ಶ್ರೀ ಗಣರಾಯ ಶ್ರೀ ಗಣರಾಯ ಶ್ರೀ ಗಣರಾಯವಂದಿಸುವೆನೀಗ ಶ್ರೀ ಗಣರಾಯ ಪ.
ಪಾದ ಏಕಚಿತ್ತದಲೆಬಲಗೊಂಬೆ ವಂದಿಸುವೆ ಶ್ರೀ ಗಣರಾಯ 1
ನೆನೆಯಕ್ಕಿ ನೆನಗಡಲೆ ಗೊನೆ ಬಾಳೆಹಣ್ಣು ಘನವಾದ ಚಿಗಳಿ ತಂಬಿಟ್ಟುಫನವಾದ ಚಿಗಳಿ ತಂಬಿಟ್ಟು ತಂದಿಹೆ ಗಣಪತಿಮತಿಯ ಕರುಣಿಸು ವಂದಿಸುವೆ 2
ನಿತ್ಯ ಬ್ರಹ್ಮಚರ್ಯ ಉತ್ತಮ ವ್ರತವುಳ್ಳಮತ್ತು ಪಾರ್ವತಿಯ ತನಯನೆಮತ್ತು ಪಾರ್ವತಿಯ ತನಯನೆ ವಿಘ್ನೇಶನೆ ಭಕ್ತಿಯಿಂದ ಮೊದಲೆ ಬಲಗೊಂಬೆ 3
ಸುಲಭದಿ ರುಕ್ಮಿಣಿಯ ಗೆಲಿಯಬೇಕೆನುತಲೆಹಲಧರನ ತಂಗಿ ಸುಭದ್ರೆಹಲಧರನ ತಂಗಿ ಸುಭದ್ರೆ ಮೊದಲಿಗೆ ಚಲುವ ಗಣಪತಿಯ ನೆನೆದಳು 4
ಪರೀಕ್ಷಿತ ಪರೀಕ್ಷಿತ ಮೊದಲೆ ಪೂಜೆಯ ಮಾಡಿಪ್ರತ್ಯಕ್ಷ ರಾಜ್ಯ ಪಡೆದನು 5
ಆನೆಯ ಮುಖದವನ ಮತ್ತಾರು ಪೂಜಿಸಿದರುತಾನು ಮಾಂಧಾತರಾಯ ಮೊದಲಾಗಿತಾನು ಮಾಂಧಾತರಾಯ ಮೊದಲು ಪೂಜೆಯ ಮಾಡಿನಾನಾ ಸೌಭಾಗ್ಯ ಪಡೆದನು 6
ಮುದ್ದು ರಾಮೇಶನ ಪೂಜಿಸಿ ರಾವಣನ ಗೆಲಿದನುಮ್ಯಾಲೆ ಪಾಂಡವರು ಮೊದಲಾಗಿಮ್ಯಾಲೆ ಪಾಂಡವರು ಮೊದಲ ಪೂಜೆಯ ಮಾಡಿಹೀನ ಕೌರವರ ಗೆಲಿದರು 7