ಒಟ್ಟು 18204 ಕಡೆಗಳಲ್ಲಿ , 138 ದಾಸರು , 7712 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಿಡಿದ ಕೈಬಿಡಬೇಡವೋ ರಾಮಾ ಪ ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ ನುಡಿ ಕೇಳದೆನಬೇಡ ಅಡಿದೋರದಿರ ಬೇಡ ಕುಡುಕ ಹೋಗೆನಬೇಡ ನುಡಿಸದಿರ ಬೇಡ ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ 1 ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ ಬಗೆಯರಿತು ನಡೆಸಯ್ಯ ಸುಗತಿದೋರಯ್ಯ ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹಿಡಿಯಬೇಕು ಶ್ರೀ ಕೃಷ್ಣನ ತುಡುಗತನವ ಧ್ರುವ ಕಡಿಯಗುಡದೆ ವೈವನು ಕೆನಿಮೊಸರ ತುಡುಗತನವನು ಮಾಡುವ ಬಲು ಹೆಸರ ಅಡಗಿಹ ಠಾವನೆ ತಾನುಸರ ಮಾಡಿ ತಾ ಕುಸರ 1 ಬಿಡಬಾರದು ಕಣ್ಣಿಲೆ ಕಟ್ಟಿ ಬಿಡಿಸಿಕೊಂಬುವ ಇವ ಬಲು ಜಗಜೆಟ್ಟಿ ಅಡಗಿಸಿಕೊಬೇಕು ಘಟ್ಟಿವಿಡಿದು ಮನಮುಟ್ಟಿ 2 ಸಾಧಿಸಿ ಸದ್ಗುರುದಯ ಕರುಣದಲಿ ಭೇದಿಸಿ ಹಿಡಿಯೊ ಮಹಿಪತಿ ಸುಮನದಲಿ ಒದಗಿಟ್ಟುಕೊ ನೀ ಹೃದಯದಲಿ ಇದೇ ನೋಡನುದಿನಲಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಡಿಹಿಡಿಕೈಯ್ಯ ಬಿಡಲೇತಕೆ ಕೇಳೊ ಜೀಯಾ ಪ ಒಡೆಯನಲ್ಲವೆ ನಿನ್ನ ಅಡಿಗಳೆರಡಕ್ಕೆನ್ನ ಮುಡಿಯನಿಡುವೆನೆಲ್ಲೊ ಸುಡಲಿ ಜನ್ಮವು ಬಿಡದೆ 1 ಶ್ರೀಧರ ನಾರಾಯಣನೆ ಬೋಧಿಸಬೇಕೋ ಬಿಡದೆ 2 ವಾಸವಾನುತ ಹರಿದಾಸ ತುಲಸಿರಾಮ ದೇಶಿಕನಾದ ಪರಮಾತ್ಮನೆನಾ ಕೈ ಬಿಡದೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಹಿಂಡು ಉದ್ದಂಡ ನರಸಿಂಹನ ಕಂಡೆನಯ್ಯ ಪ ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ1 ಅರಿ ಶೋಣಿತ ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ2 ಸುರರು ಹೂಮಳೆಗರೆಯೆತರತರದ ವಾದ್ಯ ಸಂಭ್ರಮಗಳಿಂದಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವಕರುಣಾಳು ಕಾಗಿನೆಲೆಯಾದಿಕೇಶವನ3
--------------
ಕನಕದಾಸ
ಹಿಂಡು ಕರ್ಮಗಳ್ಯಾಕೆ | ಬಂಡಿ ದೈವಗಳ್ಯಾಕೆಪಂಡರಿ ದೊರೆಯು ಇರಲು ಪ ಪುಂಡರೀಕಾಕ್ಷ ಪದಬಂಡುಣಿಯವೋಲ್ ತುತಿಸಲಿಲ್ಲಾ | ಬಲ್ಲಾ 1 ಕಂಬು ಸಾರಥಿ ಕೃಷ್ಣಚರಿತೆಗಳ ಪೊಗಳುತಿರಲೋ | ಕೇಳೋ 2 ಇಂದು ಭಾಗದಿ ಭಕ್ತಸಂದಣೀಯಲಿ ಸೇರುತಾ |ತಂದೆ ತಾಯಿಯ ಸೇವೆ | ಮುಂದು ಮಾಡಿದಗೊಲಿದುನಿಂದು ಇಟ್ಟಿಗೆ ಮೆಟ್ಟಿಹಾ |ನಂದ ನಂದನ ಗುರೂ ಗೋ | ವಿಂದ ವಿಠಲನವಂದಿಸೆಲೊ ಮುದದಿ ಸತತಾ | ವಿತತಾ 3
--------------
ಗುರುಗೋವಿಂದವಿಠಲರು
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಂದಿಲ್ಲ ಸ್ವಾಮಿ ಮುಂದಿಲ್ಲ ತಂದೆ ನೀನಲ್ಲದೆ ಕಾಯುವರೆನಗಾರು ಪ ಚರಣದಾಸರಿಗೆ ಆವರಿಸಿದ ಸಂಕಟ ಪರಿಹರಿಸಿ ಕಾಯಲು ಹರಿಯೆ ನೀನಲ್ಲದೆ 1 ಭಕ್ತವತ್ಸಲ ನೀನು ಮುಕ್ತಿ ದಾಯಕನಯ್ಯ ಭಕ್ತರ ವಿಪತ್ತು ಕಳೆಯುವರಾರು ನಿನ್ನ್ಹೊರತು 2 ಶ್ರೀಶ ಶ್ರೀರಾಮ ಜಗದೀಶ ಈ ದಾಸನ ಆಸೆಯ ಪೂರೈಸಿ ಪೋಷಿಸು ಬೇಗನೆ 3
--------------
ರಾಮದಾಸರು
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು
ಹಿರಿಯ ಮಗಳಿಂದ ಶ್ರೀಕರನಪದ ಸೇರೊ ಬರಿದೆ ಯೋಚನೆಯಿಂದ ಬೇಸರಗೊಳದಿರು ಪ. ಕಾಮಕ್ರೋಧಗಳನ್ನು ಭೌಮಿಯಲಿ ದೂಡುವಳು ವ್ಯಾಮೋಹ ಮದಲೋಭ ಮತ್ಸರಗಳಿಂ ಸೀಮೆಯಿಂಧೊರಗ್ಹಾಕಿ ಡಂಭಹಿಂಸಾನೃತದ ನಾಮವಡಗಿಸಿ ಪೂರ್ಣ ಕಾಮನನು ತೊರೆವ 1 ಭಾವ ಶುದ್ಧಿ ವಿವೇಕ ಬಾಲಕರನೆತ್ತುವಳು ಪಾವನತ್ವವ ಮಾಡಿ ತೂಗುತಿಹಳು ದಾವ ಕುಲಕು ದಶೇಂದ್ರಿಯ ದುಷ್ಟ ತುರಗಗಳ ಭಾವ ಕೆಡದಂದದಲಿ ಕಾವ ಕಮಲಾನನದ 2 ತನುವೆಂಬ ಮನೆಯ ಶುದ್ಧಿಯ ಗೈದು ಸುಜ್ಞಾನ ವೆನಿಸುತಿಹ ದೀವಿಗೆಯ ತೋರುತಿಹಳು ಮೂರ್ತಿ ಮನದೊಳಗೆ ನೆಲೆತೋರ್ಪ ವಿನಯ ವೆಂಕಟಪತಿಯ ನೆನವೆನಿಪ ಹರಿಭಕ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹೀಂಗರಿದವ ಜ್ಞಾನಿ ಪ ಅವ್ಯಕ್ತದಲುದಿಸುದು ಪ್ರತಿಮೆಗಳು | ವ್ಯಕ್ತದಲಡಗುವದೀ ಸಕಲು | ಈ ವ್ಯವಹಾರದ ಭ್ರಮೆ ಮಾತುಗಳು 1 ಥೆರೆ ನೆರೆ ಬೊಬ್ಬುಳಿ ತಾ ದಿಟವಲ್ಲಾ | ತೋರಿಕರಿಗಿದರೇನು ಯಲ್ಲಾ | ನೀರಿಗೆ ಜನ್ಮ ಮರಣವಿಲ್ಲಾ 2 ಕಿರಣದಿ ದೋರಿತು ನದಿಗಡ ಪೂರಾ | ಹೊರತಾಗಿರದು ಕಿರಣಕ ದೂರಾ | ಕಿರಣೇ ಆಯಿತು ತಾ ಮೃಗನೀರಾ 3 ಕದಳಿಯ ಗಿಡರೂಪದ ಪದರೆಲ್ಲಾ | ಬಿದರಿಸಿ ನೋಡಲು ಏನುಳಿಲಿಲ್ಲಾ | ಪರಿ ಪ್ರಪಂಚದ ಸೊಲ್ಲಾ 4 ಗುರುವರ ಮಹಿಪತಿಸ್ವಾಮಿಯ ಕಂಡು | ಅರ್ಹವಿಕೆ ಮಾತ್ರವನೇ ಪಡಕೊಂಡು | ಚರಿಸುವಾ ಅನುಭವ ನೆಲೆಗೊಂಡು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಂಗಾಯಿತ್ಹೀಂಗಾಯಿತೆ ಎನ್ನಯ ಬಾಳು ಪ ಗಂಗಾಜನಕ ಪಾಂಡುರಂಗ ಮೂರುತಿಯನು ಹಿಂಗದೆ ಭಜಿಸದೆ ಅಂಗಜನ್ವಶನಾದೆ 1 ಕಂತು ಜನಕ ಲಕ್ಷ್ಮೀಕಾಂತ ಮೂರುತಿಯನ್ನು ಚಿಂತಿಸದೆ ವಿಷಯ ಚಿಂತನೆಯಲ್ಲಿರುವೆ 2 ಹಿಂಡು ಜನರ ಮುಂದೆ ಸಂಭಾವಿತನಂದದಿ ಶುಂಭ ನಾ ಮೆರೆದೆನೊ 3 ಅಂಗನೆಯರ ಅಂಗಸಂಗ ಬಯಸಿ ಅಂತ ರಂಗದಿ ಕುಳಿತು ಬಹು ಸಂಗತಿ ಕಲ್ಪಿಸಿದೆ 4 ನಾನು ಪೇಳುವುದೇ ಸನ್ಮಾನ್ಯವೆಂದುಸುರಿ ನಾ ಮಾನಿನಿಯರ ಕೂಡಿ ಶ್ವಾನನಂದದಿ ಬಾಳ್ವೆ 5 ಬಿಡಿಸೋ ಬಿಡಿಸೋ ಹರಿ ಕೇಡು ಬುದ್ಧಿಗಳನ್ನು ಈಡು ನಿನಗಿಲ್ಲೆಂಬೊ ದೃಢಮನಸನೆ ಕೊಡೊ 6 ಘನತೆ ನಿನಗಲ್ಲವೊ ದೀನರ ಬಳಲಿಪುದು ಮಾನದಿಂದಲಿ ಕಾಯೊ ಶ್ರೀ ನರಹರಿಯೇ7
--------------
ಪ್ರದ್ಯುಮ್ನತೀರ್ಥರು
ಹೀಗಿದ್ದವನೇ ತಿಳಿದವನು | ನಿಜ | ಯೋಗದ ಮಾರ್ಗಕ ಬೇಗ ಹೊಂದುವನು ಪ ನೆಂಟರಿಷ್ಟರೊಳು ದಾಕ್ಷಿಣ್ಯಾ | ತನ್ನ | ಬಂಟ ಜನರ ಮ್ಯಾಲ ಘನ ಕಾರುಣ್ಯಾ | ಶುಂಠ ಶಠರೊಳು ಕಾಠಿಣ್ಯಾ | ತನ | ಗುಂಟಾದ ಸಾಧುಗಳೊಳು ಪ್ರೀತಿ ಬಣ್ಣಾ 1 ಅರಸುಗಳಲಿ ನಮ್ರ ಸ್ಥಿತಿ | ಸರ್ವ | ವರಿತ ವಿದ್ವತ್ತರೋಳರ್ಜಿವ ವೃತ್ತಿ | ಅರಿಗಳೊಳಗೆ ಶೌರ್ಯ ಖ್ಯಾತಿ | ತನ್ನ | ಗುರುಗಳೊಳಗ ಭೆಜ್ಜರಂಜಿಕೆ ನೀತಿ 2 ಹೆಂಗಳೆಯರೊಳು ಧೂರ್ತತನಾ | ತಾನು | ಹಿಂಗದೆ ಮಾಡುವ ಶ್ರವಣ ಮನನಾ | ತುಂಗ ಮಹಿಪತಿ ಸುತ ಪ್ರಿಯನಾ | ಮಂಗ | ಳಂಗುಟ ನೆನೆವನು ಬಿಡದನು ದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಗೆ ನಿರ್ದಯ ಮಾಡುವರೆ ಶ್ರೀಮನೃಹರೇ ಪ ಹೀಗೆ ನಿರ್ದಯ ಮಾಡುವರೆ ಕರುಣಾಂಬುಧೆ ಪಾಲನ ಅ.ಪ ನಿರ್ಜರ ಪೋಷಿತ ಘೋರದೈತ್ಯೇಯ ಸಂಹಾರ ಕೌಸ್ತುಭರತ್ನಹಾರ ಭೂಷಿತ ಯದುವೀರ ಮಾರಮಣನೇ 1 ಶಶಿವದನ ನೀರದ ಸಂಕಾಶ ಮಧು ಮುರಾಂತಕ ಕುಂದರದನ ಸುಂದರಗಾತ್ರ ಸದಮಲ ತೇಜ ಕಂಜದಲ ಲೋಚನ ಹರೇ 2 ಗರುಡವಾಹನ ಶ್ರೀಲೋಲ ಕರಿರಾಜವರದ ಸುಸ್ಥಿರ ಕೀರ್ತಿಸಾಂದ್ರಮಂ ದರಧರ ವರ ಹೆನ್ನೆಪುರ ಲಕ್ಷ್ಮೀನರಸಿಂಹ 3
--------------
ಹೆನ್ನೆರಂಗದಾಸರು
ಹುಚ್ಚಾದೇನಣ್ಣಾ | ಮುಚ್ಚುಗೊಂಡು ನಾನು ಪ ಮರುಳು ಬೀಜಾಕ್ಷರನು1 ಕುಣಿದು ಕೂಗುವೆ ಹರಿನಾಮವನು 2 ಹಿಂದಾದಾ ನೆನೆಯದೆ ಮುಂದ ಹಂಬಲಿಸದೇ | ಬಂದದನುಂಡು ಕುಳ್ಳಿರುವೆನು 3 ಗಂಡು | ಜರಿದು ಬಲ್ಲವಿಕೆ ಹಮ್ಮವನು 4 ಗುರು ಮಹಿಪತಿ ಬೋಧಾ | ಹರಿಸೀ ಸಂಶಯ ಬಾಧಾ | ಮರೆಸಿತು ಅನ್ಯ ದಾರಿಯನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ 1 ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ 2 ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ3
--------------
ಪ್ರದ್ಯುಮ್ನತೀರ್ಥರು