ಒಟ್ಟು 32858 ಕಡೆಗಳಲ್ಲಿ , 139 ದಾಸರು , 10357 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ತಿ ಧೃತ ಹೇಮವರ್ಣ ಸರ್ವಾಂಗ ಶೋಭಿತೆ ಕಾಮಿತಾರ್ಥ ಉದಾರಿಣಿ ಕುಂಡಲ ಪಾಣಿ ಪಾತ್ರ ಸುಧಾರಿಣಿ ಸೂರ್ಯ ಸುರಮುನಿಸ್ತೋಮ ಹೃದಯ ಸಂಚಾರಿಣಿ ಕಾಲ ಕಠಾರಿ ಪರಶಿವೆ 1 ಅಂಬುಜಾನನೆ ಸಕಲ ಕುಟುಂಬ ರಕ್ಷಕ ಮೋಹಿನಿ ಶಂಭುದಾನವ ಶಿಕ್ಷಿತೆ ಶಿವ ಪ್ರತಿಬಿಂಬೆ ಸಿಂಹ ಸುವಾಹಿನಿ ಕಂಬುಕಂಧರ ರತ್ನ ಭೂಷಿತೆ ತುಂಬರ ಪ್ರಿಯಗಾಯಿನಿ ಕುಮುದ ಲೋಚನೆÀ 2 ವರದ ಅಭಯ ಕರಾಂಬುಜೇಷಣೆ ವೀಣಾ ಪುಸ್ತಕ ಶೋಭಿತೇ ಪರಮ ಪಾವನ ಚರಿತೆ ಪರಮೇಶ್ವರಿ ಪ್ರತಾಪ ವಿರಾಜಿತೆ ಭರಿತ ಬಂಧ ಕಟಾದಿವಾಸಿನಿ ಭಕ್ತ ಸಜ್ಜನ ಪೂಜಿತೆ ಗುರು ವಿಮಲಾನಂದ ದೇವಿ ಶ್ರೀ ಮಹಾಲಕ್ಷ್ಮೀ ಸಂತತ 3
--------------
ಭಟಕಳ ಅಪ್ಪಯ್ಯ
ಮೂರ್ತಿ ನೀ ಬಿಸಜಾಲಯೆ ಸಹಿತ ಪ ಎಸೆವ ಪೀಠಕೆ ನಸುನಗುತೀಗಲು ಕುಸುಮಾಸ್ತ್ರನ ತಾತ ಅ.ಪ ಬ್ರಹಾದಿ ಸುರರ್ ಪ್ರಾರ್ಥನೆ ಗೈವರ್ ಸಾರಥಿ ಮನವಲಿದು ತ್ವರಿತದಿ ದಯಮಾಡಿ 1 ಓಲೆ ಬರೆದು ತಾ ಒಲಿಸಿಕೊಂಡ ಳಾಲೋಲ ನಯನೆ ನಿನ್ನಾ ಫಾಲಾಕ್ಷನ ಸಖ ಪುರಷೋತ್ತಮ ಜಗ ತ್ಪಾಲನ ಸಂಪನ್ನ 2 ಪಾನುಜ ಸರ್ವಾಂತರ್ಯಾಮಿ ರಮಣೀಯ ಮಹಿಮಾರ್ಣವ ಶ್ರೀಗುರು ರಾಮವಿಠಲ ಸ್ವಾಮಿ 3
--------------
ಗುರುರಾಮವಿಠಲ
ಮೂರ್ತಿ ನೀ ಕರುಣಿಸೊ ಪ್ರಭುವೇ ಪ ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ 1 ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ ಕೊಟ್ಟು ರಕ್ಷಿಸಿದೇ - ಕೈಬಿಡದೇ 2 ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ ಸರಿಗಾಣೆ ಭೂಮಂಡಲದೊಳಗೇ ಪ್ರಭವೇ 3
--------------
ರಾಧಾಬಾಯಿ
ಮೂರ್ತಿ ನೆಲಸಲಂತರ್ಧಾನದಿ ಕ್ಷಣದೀ 1ನಾ ಪುಣ್ಯವಂತನೆಂಬೆನೆ ಮೂರ್ತಿಯಗಲುವದೆ ನಾಪಾಯೆಂಬೆನೆಕಾಬೆನೆರೂಪುಮರೆಯಾದರೇನೈ ಪೂರ್ಣವಸ್ತುವೆಂಬೀ ಪಂಥವನು ಪಿಡಿವೆನೆವ್ಯಾಪಾರದಲಿ ಸಿಲುಕಿದೀ ಮನಕೆ ಬಿಡದೆ ಸದ್ರೂಪ ನಂಬಿದ್ದೆನಿದನೆಸಾಪರಾಧಿಗೆ ಮುಖಗೊಡದ ತೆರದಿ ಮರೆಯಾದ ತಾಪ ಬೆಂಬಿಡದು ತಾನೆ ಎನ್ನನೆ 2ಬರಿದೆ ನಾನಪರಾಧಿಯೆಂದು ಪಂಬಲಿಸುವದು ತರವಲ್ಲ ಧನ್ಯ ನಾನೂಕರುಣದಿಂ ಮೂರುತಿಯ ತೋರಿ ಸುಖಗೊಳಿಸಿಯುರೆ ಮರೆಯಾದ ಭಾವ ತಾನೂಸ್ಮರಿಸಿ ಸ್ಮರಿಸಿಯೆ ಮನವು ಕರಗಿ ತನ್ನೊಳುನಿಜದಿ ಬೆರೆಯಲೆಂತೆಂಬುದಿದನೂಮರಳಿ ಜಾನಿಸಿ ಧೈರ್ಯ'ಡಿದರೂ ಮೊದಲುಂಡ ಪರಮಸುಖ ಬಿಡದೆನ್ನನೂ ತಾನೂ 3ಭಾಪುರೆ ಭಾಗ್ಯಶಾಲಿಯು ಧನ್ಯಧನ್ಯನೈ ನಾ ಪುಣ್ಯವಂತನಹುದೂತಾ ಪೂರ್ಣ ಕೃಪೆವಂತ ಶ್ರೀಕೃಷ್ಣಯೋಗೀಂದ್ರ ನೀ ಪೊಡ' ಮೊದಲೊಳಹುದೂತಾಪಬಡುವರು ಭಜಕರೆಂದು ಮಂಗಳಕರದ ರೂಪವನು ಮೊದಲೆ ತಳೆದೂವ್ಯಾಪಕನು ಶ್ರೀ ದಾಸಾರ್ಯನಾಗಿರುವನೀ ಪದ'ಗೆಣೆಯಾವದು ಇಹುದೂ 4ಗುರು ವಾಸುದೇವಾರ್ಯನೆನಿಸಿ ಚಿಕ್ಕನಾಗಪುರ ವರದವೆಂಕಟರಮಣನೆಕರದು ಸುಜ್ಞಾನಸುಧೆಯೆರೆದಜ್ಞರಜ್ಞತೆಯ ಪರಿದ ಕರುಣಾವಂತನೆವರ ಕೃಷ್ಣಯೋಗೀಂದ್ರ ಶ್ರೀರಾಮದಾಸಾರ್ಯ ಶರಣಾಗತೋದ್ಧರಣನೆಮರೆಯೊಕ್ಕೆ ನಾನು ತಿಮ್ಮದಾಸ ಜೀಯ್ಯಪರಾಕು ಕರ'ಡಿಯಬೇಕೆನ್ನನೆ ನೀನೆ5
--------------
ತಿಮ್ಮಪ್ಪದಾಸರು
ಮೂರ್ತಿ ರಕ್ಷಿಸೋ ನೀನು |ನಿನ್ನ ಪಾದವ ನಂಬಿದೆ ನಾನು ಪ ಪೂರ್ವಾರ್ಜಿತ ಪ್ರಾರಬ್ಧದಿಂದೆ |ತಾಯಿ ಉದರದಲಿ ನಾ ಬಂದೆ ||ಮಲಮೂತ್ರ ಜಠರಾಗ್ನಿಯಲಿ ನೊಂದೆ |ಒಂಬತ್ತು ತಿಂಗಳೊಳಗೆ ಬೆಂದೆ 1 ಬಾಲತ್ವದಲಿ ದುರ್ಬಲನಾದೆ |ಯೌವನ ಕಾಲಕೆ ಅಹಂಮತನಾದೆ ||ಮುಪ್ಪು ಬರಲು ಚಿಂತೆಯೊಳಗಾದೆ |ಸ್ವಾಮಿ ಭಜನೆಗೆ ಅಂತರನಾದೆ 2 ಧರೆಯೊಳಗೆ ದೊಡ್ಡವನೆಂದು |ಭವಭಯಕಂಜಿ ಬೆನ್ನನೆ ಬಿದ್ದೆ ||ದೀನೋದ್ಧಾರಕನೆಂದು ಶರಣು ಬಂದೆ |ಭೀಮಾಶಂಕರನ ಧ್ಯಾನಕೆ ತಂದೆ 3
--------------
ಭೀಮಾಶಂಕರ
ಮೂರ್ತಿ ಶ್ರೀಗಣರಾಯಗೆ ಪ ಶರ್ವಾಣಿಸುತ ಚತುರ್ದಶ ವಿದ್ಯದಾಗರ | ಸರ್ವಗುಣಾಂಬುಧಿ ಗಜಮುಖಗೆ | ಊರ್ವಿಯೊಳಗೆ ತನ್ನ ಚರಣವ ನೆನೆವರ | ನಿರ್ವಿಘ್ನದಲಿ ಕಾವ ದಯಾನಿಧಿಗೆ 1 ರನ್ನ ಮುಕುಟ ದಿವ್ಯ ಕುಂಡಲಧಾರಿಗೆ | ಪನ್ನಗ ಭೂಷಣ ಚತುರ್ಭುಜಗೆ | ಸನ್ನುತ ಪರಶಾಂಕುಶವನು ಪಿಡಿದಗೆ | ಮೂಷಕ ವಾಹನಗೆ 2 ಸಮಚರಣಾಂಬುಜ ಸುರವರವಂದ್ಯಗೆ | ಕಮಲಸಕನ ತೇಜ ಗೆದ್ದವಗೆ | ವಿಮಲ ಮತಿಯ ನೀವ ಸಿದ್ದಿಧೀರೇಶಗೆ | ನಮೋಎಂಬೆ ಮಹೀಪತಿ ಸುತಪ್ರಿಯಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರ್ತಿ ಸತ್ಯ ಸಂಧರ ಕೀರ್ತಿ ಜಗದಲ್ಲಿ ಉದ್ಧರರ ಪ. ಪದ್ಮನಾಭ ಮಾಧವ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ರನ್ನದ 1 ಪಾದ ಪದ್ಮವ ಮೊದಲೆ ಬಲಗೊಂಬೆ ರನ್ನದ 2 ರಘುನಾಥ ರಘುವರ್ಯ ರಘೋತ್ತಮ ತೀರ್ಥರ ವೇದವ್ಯಾಸ ವಿದ್ಯಾಧೀಶರೆ ರನ್ನದ ವೇದವ್ಯಾಸ ವಿದ್ಯಾಧೀಶರ ಚರಣವ ಜಗದ ಗುರುಗಳನು ಬಲಗೊಂಬೆ3 ಉತ್ತಮ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರ ರನ್ನದ ಸತ್ಯನಾಥರ ಚರಣವ ಭಕ್ತಿಂದ ಮೊದಲ ಬಲಗೊಂಬೆ 4 ಸತ್ಯಾಭಿನವ ತೀರ್ಥ ಸತ್ಯಪೂರ್ಣ ತೀರ್ಥರಸತ್ಯವಿಜಯ ಸತ್ಯಪ್ರಿಯರ ರನ್ನದ ಸತ್ಯಪ್ರಿಯರ ಚರಣವ ಅತ್ಯಂತವಾಗಿ ಬಲಗೊಂಬೆ 5 ಸತ್ಯಬೋಧ ಸತ್ಯಸಂಧ ಸತ್ಯವರಚಿತ್ತಶುದ್ಧಿಯಲೆ ಬಲಗೊಂಬೆಚಿತ್ತಶುದ್ಧಿಯಲೆ ಸಭೆಯೊಳುಸತ್ಯವಾಕ್ಯಗಳ ನುಡಿಸಲು ರನ್ನದ6 ಸತ್ಯವರ್ಯರೆಂಬ ಉತ್ತಮ ಗುರುಗಳ ಹಸ್ತಕಮಲದಲೆ ನಮಿಸುವೆ ರನ್ನದ ಹಸ್ತಕಮಲದಲೆ ನಮಿಸುವೆ ಜಗದೊಳುಮೆರೆವ ಸತ್ಯಧರ್ಮರನು ಬಲಗೊಂಬೆ 7 ಪಾದ ಪೊಂದಿದ್ದ ಗುರುಗಳು ವಿದ್ಯುಕ್ತದಿಂದ ಬಲಗೊಂಬೆ ರನ್ನದ ವಿದ್ಯುಕ್ತದಿಂದ ಬಲಗೊಂಬೆ ಅತ್ತಿಗೆಯರ ಗೆದ್ದು ದುಂಧುಭಿಯ ಹೊಯಿಸೇವ ರನ್ನದ 8 ಯತಿ ಮುನಿರಾಯರು ಅತಿ ಭಕ್ತರಾಗಿದ್ದಅತಿಪ್ರಿಯರಾದ ಗುರುಗÀಳು ಅತಿ ಪ್ರಿಯರಾದ ರಾಮೇಶನ ಅತಿ ಭಕ್ತರ ಮೊದಲ ಬಲಗೊಂಬೆ ರನ್ನದ 9
--------------
ಗಲಗಲಿಅವ್ವನವರು
ಮೂರ್ತಿ ಸ್ತೋತ್ರ ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ ಪುರಂದರ ಮುಖ ಸುರ ವೃಂದ ವಂದಿತರು ಪರಮಾತ್ಮನು ಶ್ರೀ ರಾಘವ ಸಿಂಹನ ಸುರತರು ಪ ಅಮೃತ ಕಲಶ ಅಭಯ ವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್ ಸುಂದರ ತರ ಶುದ್ಧ ಸ್ಫಟಿಕಾಮಲವರ್ಣ ಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ 1 ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್ ಚಂದ್ರ ಚೂಡ ತ್ರಿನೇತ್ರ ಕೃಪಾಕರ ದಕ್ಷ ಪ್ರಜೇಶ್ವರಾ ದ್ಯಮರರಿಂದೀಡ್ಯ ಈ ದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು 2 ಶ್ರೀಪತಿ ಜ್ಞಾನ ಪ್ರದರ್ಶಸಿ ತೇಜಸ್ ಐಶ್ವರ್ಯ ಈವೋರು ಅಪಮೃತ್ಯು ವಿಷರೋಗ ಪರಿಹರಿಸುವರು ಅಬ್ಜಜ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ಹೃತ್ಪದ್ಮದಿ ಕಾಂಬ ಮೇಧಾಕೊಡುವರು | ಗುರುವರ ದಕ್ಷಣಾ ಮೂರ್ತಿಗೆ ಎರಗುವೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಮೂರ್ತಿ ಹರಿ ಎಲ್ಲ ಕೇಳುವುದೆಲ್ಲ ನಿನ್ನ ಕೀರ್ತಿ ಪ ಎಲ್ಲ ಸಾರುವುದೆಲ್ಲ ನಿನ್ನ ವಾರ್ತಿ ಎಲ್ಲೆಂದರಲ್ಲೆ ನಿನಗೆ ಶರಣಾರ್ಥಿ ಅ.ಪ ಕಲ್ಲಿನಲ್ಲಿ ನಿನಗೆ ಶರಣಾರ್ಥಿ ನೆಟ್ಟ ಮುಳ್ಳಿನಲ್ಲಿ ನಿನಗೆ ಶರಣಾರ್ಥಿ ಕಳ್ಳರಲ್ಲಿ ನಿನಗೆ ಶರಣಾರ್ಥಿ ಮಹ ಕುಳ್ಳರಲ್ಲಿ ನಿನಗೆ ಶರಣಾರ್ಥಿ ವೈರಿ ಕೊಲ್ಲಲುಬರಲವ ರಲ್ಲೆ ನಿನಗೆ ಬಹು ಶರಣಾರ್ಥಿ 1 ಊರೊಳು ನಿನಗೆ ಶರಣಾರ್ಥಿ ಮಹ ದಾರಣ್ಯದಲಿ ನಿನಗೆ ಶರಣಾರ್ಥಿ ಘೋರತಾಪದಿ ನಿನಗೆ ಶರಣಾರ್ಥಿ ಬಿಡದಾ ಪಾರ ಸೌಖ್ಯದಿ ನಿನಗೆ ಶರಣಾರ್ಥಿ ಸಾರವಿಲ್ಲದ ಸಂಸಾರದಿ ನಿನಗೆ ಬಾರಿಬಾರಿಗೆ ಬಹು ಶರಣಾರ್ಥಿ 2 ನಿನಗೆ ಜಾಗ್ರದಲಿ ಶರಣಾರ್ಥಿ ಬಿದ್ದ ಕನಸಿನಲಿ ನಿನಗೆ ಶರಣಾರ್ಥಿ ಘನ ನಿದ್ರದಿ ನಿನಗೆ ಶರಣಾರ್ಥಿ ಬಿಡ ದನುದಿನದಲಿ ನಿನಗೆ ಶರಣಾರ್ಥಿ ತನುಮನಧನದಲಿ ಜನಕ ಶ್ರೀರಾಮ ನಿನಗೆಣಿಕಿಲ್ಲದ ನಿಜ ಶರಣಾರ್ಥಿ 3
--------------
ರಾಮದಾಸರು
ಮೂಲ ಪ್ರಕೃತಿ ಪ ಪತಿಯೆ ಸದ್ಗತಿಯೆ ಇದನಿತರರಾ ಬೇಡೆ ನಾಂ ಹಿತಮಾಡುವನು ನೀನು ಸತತಾಯನ್ನಗಲದಿರು ಅ.ಪ ತತ್ವಾಮಂಗಳದ್ರವ್ಯ ಸಾತ್ವೀಕ ವೃತ್ತಿ ಸಂ ಪತ್ತಿನೋಳ್ ಹಿಗ್ಗುವ ಮುತ್ತೈದೆಯೆನಿಸೆನ್ನ 1 ಗುರುಭಕ್ತಿಯೆಂಬ ಭರ್ಜರಿಸೀರೆಯನುಡಿಸಿ ಕಂಚುಕ ತೊಡಿಸಿ ಹರುಷದಿ ಕೊಡು ಮುಕ್ತ 2 ಕಳ್ಳರಿಗೆ ಕಾಣದ ಒಳ್ಳೆ ವಡವೆಗಳಿಟ್ಟು ಚೆಲ್ವನಿ ನ್ನೊಳು ಬೆರೆಸುನಲ್ಲಾ ಗುರುರಾಮವಿಠಲ ಪತಿಯೆ 3
--------------
ಗುರುರಾಮವಿಠಲ
ಮೂಲನಾರಾಯಣ ವಟಪತ್ರಶಾಯಿ ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ. ಎಂದೆಂದಿಗೂ ಎನಗೆ ತಂದೆ ನೀ ದೇವಾ ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ. ಸ್ವಚ್ಛ ಮನವಮಾಡು ಮತ್ಸರೂಪಕನೆ ತುಚ್ಛ ಮನಕೊಂದ ವಿಶ್ವವ್ಯಾಪಕನೆ 1 ಮುಂದೆನ್ನ ಉದ್ಧರಿಸು ಮಂಧರೋದ್ದರನೆ ಇಂದ್ರಾದಿ ಸುರರಿಂದ ವಂದ್ಯಾಸುರವರನೆ 2 ಹಿರಣ್ಯಾಕ್ಷನ ತರಿದಂಥ ಧೀರ ಭರಧಿ ವೇದವ ತಂದ ಮಹಿಮೆ ಅಪಾರ 3 ತರಳ ಪ್ರಹ್ಲಾದನ ತಲೆಗಾಯ್ದ ರೂಪ ಸರಳ ಮತಿಯನಿತ್ತು ಪಾಲಿಸು ಶ್ರೀಶ 4 ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ ಯೊಳ ಎನ್ನ ಮನವಿಡು ವಾಮನಮೂರ್ತಿ 5 ಕ್ಷತ್ರಿಯ ಕುಂಭವ ಸವರಿದ ರಾಮ ಶತಷಟ್ಯಂದರ ಬಡಿದ ದಿವ್ಯ ನಾಮ 6 ದಾನವ ಕುಲಕುಟಾರ ಶ್ರೀ ರಾಮ ಮಾನಾಭಿಮಾನವು ನಿನ್ನದೋ ರಮ 7 ಮಲ್ಲರ ಗೆದ್ದಂಥ ದೂಕುಳ ವೈರಿ ಗೊಲ್ಲಬಾಲಕರ ಕೂಡಾಡಿದ ಶೌರಿ ಶೌರಿ 8 ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ ಉಪಗಮನ ವೀಯೋ ವಿಶ್ವೇಶ ಸುಜ್ಞಾನ 9 ಕಲಿಮುಖದೈತ್ಯರ ಅಳಿಯುವ ಕಲ್ಕಿ ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ10 ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು ಶರಣುಜನರಪಾಲ ಏನು ಬಂದಾಗ್ಯು 11
--------------
ಕಳಸದ ಸುಂದರಮ್ಮ
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು
ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ ಪ ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬಓಡಾಡಿದನೊಬ್ಬ ಈ ಮೂವರುಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿಓಡಾಡಿದವನೊಬ್ಬ ಓಡನಯ್ಯ 1 ಕಾಯ ಕಾಯ ಬಡಲಿಗ ಚೆಲ್ವಕಾಯ ಗಿರಿ ಪೊತ್ತವನು ಕಡುಧರ್ಮಿಯು 2 ಹರಿಗೆ ಮಾವನು ಆದ ಹರಿಗಳಿಯ ತಾನಾದಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದಸಿರಿಧರನು ಕಾಗಿನೆಲೆಯಾದಿಕೇಶವರಾಯ3
--------------
ಕನಕದಾಸ
ಮೂಳಾ ಹರಿದ್ಹಾಕೆಲೋ ಮಾಯದ ಜಾಲ ಹಾಳುಜಗದ ಮಾತಿಗ್ವ್ಯಾಕುಲವ್ಯಾಕೆಲೋ ಪ ಅನ್ಯಗುಣಗಳನು ಅನ್ನಗೇಡಾಗಿ ಬಲು ಭಿನ್ನ ಭೇದದಧೋಪಾತದುರುಳತಿರು ಕುನ್ನಿಮಾನವರ ಭಿನ್ನಭೇದಕಂಡು ನಿನ್ನ ಗುಣವ ಬಿಟ್ಟು ಬನ್ನಬಡಲಿಬೇಡ 1 ಕರ್ಮಿಲೋಭಿಗಳ ಮೋಹದಿಂದ ದು ಷ್ಕರ್ಮದಿ ಬಿದ್ದು ಕುಂಭೀಪಾಕಕ್ಕಿಳಿದರೇನು ಧರ್ಮಕರ್ಮಗಳ ಮರ್ಮ ತಿಳಿದು ಸ ದ್ಧರ್ಮದೊಳಾಡುತ ನಿರ್ಮಲನಾಗಿ ಬಾಳು 2 ಶಿಷ್ಟಪದ್ಧತಿಗಳ ಬಿಟ್ಟುಕೊಟ್ಟು ಮಂದಿ ಕೆಟ್ಟಪದ್ಧತಿ ಸುದ್ದಿಯಾಡುವುದ್ಯಾಕೆಲೋ ಸೃಷ್ಟಿಯೊಳಗೆ ನಮ್ಮ ಶಿಷ್ಟ ಶ್ರೀರಾಮನ ಮುಟ್ಟಿಪೂಜಿಸಿ ಮುಕ್ತಿಪಟ್ಟಕ್ಕೆ ಕೂಡ್ರೆಲೋ 3
--------------
ರಾಮದಾಸರು
ಮೃಗಮೋಹಿನಿಯೊಡನೇಕೋ ಪಂಥ ಪ ಕಾಂತ ಸಿರಿಕಾಂತ ಸುರನಗರಾಧಿಪ ಅ- ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ- ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_ ತಳಿದವಳ ಕಾಯೊ ಸಿರಿಧಾಮ ಗುಣಧಾಮ 1 ಕಳಕಳಿಪ ನೋಟ ಕಾತರಿಪ ವಿರಹದ ಹೂಟ ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ- ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2 ಮೂರಾರವಸ್ಥೆಗಳ ನೀರಿಕಡೆಯನವಸ್ಥೆ ಮಾತಿರುವಳೆ ಬಾಲೆ ನಿನಗೆದ್ದ ಮೇಲೆ ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ ತೋರಿಸಿದನಮರ ಪುರಿಪಾಲ ಸಿರಿಲೋಲ 3
--------------
ಕವಿ ಲಕ್ಷ್ಮೀಶ