ಒಟ್ಟು 1255 ಕಡೆಗಳಲ್ಲಿ , 103 ದಾಸರು , 1013 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ಪ ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ ಅಹುದೋ ಸಲೆ ಸಲಹುವ ಪಿತ ನೀ ಅ.ಪ ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ ಅಜಮಿಳನಿಗೆ ಮೋಕ್ಷಪದವಿಯನಿತ್ತೆ ಭಜನೆಗೈಯುವ ತುಂಬುರು ನಾರದರಿಂಗೆ ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ 1 ತರಳನ ನುಡಿಕೇಳಿ ಕಂಬದೊಳುದಯಿಸಿ ದುರುಳರಕ್ಕಸನಶಿಕ್ಷಿಸಿದೆ ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ ವರಸುಖಪದವಿತ್ತ ಕರುಣಾಕರನೀ 2 ಭೂತಳದೊಳು ಜನ್ಮವಾಂತಿಹ ಸಾಸಿರ ಚೇತನಾಚೇತನ ವಸ್ತುಗಳನು ನೀ ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ ಏ ತೆರ ಪೇಳ್ದೊಡನಂತಮಹಿಮ ನೀ 3 ದೇವದೇವನೆ ನಿನ್ನ ಪಾವನಚರಣವು ದೇವಮುನಿಗಳೆಲ್ಲ ಸೇವಿಸಲರಿದೈ ಭಾವಜಪಿತ ರಾಮದಾಸಾಚೇತ ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅಳಬ್ಯಾಡೆಲವೊ ರಂಗಮ್ಮ ನಿನ್ನ ಇಳಿಯಾರ ನೋಡುತಿದೆ ಗುಮ್ಮ ಪ ಒದರಿದರೆ ಕೇಳೆಲೆವೊ ತಮ್ಮಾ | ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮತಮ್ಮ | ನಿಜ ಸದನ ಬಿಡುತಿಹರು ನೋಡಮ್ಮ 1 ಬೆರಳುಗುರು ಗಾಯಗಳಿಂದ | ಆ ದುರುಳರನ್ನ ಜಠರ ತಳದಿಂದ ಕರುಳು ಮಾಲಿಕೆ ಕಿತ್ತಿ ತಂದ | ತನ್ನ ಕೊರಳಲಿ ಹಾಕಿಹ ಚಂದ2 ಏಸು ದೈತ್ಯರಾಸಿಗಳನು | ತಾನು ಮೋಸಗೊಳಿಸಿ ಕೊಲ್ಲುವನು ದಾಸನೆಂದರೆ ಕಾಮಧೇನು ಸುಮ್ಮಗಿ | ರುವ ವಾಸುದೇವವಿಟ್ಠಲ ನೀನು 3
--------------
ವ್ಯಾಸತತ್ವಜ್ಞದಾಸರು
ಆ ಬಾಲಗೋಪಾಲ ವರ್ಣನೆ ಆಡ ಹೋಗುವಾ ಬಾರೊ ರಂಗಾ ಪ ಆಡ ಹೋಗುವಾ ಬಾರೊ ರಂಗಾ ಕೂಡಿ ಕಾಳಿಂದೀ ತೀರದಲ್ಲಿ ನಾಡ ಗೊಲ್ಲರ ಹೆಂಗಳಿಗೆಲ್ಲ ಬೇಡಿದಿಷ್ಟಾರ್ಥಗಳ ಕೊಡುವಾ ಅ.ಪ. ಆಣಿಕಲ್ಲು ಗೋಲಿ ಗಜ್ಜುಗ ಚಿಣ್ಣಿಕೋಲು ಚಂಡು ಬುಗುರಿ ಕಣ್ಣುಮುಚ್ಚಾಲೆ ಕುಂಟಹಲಿಪೆ ಬಣ್ಣ ಬಣ್ಣದಾಟಗಳನು 1 ಸೋಲುಗೆಲವಿಗೆಲ್ಲ ನೀನೆ ಪಾಲುಗಾರನಾಗಿ ನಮ್ಮ ಮೇಲೆ ಮಮತೆ ಇಟ್ಟು ಸಾನು - ಕೂಲನಾಗಿ ಕೈಯ್ಯ ಪಿಡಿಯೋ2 ಮೆಟ್ಟು ಮೆಟ್ಟು ಕೋಲು ಕೈಲಿ ಕಟ್ಟು ಬುತ್ತಿ ಕೊಳಲು ಕಂಬಳಿ ಧಿಟ್ಟ ಗೋವಳರಾಮ ಶ್ರೀದ - ವಿಠಲಯ್ಯ ಯಾಕೆ ತಡವೋ3
--------------
ಶ್ರೀದವಿಠಲರು
ಆಟವಾಡಬೇಕು ಒಳ್ಳೆ ಊಟಮಾಡಬೇಕು ಪ ಆಟ ಬಲ್ಲ ಮಾನವನಿಗೆ ರೋಗದ ಕಾಟವಿರದೆ ತಾ ಊಟ ಮಾಡುವನು ಅ.ಪ ಪಂಡಿತರಾಗಿ ಅಖಂಡ ಕಲೆಗಳನು ಚಂಡಿನಂತೆ ಕರತಲದಲಿ ಪಿಡಿಯುತ 1 ಕಣ್ಣಮುಚ್ಚಿ ಇಂದ್ರಿಯಗಳ ನಿಲ್ಲಿಸಿ ಹೃನ್ಮಂದಿರದಲಿ ಹರಿಯನು ಹಿಡಿಯುವ 2 ಈಶ ಜೀವ ಜಡರೆಂಬೊ ಮೂವರಲಿ ಈಶನೇ ಹಾಸೆಂದರಿಯುತ ಮೂರೆಲೆ 3 ಹಿಂದಿನ ದಿನ ಹರಿದಿನ ಮರುದಿನಗಳು ಇಂದಿರೆಯರಸನ ಕೂಡಿ ಏಕಾದಶಿ 4 ಸಿಕ್ಕಿದ ಸ್ಥಾನವು ದಕ್ಕದೆಂಬುದಕೆ ಭಕ್ತ ಪ್ರಸನ್ನ ತೋರಿದ ಕೊಕ್ಕಿನ5
--------------
ವಿದ್ಯಾಪ್ರಸನ್ನತೀರ್ಥರು
ಆತ್ಮ ನಿವೇದನೆ ಅನಾಥ ಬಂಧೋ ಆದಿ ಪುರುಷ ಪ. ಅನಾಥ ಬಂಧೋ ಗುಣ ಗಣ ಸಿಂಧೋ ಮನಸಿಜ ಜನಕನೆ ಮರೆಯದಿರೆಂದೂ ಅ.ಪ. ಅನುಚಿತ ಕರ್ಮದ ಬಲೆಯಲಿ ಸಿಕ್ಕಿ ದಿನಗಳ ಕಳೆದನು ಮನೆಯಲ್ಲಿ ತನುವಿನ ಸ್ಥಿತಿಯನು ಪೇಳಲೇನು ಶ್ರೀ- ವನಜ ಭವಾರ್ಚಿತ ಒದಗುವಿ ಸಮಯದಿ 1 ವಿಧಿ ನಿಮಯಗಳನುಸರಿಸದೆ ಕ- ಣ್ಣಿದಿರಲಿ ಕಾಂಬುದ ಗ್ರಹಿಸದೆ ಮಧುಮಥನನೆ ತ್ವತ್ಪರ ಪದ್ಮವ ನಂ- ಬಿದೆ ಕರುಣೋದಧಿ ಕಾಯೊ ಬೇಗದಲಿ 2 ಸರ್ವಭಾರವು ನಿನ್ನ ಮೇಲಿಹುದು ಮ ತ್ತೋರ್ವಗುಂಟೆ ನಿನ್ನಯ ಬಿರುದು ಮರ್ವನೀಯದೆ ಮನದಲ್ಲಿರು ವೆಂಕಟ ಪರ್ವತೇಂದ್ರ ಪೂರ್ಣಾನಂದಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ಆತ್ಮನಿವೇದನೆ ನೆಂತು ಪೂಜಿಸಿದೆನೈ ನೀರಜಾಕ್ಷ ಪ ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು ಮಂಗಳದ ನಾಮ ಮುದ್ರೆಗಳ ಧರಿಸೀ ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1 ನಿರ್ಮಲೋದಕದಿಂದ ಅಭಿಷೇಚನವ ಗೈದು ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2 ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ ಅರ್ಭಕನು ನಾ ಕನಕರತ್ನಾಭರಣಗಳನು ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3 ಧೂಪದೀಪಗಳಿಂದ ವಾದ್ಯ ವೈಭವದಿಂದ ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4 ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ ಭವರೋಗಪೀಡಿತನು ನಾ ನಿನ್ನ ಹವಣರಿತು ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5 ಸರ್ವಶಕ್ತನು ನೀನು ಸರ್ವಜ್ಞಪತಿ ನೀನು ಸರ್ವದಾ ತೃಪ್ತನೋ ನಿಗಮವೇದ್ಯಾ ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ ಗರ್ವಿಶಠನಜ್ಞತಮನೆನಗೆ ವಶವೇ 6 ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
--------------
ರಘುರಾಮವಿಠಲದಾಸರು
ಆತ್ಮವೃತ್ತ ವಾಸುದೇವ ವಾಸುದೇವ ಎಂದು ಸತತಮಾನ್ಯದಲ್ಲಿ ಹರಿಯ ನಾಮ ದ್ಯೋತಿಸುವರ ಸ್ಮರಿಸುವೇನು ಪ ಸೀತಾರಾಮಚಾರ್ಯ ಹೇಳಿದ ಮಾತುಗಳನು ಕೇಳಿ ಬಹಳಪ್ರೀತಿಯಿಂದಲವರ ಮಹಿಮ ಪೋತನಾನು ಪಾಡುವೇನು 1 ನರಹರಿಯ ಸಂನಿಧೀಲಿ ತರುಳರಾಮ ಪೇಳಿದಂಥಸರಸ ಪದಗಳನ್ನೆ ಬಹಳ ಹರುಷದಿಂದ ಕೇಳಿಹಾರು 2 ಇಂದಿರೇಶ ಕೃಷ್ಣನಿಲ್ಲೆ ಬಂದು ಪದಕ್ಕೆ ಯದುರೆ ನಾಥಮುಂದೆ ವಾರ್ಧಕಾದಿಯಂತೆಂದು ಭಾವ ಪೇಳಿಹಾರು 3 ಇಷ್ಟು ದಿವಸ ರಾಮನಂಘ್ರಿ ನಿಷ್ಠನಾಗುತೀಗ ನೃಹರಿಪುಟ್ಟಪಾದ ನಮಿಪಾ ಮುಂದೆ ಕೃಷ್ಣನಂಘ್ರಿ ಭಜಿಸುವಾನು 4 ಇಂದಿರೇಶ ಕೃಷ್ಣನನ್ನು ಹಿಂದೆಯೆಂದು ಮುದ್ರಿಕಿಲ್ಲಾಇಂದೆ ಬಂದಿಹುದು ಇದು ಅನಾದಿಯೆಂದು ಪೇಳಿಹಾರು 5
--------------
ಇಂದಿರೇಶರು
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಆನಂದಾನಂದಂ ಶಿವಶಿವ ಆನಂದಾನಂದಂ ಪ. ಅಪ್ಪ ಅಣ್ಣನೆಂದು ಕರೆದರೆ ನಮಗಿಹ ತಪ್ಪುಗಳನು ಜಗದಪ್ಪನಿಗೊಪ್ಪಿಸುವಾನಂದಾನಂದಂ 1 ತತ್ತ್ವವರಿತು ಹರಿಭೃತ್ಯರೊಳಾಡುತ ಚಿತ್ತವ ಸಂತತೇಕಾತ್ಮನೊಳಿಡುವಂಥಾನಂದಾನಂದಂ 2 ಭೂರಿ ಸಂಸಾರಕೆ ಸೇರಿದೆ ನಿತ್ಯದಿ ಧೀರ ಲಕ್ಷ್ಮೀನಾರಾಯಣನೆಂಬುವದಾನಂದನಂದಂ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಆನಂದಾನಂದಂ ಶಿವಶಿವ ಆನಂದಾನಂದಂ ಪ. ಅಪ್ಪ ಅಣ್ಣನೆಂದು ಕರೆದರೆ ನಮಗಿಹ ತಪ್ಪುಗಳನು ಜಗದಪ್ಪನಿಗೊಪ್ಪಿಸುವಾನಂದಾನಂದಂ 1 ತತ್ತ್ವವರಿತು ಹರಿಭೃತ್ಯರೊಳಾಡುತ ಚಿತ್ತವ ಸಂತತೇಕಾತ್ಮನೊಳಿಡುವಂಥಾನಂದಾನಂದಂ2 ಭೂರಿ ಸಂಸಾರಕೆ ಸೇರಿದೆ ನಿತ್ಯದಿ ಧೀರ ಲಕ್ಷ್ಮೀನಾರಾಯಣನೆಂಬುವದಾನಂದನಂದಂ3
--------------
ತುಪಾಕಿ ವೆಂಕಟರಮಣಾಚಾರ್ಯ
ಆರತಿ ಬೆಳಗಿರೆ ಶಾರದೆಗೆ | ಗುಣ ವಾರಿಧಿ ಕರುಣಾ ನೀರಧಿಗೆ ಪ ನತ ಗೀ- ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ- ಶುಭ ರೂಪಿಣಿಗೆ 1 ಶಾರದ ಚಂದ್ರನ ಕಿರಣನ ಪೋಲುವ ಚಾರು ಶುಕ್ಲಾಂಬರದಿಂದಲಿ ಪೊಳೆವ ಹಾರ ಮಕುಟ ಪದ ನೂಪುರ ಕಂಕಣ ಅಘ ಹಾರಿಣಿಗೆ 2 ಸಕಲಾಗಮಗಳನಾಂತಿಹ ಗಣಿಗೆ ನಿಖಿಲ ಕಲೆಗಳನು ಕಾದಿಹ ಫಣಿಗೆ ಭಕುತರ ಪಾಲಿನ ಚಿಂತಾಮಣಿಗೆ ಶ್ರೀಕಾಂತನಾತ್ಮಜನರಗಿಣಿಗೆ 3
--------------
ಲಕ್ಷ್ಮೀನಾರಯಣರಾಯರು
ಆರು ನಿನ್ನಂಘ್ರಿ ಭಜಿಸುವರೈಯ್ಯಾ ಸಾರಹೃದಯರ ಪ್ರೀಯ ಸುರಮುನಿಜನ ಧ್ಯೇಯಾ ಪ ಕಮಲಭವಶಿವ ಇಂದ್ರ ನೀನಾಗೇನು ರಮೆ ಧರಾದೇವಿ ರಮಣಾದರೇನು ಯಮದೂತರೊಳಗಾದ ಆಜಮಿಳ ಪೆಸೆ ರ್ಗೊಳೆ ಸುಮನಿಸುರ ನಯ್ಯವನ ಕಾಯದಿದ್ದೊಡೆ 1 ಜಗದುತ್ಪತ್ತಿ ಸ್ಥಿತಿಲಯ ಕರ್ತನಾಗೇನು ಮಗುಳಿ ಸೂತ್ರಧಾರಿಯಾದರೇನು ಸುಗುಣ ಪ್ರಲ್ಹಾದಂಬರೀಷ ಕರಿವರ ಧ್ರುವಾದಿಗಳನುದ್ದರಿಸಿ ತಾರಿಸದಿದ್ದಡೆ 2 ಎಂದೆಂದು ಅರ್ತಜನ ಬಂದು ದೀನಾನಾಥ ತಂದೆ ಮಹಿಪತಿ ಸ್ವಾಮಿಯಂದಡೇನು ಮಂದಮತಿ ಕುಂದಘನವಂದು ನೋಡದ್ದೆ ಇಂದು ನಂದನಗೆ ಸೇವೆ ಪದಲಿಡದಿದ್ದರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ
ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ಪ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ ಬಂದಿದ್ದನೋ ಏನೋ 1 ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ ಕರ್ಮ ಮಾಡಿದ್ದೆನೊ | ಜನಪತಿಗಳ ಮಾತು ಕೇಳದೆ ಧರ್ಮಕ್ಕೆ | ಅನುಕೂಲನಾಗಿದ್ದೆನೊ | ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ | ಉಣಿಸಿ ಸುಖಪಡಿಸಿದ್ದೆನೊ | ವನಗಳನು ಕಡಿದು ದೇವಾಲಯವ ಕಟ್ಟಿಸಿ | ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ 2 ಉತ್ತಮನು ಮನೆಗೆ ಬಂದಾಗ ಮಾಡುವಂಥ | ಸತ್ಕರ್ಮ ತೊರೆದಿದ್ದೆನೋ | ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ | ಹತ್ತೆಂಟು ಕಟ್ಟಿಸಿದೆನೊ | ದತ್ತಾಪಹಾರವನು ಮಾಡಿ ಅದರಿಂದನಗ್ನಿ- ಹೋತ್ರವನು ಸಾಧಿಸೆದೆನೊ | ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ- ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ3
--------------
ವಿಜಯದಾಸ