ಒಟ್ಟು 844 ಕಡೆಗಳಲ್ಲಿ , 102 ದಾಸರು , 726 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು
ಹರಿನೀನೇ ಗತಿಯೆಂದು ನೆರೆನಂಬಿದವರನುಮರೆತಿರುವುದು ನ್ಯಾಯವೆ? ಪಗರುಡಗಮನ ನೀ ಸಿರಿಲೋಲನಾರಿಗೆ |ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ಅ.ಪಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವದೃಷ್ಟಿಯೆನ್ನೊಳಗಿದೆಯೆ?ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1ಭುಜಗಶಯನ ನಿನ್ನ ಭಜಕರ ಹೃದಯದಿನಿಜವಾಗಿ ನೀನಿಲ್ಲವೇ?ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು 2ಭಾಗವತರರಸನೆ ಯೋಗಿಗಳೊಡೆಯನೆಬಾಗಿ ಬಿನ್ನಯಿಪೆ ನಿನ್ನಸಾಗರ ಶಯನನೆ ನೀಗಿಸಿ ಶ್ರಮವನುಜಾಗುಮಾಡದೆ ಎನ್ನ ಬೇಗದಿ ಕಾಯಯ್ಯ3ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |ಎಂಟು ಮಂದಿಯ ಗರುವವನಳಿದು ||ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |ಉಂಟಾದ ವೈಕುಂಠ ಬಂಟನೆಂದೆನಿಸೊ 4ಧರಣಿಯೊಳಗೆ ನೀ ಸುಜನರ ಸಲಹುವಬಿರುದು ಪಡೆದವನಲ್ಲವೆ? ||ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |ಪರಮಪುರುಷಸಿರಿಪುರಂದರವಿಠಲ5
--------------
ಪುರಂದರದಾಸರು
ಹಲವನು ಯೋಚಿಸಲೇನು ಫಲ ಬರಿ |ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ |ಸಲಿಲದಿ ಮುಳುಗಿದರೇನು ಫಲ ||ಜಲಜಾಕ್ಷನ ಪದದೊಲುಮೆಯಿಲ್ಲದೆನರ|ಬಲಯುತ ತಾನೆನಲೇನು ಫಲ1ಪರಸತಿ ಪರಧನದಾಸೆಯೊಳಿರ್ಪನು |ಸುರನದಿಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ2ಕಾಣದೆ ಕುಣಿಯೊಳು ಬಿದ್ದಾನೆಯು ಬಲು |ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ |ಜ್ಞಾನಿಯು ತಾನೆನಲೇನು ಫಲ3ಧೂರ್ತತನದಿ ಹಣ ಗಳಿಸುತ ಲೋಭದಿಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ |ಅರ್ತಿಯೊಳೆಸಗಿದರೇನು ಫಲ4ಪತಿಯನು ವಂಚಿಸಿರೂಪಮಾರುವಸತಿ|ವ್ರತಗಳ ಮಾಡಿದರೇನು ಫಲ ||ರತಿಪತಿಪಿತಗೋವಿಂದನ ನೆನೆಯದೆ |ಗತಿಯನುಬಯಸಿದರೇನು ಫಲ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹಿಗ್ಗುವೆಯೇಕೊ - ಏ ಮನುಜಾಹಿಗ್ಗುವೆಯೇಕೊ ಅಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ದಗ್ಧವಾಗುವ ದೇಹಕೆ ಅಪಸತಿ ಪುರುಷರು ತಮ್ಮ ರತಿಕ್ರೀಡೆಗಳ ಮಾಡೆಪತವಾದಿಂದ್ರಿಯ ಪ್ರತಿಮೆಯ ದೇಹಕೆ 1ತೋರುವುದೊಂಬತ್ತು ದಾರಿಯ ಮಲವಾದನೀರಿಲ್ಲದಿದ್ದರೆ ನಾರುವ ದೇಹಕೆ 2ಆಗದ ಭೋಗದ ಆಗು ಮಾಡುತಲಿಪ್ಪರೋಗಬಂದರೆ ಬಿದ್ದು ಹೋಗುವ ದೇಹಕೆ 3ನರರ ಸೇವೆಯಮಾಡಿ ನರಕ ಭಾಜನನಾಗಿಮರಳಿ ಮರಳಿ ಹುಟ್ಟಿ ನರಳುವ ದೇಹಕೆ 4ಪುರಂದರವಿಠಲನಚರಣ ಕಮಲಕೆಎರಗದೆ ಇರುತಿಪ್ಪ ಗುರುವಿನ ದೇಹಕೆ 5
--------------
ಪುರಂದರದಾಸರು
ಹಿಡಿಸುವೆ ಹುಚ್ಚನೆ ಹಿಡಿಸುವೆರಂಗನರಸಿಯರ ಪಾಟ ಬಡಿಸುವೆ ಪ.ತಮವೆಂಬ ಭಂಗಿಯ ಕುಡಿಸುವೆಬುದ್ಧಿಭ್ರಮೆಗೊಂಡ ಮಾತು ನುಡಿಸುವೆಸುಮನಸರಿಗೆ ಹೆಂಡ ಕುಡಿಸುವೆಯಾರೂ ನಮಿಸದಂತೆ ದೂರ ಇಡಿಸುವೆ 1ರಜವೆಂಬೋದ್ರವ್ಯ ಬಚ್ಚಿಡಿಸುವೆಇವರ ರಾಜ ಲಕ್ಷಣಕಟ್ಟಿಇಡಿಸುವೆಗಜಗಮನೆಯರ ಗರ್ವ ಮುರಿಸುವೆನಮ್ಮತ್ರಿಜಗವಂದನ ಹಾಸ್ಯ ಮಾಡಿಸುವೆ2ಸತ್ಯ ಸಾಮಿತ್ಯವತೆಗೆಸುವೆಉನ್ಮತ್ತೆಯರ ಮಾಡಿ ಮೆರೆಸುವೆಕತ್ತಲೆ ಮನೆÀಯೊಳಗೆ ಹೊಗಿಸುವೆಇನ್ನೆತ್ತ ಹೋಗಲೆಂದು ಎನಿಸುವೆ 3ಯಾರೂ ಇಲ್ಲದಲಿ ಇಡಿಸುವೆಇವರ ನೀರು ಕಂಡು ಭಯಬಡಿಸುವೆಓರೆಂದು ಗಾಬರಿಗೆಡಿಸುವೆಕಾಯೋ ಶ್ರೀನಿವಾಸಾನೆಂದೆನಿಸುವೆ 4ಒಬ್ಬರಿÉಲ್ಲದಲಿ ಇಡಿಸುವೆಇವರನು ಗುಬ್ಬಿಯ ಹಾಂಗೆ ಭಯ ಪಡಿಸುವೆತಬ್ಬಿಬ್ಬುಗೊಂಡು ತಳವೆಳಸುವೆಅರ್ಥಿಲೊಬ್ಬ ರಾಮೇಶನ ನೋಡಿಸುವೆ 5
--------------
ಗಲಗಲಿಅವ್ವನವರು
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು