ಒಟ್ಟು 3856 ಕಡೆಗಳಲ್ಲಿ , 120 ದಾಸರು , 2588 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ನಿನ್ನ ಸಮರನ್ಯಾರ ಕಾಣೆ ಪ ತರತಮ ಪಂಚಭೇದವರ ಮಾರ್ಗವ ತೋರೋ ಅ.ಪ ತ್ರಿವಿಧ ಜೀವರಿಗೆ ಹರಿ ಕಾರಣ ಕರ್ತನೆಂದು ವಿವಿಧ ಗತಿಗಳೆಂದು ಶ್ರವಣ ಮನನ ಮಾಡಿಸೊ 1 ಪರಮಾತ್ಮ ಜೀವಾತ್ಮ ಪರಸ್ಪರ ಭೇದವೆಂದು ಅರುಹಿಸೊ ನಿನ್ನವರಿಂದನುದಿನ ಗುಣಸಿಂಧು 2 ನಿಜ ಸಿದ್ಧಾಂತ ಸುಜನರಿಗೆ ಬೋಧಿಸಿದ ಭುಜಗ ಶಯನನ ಭಕ್ತ ವಿಜಯ ರಾಮದಾಸವರ್ಯಾ 3 ಅಂಕಿತಗಳ ಕೊಟ್ಟು ಆದರಿಸುವೆ ಸದಾ 4 ಭಾಗ್ಯನಿಧಿ ದಾಸರ ಶಿಷ್ಯಾಗ್ರೇಸರ ಎನ್ನ ಯೋಗ್ಯತೆ ತಿಳಿಸಿ ಗುರುರಾಮವಿಠಲನ ತೋರೋ 5
--------------
ಗುರುರಾಮವಿಠಲ
ಗುರುರಾಯ ನೀ ಎನ್ನ ತವರ ಮನಿ | ಶರಣರಿಗೆ ಕೈವಲ್ಯದಾನಿ ಪ ಗುರುವೆ ಎನ್ನ ಬಂಧು | ಬಂದು ಪೇಳಿರಿ ವಾಕ್ಯ ಎನಗೊಂದು | ಬಿಡಿಸೀದಿ ಈ ಜೀವಶಿವ ಸಂದು | ನಿಜರೂಪ ತೋರಿದಿ ಕೃಪಾಸಿಂಧು 1 ಶಮ ದಮವು ಕೊಡುತಾನೆ |ಅಂತರ ಬಾಹ್ಯದಲಿ ತಾ ತುಂಬ್ಯಾನೆ 2 ಇರಲಾರೆನು ಬಿಟ್ಟು ಅರಕ್ಷಣಾ | ಗುರುರಾಯ ಎನ್ನಜೀವದ ಪ್ರಾಣ | ದೊರಕಿದಿ ಪರಮವೇ ದಾನಸಾರಿ ಪೇಳುವ ಜ್ಞಾನಬೋಧ ಪೂರ್ಣ 3
--------------
ಜ್ಞಾನಬೋದಕರು
ಗುರುರಾಯ ನೀನೆ ಧ್ವರೀ ! ಧ್ವರೀ ! ಪ ಪರಮ ಭಾಗವತರ ನೀ ಮರೆಯದೆ ಪೊರೆವಂಥ ಅ.ಪ ಪರಮ ಭಕ್ತರು ನಿನ್ನ ಕರೆಯಲಾಕ್ಷಣ ಬಂದು ಪರಿಪರಿ ಸುಖಗಳ ಮರೆಯದೆ ಕೊಡುವಂಥ 1 ಶರಣ ಜನರಪ - ಮರಣ ಕಳೆದು ಸ್ಥೂಲ ಹರಣರಕ್ಷಿಸಿ ಸುಖ - ಅರಣದಲ್ಲಿಡುವಂಥ 2 ಅನ್ಯರಿಗಳವಡದ - ಘನ್ನ ಮಹಿಮನೆ ನಿನ್ನ ಮನ್ನದಿ ಭಜಿಪ ಜನರ - ಚನ್ನವಾಗಿ ಪೊರೆವಂಥ 3 ರಾಜ ಚೋರ ವ್ಯಾಘ್ರ - ರಾಜ ವೃಶ್ಚಿಕ ಸರ್ಪ ರಾಜಿ ನಕÀ್ರದ ಭಯ - ಮಾಜಿಸಿ ಪೊರೆವೊನಿಂಥಾ 4 ಭೂತಳದೊಳಗತಿ - ಖ್ಯಾತನಾಗಿ ಸದಾ ದಾತ ಗುರು ಜಗನ್ನಾಥ ವಿಠಲ ನೊಲಿಸಿದಂಥ 5
--------------
ಗುರುಜಗನ್ನಾಥದಾಸರು
ಗುರುರಾಯ ಭವಹರ ಹರಿಪ್ರೀಯಾ ಪ ಅಂಗಜ ಸಮಕಾಯಾ ರಂಗನಾಥನ ಪ್ರೀಯ ಭವ ಭಯ ಅಂಗಜ ನಿಚಯಾ 1 ನಮಿಸುವೆ ತವಪಾದ ವನಜಕೆ ನಾ ಸದಾ ಅನಘ ಚರಿತನೇ ಬುಧಾ ವಿನಮಿತ ಕಾಮದಾ 2 ಮಾನವ ಅರಿಶಿರಿ ಗೋವಿಂದ ವಿಠಲನ್ನ ಪಾವನ ಪಾದದ ಸೇವೆನೀಯೊ 3
--------------
ಅಸ್ಕಿಹಾಳ ಗೋವಿಂದ
ಗುರುರಾಯನ ಕರುಣಾ ಪ ಮರವಿಗೆ ತಾನೇ ಅರವಿಸಿ ಕೊಟ್ಟು | ಗರಿಯಿತು ಘನ ಸ್ಫುರಣಾ 1 ಬೋಧ ಪ್ರತಾಪದಿ ಬಂದು | ದೊರೆಯಿತು ಹರಿಚರಣಾ 2 ನೋಡಲು ಗುರು ಮಹಿಪತಿ ವಲುವಿಂದಾ ಮಾಡಿತು ಉದ್ಧರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ | ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ | ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ | ಪಾವನ ಕಾಯಾ 1 ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ | ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ | ಪರಿ | ಬಗೆವದು ದೀನೋದ್ಧಾರಿ | ಭಕುತರ ನಿಜ ಸಹಕಾರಿ2 ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ | ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ | ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ | ಮನ್ನಿಸು ಹಿಡಿದಭಿಮಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವ ನೆನೆದರೆ ಸಾಲದೆ ಚಿದಾನಂದಗುರುವ ನೆನೆದರೆ ಸಾಲದೆಹಿರಿದು ಸಂಸಾರಗಳು ಮಾಡುತ್ತೊಂದುದಿನಕ್ಕೊಮ್ಮೆ ಗುರುವ ನೆನೆದರೆ ಸಾಲದೆ ಪ ಜುಟ್ಟು ಜನಿವಾರ ಬಿಸುಟು ತಾವೀಗಉಟ್ಟೊಂದು ಕೌಪೀನವಕಟ್ಟಿ ಕಾಷಾಯ ಕಮಂಡಲು ದಂಡ ಹಿಡಿದುದಿಟ್ಟ ಸಂನ್ಯಾಸ ಪಡೆಯುವುದೇಕೆ1 ಅಡವಿ ಅರಣ್ಯವ ಸೇರಿ ಅಲ್ಲಿದ್ದಅಡವಿ ತೊಪ್ಪಲನೆ ತಿಂದುಗಿಡ ಮರಗಳಲಿ ಮಲಗಿ ಮಳೆ ಛಳಿಗೆ ಕಂಗೆಡೆದೆ ಕಡು ತಪವ ಮಾಡುವುದೇಕೆ2 ಚರಿಯ ಬೇಡುವುದೇಕೆ 3 ಕಾವಿ ವಸ್ತ್ರಗಳನುಟ್ಟು ಮೈಗೆಲ್ಲತಾ ವಿಭೂತಿಯ ಧರಿಸಿ ಕಂಠದಲಿತೀವಿ ರುದ್ರಾಕ್ಷಿ ತಾಳಿ ಶಿವಶಿವಾಯೆಂದುತಾವು ಗೊಣಗುವುದೇಕೆ 4 ಜ್ಞಾನಿಗೀಯವಸ್ಥೆಯಾ ವೇಷಗಳು ತಾವು ಇವಗೇನು ಇಲ್ಲಿಲ್ಲ ತಾನೆ ಚಿದಾನಂದ ಗುರು ತಾನೆ ತಾನೇ ಎಂದು ಭಾವಿಸುತಲಿತೀವಿ ತನ್ನನೇ ಮರೆತಿರಲದೇಕೆ5
--------------
ಚಿದಾನಂದ ಅವಧೂತರು
ಗುರುವರ್ಯ ವಿಶ್ವಪ್ರಿಯ ಶಿಷ್ಯರ ಪ ಆಂಗ್ಲದೇಶದ ರಾಣಿಯು ನಿಮ್ಮಯ ಶಾಸ್ತ್ರ ಸಂಪÀದ ಮಹಿಮೆಯನು ಆಂಗ್ಲೇಯ ಜನರಿಂದ ತಿಳಿದು ತಾ ಬಹುಮಾನ- ವಾಂಗ್ಲೇಯ ಭಾಷೆಯೊಳಿತ್ತಳಾದರದಿ 1 ಪಂಡಿತಾಗ್ರಣಿಯಾದರು 2 ಅರುವತ್ತನೆಯ ವರ್ಷದಿ ಪ್ಲವಾಬ್ದದಿ ರಾಜೇಶ ಹಯಮುಖನ ಚರಣವ ಸ್ಮರಿಸುತ್ತ ಸ್ಮರತಾತನನೈದಿದ ಕರುಣಾಸಮುದ್ರರ ಚರಣಕ್ಕೆ ನಮಿಸುವೆ 3
--------------
ವಿಶ್ವೇಂದ್ರತೀರ್ಥ
ಗುರುವಿನ ದಯವಾಗಬೇಕು | ತನ್ನ | ಸದ್ಗತಿಗೆ ಅನ್ಯ ಸಾಧನ ಹೋಕು ಪ ಕನ್ನಡಿಯ ಕಿಲುಬು ಹತ್ತಿ ಮುನ್ನ | ಮಾಸಿರಲು ಮತ್ತ | ದನ್ನೆ | ಜಾಣ ಬಂದು ಬೆಳಗಲಾಗಿರುಹು | ತನ್ನ ತೋರುವಂತೆ ನಿಜವಾಗಿ | ಮನಸ್ಸಿನ ಕದಡುಗಳಿಸುವನು ಯೋಗಿ1 ಸಾಧಿಸಿ ಬಯಲಗಂಬಾರನಲಿ | ಮುತ್ತುವಿದ್ದರೇನು ಯಙ್ಞವಾಗದಲ್ಲಿ | ಅದಕ ಸಾದು ಜೋಹರೆನೆವೆ ಬುದ್ಧಿಯಲ್ಲಿ 2 ಗರಡಿಯಲಿಟ್ಟು ಹುಳವ ತನ್ನ | ಗುರುತು ತೋರುವುದು ಭೃಂಗೀ | ಅರಿಯದೇನು ಜನ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದ ಸಾರಿದನು ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ. ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ 1 ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ 2 ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ 3
--------------
ಮೋಹನದಾಸರು
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ | ಸಿರಿಯಾ | ಧರಿಯಾ | ಧೊರಿಯಾ | ಚರಿಯಾ | ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ ಶುಭ ಚರಣಕೆರಗಿ | ಕೆಡ ಗುಣಗಳ ನೀಗಿ | ಇಡುವಾ | ತುಡುವಾ | ಮುಡುವಾ | ಕುಡುವಾ | ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ 1 ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ | ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ 2 ಮೂರ್ತಿ | ಆರವಾ | ಮುರವಾ | ಘನದಿರುವ್ಹಾ ಪರವಲಿಟ್ಟನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ ಅರಿಯೆ ಅನ್ಯರನಿನ್ನು ಪೊರೆಯಿರೀಗ ಪ. ಸಿರಿಯರಸನ ತೋರಿ ಗುರುವೆ ಕರುಣಿಸಿರಿ ತರತಮ್ಯ ತಿಳಿಸುತ ಹರಿಸಿರಿ ಭವದುಃಖಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಹಿಂದು ಮುಂದರಿಯದೆ ಕುಂದಿದೆನು ಬಂದು ಕರುಣದಿ ಆನಂದವ ನೀಡುತ ನಂದಕಂದನ ಲೀಲೆಯಿಂದ ರಕ್ಷಿಸಿದಿರಿ1 ಮುಸುಕಿದ ಅಜ್ಞಾನ ಹಸನಾಗಿ ತೊಲಗಿಸಿ ಕುಶಲದ ಮತಿಯಿತ್ತು ಪಾಲಿಸುತ ಬಿಸಜಾಕ್ಷನು ದಯ ಎಸೆವ ಕರುಣದಿಯಿತ್ತು ಘಸಣೆಗೊಳಿಸದಲೆ ವಸುಮತಿಯೊಳು ಪೊರೆವ 2 ಕಷ್ಟವಪಡಲಾರೆ ಸೃಷ್ಟಿಯೊಳಗಿನ್ನು ತಟ್ಟದೆ ಎನ್ನ ಮೊರೆ ಮನಸಿಗೀಗ ಕೊಟ್ಟು ಅಭಯವನು ಘಟ್ಯಾಗಿ ಪೊರೆಯಿರಿ ಕೆಟ್ಟ ಕಲ್ಮಷ ಕಳೆದು ಸೃಷ್ಟಿಗೊಡೆಯನ ತೋರಿ 3 ತಲ್ಲಣಿಸುತಿಹೆ ಕ್ಷುಲ್ಲ ದೇಹದಿ ಬಂದು ಒಲ್ಲೆನು ಈ ದುಃಖಭವ ಎಲ್ಲ ಮನಸು ನಿಮ್ಮ ಪಾದದಲಿರುವುದು ತಲ್ಲಣಗೊಳಿಸದೆ ಪೊರೆಯಿರಿ ಗುರುದೇವ 4 ತಂದೆ ಮುದ್ದುಮೋಹನವಿಠ್ಠಲನೆಂಬೊ ಇಂದಿರೇಶನ ಅಂಕಿತದಿ ಮೆರೆವೊ ಸುಂದರ ಗೋಪಾಲಕೃಷ್ಣವಿಠ್ಠಲನ ಎಂದೆಂದಿಗೂ ಮನಮಂದಿರದಲಿ ಕಾಂಬ 5
--------------
ಅಂಬಾಬಾಯಿ
ಗುರುವೆ ಪರಬ್ರಹ್ಮ ವಾಸುದೇವಾರ್ಯಗುರುವೆ ಪರಬ್ರಹ್ಮ ಪಅರಿವು ಮರವೆಗಳ ಪರಿಯ ನಿರೂಪಿಸಿಅರಿ'ನ ಘನವಾಹ ತೆರಗೈದು ಪಾಲಿಪ ಅ.ಪಸುಖಬುದ್ಧಿುಂಪಾಪಾಸಕ್ತ ಮಾನಸರನುಯುಕುತಿುಂದಲಿ ಹರಿಭಕುತಿಗಳವಡಿಪ 1ಭಾಗವತಾರ್ಥದಿ ರಾಗವ ಪುಟ್ಟಿಸಿಹಾಗೆ ಗೀತಾಮೃತ ಸಾಗರದೆಡೆಗೊಯ್ವ 2ನಾನಾಮತಗಳೊಳು ಮಾನಿಸಹೊಗದಂತೆಶ್ರೀನಿವಾಸನ ಪಾದಧ್ಯಾನವ ಬಲಿಸುವ 3ಕಾಮಾದಿ ಕಲುತ ತಾಮಸ ಜನರನುಪ್ರೇಮದಿಂದಲಿ ಸಪ್ತ ಭೂ'ುಕೆಗೇರಿಪ 4ಒಂದೊಂದರೊಳು ಮತಿನಿಂದು ತಿಳಿದೊಳಿಸೆಂದು ನಡೆದೂ ಪೂರ್ಣಾನಂದರಹುದಮಾಳ್ಪ 5ಹೊರಗೊಳಗುಗಾಣದೆ ಬರಿಯರಿವಳಮಲಪರಮನೆ ನಾನೆಂಬ ಪರಿಗೈದು ಪೊರೆವ 6ಕರುಣದಿಂ ಚಿಕನಾಗಪುರದಿ ಭಜಕರಿಗೆಕರದು ಜ್ಞಾನಾಮೃತವೆರೆವ ವಾಸುದೇವಾರ್ಯ 7
--------------
ವೆಂಕಟದಾಸರು
ಗುರುವೆ ಪೂಜಿಪೆ ನಿಮ್ಮಯ ಚರಣಗಳನ್ನು ಗುರುವೆ ಭಜಿಪೆ ತಮ್ಮಯ ಚರಣಗಳನ್ನೂ ಪಪರಮತತ್ವದೊಳಿರುವ ನಿಜಗುರು ತುಲಸಿರಾಮರತೆರದಿ ನಮ್ಮಯದುರಿತಗಳ ಪರಿಹರಿಸಲೀತೆರ ರಂಗಸ್ವಾ'ುಗಳಾಗಿ ಬಂದಿರಿ 1ಪರಿಪರಿಯ ಇಚ್ಛೆಗಳೊಳಿರ್ದಸರಳಜೀವನಪಿಡಿದು ತಮ್ಮಯಚರಣಗಳ ಭಜಿಪುದಕೆ ಪರಮಾನಂದವ[ನರು'] ತೋರಿದಿರಿ ನಿಜಗುರು 2ಸರ್ವಜನರನು ಏಕಭಾವದಿಸ್ಮರಣೆಮಾಡುªತೆÉರದಿ ುೀಮ'ಪರಮಪುರುಷನ ದಿವ್ಯಮ'ಮೆಯಅರು'ದಿರಿ ತವಕರುಣದಿಂದಲಿ 3ರಾಮಕೋಟಿಯ ಸೇವೆಯನು [ನಮ್ಮ] ಚನ್ನಪಟ್ಣದ ಭಕ್ತರೆಲ್ಲರುಪ್ರೇಮದಿಂದಲಿ ಭಜನೆಮಾಡಿಕಾಮಜನಕನ ಕರುಣಪಡೆದರು 4ಪಾಮರನು ನಾನಾಗಿ ಈ ಮ'[ಯೊಳು]ಪ್ರೇಮದಿಂ ಗುರು ನಿಮ್ಮ ಕರುಣದಿರಾಮಕೃಷ್ಣದಾಸ [ನೆನಿಸಿ] ನುಡಿದೆನುನೇಮದಿಂ ಕೀರ್ತನೆಯ ರೂಪದಿ 5
--------------
ಮಳಿಗೆ ರಂಗಸ್ವಾಮಿದಾಸರು
ಗುರುವೆ ವರಹಜೆ ತಟವಾಸಾ | ಗುರುವೇ ಪುರಿ ಮಂತ್ರಾಧೀಶಾ ಪ ಆರು ಮೊರೆ ಇಡುವೆನೊ | ವರಪದ ಪದುಮಕೆಕರುಣದಲೆಮನ | ಹರಿಯಲಿ ಇರಿಸೋ ಅ.ಪ. ಬಾಗಿ ಭಜಿಪೆ ಗುರುವೇ | ಎನ್ನಯರೋಗ ಹರಿಸು ಪ್ರಭುವೇ ||ರಾಘವೇಂದ್ರ ದುರಿತೌಘ ವಿದೂರನೆ |ಭೋಗಿ ಶಯನ ಪದ | ರಾಗದಿ ಭಜಿಸುವ 1 ಭೂತ ಪ್ರೇತ ಬಾಧೇ | ಬಿಡಿಸುವಖ್ಯಾತಿ ನಿಮ್ಮದು ತಿಳಿದೇ ||ದೂತರೆನಿಪ ಜನ | ಆತುನಿಮ್ಮ ಪದ |ಪ್ರೀತಿ ಸೇವೆಯಲಿ | ಕಾತುರರಿಹರೋ 2 ಯೋನಿ ಬರಲೇನು ಅಂಜೆನೂ 3 ಪರಿಮಳಾರ್ಯರೆಂದೂ | ನಿಮ್ಮಯಬಿರಿದು ಕೇಳಿ ಬಂದೂ ||ಮೊರೆಯ ನಿಡುವೆ ತವ | ಚರಣಾಂಬುರುಹಕೆ |ಅರಿವ ನೀಯೊ ತವ | ಪರಿಮಳ ಸೊಬಗನು 4 ಪಾದ ಬಿಸಜ ||ವರ ಸುಹೃದ್ಗ ಗುರು | ಗೋವಿಂದ ವಿಠಲನಚರಣ ಸರೋಜವ | ನಿರುತ ಭಜಿಪ ಗುರು 5
--------------
ಗುರುಗೋವಿಂದವಿಠಲರು