ಒಟ್ಟು 1331 ಕಡೆಗಳಲ್ಲಿ , 94 ದಾಸರು , 990 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ರಂಗನ್ಯಾಕೆ ಮಮತೆಕೊಟ್ಟು ದಣಿಸುವಿಕೃಷ್ಣ ನೀ ಕರುಣದಿ ಪಾಲಿಸೊ ಪ. ತನುವು ತನ್ನದು ಅಲ್ಲ ....ತನುವಿನ ಸಂಬಂಧಿಗಳೆಂಬೊ ಅವರ್ಯಾರೊನಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಂಗಳಅನುಭವ ಹಿಂದಿನ ದೇಹದಂತರ ಅರಿಯೆವೊ 1 ನಿನ್ನ ಹಂಬಲಿಸದೆ ಅನ್ಯ ವಿಷಯಗಳಿಗೆನ್ನನೊಪ್ಪಿಸುವದು ನೀತವೆಮನ್ನಿಸಿ ದಯದಿ ನೀ ಯನ್ನ ಪಾಲಿಸಲು ನಾನಿನ್ನ ನೇಮಕೆ ಪ್ರತಿಕೂಲನೆ 2 ಇಂದ್ರಿಯಂಗಳು ವಿಷಯಂಗಳಿಗೆಳೆಯೆ ಗೋ-ವಿಂದಯೆನ್ನ ವಶಕೆ ಬಾರದುಇಂದಿರೆಯರಸ ಬ್ರಹ್ಮೇಂದ್ರವಂದಿತ ಸುಖಸಾಂದ್ರ ಭವಮೋಚಕ ನಮೋ ನಮೋ 3 ಅರಿತು ಅರಿತು ಯನಗರೆಲವವಾದರುವಿರಕುತಿ ವಿಷಯದಿ ಬಾರದುಕರುಣಾಸಾಗರ ನಿಮ್ಮ ದರುಶನವಲ್ಲದೆಮರಳು ನೀಗುವ ಬಗೆ ಕಾಣೆನೊ 4 ಭವ ಮೋಚಕ ನಮೋ ನಮೋ 5
ರಂಗವಲಿದ ಗುರುರಾಯರ ನೀ ನೋಡೋ | ಅಂತರಂಗದಿ ಪಾಡೋ ಭಂಗ ಬಡಿಪ ದುರಿತಂಗಳ ಈಡ್ಯಾಡೋ ಸತ್ ಸಂಗವ ಬೇಡೋ ಅ.ಪ ಹಿಂದೆ ಮೂರೊಂದವತಾರ ಧರಿಸಿದಾತ ಇದು ಹಿರಿಯರು ಮಾತ | ಬಂದ ಮರಳಿ ಮಹೀತಳದಿ ಜಗನ್ನಾಥ ದಾಸಾರ್ಯ ಪ್ರಖ್ಯಾತ || ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು ಈತ ಆನಂದ ಪ್ರದಾತ 1 ಬಣ್ಣಿಸಲೆನಗಿನ್ನೊಶವೆ ಇವರ ಚರಿಯ ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ ಪುಸಿಯಲ್ಲವೊ ಖರಿಯ 2 ದಾಸವರ್ಯರಾ ವಾಸಗೈದ ಸ್ಥಾನ ಗಯಕಾಶಿ ಸಮಾನ ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ ಶ್ವಾನ | ಯಾತಕೆ ಅನುಮಾನ 3 ಸಾರ ನಿರ್ಮಿಸಿರುವ ದೇಹಾಖ್ಯ ರಥವ ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ 4 ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ 5
ರಘುಕುಲತಿಲಕಾ ಮಾಂ ಪಾಹಿ ಪ ಅಘಕುಲನಾಶಕ ಮಾಂ ಪಾಹಿ ಅ.ಪ ಆಹವ ಭೀಮ ವೈದೇಹಿ ಮಾನಸ ಗೇಹ ಸುಧಾಕರ ಮಾಂ ಪಾಹಿ ರಾಮಾ 1 ಆದಿಮೂಲ ಹರಿ ಮಾಂ ಪಾಹಿ ರಾಮ 2 ಮಾಂಗಿರಿ ಮಂದಿರ ತುಂಗ ಕೃಪಾಕರ ಗಂಗಾಜನಕ ಹರಿ ಮಾಂ ಪಾಹಿ ರಾಮಾ 3
ರಾಘವೇಂದ್ರಂ ಭಜೇಹಂ ||ಶ್ರೀ|| ಪ ಆಗಮಚಯ ವಿಜ್ಞಾನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ 1 ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ 2 ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ3
ರಾಜನೆಂಬೋನಾಮವು ನೆಲಿಗೆ | ತಿಹುದು ಜಗದೊಳಗೆ 1 ಸಾಧನದಳ ಚತುರಂಗಗಳು | ಊದುವ ಬೋಧದ ಕಹಳೆಗಳು 2 ಗಜ ಸೆರೆ ವಿಡಿಯುತ ದುರಿತವ ತರಿದಾ 3 ಕೊನರುವ ದೇಹಾಭಿಮಾನಿಗಳ | ವನನಿಜ ಸ್ಥಳವನು ಬಿಡಿಸಿದನು 4 ಮೆರೆವ ಸಿಂಹಾಸನವೇರಿದನು | ಹರುಷದಿ ಕೀರ್ತಿಯ ಪಾಡಿದನು 5
ರಾಜೀವನಯನ ಸೀತಾರಾಮ ಪಾಹಿ ಮುದಂದೇಹಿ ಪ ರಾಜಾಧಿರಾಜ ಕಲ್ಪಭೂಜಾ ಸೌಜನ್ಯ ನಿಲಯ ರಾಮ ಅ.ಪ ಸಾಕೇತಾಧಿಪರಾಮ, ಲಂಕಾನತ ದನುಜ ಭೀಮ ಕಾಕಾಸುರ ನಮಿತ ನಾಮ, ಶ್ರೀಕರ ಕೀರ್ತಿಕಾಮ ಏಕಾಂತ ರಘುನಾಮ, ಏಕಾಂಬರ ಶಿವಪ್ರೇಮ ಸಾಕೇಶ್ವರ ಸಾರ್ವಭೌಮ, ಶ್ರೀಮಾಂಗಿರಿ ರಂಗಧಾಮ 1
ರಾಮ ವರಶರಸಮರೈಕ ಶೂರ ರಾಮ ಶರಧಿಮದವಿದಾರ ಪ. ಸದಯ ಹೃದಯ ಪದ್ಮಾವತೀಪ್ರಿಯ ಪದ್ಮದಳೇಕ್ಷಣ ವೈದೇಹೀರಮಣಅ.ಪ. ಮಂದರಧರ ಗೋವಿಂದ ಸದಾನಂದ ಮಂದಸ್ಮಿತ ವದನಾರವಿಂದ 1 ನೀಲಮೇಘ ವರಶ್ಯಾಮಶರೀರ ಪಾಲಿತ ಭಕ್ತಜನ ಮಂದಾರ 2 ಕರುಣಾಕರ ರಮಾವರ ಭವದೂರ ವರಶೇಷಗಿರಿವರ ಶ್ರೀಧರ 3
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ ಸರಸಿಜನಾಭ ಬಂದ ಕರಿವರದನು ಬಂದ ಕರುಣಾಕರ ನರಹರಿಯು ತಾ ಬಂದನೊ 1 ಕಂಸ ಮರ್ದನ ಬಂದ ಹಂಸ ದೇಹನು ಬಂದ ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ 2 ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ 3
ರಾಮತಾರಕ ಮಂತ್ರ ಜಪಿಸಿ | ಸರ್ವಕಾಮಗಳ ಪಡೆದವನೆ ನಮಿಸಿ | ಬೇಡ್ವೆಕಾಮದುಷ್ಟಗಳ ಪರಿಹರಿಸಿ | ಹೃದ್‍ಧಾಮೆ ಹರಿ ತೋರೊ ಕರುಣಿಸೀ ಪ ಗಜ ಅಜಿನ ಧರಿಸಿ | ಮತ್ತೆಕರ್ಪರವ ಕೈಯಲ್ಲಿ ಇರಿಸಿ | ನೀನುಅಪವಿತ್ರ ಅಶಿವ ನೆಂದೆನಿಸೀ | ವರಮಸಫಲ ಶಿವ ಅಮಂಗಳವ ಹರಿಸೀ 1 ಪರಮ ಸದ್ಭಾಗವತ ಮೂರ್ತೇ | ಲಕ್ಷ್ಮೀನರಹರಿಯ ಆಣತಿಯ ಪೊತ್ತೇ | ವಿಷಯನಿರತರನು ಹರಿವಿಮುಖ ಶಕ್ತೆ | ಕಾಯೊಹರ ಸದಾಶಿವ ಭಾವ ಮೂರ್ತೇ 2 ತಪದಿಂದ ಹರಿಯೊಲಿಸೆ ನೀನು | ಹತ್ತುಕಲ್ಪ ಲವಣಾಂಭುದಿಯಲಿನ್ನು | ಗೈದೆತಪ ಉಗ್ರದಲಿ ಪೇಳ್ವುದೇನು | ನೀನು`ತಪ` ನೆಂದು ಕರೆಸಿದೆಯೊ ಇನ್ನು 3 ಶುಕಿಯಾಗಿ ಬಂದ ಅಪ್ಸರೆಯ | ಕೂಡ್ಡಅಕಳಂಕ ವ್ಯಾಸಾತ್ಮ ಧೊರೆಯ | ಮಗನುಶುಕನಾದೆ ಶಿವನೆ ಇದು ಖರೆಯ | ನುತಿಪೆಪ್ರಕಟ ಭಾಗವತಕ್ಕೆ ಧೊರೆಯ 4 ಮಾರುತನು ನಿನ್ನೊಳಗೆ ನೆಲಿಸಿ | ಗೋಪ್ಯದೂರೆಂಬ ನಾಮವನೆ ಧರಿಸಿ | ಇರಲುದೂರ್ವಾಸನೆಂಬ ಕರೆಸಿ | ಮೆರೆವಭೂ ಭೃತರ ಮಾನವನೆ ಕೆಡಿಸಿ 5 ಪತಿ ಸಂಗ ರಹಿತೆ | ಎನಿಸೆಭಾರತಿಯ ದೇಹದಲಿ ಜಾತೆ | ಇರಲುಪ್ರಾರಬ್ಧ ಭೋಗಿಸುವ ಮಾತೆ | ಎನಿಸಿವೀರ ಅಶ್ವತ್ಥಾಮ ಕೃಪೆ ಜಾತೆ 6 ಧಾಮ ಈಶಾನ್ಯದಲಿ ಇದ್ದು | ನಿನ್ನವಾಮದಲಿ ವಾಸುದೇವಿದ್ದು | ನೀನುವಾಮದೇವನ ಪೆಸರು ಪೊದ್ದು | ಧರಿಪೆಸ್ವಾಮಿ ಪೂಜಕನೆಂಬ ಮದ್ದು 7 ಕಾಲಾತ್ಮ ನಿನ್ನೊಳಗೆ ನೆಲಸಿ | ಪ್ರಳಯಕಾಲದಲಿ ಜಗವ ಸಂಹರಿಸಿ | ನಿನ್ನಕಾಲಾಖ್ಯ ನೆಂತೆಂದು ಕರೆಸಿ | ಮೆರೆವಲೀಲಾತ್ಮ ನರಹರಿಯು ಎನಿಸಿ 8 ಶಫರ ಹರಿದ್ವೇಷಿಗಳು ಎನಿಪ | ದೈತ್ಯತ್ರಿಪುರಸ್ಧರನು ಸಂಹರಿಪಾ | ಶಿವನೆವಪು ಧರಿಸಿ ಅಘೋರ ನೆನಿಪಾ | ಗೈದಅಪವರ್ಗದನ ಸೇ5ರೂಪ 9 ಹೃದ್ಯ ಹರಿಸೇವೆಂi5Àು ಗೈವಾ | ಮನದಿಬದ್ಧ ದ್ವೇಷಿಗಳೆಂದು ಕರೆವಾ | ದೈತ್ಯಕ್ರುದ್ಧರ ತಪಕೆ ಸದ್ಯ ವರವಾ | ಇತ್ತುಸಧ್ಯೋಜಾತನೆನಿಸಿ ಮೆರೆವ 10 ಹರಿಯಂಗ ಸೌಂದರ್ಯ ನೋಡಿ | ನೋಡಿಪರಮಾನಂದವನೆ ಗೂಡೀ | ಇಂಥಹರಿಪದ ದೊರಕೆ ಚಿಂತೆ ಗೂಡಿ | ಅತ್ತೆಹರುಷದಿ ಊರು ಸುತ ಪಾಡಿ 11 ಊರು ನಾಮಕ ರುದ್ರನಿಂದ | ಜಾತಕಾರಣ ಔರ್ವಭಿಧದಿಂದ | ಕರೆಸಿಉರ್ವರಿತ ರೋದನದಲಿಂದ | ಮೆರೆದೆಮಾರಾರಿ ಔರ್ವಭಿಧದಿಂದ 12 ವಿಷಯದಲಿ ಆಸಕ್ತರಾದ | ಮುಕ್ತಿವಿಷಯಕೆ ಬಹುಯೋಗ್ಯರಾದ | ಜನರವಿಷಯಾನುಕಂಪಿತನು ಆವ | ರುದ್ರಹಸನಾಗಿ ರೋದಿಸಿದಗಾಢ 13 ಕಮಲಾಕ್ಷಿ ದಕ್ಷಸುತೆ ತನ್ನ | ದೇಹವಿಮಲಯೋಗಾಗ್ನಿಯಲಿ ಭಗ್ನ | ಮಾಡಿಹಿಮದಾದ್ರಿ ಯೊಳಗೆ ಉತ್ಪನ್ನ | ವಾಗೆವಿಮಲ ಶಿವಗೊಂಡ ವ್ರತ ಕಠಿಣ 14 ಆದ್ಯಕಾಲದಲಿಂದ ಊಧ್ರ್ವ | ರೇತಬುದ್ಧಿಮಾಡುತ ತಪವು ಶುದ್ಧ | ಗೈದುಸಿದ್ಧನಾಗಿರುತಿರಲು ರುದ್ರ | ಕೇಳಿಊಧ್ರ್ವ ನೆಂಬಭಿಧಾನ ಪೊದ್ದ 15 ಕಾಮಹರ ತಪದಿಂದಲೆದ್ದು | ಬಹಳಪ್ರೇಮದಲಿ ಅದ್ರಿಸುತೆ ಮುದ್ದು | ಮಾಡಿಕಾಮಲಂಪಟನೆಂಬ ಸದ್ದು | ಗಳಿಸಿನಾಮ ಲಂಪಟ ನೆಂದು ಪೊದ್ದು 16 ಹರಪೊತ್ತ ಹನ್ನೆರಡು ನಾಮ | ದಿಂದಹರಿಮುಖ್ಯನಿಹನೆಂಬ ನೇಮ | ತಿಳಿದುಹರನ ಪೂಜಿಸೆ ಈವ ಕಾಮ | ನೆಂದುಗುರು ಗೋವಿಂದ ವಿಠ್ಠಲನ ನೇಮ17
ರಾಮನಾಮ ಸ್ಮರಣೆಯ ಮಾಡದೆ ನೀ ಪಾಮರನಾಗದಿರೊ ಮನುಜ ಪಾಮರನಾಗದಿರೊ ಪ ತಾಮಸಗುಣಬಿಟ್ಟು ಪ್ರೇಮದಿಂದಲಿ ನಮ್ಮ ಸ್ವಾಮಿಯ ನೆರೆ ನಂಬಿರೋ ಅ.ಪ ದೇಹವನಿತ್ಯವೋ ಮೋಹಪಡಬ್ಯಾಡವೋ ಲೇಶ ಸುಖ ಕಾಣೆನು 1 ಹಗರಣವಹ ವ್ಯಕ್ತಿಗಳನು ನಂಬುತಾ ನಗೆಗೀಡಾಗದಿರೊ 2 ಹೊರಗೊಳಗಿದ್ದು ನಮ್ಮ ಗುರುರಾಮವಿಠ್ಠಲ ಕರತಳವಾಗುವುದು3
ರಾಮಾ ನಿನ್ನ್ಹ್ಹೊರತನ್ಯರ ಕಾಣೆ ಪೊರೆ ನೀನೆನ್ನಾಣೇ ಶ್ರೀರಾಮಾ ಪ ಕಾಮಾಂತಕ ತನ್ನ ಭಾಮೆಗೊರೆದ ಶ್ರೀ ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು ದುರುಳೆಯಸದೆದು ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು ಪತಿಸುತಸಖಹಿತ ಜನಪತಿ ಜೀವಿತ ಪಥದಾದರ್ಶವ ಜಗತಿಗೆ ತೋರಿದೆ1 ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು ಅನುಪಮವೆನಿಪದ ನಡುವೊಳೆ ಖಂಡಿಸಿ ಜನಕಸುತೆಯ ಕರಕಮಲವ ಪಿಡಿದೆ 2 ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ ಜನಕೆ ಹಿರಿಯರಿಗೆ ದಶರಥನಿಗೆ ಸುರನರರೆಲ್ಲರು ಪರಮಾನಂದದೊ ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ3 ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ ನಿನ್ನಲಿ ಬಂದು ನಿಂದೆ ಗತಿಯೆಂದು ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು ತಂದೆ ನೀನಿಂದೆನ್ನ ಬಂಧನ ಬಿಡಿಸದೆ ಕೊಂದೆಯಾದರೆ ಕುಂದದು ನಿನಗಪಯಶ 4 ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು ನ್ಹೊಂದಿಸಿ ಪೊರೆ ರಘುರಾಮವಿಠಲ 5
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
ರುದ್ರಕುಮಾರನ ಚರಣಕ್ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸು - ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ಧವಾಗಿ ಕೊಡು ಮತಿಯ 1 ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?) ಕಾಲದಿ ಕಮಲಾಕ್ಷಿಯನು ಆಲಯದೊಳಗಿಟ್ಟಾದರದಿಂದ ಪೂಜಿಸೆ ಬೇಡಿದಭೀಷ್ಟ ನೀಡುವಳು 2 ಇರುತಿರಲೊಂದು ಪಟ್ಟಣದಲ್ಲಿ ರಾಜನು ತನಯರಿಲ್ಲದ ಕಾರಣವು ವಿವಹದುತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳಾತನಾಯುಧವ 3 ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ ತಟ್ಟನೆ ದಾಟಿ ನಡೆದನು 4 ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು ನೀನೀಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು 5 ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ- ನಿದ್ದ ವಾರ್ತೆಗಳ ಹೇಳಿದಳು ಮುತ್ತಿಲು ತುಂಬ್ಹೊನ್ನು ಕೊಡುವೆ 6 ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಮಡದಿಗೆ ಮೂರು ತಿಂಗಳು ಗರ್ಭವಾಗಿದೆ ಕÀಡೆಹಾಯ್ಸಲೆನ್ನ ಕರೆಸೆಂದ್ಲು 7 ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳು ತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ ಬಂತಾಗ ನವಮಾಸಗಳು 8 ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ ಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳ ಗಂಡುಕುಮಾರನ ಎತ್ತಿಕೊಂಡೊಯ್ದಳಾಕ್ಷಣವೆ 9 ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ ಸೊಲ್ಲು ಕೇಳುತಲೆ ತಲ್ಲಣಿಸಿ ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ- ದಲ್ಲಿ ನೇಮವ ನಡೆಸಿದಳು 10 ಜಾತಕ ಬರೆಸಿ ಸಕ್ಕರೆ ಸಗಟದಿಂದ್ಹಂಚಿ ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ ಇಟ್ಟು ಭೋಜನವ ಮಾಡಿಸಿದ 11 ನಾಮಕರಣ ಜಾವಳ ಜುಟ್ಟು ಉಪÀನಯನ ಪ್ರೇಮದಿಂದ್ವಿದ್ಯವ ಕಲಿಸಿ ಸೋಮನಂದದಿ ಹೊರಗ್ಹೊರಟು ತ- ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12 ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ ಕಟ್ಟಿದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟೊದರಿತು ಭಯದಿಂದ 13 ಅಮ್ಮ ನೀ ಬಾರೆ ತಮ್ಮಮ್ಮನರಿಯದವ ನಮ್ಮನು ಬಲ್ಲನೆ ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು ತಮ್ಮಿ ್ಹರಿಯರನು ಕೇಳಿದನು 14 ಮಂದಾಕಿನಿಯ ಸ್ನಾನವ ಮಾಡಿ ಬಂದರೆ ಸಂದೇಹ ಪರಿಹಾರವಾಗುವುದು ಹಾ- ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು 15 ನಡೆದು ಬಂದನು ನಡುಮಾರ್ಗದಿ ಪಟ್ಟಣ ಹಡೆದ ಮನೆಯ ಬಾಗಿಲಲ್ಲಿ ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ 16 ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17 ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ ಅಧಿಕ ಸಂತೋಷವಾಗಿ ಹೊರಟು 18 ಭಾಗೀರಥಿಯ ಸ್ನಾನವಮಾಡಿ ತಾನು ಪ್ರ- ಯಾಗಕೆ ನಡೆತರಲು ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ- ನಾಗ ಕಂಡನು ಚತುರ್ಹಸ್ತ 19 ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ- ಕುಲದಿಂದ ಕೇಳಿದನು ಸಾಕಿದವರು ಹಡೆದವರುಂಟು ನಿನಗೆಂದ್ವಿ- ವೇಕಬುದ್ಧಿ ಅವರು ಹೇಳಿದರು 20 ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತರಂದಿನದ (?) ಮಂದಿರದಿ ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ 21 ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಾಸ್ರೊ ್ಹೀಳಾಗೋದೆನಲು ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿತ್ರ್ಯಾದ ಪಾಪಿ ಎಂದೆನುತ 22 ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು ಪುತ್ರರು ಉಳುದÀರಂತಿಹರು
ರುದ್ರದೇವರು ಇಂದು ಶೇಖರ ಶಿವ ನಂದಿವಾಹನ ಶೂಲಿ ಸ್ಕಂಧಗಣಪರ ತಾತ ದಂದಶೂಕಕಲಾಪ ಪುರಂದರ ಮುಖಸುರ ವೃಂದವಿನುತ ಪಾದಾದಿಂದ ಶೋಭಿತ ದೇವ ಕಂದು ಕಂಧರ ತ್ರಿಪುರ ಸಂದೋಹಹರ ಹರ ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ ಇಂದು ಪೂರ್ತಿಸೋ ಗುರೋ ಗಂಧವಾಹನ ತನಯಾ ಇಂದಿರಪತಿ ಗುರುಜಗನ್ನಾಥವಿಠಲಾ ನಂದಾ ಬಡುವನಿದಕೆ ಸಂದೇಹ ಇನಿತಿಲ್ಲಾ