ವಂದೇ ಗೋಪಾಲಂ ಕೃಷ್ಣಾನಂದ ಜಲಪಾಲಂ
ಮಂದಹಾಸ ಮುನಿವೃಂದ ವಿಶಾಲಂ
ಇಂದಿರೇಶ ಯದುನಂದನ ಬಾಲಂ ಪ
ಸಾರಿದನು ಸಾರಂ ಕೃಷ್ಣ
ಚಾರು ಮೋಹನಾ ಕಾರಂ
ಸಾರೋದ್ದಾರಂ ಸುಜನಮಂದಾರಂ
ಶ್ರೀರಮಣೀ ಮುಖ ಚಂದ್ರ ಚಕೋರಂ 1
ಕಾಂಚೀ ಮಣಿಹಾರಂ ಕೃಷ್ಣ
ವಾಂಛಿತದನುಸಾರಂ
ಪಂಚಭೂತ ಪಂಚಸ್ಯಾಕಾರಂ
ಪಾಂಚ ಜನ್ಯ ಭೃಗುಲಾಂಛನ ಧಾರಂ 2
ಚಾಪಲ ಗುಣಧಾಮಂ ಕೃಷ್ಣ
ಗೋಪೀಜನ ಕಾಮಂ
ನೀ ಪರಮಾತ್ಮ ಸ್ವರೂಪ ಸುನಾಮಂ
ಶ್ರೀಪತಿ ಯದು ಕುಲದೀಪ ನಿಸ್ಸೀಮಂ 3
ಪಾಂಡವ ಸಾಕಾರಂ ಕೃಷ್ಣ
ಪಂಡಿತನುಸಾರಂ
ಚಂಡ ಕಿರಣ ಮಣಿಕುಂಡಲ ಧಾರಂ
ಮಂಡಲದೊಡೆಯ ಉದ್ದಂಡತಿ ಶೂರಂ 4
ಶರಣರ ಭವದೂರಂ ಕೃಷ್ಣ
ಸುರಜನ ಸಾಕಾರಂ
ಹರಿಸೂನು ಕೋಣೆ ಲಕ್ಷ್ಮೀಶ ಶೃಂಗಾರಂ
ಪರಮಾತ್ಮಕ ಸದ್ಗುರು ಮಂದಾರಂ 5