ಒಟ್ಟು 67 ಕಡೆಗಳಲ್ಲಿ , 25 ದಾಸರು , 64 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿಧ್ವಜವಂದ್ಯೆಕಾಳಿ | ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪವಾಣಿ ಭಕ್ತಿಗೆ ಅಭಿಮಾನಿ | ತಾಯಿನೀನೆ ಗತಿಯೆಲೆ ಸುಶ್ರೋಣಿ | ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣಜ್ಞಾನಿ| ಆಹಾ ||ದೀನ ರಕ್ಷಕೆ ಮಿಕ್ಕ ಹೀನ ದೇವರಪಾದ|ಕ್ಕೆ ನಮಿಸುವ ಮತಿಯನೆಂದು ಕೊಡದಿರೆ 1ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ | ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |ಆರಾಧಿಸುವೆ ಯೆನ್ನ ದೂರ ನೋಡಲು ಬೇಡ 2ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ 3
--------------
ಪ್ರಾಣೇಶದಾಸರು
ನೀನೇ ಅನಾಥ ಬಂಧು, ಕಾರುಣ್ಯಸಿಂಧುನೀನೇ ಅನಾಥ ಬಂಧು ಪಪತಿಗಳೈವರಿದ್ದರೇನು ಸತಿಯ ಸಮಯಕ್ಕೊದಗಲಿಲ್ಲ ||ಗತಿನೀನೆಂದು ಮುಕುಂದನೆ ನೆನೆದರೆಅತಿ ಚಮತ್ಕಾರದಿಂದೊದಗಿದೆ ಕೃಷ್ಣ 1ಮದಗಜವೆಲ್ಲ ಇದ್ದರೇನುಅದರ ಸಮಯಕ್ಕೊದಗಲಿಲ್ಲ ||ಮದನನಯ್ಯ ಮಧುಸೂದನನೆಂದರೆಒದಗಿದೆಯೋ ತಡಮಾಡದೆ ಕೃಷ್ಣ 2ಶಿಲೆಯಕಾಯಕುಲಕ್ಕೆ ತಂದೆಬಲಿಯೆನ್ನದೆ ಸತ್ಪದವಿಯನಿತ್ತೆ ||ಇಳೆಯೊಳು ನಿನ್ನಯ ದಾಸರ ಸಲಹುವಚೆಲುವ ಮೂರುತಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಹೇ ಮನವೆ ಈ ದೇಹ ಗಾಳಿದೀಪ ಪ.ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರುಇಳೆಯೊಳು ಒಯ್ಯಲಿಲ್ಲ ದಾರೂ 1ಹಂಬಲಗಡಲೊಳು ಮುಳುಗಲಿನ್ನಾವ ಸುಖಅಂಬುಜಾಕ್ಷಗೆ ಸಲ್ಲಲೀ ಲೆಕ್ಕ 2ಧರ್ಮವ ಹಳಿದು ಸತ್ಕರ್ಮವ ಜರೆದರೆನಮ್ಮ ಪ್ರಸನ್ನವೆಂಕಟ ದೂರ 3
--------------
ಪ್ರಸನ್ನವೆಂಕಟದಾಸರು