ಒಟ್ಟು 72 ಕಡೆಗಳಲ್ಲಿ , 2 ದಾಸರು , 72 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ಪ ಶ್ರೀ ವ್ಯಾಸರಾಯಾರ್ಜಿತ ಕರುಣಾ ದೇವಾದಿನುತಚರಣ ಗುಣಗಣಾಭರಣ ಅ.ಪ. ಭೂಮಿ ಆಕಾಶಾದಿ ಸಕಲವನು ವ್ಯಾಪಿಸಿದಪ್ರೇಮದಿಂ ನಿನ್ನಂಶವನು ಪೂರ್ಣಗೊಳಿಸಿದನೇಮದಿಂ ಜಾಂಬುವತಿ ಭಕುತಿಯಿಂ ಪೂಜಿಸಿದಭೀಮರಥಿಯಿಂ ಬಂದು ಶ್ರೀ ವ್ಯಾಸರಾಯಗೊಲಿದ 1 ಪುರಂದರ ಕಚ್ಚು ನೈವೇದ್ಯಕ್ಕೆಮೆಚ್ಚಿಯತಿ ವ್ಯಾಸರನು ಅಚ್ಚರಿಯಗೊಳಿಸಿದಹುಚ್ಚು ಕುರುಬಗೆ ಜಗನ್ನಾಥದಾಸರ ಜನುಮದಿಚ್ಛೆಯನು ವ್ಯಾಸರಿಂ ಪೂರೈಸಿ ಮೆರೆಯುತಿಹ 2 ಕನ್ನಡದ ರಾಜ್ಯವೆಂದೆನಿಸಿದ ವಿದ್ಯಾನಗರದುನ್ನತಿಯ ಗೈದ ಯತಿ ವ್ಯಾಸರನು ಪಟ್ಟದೊಳುಸನ್ನಹಿಸಿ ಘನ ಕೃಷ್ಣ ನರಪತಿಗೆ ಬಂದಿದ್ದಬನ್ನ ಕುಹುಯೋಗವ ಸಂಹರಿಸಿ ಪಾಲಿಸಿದ 3 ಪ್ರಾಣಯತಿ ಹರ ವ್ಯಾಸರಾಯಾದಿ ಹರಿದಾಸಜಾಣರನು ಕುಣಿಸಲಿಕೆ ನಾದವನು ಕೊಡಲೆಂದುವೇಣುವನು ಊದುತ್ತೆ ಮೋದಿಸುವನೆಂಬಂತೆಕಾಣಿಸುವ ರೀತಿಯಲಿ ನರ್ತಿಸುತ ನಿಂತಿರುವ 4 ವ್ಯಾಸರಂದದಿ ಧರ್ಮದುಪದೇಶ ಮಾಡುತ್ತೆದೇಶದೊಳು ಪಸರಿಸಲು ಲಕ್ಷ್ಮೀಶ ತೀರ್ಥರನುಶಾಸನವ ಗೈದುಪನ್ಯಾಸಕ್ಕೆ ನೇಮಿಸಿದಶ್ರೀಶ ಗದುಗಿನ ವೀರನಾರಾಯಣನು ಎಂಬ 5
--------------
ವೀರನಾರಾಯಣ
ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ. ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ 1 ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ 2 ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ 3 ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ವೀರನಾರಾಯಣ 4
--------------
ವೀರನಾರಾಯಣ
ಸರಸ್ವತಿ ಕಮಲಭವನ ಪ್ರಿಯ ರಾಣಿ ಪ ಅಂತರಂಗದ ತಂತಿಯ ಮಿಡಿಸೌನಿಂತು ಜಿಹ್ವೆಯಲಿ ಹರಿ ಗುಣ ನುಡಿಸೌಕಂತುಜನಕನ ದಯವನು ಕೊಡಿಸೌಸಂತತ ಶಾರದೆ ವೀಣಾ ಪಾಣಿ 1 ಪನ್ನಗ ವೇಣಿ 2 ಪ್ರೇರೆರಿಸರ್ಥಗರ್ಭದ ನುಡಿಗಳನುತೋರಿಸು ಪದ್ಯವ ರಚಿಪ ರೀತಿಯನುಚಾರು ಚರಣಗಳಿಗೆರಗುವೆ ಗದುಗಿನವೀರನಾರಾಯಣನ ಸೊಸೆಯೆ ಸುವಾಣಿ 3
--------------
ವೀರನಾರಾಯಣ
ಸಿಕ್ಕ ಸಿಕ್ಕ ಇಲ್ಲೇ ಸಿಕ್ಕ ಪ ಅಡಗಲು ಎಲ್ಲೆಲ್ಲ್ಯೂ ಸ್ಥಳವಿಲ್ಲವಕ್ಕಜಡ ಜೀವಗಳೊಳು ತೋರುವನಕ್ಕ 1 ಸಕಲರಿಗಿವನು ಕಾಣನು ತಕ್ಕಭಕುತರಿಗಷ್ಟೇ ಕಾಣುವನಕ್ಕ 2 ಶಕ್ತಿಯುಕ್ತಿಯಿಂದರಸಲು ಸಿಗನಕ್ಕಭಕ್ತಿಯೊಳರಸಲು ಇಲ್ಲೇ ಸಿಗುವನಕ್ಕ 3 ಇಲ್ಲೆ ಗದುಗಿನಲ್ಲೆ ನಿಂದಿಹನಕ್ಕಬಲ್ಲ ವೀರನಾರಾಯಣನಕ್ಕ 4
--------------
ವೀರನಾರಾಯಣ
ಸುಲಭ ನೀನೆನಗಲ್ಲ ತಿಳಿವೆ ಶ್ರೀನಲ್ಲ ಪ ಸುಲಭನೆಂದಾಡುವರು ಹರಿದಾಸರೆಲ್ಲ ಅ.ಪ. ದರುಶನವು ಸಿಗಲೆಂದು ಪಂಢರಿಗೆ ನಾ ಬಂದೆಪರಮಪಾವನ ನಿನ್ನ ಮೂರುತಿಯ ಮುಂದೆತ್ವರದಿನಿಲೆ ಬರಲು ಬಹುಭಕ್ತಿಯಿಂದೆತೆರೆಯಲಿಲ್ಲವೊ ದ್ವಾರ ಏನೆಂದೆ ತಂದೆ 1 ಶಿಲೆಯ ಪ್ರತಿಮೆಯನೀಗ ತೋರದವ ನೀ ಮುಂದೆಬಲು ನಿಜದ ರೂಪವನು ತೋರುವುದು ಹೇಗೆಂದೆಜಲಜಾಕ್ಷ ಭರವಸೆಯ ನೀಡಲೆಂತು ಮನ ಗುಂದೆಸಲಹು ವಿಠ್ಠಲರಾಯ ಕೈ ಮುಗಿಯುವೆನು ತಂದೆ 2 ಸುಲಭದೊಳು ಸುಲಭನೈ ಪಂಢರಿಯ ವಿಠಲಾಬಲು ಪಾಪಿಗಳನು ಉದ್ಧರಿಪ ಸಕಲಬಲುಹಿ ನೀ ನುಡಿಯು ನನಗೆಲಾಸುಲಭ ಗದುಗಿನ ವೀರನಾರಾಯಣನು ಅಚಲ 3
--------------
ವೀರನಾರಾಯಣ
ಸ್ಮರಿಸಿವುದು ರಘುನಂದನನ ಪ ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ಅ.ಪ. ಜನಪತಿ ದಶರಥನುದರದಿ ಜನಿಸಿದವನಿತೆ ಅಹಲ್ಯೆಯ ತಾನುದ್ಧರಿಸಿದಘನ ಶಂಕರ ಧನುವ ಭಂಗಿಸಿದಜನಕ ಸುತೆಯ ವರಿಸಿದ ಶ್ರೀರಾಮನ 1 ತಾಯಿ ಕೈಕೇಯಿಯ ಮಾತು ನಡೆಸಿದನೋಯದೆ ವನವನು ಸತಿಸಹ ಸೇರಿದಮಾಯಾಮೃಗದಾಶೆಗೆ ಸತಿಯನಗಲಿದರಾಯ ಲಕ್ಷ್ಮಣನಣ್ಣ ಶ್ರೀರಾಮನ 2 ದಂಡಕದೊಳು ಸತಿಯನು ಶೋಧಿಸಿದಚಂಡ ಹನುಮಗೆ ತಾ ದೊರೆಯಾದಪುಂಡ ಜಲಧಿಯ ದಾಟಿಸಿದಹೆಂಡತಿ ಇರವನು ತಿಳಿದ ಶ್ರೀರಾಮನ 3 ಜಲಧಿಗೆ ಸೇತುವೆ ನಿಂತು ಬಿಗಿಸಿದಖಲ ರಾವಣನ ರಣದೊಳು ಕೆಡಹಿದಒಲಿದು ವಿಭೀಷಣನನು ತಾ ಪೊರೆದನೆಲದೊಳು ಸುಖ ಬೀರಿದ ಶ್ರೀರಾಮನ 4 ಧರುಮವ ನೆಲಸಲು ದುಷ್ಟರ ತರಿದಾ ಧರೆಯೊಳು ಶಿಷ್ಟರ ಪೊರೆಯಲು ಬಯಸಿದಸಿರಿಪತಿ ಗದುಗಿನ ವೀರನಾರಾಯಣನರನಾಗವತರಿಸಿದ ಶ್ರೀ ರಾಮ 5
--------------
ವೀರನಾರಾಯಣ
ಹನುಮ ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ ಗಡ್ ಗಡ್‍ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ 1 ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ 2 ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ವೀರನಾರಾಯಣನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ3
--------------
ವೀರನಾರಾಯಣ
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹರಲಿ ಮಾಡಿದರಲ್ಲೊ ನಿನ್ನಮುರಲಿಧರ ಚೆನ್ನ ಕೃಷ್ಣ ಸಂಪನ್ನ ಪ ತುಂಟ ಕಾಮನು ಕೇವಲೆಂಟು ವರ್ಷದ ಬಾಲಗಂಟಿದ್ದು ಹ್ಯಾಗೆಯದ ಗಂಟೊಡೆಯದ ಮುನ್ನ 1 ಜಾರನೆಂದು ಕಡು ಶಿಶುಪಾಲನುದೂರಲಿಲ್ಲೆಂಬುದನಾಹದನಾ ಯಾರು ಅರಿಯದೆ ಘನಾ 2 ಪಾವನ ಪರಮಾತ್ಮಾ ಜೀವರೇಕಾಗುವ ಭಾವದ ಮರ್ಮವನಾತಾವರಿಯದಾ ಠೀವಿಯಲಿ ಕುಜನಾ 3 ಅತಿಶಯೋಕ್ತಿಯು ಮತ್ತು ಉತುಪ್ರೇಕ್ಷಾಲಂಕಾರಮತಿ ಕೊಟ್ಟ ಕಾವ್ಯವನಾ ಅರ್ಥವನಾ ಮಥಿಸದೆ ಚೆನ್ನಾ4 ಸದ್ಧರ್ಮವನು ಬೀರಿ ಉದ್ಧರಿಸಲು ಬಂದಸಿದ್ಧ ಗದುಗಿನ ವೀರನಾರಾಯಣ ಪದ್ದುಮನಯನೇ 5
--------------
ವೀರನಾರಾಯಣ
ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ. ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1 ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2 ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3 ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4
--------------
ವೀರನಾರಾಯಣ
ಹುಡುಕತಲಿಹೆನವನಾ ಮಾಧವನಾ ಪ ಹಿಡಿಯುತ ಭಕುತಿಯ ಸೊಡರನು ಕರದೊಳುಕಡುಗತ್ತಲೆಯೊಳು ಕಡೆಗಾಣದೆನಾ 1 ಸಿದ್ಧವೇದದೊಳು ಕದ್ದಡಗಿದನಾಬುದ್ಧಿಯ ತಟ ಗಡ ನೆದ್ದಿ ಕದಡಿನಾ 2 ಜಗ ತುಂಬಿಹನೆಂದು ನಿಗಮವು ಸಾರಲುಜಗದೊಳಗೆಲ್ಲಾ ಖಗವಾಹನನ 3 ಜ್ಞಾನಿಗಳಿಗೆ ತಾ ಕಾಂಬನು ಎಂಬರುಧೇನಿಸುತಲಿ ಸಾಮಾನ್ಯನಲ್ಲನ 4 ಎದೆಯ ಮರೆಯಲಿ ಹುದುಗಿ ಮೆರೆವನಾಗದುಗಿನ ವೀರನಾರಾಯಣನನ್ನ 5
--------------
ವೀರನಾರಾಯಣ
ಆರೋಗಣೆಯ ಮಾಡೇಳಯ್ಯ ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
--------------
ಪುರಂದರದಾಸರು