ಒಟ್ಟು 607 ಕಡೆಗಳಲ್ಲಿ , 81 ದಾಸರು , 442 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಎಷ್ಟು ಪರೀಕ್ಷಿಸಿ ನೋಡುವೆಯೋ ಇನ್ನು ಎಷ್ಟು ಶೋಧಿಸೆ ನಿನಗಿಷ್ಟವೋ ರಂಗಾ ಪ ಹಣವಿರುವನಕ ಕುಣಿಕುಣಿದು ಮೆರೆದೆನೊ ಹಣವನಪಾತ್ರಕೆ ಮಣಿದು ಕಳೆದೆನೋ ಋಣವಮಾಡಿ ಯೆನ್ನ ಬಣಗುಹೊಟ್ಟೆಯ ಹೊರೆದೆ ಉಣಲುಡಲಿಲ್ಲದೆ ನೋಡದವೋಲಲೆದೇ 1 ಹೆಣ್ಣು ಹೊನ್ನು ಮಣ್ಣು ಕಣ್ಣಿಗಿಂಪಾಗಲು ಬಣ್ಣಿಸಿ ಭಾಗ್ಯವನುಣ್ಣಲು ಬಯಸಲು ಬೆಣ್ಣೆಯಂತಿದ್ದುದು ಸುಣ್ಣವಾಯಿತೊ ದೇವ ಕಣ್ಣು ಮಂಜಾಗಿ ಮೈಗಿಣ್ಣು ಮುರಿಯಿತಿನ್ನು 2 ಬಹು ಜನುಮದಿ ಸಂಗ್ರಹಿಸಿದ ಪಾತಕ ಬೃಹದಾಕಾರವಾಗಿದ್ದು ರಂಗಯ್ಯ ಅಹಿಶಯನನೆ ನಿನ್ನ ಮಹಿಮೆಯಿಂದೆಲ್ಲವು ದಹಿಸುವುದೆಂದು ನಂಬಿದೆ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಷ್ಟೆಷ್ಟು ಜನ್ಮಗಳ ಕಷ್ಟಂಗಳನು ಸಹಿಸಿ ನಿಷ್ಠೆಯಿಂ ತಪಗೈಯ್ದ ಶ್ರೇಷ್ಠಫÀಲದಿ ಕರವ ಪಿಡಿದೆ ಪೇಳುವದೇನು ನಡೆದ ಕಾರ್ಯಕೆ ಮನದಿ ಮಿಡುಕಲೇನು ಬಟ್ಟೆಗೇ ಗತಿಯಿಲ್ಲ ಪುಟ್ಟಿದಂತಿಹನಲ್ಲ ಹುಟ್ಟು ನೆಲೆಯರಿತಿಲ್ಲ ದಿಟ್ಟನಲ್ಲ ಅಹಿಂಸೆಯೆ ಮತ್ರ್ಯರಿಗೆ ಸಹಜಧರ್ಮವದೆಂದು ಬಹುನೀತಿ ಪೇಳುವನು ಬುದ್ಧನಿವನು ಬೆತ್ತಲೆಯೆ ಮನೆಮನೆಗೆ ಸುತ್ತುತಿಹನೆ ಉತ್ತಮಾಂಗನೆಯರ ಚಿತ್ರ ಚಲಿಸಿ ಮತನೆನ್ನಿಸಿ ನಲಿವ ಉನ್ಮತ್ರನಿವನೆ
--------------
ನಂಜನಗೂಡು ತಿರುಮಲಾಂಬಾ
ಏಣಾಕ್ಷಿ ಕೇಳೆನ್ನ ಪ್ರಾಣೇಶನೀತನಂ ಬಣ್ಣಿಪೆನದೆಂತುಟೊ ಕಾಣೆನಮ್ಮ ಕುಟಿಲವೇ ಭೂಷಣವು, ಸಟೆಯಿದುವೆ ಕುಲದೈವ ವಟುವೇಷಧರನಿವನುಅಹುದು ಚಲುವ ಕಪಟ ಗುಣಗಳ ಗಣಿಯು ಕೃಪೆಯೆಂಬುದೆಳ್ಳೆನಿತು ಕಾಣದವನು ನುಡಿದ ನುಡಿಯನು ಮತ್ತೆ ನಡಿಸಲಾರದವರನ ಪಡೆದೆ ಪೇಳುವೆನೇನು ನಡೆದ ಬಳಿಕ ಧರಣಿಯೊಳಗಿಂತಪ್ಪ ವರನ ಕಾಣೆ ತರುಣಿಮಣಿ ಕೇಳೆನ್ನ ಅರಸನಿವನೆ ತರುಣನೀತನ ಪಡೆದ ಧನ್ಯಳಾನೆ ವರಶೇಷಗಿರಿವರÀನೆ ಬಲ್ಲಹದನೆ
--------------
ನಂಜನಗೂಡು ತಿರುಮಲಾಂಬಾ
ಏನು ಕಾರಣ ಬಾಯಿ ತೆರೆದಿ - ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ಪ ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ1 ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ - ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ2 ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ 3
--------------
ಕನಕದಾಸ
ಏನು ಕಾರಣವಿಲ್ಲೆ ನಿಂದೇ ಅಶ್ವತ್ಥ ಶ್ರೀ ನಾರಸಿಂಹೆನಿಸಿ ಅಜಭವರ ತಂದೇ ಪ ಹೊರೆಯ ಲೈತರಲು ಹಂಬಲಿಪ ಪ್ರಲ್ಹಾದಿಲ್ಲ | ಹಿರಣ್ಯ ಕಾಸುರನಿಲ್ಲ | ಸುರರಿಗುಪಟಳವೇನು ಇಲ್ಲ ಸ್ತಂಭ | ಬಿರಿದು ದೋರುವ ಅಹೋಬಲದ ಸ್ಥಳವಲ್ಲ 1 ಸಿರಿಯ ಮೋಹನ ನಿಮ್ಮ ರೂಪವನೆ ಆವರಿಸಿ | ಮರದ ಪೇರ್ಗಳೆಪಾದ ಕೊಂಬುಗಳ ಕರಧರಿಸಿ | ಸಿರಸಾಗ್ರ ಮಧ್ಯುದರ ವೆರಸೀ ಪರ್ಣ| ದಿರುವ ಅವಯವ ಮಾಡಿ ಪಾದರ್ಪೆದ್ರನಿಸೀ2 ಧರೆಗಧಿಕ ಸುಕ್ಷೇತ್ರ ಶೂರ್ಪಾಲಯವೆ ನೋಡಿ | ಮೆರೆಯುತಿಹ ಕೃಷ್ಣ ವೇಣಿಯ ತೀರದಲಿ ಮೂಡಿ | ಹರಗರುಡ ಗಣಪರೋಡಗೂಡಿ ನಲಿವ | ಗುರುಮಹಿಪತಿ ಸ್ವಾಮಿ ಕಾಯೋದಯ ಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಖೋಡ್ಯಾದಲ್ಲೋ ಸಂಸಾರ ನಾನು ನೋಡಿದ್ದಿಲ್ಲ ಪ ಏನು ಖೋಡಿದು ವಿಚಾರ ತಪ್ಪಿಸಿ ಎನ್ನ ಶ್ವಾನದಂದದಿ ಖೂನವಿಲ್ಲದೆ ಕೂಗಿಸಿತೇನು ಅ.ಪ ತಾನೆ ನಿಜವಿಲ್ಲ ಎನ್ನನು ಏನು ಕೆಡಿಸಿತಲ್ಲ ನಾನಾಪರಿಲಿ ಮಾಯಮೋಹದಿ ಮುಳುಗಿಸಿ ಜ್ಞಾನ ಕೆಡಿಸಿ ಹೀನಬವಣೆಗೆ ತಂದಿತ್ತು 1 ಕನಸಿನಪರಿಯಂತೀಜಗಸುಖ ಕ್ಷಣಹೊತ್ತಿನ ಸಂತಿ ಇನಿಸು ತಿಳಿಗೊಡದೆನ್ನ ಮನಸು ಸೆಳೆದುಕೊಂಡು ಕುಣಿಸಿ ಕುಣಿಸಿ ಮಹ ನರಕಿಯೆನಿಸಿತ್ತು 2 ಸತ್ಯಮಾರ್ಗ ಮರೆಸಿ ಎನ್ನನಸತ್ಯಮಾರ್ಗಕೆಳಸಿ ನಿತ್ಯನಿರ್ಮಲನ ಸತ್ಯ ಚರಿತೆಗಳ ಗುರ್ತು ತಿಳಿಸದೆಮಮೃತ್ಯುತೀಡೆನಿಸಿತ್ತು3 ಮರವೆಯು ಮುಚ್ಚಿತ್ತು ಭವಪಾಶ ಕೊರಳಿಗೆ ಹಾಕಿತ್ತು ಅರಿವಿನ ಕುರುಹನು ತೋರಿಸದೆ ಪರದಿರವು ಮರೆಸಿ ಧರೆಭೋಗ ಅಹುದೆನಿಸಿತ್ತು 4 ನೇಮನಿತ್ಯಕೆಡಿಸಿ ಎನಗೆ ಶ್ರೀರಾಮಪಾದಮರೆಸಿ ಕಾಮಿಸಬಾರದ ಕಾಮಿತಗಳಿಂದ ಪಾಮರನೆನಿಸೆನ್ನ ಕೊಲ್ಲುತಲಿತ್ತು 5
--------------
ರಾಮದಾಸರು
ಏನು ಚೆಲುವಿಯೋ ಅಂಬುಜ ನಿಲಯಳೇನು ಚಲುವಿಯೋ ಪ ಕರ್ಣ ಭೂಷದಿಮಸ್ತಕದಿ ಮಣಿಯು ಪುರುಟ ಭೂಷದಿತರಣಿ ಕೋಟಿಯಂತೆ ಪೊಳೆವ ಶರಧಿನಾಥ ಸ್ತುತಿಯ ಕೇಳಿಮರುಳುಗೊಂಡ ಹರಿಯು ವಕ್ಷಸ್ಥಳದೊಳಿಟ್ಟು ಸಾಕುತಿಹನು 1 ಕರವ ಪಿಡಿದನುಹರನ ಧನುವ ಮುರಿದು ಸರಯೂನಲ್ಲಿ ಸುಖಿಪ 2 ಮಂದಗಮನಿಯೋನಿ ಅಹೇಂದ್ರವಾದ ಮಂದಶಯನಿಯೊವಿದರ್ಭರಾಜನಂದ ತನುಜೆಯೋ ಸಭಕ್ತರಿಗೆ ಬಂಧಕ ಮುನಿಯೊದ್ವಂದ್ವ ಭಾಗದೊಳಗೆ ರಾಜವೃಂದ ನಿಂತು ಕಾಯುತಿರಲುಇಂದಿರೇಶನ ಪಾಣಿಪಿಡಿದು ಸುಂದರಾಂಗಿ ಮದುವೆಯಾದ 3
--------------
ಇಂದಿರೇಶರು
ಏನು ಪುಣ್ಯವೋ ಯಶೋದೆಯ ಪರೀಕ್ಷಿತರಾಯ ಯಾವ ಪುಣ್ಯವೋ ಯಶೋದೆಯ ಪ. ಚೆನ್ನಕೇಶವನ್ನ ತನ್ನ ಚಿಣ್ಣನೆಂದು ಮುದ್ದಿಸಿ ಬಣ್ಣಿಸಿ ಮೊಲೆಯನುಣ್ಣಿಸಿ ಚಿನ್ನದ ತೊಟ್ಟಿಲೊಳಿಟ್ಟು ತೂಗುವ 1 ಅಗಣಿತ ಬ್ರಹ್ಮಾಂಡಗಳ ತ- ನ್ನುದರದೊಳಡಗಿಸಿದನ ಮುಗುಳುನಗೆಯ ಮೊಗವ ನೋಡಿ ಮಗನೆಂದಾಡಿ ಪೊಗಳಿ ಪಾಡುವ 2 ಲಕ್ಷ್ಮೀನಾರಾಯಣನ ಪ್ರ- ತ್ಯಕ್ಷ ಬಾಲಲೀಲೆಯ ಚಕ್ಷುದಣಿಯೆ ನೋಡುತನ್ಯ- ಪೇಕ್ಷೆಯಿಲ್ಲದಿಹಳೊ ಅಹೋ3
--------------
ತುಪಾಕಿ ವೆಂಕಟರಮಣಾಚಾರ್ಯ
ಏನು ಪುಣ್ಯವೋ ಯಶೋದೆಯ ಪರೀಕ್ಷಿತರಾಯ ಯಾವ ಪುಣ್ಯವೋ ಯಶೋದೆಯ ಪ. ಚೆನ್ನಕೇಶವನ್ನ ತನ್ನ ಚಿಣ್ಣನೆಂದು ಮುದ್ದಿಸಿ ಬಣ್ಣಿಸಿ ಮೊಲೆಯನುಣ್ಣಿಸಿ ಚಿನ್ನದ ತೊಟ್ಟಿಲೊಳಿಟ್ಟು ತೂಗುವ1 ಅಗಣಿತ ಬ್ರಹ್ಮಾಂಡಗಳ ತ- ನ್ನುದರದೊಳಡಗಿಸಿದನ ಮುಗುಳುನಗೆಯ ಮೊಗವ ನೋಡಿ ಮಗನೆಂದಾಡಿ ಪೊಗಳಿ ಪಾಡುವ2 ಲಕ್ಷ್ಮೀನಾರಾಯಣನ ಪ್ರ- ತ್ಯಕ್ಷ ಬಾಲಲೀಲೆಯ ಚಕ್ಷುದಣಿಯೆ ನೋಡುತನ್ಯ- ಪೇಕ್ಷೆಯಿಲ್ಲದಿಹಳೊ ಅಹೋ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆಪ ಗಂಗಾಜನಕನಿಗೆ ಗಡಿಗೆನೀರೆರೆವಳಂತೆಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ1 ನಗವನೆತ್ತಿದವನ ಮಗುವೆಂದೆತ್ತುವಳಂತೆನಿಗಮಗೋಚರನ ತಾ ನಿಟ್ಟಿಪಳಂತೆಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ 2 ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ 3 ಚತುರ್ಮುಖಪಿತನ ಸುತನೆಂದೆತ್ತುವಳಂತೆಶ್ರುತಿವಿನುತಗೆ ಜೋಗುಳ ಪಾಡುವಳಂತೆಶತರವಿತೇಜಗಾರತಿಯನೆತ್ತುವಳಂತೆಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ 4 ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದಪಡುಗಡಲತಡಿಯ ದ್ವಾರಕೆನಿಲಯಬಿಡದೆ ನೆಲೆಸಿದ ಹಯವದನ ಮುದ್ದುಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ5
--------------
ವಾದಿರಾಜ
ಏನುಕೌತುಕವೊ ಮ'ಪತಿರಾಯರದು ಘನಮ'ಮೆ ತಿಳಿಯದುಮೋಹಶಾಸ್ತ್ರಗಳ ರಚಿಸಲು ಬೇಕೆಂದು ಹರಿಯಾಜ್ಞೆಯನರಿದುಈ ಮ'ಯೊಳವತರಿಸಿ ಬಂದನೆಂದು ರುದ್ರಾಂಶನೆ ಅಹುದುಪದ್ಯ ಪದ್ಯಗಳಲಿ ಅತಿಗೂಢ ಅರ್ಥ 'ಹುದು ಮೂಢರಿಗೆ ತಿಳಿಯದದು 5ಮ ಎನ್ನಲು ಮನ ಪ್ರಸನ್ನವಾಗುವದು ಮ'ಮೆಯ ತಿಳಿಯುವದು' ಎನ್ನಲು 'ಡಿಸುವದು 'ತದಹಾದಿ ಸುಜನರ ಕೈವಾರಿಪ ಎನ್ನಲು ಪರಿಪರಿಯ ಕಷ್ಟದೂರಾ ಪರಮಾದರಕೆದ್ವಾರಾತಿ ಎನ್ನಲು ತಿಳಿಯಾಗುವದೈ ಬುದ್ಧಿ ಸರ್ವಾಂಗಶುದ್ಧಿ 6ಮ'ಪತಿರಾಯರು ತಪವಗೈದಸ್ಥಾನಾ ಅಲ್ಲಿಯ ವೃಂದಾವನಾಮೂರುಕ್ಷೇತ್ರ ಶಾಲಿಗ್ರಾಮದ ಸವನಾ ಮ'ಮೆಯು ಪರಿಪೂರ್ಣಾತೀರ್ಥ ಭಾ'ಯೊಳು ಸುರನದಿ ಅವತರಣಾ ಮ'ಪತಿ ಸುತಕೃಷ್ಣಾಕರುಣಾನಿಧಿ ಭೂಪತಿ'ಠ್ಠಲ ಪ್ರಿಯನಾ ಸಂತತ 'ಡಿಚರಣಾ7
--------------
ಭೂಪತಿ ವಿಠಲರು
ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ 1 ಅಮೃತ ಕಳದಿ ಝಳದಿ 2 ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು 3
--------------
ಚಿದಾನಂದ ಅವಧೂತರು
ಒಲ್ಲೆ ದುರಿತಗಳೊಲ್ಲೆ ಒಲ್ಲೆಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ಪ. ದುರ್ಜನರ ಸಂಗವನೆಂದೆಂದಿಗೂ ಒಲ್ಲೆಸಜ್ಜನರ ವಿರಸಗಳೊಲ್ಲೆ ಒಲ್ಲೆಅರ್ಜುನಸಖ ನಿನ್ನ ಸೇವೆಯ ಬಿಡಲೊಲ್ಲೆಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ 1 ಬಲ್ಲೆನೆಂಬೊ ಅಹಂಕಾರ ಎಂದೆಂದಿ[ಗೂ]ಒಲ್ಲೆಸಲ್ಲದ ಸುಖಗ[ಳ]ಒಲ್ಲೆ ಒಲ್ಲೆಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ 2 ಹರಿನಾಮ ಸ್ಮರಣೆಯ ಮನದಿ ತೊರೆದಿರಲೊಲ್ಲೆದುರುವಿಷÀಯದಿ ಹರುಷ ಒಲ್ಲೆ ಒಲ್ಲೆಕರುಣ ಹಯವದನನ್ನ ಕಂಡಲ್ಲದೆ ಮಿಕ್ಕಕಾರುಣ್ಯದ[ಹವಣು]ಒಲ್ಲೆ ಒಲ್ಲೆನೊ ಸ್ವಾಮಿ 3
--------------
ವಾದಿರಾಜ