ಘೋರವಿದು ಮಹ ಘೋರವಿದು ಸಂ
ಸಾರದ ನೆಲೆ ದಾರಿಗರಿತಿಹ್ಯದು ಪ
ತೋರದೆ ಮೂಜಗ ಹಾರೈಸಿದನು ದು:ಖ
ವಾರಿಧಿಯೊಳು ಘೋರ ಬಡುತಿಹ್ಯದು ಅ.ಪ
ಪರಮೇಷ್ಠಿ ಶಿರವಂದು ತೆಗೆಸಿಹ್ಯದು
ಮುರಹರನನು ಸುಡುಗಾಡು ಹೊಗಿಸಿಹ್ಯದು
ಸಿರಿವರ ಹರಿಯನು ಪರಿಪರಿ ಜನುಮವ
ಧರಿಸುತ ಧರೆಮೇಲೆಳೆಸಿಹ್ಯದು 1
ಚಂದ್ರಗೆ ಕುಂದುರೋಗ್ಹಚ್ಚಿಹ್ಯದೋ ಬಲು
ಮೇಂದ್ರ ಸೂರ್ಯನ ಪೊಲ್ಲ ಕಳಚಿಹ್ಯದು
ಇಂದ್ರನ ಅಂಗಾಂಗ ಸಂದು ಬಿಡದಲತಿ
ರಂಧ್ರಗೊಳಿಸಿ ಹೇಯ ಸುರಿವುವುದು 2
ಕಾಲ ತಂದಿಹ್ಯದು ಪಾ
ತಾಳಕೆ ಬಲಿಯನು ಇಳಿಸಿಹ್ಯದು
ವಾಲಿಯ ನಿಗ್ರಹ ಮಾಡಿಸಿ ಲಂಕೆಯ
ಪಾಲದಶಕಂಠನ ವಧಿಸಿಹ್ಯದು 3
ಪರಮ ಪಾಂಡವರನ್ವನಕೆಳಸಿಹ್ಯದು ಆ
ಕುರುಪನ ಕುಲನಾಶ ಮಾಡಿಹ್ಯದು
ಪರಮ ತ್ರಿಪುರ ಶಿರಸೆರೆ ಸೂರೆಮಾಡಿಸಿ
ಸುರನಿಕರರಿಗ್ಹಂಚಿಕೊಟ್ಟಹ್ಯದೊ 4
ಹಿರಿಯರನೀ ಪಾಡ ಪಡಿಸಿಹ್ಯದು ಈ
ಮರುಳ ನರರ ಪಾಡೇನಿಹ್ಯದು
ಗುರುವರ ಶ್ರೀರಾಮನೋರ್ವನ ಹೊರತಾಗಿ
ಸರುವ ಜಗವ ಗೋಳಾಡಿಸಿಹ್ಯದು 5