಾವನೆ ಮಂಗಳಾರ್ತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದ್ದೀಯಯ್ಯ ಎನ್ನೊಳಗೆನೀ ಇನಕುಲರಾಯ ಪ ಇದ್ದೀಯೈ ಸರ್ವರ ಹೃದ್ಗುಹೆಯೆಂತೆಂಬ ಪದ್ಮದೊಳಗೆನೀನು ಪದುಮೆಯಿಂದೊಡಗೂಡಿ ಅ.ಪ ಮರುತಾತ್ಮಜ ನಿನ್ನ ಚರಣವನೊತ್ತಲು ಸರಸಿಜಭವ ಮುಖ್ಯ ಪರಿವಾರಸಹಿತನು 1 ಮೂರು ಲೋಕದ ವ್ಯಾಪಾರ ನಡೆಸುತ್ತ ಯಾರಿಗು ತಿಳಿಸದೆಯೆಲ್ಲೆಲ್ಲಿಯು ನೀನೆ 2 ಪ್ರೇಮದಿಂದಲಿ ಭಕ್ತಸ್ತೋಮವೋಲೈಸುವದು ಸ್ವಾಮಿಯಾಗಿ ಗುರು ರಾಮವಿಠಲ ತಂದೆ 3
--------------
ಗುರುರಾಮವಿಠಲ
ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ ವೇದಾಂತಕಿದು ಸನ್ಮತಗೂಡುವ ಮಾತು ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು ಸಾಧನಕೆ ಸಾಧಿಸುವ ಮಾತು ಬೋಧಿಸಿದವಗೆ ಬಲವಾಗುವ ಮಾತು 1 ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು ನೋಟ ನಿಜವಾದವಗೆ ನೀಟವಾಗಿಹ ಮಾತು ಸೂಟಿಗಿದೆ ಘನಕೂಟ ಮಾತು ನಾಟಿಮನದೊಳು ಮಥಿüಸುವ ಮಾತು 2 ದ್ವೈತ ಅದ್ವೈತಕ ಆಧಾರವಾಗುವ ಮಾತು ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು ಮಹಿಪತಿಯ ಗುರುಗೂಢ ಮಾತು ತ್ರಯಲೋಕಕಿದೆ ತಾರಿಸುವ ಮಾತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲಿ ಬಾ ಇಲ್ಲಿ ಬಾ ಮೆಲ್ಲ ಮೆಲ್ಲನೆ ಹೆಜ್ಜೆಯನಿಕ್ಕುತ ಪುಲ್ಲನಾಭ ಗೋಪಾಲಕೃಷ್ಣ ಗೊಲ್ಲರೊಡಗೂಡಿ ಪ. ಪಾಲು ಮೊಸರು ಬೆಣ್ಣೆ ಕೊಡುವೆ ಬಾ ಗೋಲಿ ಗುಂಡು ಗಜಗನೀಡುವೆ ಬಾ ಆಲಯ ಪೊಕ್ಕು ಧೂಳಿ ಮಾಡಲು ಬ್ಯಾಡ 1 ಅಂಗಳದೊಳು ಬಾ ಬೆಳದಿಂಗ ತೋರುವೆನು ರಂಗು ಮಾಣಿಕ್ಯದುಂಗರ ನಿಡುವೆನು ಮಂಗಳಾಂಗನೆ 2 ಮೃದನಯ್ಯನೆ ಬಾ ಸುದತಿಯರೊಡಗೂಡಿ ಬಾ ಸಡಗರದಿ ನೀ ಬಾ ಕಾಳೀಮರ್ಧನಕೃಷ್ಣ ಬಾ 3
--------------
ಕಳಸದ ಸುಂದರಮ್ಮ