ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ
ಇಲ್ಲದೆ ಪೋದರೆ ನಿಲ್ಲದೆ ಏನನು
ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ
ಕೊಡಲಿ ಹೊತ್ತು ಬರುತಾನ ತಾಯಿ
ಗಡನೆ ಹೊರಳಿ ನೋಡಿನ್ನ
ಬಡವರ ದಯಾನಿಧಿ ಕಡುಬಾಧೆ ಕಂಡರೆ
ತಡೆಯದೆ ನಿನ್ನನು ಕಡಿಯದೆ ಬಿಡನವ್ವ 1
ತಂದೆವಚನ ಪರಿಪಾಲನು ಅವ
ಬಂದರೆ ನಿನ್ನನು ಕೊಂದಾನು
ಕಂದನ ಬಂಧನ ಚಂದದಿ ಕಳೆದಾ
ನಂದವ ಕೊಡು ಕೊಡು ಸುಂದರಮುಖಿಯೆ 2
ಕಾರ್ತವೀರ್ಯ ತಂದಾನೇ ಈ
ವಾರ್ತೆ ಕೇಳಲು ನಿನ್ನ ಬಿಟ್ಟಾನೇ
ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ
ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ 3