ಒಟ್ಟು 32858 ಕಡೆಗಳಲ್ಲಿ , 139 ದಾಸರು , 10357 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರರಾಯರೆಂಬ ರತುನ ದೊರೆಕಿತೋ ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ ಮಂಗಳಾರಿಗರು ತುಂಗಾತೀರದಿ ನಿಂದಿಹರೋ ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ1 ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ 2 ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ 3 ಶ್ರೀ ರಾಘವೇಂದ್ರರೂ ನಂತ ಮಹಿಮರೂ 4 ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ 5
--------------
ರಾಧಾಬಾಯಿ
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ರಾಘವೇಂದ್ರರು ಸ್ವಾಮಿ ಕಾಯೋ ಕರುಣೀ ಪ ಫಣಿ ಅ.ಪ. ನಿನ್ನ ಯೋಚಿಪ ಮಾರ್ಗ ನಾನರಿಯೆ ಧೀರಾ ಯನ್ನ ವಿಚಾರಿಸದೆ ಇರುವುದು ಥರವೇ 1 ನಿನ್ನ ಪೋಲುವ ಕರುಣಿಗಳೆ ಇಲ್ಲೆಂಬೋರುನಿಜವಾದಡೆ ಕರುಣಿಸಿ ಕಾಯೋ ಗುರುವೇ 2 ನೊಂದೆನಯ್ಯ ಬೆಂದೆನಯ್ಯ ಬಂಧನದೊಳು ಸಿಲ್ಕಿ ಗೋವಿಂದಾತಂದೆವರದಗೋಪಾಲವಿಠ್ಠಲನ ಕಂದಾ 3
--------------
ಇಂದಿರೇಶರು
ರಾಘವೇಂದ್ರಸ್ವಾಮಿಗಳ ಸ್ತೋತ್ರ ಕಂಡು ಧನ್ಯನಾದೆ ಗುರುಗಳ - ಕಣ್ಣಾರೆ ನಾಕಂಡು ಧನ್ಯನಾದೆ ಈ ಗುರುಗಳ ಪ ತುಂಗಾತಟದಿ ಬಂದು ನಿಂತ ಪಂಗು ಬಧಿರಾದ್ಯಂಗ ಹೀನರಅಂಗಗೈಸಿ ಸಲಹುವಾ - ನರಸಿಂಗನಂಘ್ರಿ ಭಜಕರಿವರ 1 ಗುರುವರ ಸುಗುಣೇಂದ್ರರಿಂದಪರಿಪರಿಯಲಿ ಸೇವೆಗೊಳುತವರಮಂತ್ರಾಲಯ ಪುರದಿ ಮೆರೆವಪರಿಮಳಾಖ್ಯ ಗ್ರಂಥಕರ್ತರ 2 ಸೋ ಅಹಂ ಎನ್ನದೆ ಹರಿಯ ದಾಸೋ ಅಹಂ ಎನ್ನಲು ಒಲಿದು ವಿಜಯಮೋಹನ ವಿಠ್ಠಲನ್ನ ಪರಮಸ್ನೇಹದಿಂದ ತೋರುವವರ 3
--------------
ಮೋಹನದಾಸರು
ರಾಜ ರಾಜರ ಗಂಡ ರಾಜಗೋಪಾಲ ಪ. ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ 1 ಬಂದ ಜನರ ಸಹಿತ ತಂದೆ ಗೋಪಾಲ 2 ವಿಪ್ರರಿಂದಲೆ ಕುಳಿತ ಅಪ್ಪ ಗೋಪಾಲ3 ಬೆಳಕು ತುಂಬಿಸಿ ತಾನು ಕುಳಿತ ಗೋಪಾಲ 4 ಅರ್ಥಿಲೆ ಏರಿ ಕುಳಿತ ಮತ್ತೆ ಗೋಪಾಲ5 ಮೂರ್ತಿ ಗೋಪಾಲ 6 ಬಂದ ಜನಕೆ ಆನಂದವ ಪಡಿಸುತ ಚಂದ್ರನಂತಲೆ ಕುಳಿತ ಬಂದು ರಾಮೇಶ 7
--------------
ಗಲಗಲಿಅವ್ವನವರು
ರಾಜ ಶಿರೋಮಣಿ ದಯಮಾಡೈ ಪ ಕಾಲವಿಭೀತಿಯಿಂ ಬಾಲನು ಗೋಳಿಡೆ ಶೂಲದೆ ಕಾಲನ ಸಂಹರಿಸಿದೆ 1 ಕ್ಷೀರಾಭ್ದಿ ಮಧ್ಯದೊಳ್ ಹಲವು ಪುಟ್ಟಲು ಲೀಲೆಯೊಳೆಲ್ಲವ ನೀಂಟಿದೆ 2 ಕೈಲಾಸವಾಸ ಶೈಲಾಪ್ತ ಬಂಧುವೆ ಬಾಲರಾಜಾಂಚಿತ ಭೂಷಣ 3 ನಿರ್ಮಲರೂಪ ನಿಷ್ಕಲ ಸ್ವರೂಪ ಬ್ರಹ್ಮಮಸ್ತಕ ಕಾಲರೂಪ 4 ಫಾಲಾಕ್ಷದೇವ ಮಾಲಾ ಮನೋಹರ ನೀಲಲೋಹಿತ ಧೇನುಭೂಪತೆ 5
--------------
ಬೇಟೆರಾಯ ದೀಕ್ಷಿತರು
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ
ರಾಜತಾದ್ರಿ ನಿಲಯನ | ರಜನೀಶ ಧರನತೋರೆ ಪಾರ್ವತಿಯೆ ಪ ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ 1 ವಿನುತ ನಗಚಾಪಭವನ ತೋರೆ ಪಾರ್ವತಿಯೆ 2 ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ 3
--------------
ಶಾಮಸುಂದರ ವಿಠಲ
ರಾಜನೆಂಬೋನಾಮವು ನೆಲಿಗೆ | ತಿಹುದು ಜಗದೊಳಗೆ 1 ಸಾಧನದಳ ಚತುರಂಗಗಳು | ಊದುವ ಬೋಧದ ಕಹಳೆಗಳು 2 ಗಜ ಸೆರೆ ವಿಡಿಯುತ ದುರಿತವ ತರಿದಾ 3 ಕೊನರುವ ದೇಹಾಭಿಮಾನಿಗಳ | ವನನಿಜ ಸ್ಥಳವನು ಬಿಡಿಸಿದನು 4 ಮೆರೆವ ಸಿಂಹಾಸನವೇರಿದನು | ಹರುಷದಿ ಕೀರ್ತಿಯ ಪಾಡಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜಮುಖೀ ಬೇಗ ಪ. ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ 1 ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ2 ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು 3 ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ4
--------------
ನಂಜನಗೂಡು ತಿರುಮಲಾಂಬಾ
ರಾಜರ ನೋಡಿದಿರಾ _ ಗುರು _ ರಾಜರ ನೊಡಿದಿರಾ ಪ ರಾಜರ ನೊಡಿ _ ಭಕುತಿಯ ಮಾಡಿ ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ. ತುಂಗ ಮಹಿಮರು _ ನರ - ಸಿಂಗ ಭಕ್ತರು ಭಂಗರಹಿತರು _ ಸುರ _ ಸಂಘ ಮಾನಿತರು 1 ಯೋಗಿ ವರ್ಯರು _ ಬಹು _ ತ್ಯಾಗಶೀಲರು ಭವ _ ರೋಗ ವೈದ್ಯರು 2 ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು ಮಂತ್ರ ಸಿದ್ಧರು _ ಮ _ ಹಂತ ಮಠದವರು 3 ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು ದಾಂತ ಶೇಖರರು _ ಏ _ ಕಾಂತ ಭಕ್ತರು 4 ರಾಘವೇಂದ್ರರು _ ಇವರೆ _ ವ್ಯಾಸರಾಜರು ಭಾಗ್ಯವಂತರು _ ಪ್ರ _ ಹ್ಲಾದರಾಜರು 5 ದೂಡು ಸಂಶಯಾ ನೀ _ ಮಾಡು ಭಕುತಿಯಾ ಬೇಡು ಬಯಕೆಯಾ ಪೋ _ ಗಾಡು ದುಃಖವಾ 6 ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು 7
--------------
ಕೃಷ್ಣವಿಠಲದಾಸರು
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ
ರಾಜವದನೆ ನೀ ಗುರು- ರಾಜರಿರುವ ಸಂಭ್ರಮ ನೋಡೆ ಪ ರಾಜಿಸುವ ಮುಖನ ಪೂಜಿಸುವ ಯತಿವರನೆ ಅ.ಪ ದೂಷಿತ ದುರ್ಜನರ ತಾಸು ಬಾಳದಂತೆ ವಿ- ಶೇಷದಿಂದ ಭಜಿಸುವರ ಪೋಷಿಸುವ ಯತಿವರನೆ 1 ಪಾದ ನಂಬಿದವರಿಗೆ ಮೋದವೀವ ದೇವನೆ ಬೀದಿಬಿಡುವ ನಂಬಿದವರ ವಾದಿರಾಜ ದೊರೆವರನೆ 2 ಅಜಪದಕೆ ಅರ್ಹನೆಂದು ಗಜವರದನ ದಾಸನೆಂದು ಭಜನೆ ಮಾಡುವ ನಿಜವ ಪೇಳುವ ವಿಜಯವಿಠಲನ ಸೇವಕರಿವರೇ 3
--------------
ವಿಜಯದಾಸ
ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ಪ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ಅ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ 1 ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ 2 ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ 3
--------------
ಕನಕದಾಸ
ರಾಜಿಯಿದ್ದೋರೆಲ್ಲ ಕೇಳ್‍ಬಹುದಣ್ಣ ಪೂಜೆ ಮಾಡೋ ಇದ ಹೇಳತೀನಣ್ಣ ಪ ಸಾಜದ ಹಾದಿಲಿ ಬಾಳ್ಯವ್ರಣ್ಣ ಅ.ಪ ಹಾಸಿಗೇಲಿ ತಿಂಡಿ ತಿನಬಾರ್ದಣ್ಣ ಮೋಸದ ಯೋಚನೆ ಯಿರಬಾರ್ದಣ್ಣ ಕಾಸಿಗೆ ಸುಳ್ಳ ಯೋಳ್ಬಾರದಣ್ಣ 1 ನಾಮ ಇಬೂತಿಯ ಅಣೆಗಚ್ರಣ್ಣ ರಾಮಾ ನಿನ್ಪಾದ್ವೇಗತಿಯೆನ್ನಣ್ಣ 2 ಮಣ್ಣಿನ ಭೂಮಿಯ ನಂಬದಿರಣ್ಣ ಸಣ್ಣ ಕೃಷ್ಣನೇ ಗತಿಯೆನ್ನಣ್ಣ 3 ನೋಡುವ ಕಣ್ಗಳ ಮನದಲಿಡಣ್ಣ ನೋಡದರಲಿ ಹೊಳೆ ಹೊಳೆವಾಬಣ್ಣ 4 ಅದರ ಮೇಲೆಳ್ಡು ಕಾಲ್ಗಳ ನೋಡಣ್ಣ ಮದನ ಗೋಪಣ್ಣನು ಕಾಣುವನಣ್ಣ 5 ಮಡಿಯ ಪೀತಾಂಬ್ರದವುಡಗೆಯ ನೋಡಣ್ಣ ಹಿಡಿದೆತ್ತಿದ ಕೈಕೊಳಲನು ನೋಡು 6 ಮುಡಿಯ ಕಿರೀಟದ ಹೊಳಪನು ನೋಡು ನಡುಹಣೆಯ ನಿಡು ತಿಲಕವ ನೋಡು ಕಡೆನೋಟದ ಕಣ್ಮಿಂಚನು ನೋಡು 7 ಅಂಬರದಂತೆ ಸರೀರವ ನೋಡು ನಂಬಿಕೆಯಲಿ ಸರಣಾರ್ತಿಯ ಮಾಡು 8 ಬೋಗಾನಂದವ ಪಡಿತೀಯಣ್ಣ ಕೂಗಿಗೆ ಬರುವನು ಮಾಂಗಿರಿಯಣ್ಣ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್