ಕೊಂಡಾಡುವರ ಪ್ರಿಯನ ವಿಠ್ಠಲನ ಪ
ಸಮಚರಣ ಭುಜನ ನಿಗಮಾ
ಗಮತತಿಗೋಚರನಾ
ಅಮಿತ ಪರಾಕ್ರಮನ ರುಕ್ಮಿಣಿ
ರಮಣ ರವಿಕ್ಷಣನಾ ವಿಠ್ಠಲನ 1
ಕಾಮಿತಾರ್ಥ ಪ್ರದನ ಶ್ರೀ ತುಲಸೀ
ಧಾಮ ವಿಭೂಷಿತನ
ಪತಿ ಪಾಲನ ತ್ರಿಭುವನ
ಸ್ವಾಮಿ ಚಿತ್ಸುಖಮಯನ ವಿಠ್ಠಲನ 2
ಗೋಕುಲ ಪೋಷಕನ ಮುನಿ ಪುಂಡ
ರೀಕಗೋಲಿದು ಬಂದನ
ಲೋಕವಿಲಕ್ಷಣನ ಪ್ರಣತರ
ಶೋಕವಿನಾಶಕನ ವಿಠ್ಠಲನ 3
ವಿಧಿ ವಿಹ
ಗೇಂದ್ರ ಮುಖಾರ್ಚಿತನ
ಇಂದ್ರೋತ್ಪಲನಿಭನ ಗುಣಗಣ
ಸಾಂದ್ರ್ರ ಸರ್ವೋತ್ತಮನ ವಿಠ್ಠಲನ 4
ಶ್ವೇತವಾಹನ ಸಖನ ಸತಿಗೆ ಪಾರಿ
ಜಾತನ ತಂದವನಾ
ವೀತ ಶೋಕ ಭಯನಾ ಶ್ರೀ ಜಗ
ನ್ನಾಥ ವಿಠಲರೇಯನಾ 5