ವೆಂಕಟಾಚಲನಿಲಯಾ ಎನ್ನ ಒಡೆಯ ಪ
ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ |
ಪಂಕಜಮುಖಿ ರಮಣ ಪಾವನಚರಣಾಅ.ಪ.
ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ |
ಅದರ ಮೇಲೆ ಧಾನ್ಯ ಧನದ ಚಿಂತೆ ||
ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ |
ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ1
ಮೇದಿನಿ ಆಳುವ ಆಶೆ |
ನಂದನರ ಆಶೆ ನಾನಾ ಆಶೆಯು ||
ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ |
ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ 2
ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ |
ವದನನಿಷ್ಠುರ ಗರ್ವ ವಿದ್ಯ ಗರ್ವವು ||
ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ |
ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ 3