ಒಟ್ಟು 54 ಕಡೆಗಳಲ್ಲಿ , 28 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಮ್ಮನೆ ಹೋಗುತಾದಲ್ಲೋ ಇಷ್ಟಾರ್ಥಪಡಿದೇ ಸುಮ್ಮನೆ ಹೋಗುತಾದಲ್ಲೋ ಪ ಸುಮ್ಮನೆ ಹೋಗುತಾದೆ ಹೆಮ್ಮಾರಿಗೀಡಾಗಿ ಮರ್ಮವರಿತು ಪರಬ್ರಹ್ಮನ ಕೂಡದೆ ಅ.ಪ ಎಷ್ಟೋ ಸುಕೃತವಡೆದು ಈ ನರಜನ್ಮ ತೊಟ್ಟು ಸೃಷ್ಟಿಗೆ ಇಳಿದು ಹುಟ್ಟಿ ಬಂದಂಥ ಕಾರ್ಯ ಬಿಟ್ಟು ಮರವೆಗೂಡಿ ಕೆಟ್ಟು ಹೋಗ್ಯಾದೋ ವಯ ಕೃಷ್ಣಾರ್ಪಣೆನದೆ ಸುಟ್ಟು 1 ವಯವೆಂಬ ಧನ ಪಡೆದು ಈ ಮಹದನು ಭವದ ಸಂತೆಗೆ ಇಳಿದು ಭವದ ಜಯೆಂಬ ಅನುಭವದ ವ್ಯಾಪಾರ ಮಾಡಿ ಭವಹರನ ಕಾಣದೆ ಜವನಗೀಡಾಗಿ ತಾನು 2 ಅರಿವಿನಾಲಯ ಪೊಕ್ಕು ಸಂಸಾರವೆಂಬ ಮರೆವಿನ ಬಲೆಯೊಳ್ ಸಿಕ್ಕು ಪರಮಪುರುಷ ಸಿರಿಯರಸ ಶ್ರೀರಾಮನ ಚರಣಕಮಲಕ್ಕೆ ಸಲ್ವ ವರಮೋಕ್ಷ ಪಡೆಯದೆ ಲ
--------------
ರಾಮದಾಸರು
ಹರಿ ಹರಿ ಹರಿ ಎನ್ನದೆ ಈ ನಾಲಿಗಿ- ನ್ನಿರುವುದ್ಯಾತಕೆ ಸುಮ್ಮನೆ ಪ ಸÀರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು ಪರರವಾರ್ತೆಲಾಸಕ್ತಿ ಪಾಮರನಾಗುವುದ್ಯಾಕೆ1 ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು ಕಲ್ಲಿಗೆ ಕಡೆಯಾದೆ ಮಲ್ಲರಂತಕÀಗೆ ಬ್ಯಾಗ 2 ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ 3 ಅರ್ಕಸುತನ ಭಯ ಅಂಕೆಯಿಲ್ಲದಂತಿರೆ ಸಿಕ್ಕು ಸಿಗದಂತಿರೆ ಯುಕ್ತಿ ರತ್ಕಸಾಂತಕನಲ್ಲಿಟ್ಟು 4 ಈಸು ಮಾತ್ಯಾಕÉಶೋದೆ ಕೂಸಿನಾಲಾಪ್ವೊಂದಿರಲಿ ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ 5
--------------
ಹರಪನಹಳ್ಳಿಭೀಮವ್ವ
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು
ಬಾಲನ ಮೇಲೆ ನಿನ್ನ ಮೋಹವಮ್ಮ ನಾವುಹೇಳಿದ ಮಾತು ನೀ ಕೇಳೆಯಮ್ಮ ಪ.ಚಿಣ್ಣಗಿಣ್ಣನೆಂಬುವÀ ಬಣ್ಣ ಬ್ಯಾಡೆ ನಮ್ಮಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆಸಣ್ಣಗಿಣ್ಣವನಿವನಾದರೆ ಪರರ ಚೆಲುವಹೆಣ್ಣಿನೊಳಗಾಡುವನೆ ಕುವರ 1ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮರಟ್ಟು ಮಾಡುವ ಜನರೊಳು ನೋಡೆಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮಬಟ್ಟ ಕುಚವಿಡಿವ ದಿಟ್ಟನಮ್ಮ 2ಚಿಕ್ಕಗಿಕ್ಕವನೆಂಬುದುರೂಢಿಕಾಣೆ ನಮ್ಮಪಕ್ಕವ ಬಿಡನು ಬಾಲಕಾರ್ಯವೇನೆಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮಠÀಕ್ಕಿಸೆದ್ದೋಡುವ ಸಿಕ್ಕುವನಲ್ಲ 3ಕಕ್ಕುಲಾತಿತೋರೆ ನಮ್ಮ ಮನೆಗಳ ಪೊಕ್ಕು ಸಣ್ಣಮಕ್ಕಳಾಟವಾಡದೆಮ್ಮ ನೋಡಿ ನಕ್ಕುತಕ್ಕೈಸಿ ಓಡುವ ಮಹಾಮಾಯಗಾರನಮ್ಮದಕ್ಕಲೀಸ ಪತಿವ್ರತಧರ್ಮಜಾರಕೃಷ್ಣ4ಕೂಸುಗೀಸು ಇನ್ನೆನ್ನಬಾರದವಗೆಭವಘಾಸಿಯ ತಪ್ಪಿಸುವ ಎಂದಿಗೆಮಗೆಬೇಸರ ಗೀಸರದೆ ನೆನೆವರ ಒಡೆಯಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ 5
--------------
ಪ್ರಸನ್ನವೆಂಕಟದಾಸರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು