ಒಟ್ಟು 722 ಕಡೆಗಳಲ್ಲಿ , 95 ದಾಸರು , 624 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತ ಅಂಜನೆಸುತನು ಭೀಮರಾಯನು ಪ. ಈತ ರಾಮರ ಬಂಟನು ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ. ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ ಹನುಮರಾಯನು 1 ವಂಚನಿಲ್ಲದೆ ಮಾಡಿದ ವನವ ಕಿತ್ತನು ಭೀಮರಾಯನು 2 ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ ಭೀಮರಾಯನು 3 ವೀರರ ಗೆಲಿದ ಶೂರನು ಭೀಮರಾಯನು 4 ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು ಭೀಮರಾಯನು 5
--------------
ಹೆಳವನಕಟ್ಟೆ ಗಿರಿಯಮ್ಮ
ಈತ ಸೀತಾನಾಥನೇ|ವಾತಾಜಾತ ಪ್ರೀತನೇ| ಧಾತು ಮಾತು ರಹಿತ ಖ್ಯಾತ|ಭೂತವ್ರತದಾತನೆ ಪ ಸುಗ್ರೀವಗೆ ಸಾಮಗ್ರನೆ|ಶೀಘ್ರಗೈದನುಗ್ರಹನೆ| ನಿಗ್ರಹಿಸಿದಾ ವಾಘ್ರದಶಾ|ಗ್ರೀವನುಗ್ರಹ ವಿಗ್ರಹನೆ1 ಕಾಮನಿವಾನೇಮನೆ|ನಾಮಸಾರ್ವಭೌಮನೆ| ರಾಮಶ್ಯಾಮ ಮಹೀಪತಿನಂದನ|ಹೃತ್ಕುಮುದಾ ಸೋಮನೆ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈತನೀಗಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದ ಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ. ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆ ಕೊಟ್ಟು ಶರ್ಮಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿ ತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವರಾಜ್ಯಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನಪೆತ್ತ ಚೆಲುವ ನಮಲಗಂಗೆಯಿತ್ತು ನಲಿವ ವಾಸುದೇವ 2 ಉರಗಶಯನ ಗರುಡಗಮನ ಪರಮಪದವನುಳಿದುಶೇಷ ಗಿರಿಯೊಳಿರ್ದುಬಂದ ವ್ಯಾಘ್ರಗಿರಿಯ ಶಿಖರಕೆ ಭರದಿ ನಿತ್ಯಮುಕ್ತರೊಡನೆ ಕರದಿ ಶಂಖಚಕ್ರಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದವಿಠಲ 3
--------------
ಸರಗೂರು ವೆಂಕಟವರದಾರ್ಯರು
ಈತನೀತನೆ ರಮಾನಿವಾಸನು ಕೇಳಿ ಜನರು ಈತನೀಗ ಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆಕೊಟ್ಟು ಶಮನಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವ ರಾಜ್ಯ ಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನ ಪೆತ್ತ ಚೆಲುವನಮಲ ಗಂಗೆಯಿತ್ತು ನಲಿವ ನಮರ ವೈರಿಗಳನು ಕೊಲುವ ಕಮಲನಾಭ ವಾಸುದೇವ2 ಉರಗಶಯನ ಗರುಡಗಮನ ಪರಮಪದನುಳದು ಶೇಷ ಗಿರಿಯೊಳಿರ್ದು ಬಂದ ವ್ಯಾಘ್ರಗಿರಿಯ ಶಿಖರಕೆ ಭರದಿನಿತ್ಯಮುಕ್ತರೊಡನೆ ಕರದಿ ಶಂಕ ಚಕ್ರ ಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದ ವಿಠಲ 3
--------------
ವೆಂಕಟವರದಾರ್ಯರು
ಈತನೇ ಕುಮಾರಸ್ವಾಮಿ ಖ್ಯಾತನಾಗಿಹಾ | ಭೂತ ಗಣದ ನಾಥ ಶಿವನ ಜಾತನಾಗಿಹಾ ಪ ಅಜ ಸುರಾದಿ ತ್ರಿದಶ ವಂದ್ಯ ಭಜಕ ಪಾಲಕಾ 1 ಮೂರ್ತಿ ಪ್ರೇಮಸಾಗರಾ 2 ಕ್ಲೇಶ ಸತತ ನಾಶಗೈಯುವಾ | ಭಾಸುರಾಂಗ ಪಾವಂಜೇಯೊಳು ವಾಸಗೈದಿಹಾ 3
--------------
ಬೆಳ್ಳೆ ದಾಸಪ್ಪಯ್ಯ
ಈತನೇ ಲೋಕಗುರು ವೇದವಿಖ್ಯಾತ ಪ. ಭೂತಳದಿ ಶ್ರೀರಾಮದೂತನೆಂಬಾತಅ.ಪ. ಅಖಿಳ ಉದಧಿ ಲಂಘಿಸಿದಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತುಬಂದು ರಾಮರ ಪಾದಕೆರಗಿ ನಿಂದಾತ 1 ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನಲಜ್ಜೆಯನೆ ಕೆಡಿಸಿ ಷಡ್ರಥಿüಕರನು ಗೆಲಿದಮೂಜ್ಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದಸಜ್ಜನಪ್ರಿಯ ಭೀಮಸೇನನೆಂಬಾತ2 ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದುಕೂರ್ಮ ಶ್ರೀ ಹಯವದನನ ಪೂರ್ಣ ಸೇವಕನಾದಧೀರ ಮಧ್ವಾಚಾರ್ಯ ಲೋಕದೊಳು ಮೆರೆದ 3
--------------
ವಾದಿರಾಜ
ಈತನೇನೆ ಮುಖ್ಯ ಪ್ರಾಣದೇವರು ಪ. ಖ್ಯಾತಿಯ ಪಡೆದ ರಾಮ ದೂತನು ಅ.ಪ. ಅಂಜನೆಯ ಕುಮಾರ ರಾಕ್ಷಸರ ಸಂಹಾರ ಸಂಜೀವನವ ತಂದ ಧೀರ ಸಾಗರವ ದಾಟಿದ 1 ಕುಂತಿಯಾ ಕಂದ ಕೀಚಕನ ಕೊಂದ ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ 2 ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ 3
--------------
ಕಳಸದ ಸುಂದರಮ್ಮ
ಎಂತು ಬಣ್ಣಿಸಲಮ್ಮಯ್ಯಾ ಈ ಗುರುವರರ ಪ ಎಂತು ಬಣ್ಣಿಪೆ ನಾ ನಂತನಾಂಶ ಜಗ - ದಂತರದೊಳಗಾ - ನಂತ ಮಹಿಮರಅ.ಪ ಸುರವರನಗರಸಮ - ವರಮಂತ್ರಸದನ ಜರಿದು ಸ್ಥಿರವಾಗೀ ಪುರದಲ್ಲಿ ಮೆರೆಯುತಲಿಹರನ್ನ 1 ಪೂರ್ವಯುಗದೊಳು ಸಾರ್ವಭೌಮನೆನಿಸಿ ಪಾರ್ವರ ಪೊರೆವದಕ್ಕ ಪೂರ್ವ ಯತಿ ಎನಿಸಿಹರನ್ನ 2 ದಿನ ದಿನದಲ್ಲಿ ಮಹ ಕನಕಾಭೀಷೇಕ ಮಾಳ್ಪ ಧನಿಕರ ತೆಜಿಸಿ ನಿ - ರ್ಧನಿಕ ಗೊಲಿದಿಹರನ್ನ 3 ಕ್ಷೀರಶೇಚನ ನಿತ್ಯ-ಸಾರ ಪಂಚಾಮೃತ ಬಿಟ್ಟು ಕೀರುತಿ ಮಾಳ್ಪಜನರ ಸೇರಿ ಕೊಂಡಿಹರನ್ನ 4 ದಾತರೆನಿಸಿ ಜಗದಿ - ಖ್ಯಾತರಾಗಿ ಗುರುಜಗ ನಾಥ ವಿಠಲನೊಲಿಸಿ ದೂತಜನರ ಪೊರೆವೊರನ್ನ 5
--------------
ಗುರುಜಗನ್ನಾಥದಾಸರು
ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕÀನಾಗಿ ಮೆರೆವನಾ ಪ ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ1 ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ 2 ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ 3
--------------
ವಿಜಯದಾಸ
ಎಂಥ ದಯವಂತನೋ | ಮಂತ್ರ ಮುನಿನಾಥನೊ ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ ವರ ಪ್ರಹ್ಲಾದನು | ಮರಳಿ ಬಾಹ್ಲೀಕನು | ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1 ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2 ದುರಿತ ಕಳೆವ ಶಕ್ತನು ತರಣಿ ನಿಭಗಾತ್ರನು | ಪರಮಸುಚರಿತ್ರನು 3 ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4 ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5
--------------
ಶಾಮಸುಂದರ ವಿಠಲ
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎಂಥಾ ಬಲವಂತನೋ ಭಾರತೀಕಾಂತಾ ಎಂಥಾ ದಯವಂತನೋ ಪ ಎಂಥ ಮಹಬಲವಂತ ಬಹುಗುಣ - ವಂತ ಸರ್ವದಾನಂತಚೇತನ ರಂತರಾದೋಳ್ನಿಂತು ಪ್ರೇರಿಪ ನಂತು ಮಹಿಮೆಯ ಅಂತು ತಿಳಿಯದೊ ಅ.ಪ ವೀರರಾಘವನಂಘ್ರಿಯ ಭಜಿಸಿ ಕಪಿ - ವೀರನಾದನು ಮಹರಾಯಾ ವಾರಿಧಿಯಾಗಾಧತೋಯ ಲಂಘಿಸಿ ಲಂಕಾ ಸಾರಿ ಪೇಳಿದ ವಾರ್ತೆಯ ವೀರ ವನವನಂಗಾರಮುಖಕೆ ಇತ್ತು ವೀರಾಕ್ಷನೆನಿಪ ಕುಮಾರನ ದಂಡಿಸಿ ಸಾರಿ ಉಂಗುರವಿತ್ತು ಮತ್ತೆ ವಾರಿಧಿ ವಾನÀರೇಶನು ತೋರಿ ರಾಮನ ಪದಕೆ ನಮಿಸಿ ಚಾರು ರಾಗಟೆ ಇತ್ತ ತ್ವರದಿ 1 ತರುಳೆ ದ್ರೌಪದಿಯನ್ನು ಶರಗು ಪಿಡಿದು ಶಳದಾನು ಕರಿಯಲು ಬ್ಯಾಗ ಹರಿ ತಾನಂಬರವಿತ್ತನು ಧುರದಿ ಭೀಮನು ನಿನ್ನ ತರಿದರಕ್ತದಿ ತಾನು ಬೆರೆಸಿ ಕೇಶವ ಕಟ್ಟಿ ಕರುಳ ದಂಡೆಯನಿಟ್ಟು ಮೇರೆವೆ ಕೇಳೆಲೋ ದುರುಳನೆಂದಾ - ತರುಣಿವಚನವ ಸ್ಥಿರವ ಮಾಡಿದ ಧರಿಯತಳದಲಿ ಸರಿಯುಗಾಣೆನೊ ವgವÀೃಕೋದರ ಪರಮ ಕರುಣಿಯೆ 2 ಭೂತೇಶ ಸರ್ವೋತ್ತುಮಾನೆಂಬುವೊ ಮಹಾ - ಪಾತಕಿ ಜನಮಾತನೇಮ ಈತ ಮಾಡಿದ ನಿರ್ಧೂಮ ಹರಿಗೆ ಶಿವ ದೂತಜನರಿಗುತ್ತುಮ ಖ್ಯಾತಿ ಮಾಡಿದ ಜೀವಜಾತಿ ಪ್ರೇರಕನಾಗಿ ಶ್ವೇತವಾಹನ ದೂತನಾಗಿಹ ನಾಥ ಗುರು ಜಗನ್ನಾಥವಿಠಲ ಧಾತನಾಂಡಕೆನಾಥ, ನಿರ್ಜರÀ ನಾಥರೆಲ್ಲರೂ ದೂತರೆಂದರು 3
--------------
ಗುರುಜಗನ್ನಾಥದಾಸರು
ಎಂಥಾದಯವಂತನೋ ಸಂತಾರನಾಥನೋ ಪ ಕಂತೂ ಜನಕಾನ ಪ್ರಿಯ್ಯಾನೋ ಆ - ನಂತಾ ನಂತಾ ಮಹಿಮನೋ ಅ.ಪ ರಮ್ಯಾ ಗುಣಾ ಪೂರ್ಣನೋ - ಆ - ಗಮ್ಯಾ ಸಚ್ಚರಿತಾನೋ ನಮ್ಯಾನತರಾ ಪೊರೆವಾನೋ - ಈತ ನಮ್ಯಲ್ಲಾರ ಸಲಹೋನೋ 1 ಪ್ರಾಣಾವೇಶಾಯುತನೋ - ಜಗ - ತ್ರಾಣಾ ತಾನಾಗಿಹನೋ ಕ್ಷ್ಯೋಣೀಯೋಳ್ವಿಖÁ್ಯತಾನೋ - ಎನ್ನ ಪ್ರಾಣಾUಳಿಗೆ ನಾಥನೋ 2 ಕರುಣಾಶಾಲಿ ಎನಿಪಾನೋ - ತನ್ನ ಚರಣಾ ಸೇವಾ ನೀಡುವನೋ ಶರಣಾಬ್ಜ - ತರಣೀ ಸÀಮನೋ - ಅಂತಃ ಕರಣಾದಲ್ಲಿರುವಾನೋ 3 ಜನನೀ ಜನಕಾರೆನಿಪನೋ - ಸಕಲ ಜನರೀಗೆ ಸಮ್ಮತನೋ ಜನುಮಾ ಜನುಮದಲೀತನೋ - ನಿಶ್ಚಯ ಎನಗೆ ತಾತನೋ 4 ಭೂತಾಳದೊಳು ವಿಖ್ಯಾತನೋ ನಿಜ - ದಾತಾ ಜನರಿಗೆ ಪ್ರೀತನೋ ನೀತಾ ಗುರು ಜಗನ್ನಾಥಾ ವಿಠಲ - ಪ್ರೀತಿಯ ತಾಪೊಂದಿಹನೋ 5
--------------
ಗುರುಜಗನ್ನಾಥದಾಸರು
ಎದುರ್ಯಾರೋ ಗುರುವೇ ಸಮರ್ಯಾರೋ ಪ ವಿಧಿ ಪದ ಅರ್ಹನೆ | ಮಧುಸೂದನ ಸುತ ||ಅ. ಪ|| ಕೇಸರಿಯ ಸತಿಯಲಿ ಉದಿಸಿದ ವೀರ | ರವಿಜಗೊಲಿದಧೀರದಾಶರಥಿ - ಚರಣಕೆ ಮಣಿದ ಗಂಭೀರ | ವಾಲಿಯ ಸಂಹಾರ ||ಸಾಸಿರ ದೈವತ್ತು | ಗಾವುದ ಸಾಗರಗೋಷ್ಪದ ಗೈಯುತ | ವಸುಧಿಜೆಗೆರಗಿದ 1 ಹರಿಯ - ಸೇವಕತನ ಮಾದರಿಯ | ತೋರಿದ ಹೊಸ ಪರಿಯಅರಿಯಾ - ಲಂಕೆಯ ದಹಿಸಿದ ಪರಿಯ | ಸೇತು ಬಂಧನ ದೊರೆಯಾ ||ಅರಿ ಕುಲ ಸವರಿ ಸಂ | ಜೀವನ ಗಿರಿ ತಂದುಧುರವ ಜಯಿಸಿ ಹರಿ | ಮಡದಿಯ ತಂದಗೆ 2 ಪ್ರಥಮಾಂಗನು ಕುಂತಿಯ ಸುತನೆನಿಸೀ | ದೃಪದಾತ್ಮಜೆ ವರಿಸೀಅತಿಖ್ಯಾತ ಜರೆಸುತನನ ವಧಿಸೀ | ಕೌರವರನು ಅಳಿಸೀ ||ತತುವ ಮತವ ಸಂ | ಸ್ಥಾಪಿಸುತವನಲಿವಿತತ ಮಹಿಮ ಹರಿ | ರತಿಯನೆ ಪಡೆದಗೆ 3 ಅರಿ ಉರವನೆ ಬಗಿದೂನಾರೀಯ - ತುರಬನು ಬಿಗಿದೂ | ನರ ಮೃಗನಂತೆಸೆದೊ ||ನೀರೊಳು ಅಡಗಿದ | ಕೌರವ ಮೇಲ್ಬರೆಊರು ತಾಡನದಿಂದ | ಮಾರಕನಾದಗೆ 4 ಕಲಿಯೂ ಹೆಚ್ಚಿದ ಕಲಿಯುಗದಲ್ಲಿ | ಮಣಿಮಾನನು ಇಲ್ಲಿಮಲಿನವ ಮಾಡಲು ಬಲು ವೇದದಲೀ | ಕಲುಷಿತ ತರ್ಕದಲೀ||ಅಲವ ಬೋಧರಾಗಿ | ಹುಲುಮತವಳಿಯುತಕಲುಷಹ ಗುರು ಗೋ | ವಿಂದನೆ ಪರನೆಂದೆ 5
--------------
ಗುರುಗೋವಿಂದವಿಠಲರು
ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು