ಒಟ್ಟು 1726 ಕಡೆಗಳಲ್ಲಿ , 94 ದಾಸರು , 1321 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಿಹೆ ನಂತರಂಗದಿ ನಡಿರಕ್ಷಿಸೊ ನಡಿ ರಕ್ಷಿಸೊ ಪ ಕಚ್ಛಪ ಚಿನ್ನಲಿ ಉಚ್ಛಸೂಕರನಿಂದಾಶ್ರಿತವಾಗಿಹೆ 1 ಶಿರದೊಳು ನರಹರಿ ಧರಿಸಿ ವಾಮನ ಮುಖದಿ ಕರದಿ ಪರಶುರಾಮನ್ನಿರಿಸಿಹೇನೋ ಸ್ವಾಮಿ 2 ಬುದ್ಧ ಕಲ್ಕಿ ಸದಾ ನರಸಿಂಹವಿಠ್ಠಲ ಧ್ಯಾನದೋಳಿಹೆ3
--------------
ನರಸಿಂಹವಿಠಲರು
ಬಂದು ಪೊರೆಯೆಲೊ ಇಂದಿರೇಶಾ ಎನ್ನವಂದಿಸುವೆನೂ ಸಿಂಧುಶಯನ ಬೇಗ ಪ ಶಿಷ್ಟರ ಸಂಗತಿ ಕೊಟ್ಟು ಕಾಯೊ ಮತಿಭ್ರಷ್ಟನಾದೆನತಿ ಧಿಟ್ಟ ರಘುಪತಿ 1 ಮುಕ್ತಿದಾಯಕನಾ ಭಕ್ತಿಯೊಳ್ ಭಜಿಪರೆಶಕ್ತಿ ಸಾಲದು ಶ್ರೀ ಭಕ್ತವತ್ಸಲನೆ 2 ವಂದಿತ ಭಕ್ತರ ಚಂದದಿಂ ಪಾಲಿಪಸುಂದರ ಮೂರುತಿ ಸಂದೇಹ ಮಾಡದೆ 3 ಹಿಂಡು ಬಾಲರೊಡಗೊಂಡು ಗೋಕುಲದಿಪುಂಡು ಮಾಡಿದ ಪ್ರಚಂಡ ಕೃಷ್ಣ ಬೇಗ 4 ಅಂಗನೆಯರ ವ್ರತ ಭಂಗಗೈಸಿ ತನ್ನಸಂಗವಿತ್ತು ಕಾಯ್ದ ರಂಗನಾಥ ಸ್ವಾಮಿ 5
--------------
ಇಂದಿರೇಶರು
ಬಂದು ಬಾರದಾಯಿತು ನೋಡಿ | ಇಂದು ನರದೇಹ ಸಂಗವ ಮಾಡಿ ಪ ಮುತ್ತಿನಂಥಾ ಜನುಮದಿ ಬಂದು | ಚಿತ್ತ ಬೆರಿಯನು ವಿಷಯದಲಿಂದು 1 ಸಾಧು ಸಂತರ ಮೊರೆ ಹೋಗಲಿಲ್ಲಾ | ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ 2 ಆಹಾರ ನಿದ್ರೆ ಭಯ ರತಿಸಂದಾ | ಅಹರ್ನಿಶಿಯಲಿದೇ ಮನದಂಗಾ 3 ನಾನಾ ಶಾಸ್ತ್ರದ ಮಾರ್ಗಕ ಹೋದೀ | ಗಾಣದೆತ್ತಿನಂದದಿ ಕುರುಡಾದಿ 4 ತಂದೆ ಮಹಿಪತಿ ಸ್ವಾಮಿಯ ನೆನೆದು | ಬಂದದ್ದು ಸಾರ್ಥಕ ಮಾಡದೆ ಬೆರೆದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ ಭ್ರಮರ ಕೀಟನ್ಯಾಯದಿ ಬೇಗದಿ ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ 1 ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ ನೀನೊಲಿಯುತೆ ನಲಿದು 2 ಗಾತ್ರ ಮೂರ್ತಿ ಶ್ರೀಕರ ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ 3 ಸಂಚಿತವೆಂತೋ ಸ್ವಾಮಿ ಹಂಚಿ ನಿನ್ನ ಸೇವೆಯ ಗೈಸುತ 4 ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ ಅಣುಗನು ನಾನಜ್ಞಾನಿ ಕನಿಕರದೆನ್ನ ಕಾಯ್ದರೆ ಕೀರ್ತಿ 5 ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು6
--------------
ಶಾಮಶರ್ಮರು
ಬಂದೆ ಬಂದೆ ಸ್ವಾಮಿಯೆ ಬಂದೆ ಬಂದೆ ಪ. ಬಂದೆ ಬಂದೆ ಗೋವಿಂದ ಗೋವಳ ಬಾಂಧವ ಭಕ್ತವತ್ಸಲಇಂದಿರೇಶ ಶ್ರೀ ವೆಂಕಟ ನಿನ್ನ ಸಂದರುಶದಕೆ ಸಾಗಿ ನಾನಿಲ್ಲಿ ಅ.ಪ. ನಡೆದು ನಡೆಸುತ ನುಡಿದು ನುಡಿಸುತಅಡಿಗಡಿಗೆ ಕಾಪಾಡುತಒಡನೆ ಆಡುತ ಬಿಡದೆ ಕ್ಷಣವನುಸಡಗರದಿ ಕರೆತರಲು ನಾನಿಲ್ಲಿ 1 ಆಪ್ತ ಅನಿಮಿತ್ತ ವ್ಯಾಪ್ತ ಸರ್ವತ್ರಗುಪ್ತ ಗುಣಗಣಪೂರ್ಣನೆಪ್ರಾಪ್ತ ನೀನೆನಗಾಗಬೇಕೆಂದುವ್ಯಾಪ್ತಿ ನಿನ್ನದು ಹುಡುಕುತಲಿ ನಾ2 ಒಂದು ರೂಪದಿ ನಿಂದು ಎನ್ನಲ್ಲಿಚೆಂದದಿಂ ಕರೆತಂದೆ ಇಲ್ಲಿಒಂದರಿಯೆ ನಿನ್ನ ವಂದಿಸುವ ಬಗೆಬಂದೊದಗೊ ನೀನೆನ್ನ ವದನಕೆ 3 ಬಂದೆ ಬಂದೆ ನೀ ಬಂದಂತೆ ಕರ-ತಂದುದಕೆ ಫಲ ನೀನೆ ಬಲ್ಲೆಸಂದರುಶನ ನಿನಗೆ ನೀ ಮಾಳ್ಪಂದವನು ನೋಳ್ಪಾತುರದಿ ನಾ 4 ಏನು ಕೊಡಲಿಲ್ಲ ಏನು ಬೇಡಲಿಲ್ಲಏನು ಪಡೆಯಲೊ ಕರುಣಿಯೆನೀನು ಕೊಟ್ಟ ಸ್ವಾತಂತ್ರ್ಯದ ಫಲನಿನಗೆ ಅರ್ಪಿಸಬೇಕೆನುತ ಇಲ್ಲಿ 5 ರಕ್ಷಶಿಕ್ಷಕ ಮೋಕ್ಷದಾಯಕಸೂಕ್ಷ್ಮ ಘನ ಮಹಾವ್ಯಾಪಕಕುಕ್ಷಿಯೊಳು ಜಗದ್ಭರಿತ ಪೂರಿತಅಕ್ಷಯಫಲದಾಯಕ 6 ನಮೋ ನಮೋ ನಾಗಾರಿವಾಹನನಮೋ ನಮೋ ಸುರಸುಪ್ರಸನ್ನನೆನಮೋ ನಮೋ ಗೋಪಾಲವಿಠಲನಮಿಪ ಭಕ್ತರ ಸಲಹುವನೆಂದು 7
--------------
ಗೋಪಾಲದಾಸರು
ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ ಮಂದರದರ ನಿನ್ನ ಮಂದಿರಕ್ಕೆ ಪ ತಂದೆಯ ಮಮ ಹೃನ್ಮಂದಿರಕಾಗಲೇ ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ ಆಗಮನುತ ನಿನ್ನಾಗಮನದಿ ಇನ್ನು ನೀಗಿತು ಚಿಂತೆಯು ನೀರಜನಯನ ಯಾಗ ಸಾಫಲ್ಯಕೆ ಸೂಚನೆಯಿದು ಮಹಾ ಭಾಗವತ ಪ್ರಿಯ 1 ಮುಂದಿನ ಕಾರ್ಯವ ನೀನೆ ವಹಿಪುದು ಎಂದೆಂದಿಗೂ ನೀನೆ ಗತಿಯು ನಂದನಂದನ ಗೋವಿಂದ ಮುಕುಂದನೆ ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು 2 ನಾಗಶಯನ ನಳಿನಾಯತ ಲೋಚನ ಯೋಗಿನಿಲಯ ಕಮಲಾಲಯವಾಸ ಯಾಗರಕ್ಷಕನೆ ಯಾಗ ಫಲಪ್ರದ ಬಾಗುವೆ ಚರಣಕೆ ಕರಿಗಿರೀಶನೆ 3
--------------
ವರಾವಾಣಿರಾಮರಾಯದಾಸರು
ಬನ್ನ ಪರಾಕು ಭಾಗ್ಯದ ನಿಧಿಯೆ ಪ. ನಿನ್ನ ನಂಬಿದೆ ನೀರಜಾಕ್ಷ ಪರಾಕು ನಿನ್ನ ರನ್ನೆಯ ಒಲುಮೆ ಬೇಕು ಪರಾಕು ಅನ್ಯರ ಸಂಗವನೊಲ್ಲೆ ಪರಾಕು ಪರಾಕು 1 ಶೇಷಶಯನ ಶ್ರೀನಿವಾಸ ಪರಾಕು ಸಾಸಿರನಾಮದ ಒಡೆಯ ಪರಾಕು ದೋಷ ದುರಿತಹರ ಸ್ವಾಮಿ ಪರಾಕು ವಾಸುದೇವ ಪರಾಕು 2 ರತಿಪತಿಪಿತ ಮಾಧವನೆ ಪರಾಕು ಅತಿರೂಪ ಎನ್ನಯ್ಯನೆ ಪರಾಕು ಹಿತ ವಿರಹಿತರ ಕಾಯೊ ಪರಾಕು ಪರಾಕು 3
--------------
ಹೆಳವನಕಟ್ಟೆ ಗಿರಿಯಮ್ಮ
ಬನ್ನ ಬಡಿಸುವುದು:ಖನೀಗುವಂತೆ ಸಿರಿ ಮನ್ನಣೆಯ ಪಡಿಯ ಕಂಡ್ಯಾಮನವೆ ಪ ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ ದುನ್ನತೆಯ ಬೆಳಗು ಕಂಡು ಸನ್ನುತುದಯರಾಗಸ್ತವನ್ನು ಪಡುತಜ್ಞಾನ ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು ಇನ್ನು ನಾಚಿಕೆ ಬಾರದೇ 1 ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ ಪರಿ ಪರಿಯ ಬಯಸೀ ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ ತಂದಾಯುಷವ ಹೊತ್ತು ಇರದಯೇರಿತು ಬೆರೆತು ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ ಇಂದಿರೇಶನ ವಲುಮೆಯಾ 2 ಮರಹು ಮುಸುಕವ ತೆಗೆದು ಅರಹುನಯನವ ತೆರೆದು ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು ತರಣೋಪಾಯವ ಕೂಡು ಹರಿಯ ಸೇವೆಯ ಮಾಡು ನೆರೆ ಸಾಧು ಸಂಗ ಬೇಡು ಸುರಸ ಬೋಧವ ಕೇಳು ಸರಕುಮಾತನೆ ಕೀಳು ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ ಶರಣ ಜನರಂತರ್ಯಾಮೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರಿದೆ ಚಿಂತಿಸಬೇಡ ಮನವೆ ಭಯಗೊಂಡು ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ ಬಲ್ಲನೊ ಅರಿಯನೋ ಇದನೆಲ್ಲವೆನುತ ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು 1 ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ ಮರೆವಿನೊಳಜಾಮಿಳನು ಕರೆಯಲಾಗಿ ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ ಉರಗ ಗಿರಿವಾಸ 2 ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ ಉಬ್ಬರದ ನೋವಿನೊಳು ಒಬ್ಬನೇ ಬರುವಾಗ ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ 3 ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು ಕಡಸಾರ ಬಂದವಳು ಕಾಲು ಸುತ್ತಿ ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು ಬಿಡಿಸಿ ಸಲಹಿದರಾರು ಜಡನಾದ ಮನವೆ 4 ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು ಕರೆದು ಈವನು ನಮಗೆ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಬಲವಂತರೋಳಗೆ ಬಲವಂತ ಹನುಮಾ | ನಳಿನಸಂಭವ ಕರ್ತನಾದ ಮಹಿಮಾ ಪ ಗಾವುದೈದತ್ತು ಸಾವಿರದಲಿಹ ಪರ್ವತವ | ಝಾವ ಮೂರಕೆ ತಂದ ನೋಡಿನೇಮಾ1 ಪೋಗಲಾಗಮ್ಯವಾಗಿದ್ದ ಸ್ಥಳವನೇ ಪೊಕ್ಕು | ಸೌಗಂಧಿಕಾ ಪುಷ್ಪ ತಂದ ಭೀಮಾ2 ವೇದಾಂತ ಸಾಗರದಿ ಖಳನಬಳಿಪ ಹಲವು | ದು- ರ್ವಾದಿ ಜಲಚರರ ಬಾಯಿಬಿಗಿದ ಮಹಿಮಾ 3 ಗುರು ಮಹೀಪತಿ ಸ್ವಾಮಿ ರಾಮಚಂದ್ರ ಪ್ರೀಯ | ದುರಿತೌಘದ್ಯುಮಣಿ ಎನಿಪ ನಾಮಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಲು ಚಂದ ಮಹದಾನಂದ ಶ್ರೀಹರಿ ಭಜನೆ ಪ ಬಲು ಚಂದ ಬಲು ಚಂದ ಮಹದಾನಂದ ಜಲಜನಾಭನ ನಾಮ ನಲಿನಲಿದ್ಹೊಗಳ್ವುದು ಅ.ಪ ಬಲಿಯ ಕಾಯ್ದನ ನಾಮ ಬಲು ಚಂದ ಲಲನೆಗೊಲಿದನ ಧ್ಯಾನ ಆನಂದ ಕಲುಷಹರಣ ಕರಿಪಾಲನೆಂದೊದರಲು ಗಳಿಲನೆ ಪರಿಹಾರ ಭವಬಂಧ 1 ಮಾವಮರ್ದನನಾಮ ಬಲು ಚಂದ ಗೋವಳರೊಡೆಯನ ಧ್ಯಾನ ಆನಂದ ಗೋವುಪಾಲನೆಂದು ಭಾವಿಸಿ ಕೂಗಲು ಸಾವು ಹುಟ್ಟು ಇಲ್ಲ ಎಂದೆಂದು 2 ಕಾಮಪಿತನ ನಾಮ ಬಲು ಚಂದ ಕಾಮಿತಾರ್ಥನ ಧ್ಯಾನ ಆನಂದ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪಾದ ನೇಮದಿ ನುಡಿಯೆ ಮುಕ್ತಿಪದ ಆನಂದ 3
--------------
ರಾಮದಾಸರು
ಬಲು ದೊಡ್ಡಸ್ವಾಮಿ ಮೂಲೋಕದೊಡಿಯ ನಮ್ಮ ಧ್ರುವ ಅನಂತಕೋಟಿ ಬ್ರಹ್ಮಾಂಡ ಅನುದಿನನಾಳುತ ಪ್ರಚಂಡ ತಾನೆ ಆಗ್ಯಾನೆ ಅಖಂಡ ಘನಗುರು ಮಾರ್ತಾಂಡ 1 ವಿಭೀಷಣಗೆ ಸ್ಥಿರಕೊಟ್ಟ ದುಷ್ಟರ ಜನರ ಕುಟ್ಟಿ ನಿಷ್ಠುರ ನಿಜಶ್ರೇಷ್ಠ 2 ಶಿಷ್ಟರಜನರಿಗಭಯವ ನಿಜನೋಡಿ ಮುಟ್ಟಿ ಮುದ್ರಿಸಿ ದಯಮಾಡಿ ಪೃಷ್ಠದಲಿ ನೋಡಿ 3 ಗ್ರಾಸವು ತಂದಿಪ್ಪ ಚಿತ್ಪ್ರಕಾಶದ ಸ್ವರೂಪ ಭಕ್ತರ ಪಾಲಿಪ 4 ನಾಮದೊಲವಿಲೆ ತನುನಿಜಭಾಗ್ಯ ಸ್ವಾಮಿಸೇವೆಗೆ ಮಾಡಿದ ಯೋಗ್ಯ ಪ್ರೇಮದಂತಾಭೋಗ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಧ್ರುವ ದೊರೆಗಳಾದವರಿಗೆಲ್ಲ ಈತನೆ ದೊರೆಯು ಚರಣಸೇವೆಯಲ್ಲಿಹಳು ಅಖಂಡ ಸಿರಿಯು ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು ಸರಿಸಿಜೋದ್ಭವನುತಗಿಲ್ಲ ಸರಿಯು 1 ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು ಅನಂತಸಿದ್ಧಿ ವಾಲ್ಗೈಸುತಿಹವು ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು ಅನಂತಶ್ರುತಿ ಸ್ಮøತಿ ಸಾರುತಿಹ್ಯವು 2 ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು ಜನವನವಿಜನದಿ ರಕ್ಷಿಸುತಿಹನು ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ ತಾನೆ ತಾನಾಗೆನಗೆ ಸಲಹುತಿಹ್ಯನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು