ಒಟ್ಟು 2554 ಕಡೆಗಳಲ್ಲಿ , 109 ದಾಸರು , 1860 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ದಯಾಬ್ದಿ ಸಿರಿಧರಣಾ ಪಾ'ಮಾಂಭಯಕೃದ್ಭಯನಾಶನ ಹಯವದನಾ ಪಜಯಪ್ರದ ಮುರಹರ ಜಾನಕೀಶ ಅಘಕ್ಷಯ ಖಗವಾಹನ ಸಾರಸೇಕ್ಷಣ 1ಚಾತುರ್ಥದ ರಾಮಕೋಟಿಯ ಜರುಗಿಸಿಕೌತೂಹಲ ಪ್ರಜತತಿಗೆ ಲಭಿಸಿದೆ 2ಆಪದೊದ್ಧಾರಣ ಆರ್ತಶರಣ್ಯಾಭೊಪಸುಜನಗಣ ತಾಪನಿವಾರಣ 3ಪ್ಲೇಗಿನವಾಂತರ ಪರಿಹರಿಸಿಪುರಭೋಗಿಶಯನ ಪರಪಾಲಿಸು ಬೇಡುವೆ 4ಚನ್ನಪಟ್ಣಾಧೀಶ ಸ್ತೌತ್ಯವುಮೇಶಎನ್ನಪರಾಧಗಳ ಮನ್ನಿಸು ಶ್ರೀಶ 5ಯುವತೀಮಣಿಯರೆಲ್ಲ ಶಿವಕರಭಕ್ತಿುದಿಂತವನಾಮಾಮೃತ ಸ'ಗೊಲಿದರು ರಕ್ತಿ 6ಪ್ರೇಮ ತುಲಸಿಗುರುಸ್ವಾ'ು ಸೇವಕ ರಂಗಸ್ವಾ'ುದಾಸ ಹೃದಿಧಾಮ ಶ್ಯಾಮಾಂಗ 7
--------------
ಮಳಿಗೆ ರಂಗಸ್ವಾಮಿದಾಸರು
ದರಿಶಕುಪ್ಪ ವೆಂಕಟದಾಸರಿಂದಗುರುರಂಗಸ್ವಾ'ುಕೃಪಾಂಗಾ ಸತ್ಕøಪಾಂಗಾಭಜಿಪೆ ವರತುಲಸೀರಾಮಪಾದ ಸಾರಸಭೃಂಗ ಪಗುರ್ರಮಾಂಬ ಕುವರನೆ ಗುರುಸೇವಾ ದುರಂಧರನೆಕರುಣಿಸೊಯಮ್ಮನು ನಿರುತವು ಬೇಡುವೆ 1ಅಗಣಿತಮ'ಮನೆ ಭಾಗ್ಯಾದಣ್ಣಯ್ಯಸುತನೆಭಗವಂvನಪ್ರಿಯನೆ ಹಗಲಿರಳು ಭಜಿಪೆವು 2ದುಂದುಭಿಶಾಲೆಯಂತೆ ಧನುರ್ಮಾಸಭಜನೇಗೆಬಂದು ಪಾಮರರ ಭವಬಂಧನ ಬಿಡಿಸಿದ 3ರಾಮನ ನಾಮವ ಪ್ರೇಮಾದಿಂ ಬೊಧಿಸಿನೇಮವತೋರಿಸಿ ಸ್ವಾ'ುೀಕೃಪೆ ಪಡೆದ 4ತುಲಸೀಮಹಾತ್ಮರ ತತ್ವಾಬೊಧಾನುಭವತಿಳಿದುನಿರ್ಮಲ ಹೃದಯದಲ್ಲಿ ಭಕ್ತಕೃತಮುಖನೆ 5ಪರಿಪೂರ್ಣ ತುಲಸೀರಾಮ ಮರೆಯದೆ ಇರಿಸೆನ್ನದರಿಶಕುಪ್ಪದ ದಾಸ ಕರವೆತ್ತಿ ಮುಗಿಯುವೆನೂ 6
--------------
ಮಳಿಗೆ ರಂಗಸ್ವಾಮಿದಾಸರು
ದಾತ ಅವಗುಣ ಧೂತ ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ ಜೀವದ ಜೀವ ದೇವರ ದೇವ ವಾಸುದೇವ 1 ಪ್ರಾಣಕ ಪ್ರಿಯ ಮುನಿಜನಾಶ್ರಯ ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2 ಅನಾಥ ಬಂಧು ಘನಕೃಪಾಸಿಂಧು ಅನುದಿನ ದೊರೆವ ದೀನನಾಥನೆಂದೆಂದು 3 ಮನದ ಮಾಣಿಕ ಅಣುರೇಣುಕ ವ್ಯಾಪಕ ಅನಂತಕೋಟಿ ಬ್ರಹ್ಮಾಂಡ ನಾಯಕ 4 ಪರಮ ಉದಾರ ಕರುಣಾಸಾಗರ ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ನೀನೆ ಸ್ವಾಮಿ ಶ್ರೀಗುರುನಾಥ ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ ಧ್ರುವ ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ ವರಮುನಿಗಳ ಪ್ರಿಯ ಶರಣಜನಪಾಲಕ ಪರಮ ಸುಪಥದೋರಿ ಹೊರೆವ ಪೂರ್ಣತಾರಕ 1 ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ 2 ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾನಿ ಸದ್ಗುರು ಕೊಟ್ಟಾ ಸ್ವಾನಂದ ಸುಖವಾ ಪ ಕರದು ಘನದಯ ಮಳೆಗರದಾ | ಕ್ಷರವ ನುಡಿದು ಯನ್ನ ಕಿವಿಯೊಳುಸುರಿದಾ 1 ನಯನ ವೆರಡರಲಿ ಮುದ್ರಿಯನಿಲಿಸಿ | ಮಯ ಪ್ರಭೆ ಕುರುಹನು ದೋರಿದ ಸುಳಿಸಿ2 ಬೋಧ ವೆಚ್ಚರಿಸಿ | ದನು ಗುರು ಮಹಿಪತಿ ಕಂದನುದ್ಧರಿಸಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಮ ಶೋಭಿತ ವಿಠಲ | ಸಾಮ ಸನ್ನುತನೇ ಪ ಪ್ರೇಮದಿಂದಿವಳ ಮನ | ಕಾಮ ಪೊರೈಸೋ ಅ.ಪ. ಯೇಸೊ ಜನ್ಮದ ಪುಣ್ಯ | ರಾಶಿ ಫಲ ಒದಗುತಲಿದಾಸತ್ವ ದೀಕ್ಷೆಯನು | ಆಶಿಸುತ್ತಿಹಳೋ |ದಾಸವರ್ಯರು ವಿಜಯ | ದಾಸರುತ್ಸವದಿ ಸಂ-ತೋಷದಲಿ ಬಿನ್ನಹವ | ಲೇಸು ಗೈದಿಹಳೋ 1 ಸಾರ ಚಾರು ಮೂರುತಿಯೇ 2 ಆನಂದ ಮುನಿ ಮತದಿ | ಸ್ವಾನುಭವ ದೀಕೆಯನುಜ್ಞಾನ ಭಕ್ತ್ಯಾದಿ ಸಂ | ಧಾನ ತಿಳಿಸುತಲೀ |ಮಾನನಿಧಿ ಕೈ ಪಿಡಿದು | ದೀನಳನು ಪೊರೆಯೆಂದುಪ್ರಾಣ ಪ್ರಾಣನೆ ಬೇಡ್ವೆ | ದೀನ ವತ್ಸಲನೇ 3 ಸಾಧನದಿ ಸತ್ವತೆಯ | ಹಾದಿಯಲ್ಲಿಹಳೀಕೆಸಾಧುಗಳ ಕಂಡು ಹೃದ | ಯಾದ್ರ್ರ ಭಾವದಲೀ |ಮೋದ ಬಡಿಸುತ ಸೇವೆ | ಶ್ರೀಧರನಿಗರ್ಪಿಪಳುಹೇ ದಯಾಂಬುಧೆ ಸಲಹೊ | ಸಾಧು ಜನ ವಂದ್ಯಾ 4 ಸರ್ವಕಾಲವು ದೇಶ | ಸರ್ವಗುಣದ್ರವ್ಯದಲಿದುರ್ವಿಭಾವ್ಯನ ವ್ಯಾಪ್ತಿ | ಸ್ಛುರಣೆಯನು ಕೊಡುತಾ |ಸರ್ವಾಂತರಾತ್ಮಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಹೃದಯ | ಗಹ್ವರದಿ ತೋರೋ 5
--------------
ಗುರುಗೋವಿಂದವಿಠಲರು
ದಾಮೋದರ ವಿಠಲನೆ | ಸಲಹ ಬೇಕಿವಳಾ ಪ ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ. ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ 1 ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ಮøತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ 2 ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ 3 ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ 4 ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ ಶೀರಿ ದಾನವ ಮಾಡಿದೀ ಕೃಷ್ಣಾ ಘೋರ ದೂರ್ವಾಸ ಮುನಿಯು ನಡುವಿರುಳೆ ಹಾರೈಸಿ ಬರೆಯನ್ನವಾ ದೇವಾ ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ ಆ ರಾತ್ರಿ ಕಾಯ್ದ್ಯೋಬಲೆಯಾ 1 ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು ಭರದಿನೆಗಳಿಯು ಪಿಡಿಯಲು ಕಾಲನು ಇರದೆ ನಿನ್ನನು ಸ್ಮರಿಸಲು ದೇವಾ ಗರುಡವಾಹನನಾಗಿ ನೀನೈತಂದು ಕರುಣಿಸಿದ್ಯೋ ಕೊನೆಯ ಗತಿಯ 2 ದುರುಳ ಹಿರಣ್ಯಕನ ಶೀಳಿ ನರಹರಿಯೆ ತರಳ ಪ್ರಲ್ಹಾದನ ಪೊರೆದ್ಯೋ ದೇವಾ ಮರೆಯದಜಮಿಳ ನೆನೆಯಲು ಕೇಳ್ದು ನೀ ಪರಿಹರಿಸಿದೆ ಯಮಬಾಧೆಯ ದೇವಾ ನರಸಿಂಹವಿಠಲ ಸ್ವಾಮಿ ಧ್ರುವನನ್ನು ಪೊರೆದಂತೆ ರಕ್ಷಿಸೆನ್ನಾ 3
--------------
ನರಸಿಂಹವಿಠಲರು
ದಾವನು ಗುರುಸಹವಾಸಿ ಅವನಿದ್ದದ್ದೇ ಸ್ಥಳ ಕಾಶಿ ಧ್ರುವ ಕೂಡಿದವರ ತ್ರಿತಾಪಭಂಗಾ ರೂಢಿಗೆ ಮೆರೆವಳು ಙÁ್ಞನಗಂಗಾ ಮೂಡಿಹ ಆತ್ಮಜ್ಯೋತಿ ಲಿಂಗಾ ಕಂಡಿಹ ಗುಣರಾಸೀ 1 ವಿವರಿಸಿ ತಾರಕಮಂತ್ರದ ನೆಲಿಯಾ ಕಿವಿಯೊಳು ಹೇಳಲು ಗುರುರಾಯಾ ಭವ ಭಯಾ ಸ್ವಾನಂದವ ಬೆರೆಸೀ2 ಜನದಲಿ ನಾನಾ ಸಾಧನ ಜರಿದು ಮನದಲಿ ಒಂದೇ ನಿಷ್ಠಿಯ ಹಿಡಿದು ಅನುಮಾನದ ಸಿದ್ಧಾಂತಗಳದು ಸದ್ಭಾವನೆ ಒಲಿಸೀ 3 ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ ಈ ಮನುಜರಿಗಿದು ಭೇದಿಸುದಲ್ಲಾ ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ದಾಸನಾಗಬೇಕು ರಂಗಸ್ವಾ'ುೀಗುರು ನಿಮ್ಮ ದಾಸನಾಗಬೇಕು ಪದಾಸನಾಗಬೇಕು ಕ್ಲೇಶಪಂಚಕವಳಿದು ಆಸೆಯಲ್ಲಿ ಮನಸೂಸದೆ ಸರ್ವದಾ ಅ.ಪಮನದ ಕಲ್ಮಷ ಕಳೆದು ಮಹಾ ರಾಮಕೋಟಿಗಳ ಮ'ಮೆಗಳನು ತಿಳಿದು ಇನಿತು ಈ ಜಗವೆಲ್ಲ ಶ್ರೀರಾಮಮಯವೆಂದು ಘನವಾದ ಮೋಹದಾ ಗಡಿಯನು ದಾಂಟುತ್ತಾ 1ತನುವು ಅಸ್ಥಿರವೆನ್ನುತಾ ತಿಳಿದು ಈ ದುವ್ರ್ಯಾಧಿಪ್ಲೇಗು ಭಯವಬಿಡುತಾ ಘನವಾದ ರಾಮಕೋಟಿಯಲಿ ನೆಲೆಸುತಾಬಿನಗು ಸಂಸಾರದ ಮಮತೆಯ ಬಿಡುತಾ 2ಆರುಚಕ್ರದಿಮೆರೆವ ಅಖಂಡನಾ ಮೂರುಗುಣವತಿಳಿಪ ಆರುಮೂರದಿನಾರು ತತ್ವಾತೀತನಿಜತೋರಿ ರಾಮಕೃಷ್ಣಾದಾಸನುದ್ಧರಿಸಿದರು 3
--------------
ಮಳಿಗೆ ರಂಗಸ್ವಾಮಿದಾಸರು
ದಾಸರ ನರಸಿಂಹ | ಶ್ರೀಹರಿ ದಾಸರ ನರಸಿಂಹ ಪ. ಯೊಗಾ ನರಸಿಂಹ | ಕರಿಗಿರಿ ಭೋಗಾ ನರಸಿಂಹ ಆಗಲೆ ಸುರಿಯುವ ಮಳೆಯನು ನಿಲ್ಲಿಸಿ ಬೇಗನೆ ಕೈಕೊಂಡ ಉತ್ಸವ ನರಸಿಂಹ 1 ಶಾಂತಾ ನರಸಿಂಹ | ಪ್ರಹ್ಲಾ- ದಾಂತರ ನರಸಿಂಹ ನಿಂತು ಹೆಜ್ಜೆ ಹೆಜ್ಜೆಗೆ ಆರತಿ ಕೊಂಡು ಸಂತಸಪಡಿಸಿದ ಗುರುಗಳ ನರಸಿಂಹ 2 ಕಾಮಿತ ನರಸಿಂಹ | ಪರಮ ಪ್ರೇಮದ ನರಸಿಂಹ ಸ್ವಾಮಿ ತಂದೆ ಮುದ್ದು ಮೋಹನದಾಸರ ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ 3 ಭಕ್ತರ ನರಸಿಂಹ | ಭವಭಯ ಒತ್ತುವ ನರಸಿಂಹ ಭಕ್ತಿ ಭಾವದಿಂದ ಭಜನೆಯ ಮಾಳ್ಪರÀ ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ 4 ಸುಲಭ ನರಸಿಂಹ | ನೀ ಬಹು ದುರ್ಲಭ ನರಸಿಂಹ ಒಲಿಯುವ ಗೋಪಾಲಕೃಷ್ಣವಿಠ್ಠಲ ಹರಿ ನೆಲಸಿ ಹೃದಯ ಮಂದಿರದಲಿ ನರಸಿಂಹ 5
--------------
ಅಂಬಾಬಾಯಿ