ಜಯಶ್ರೀ ರಾಮನ ಜಾನಕಿ ಪ್ರೇಮನ
ಅನುದಿನ ಪ
ಶುಭ ಕಲ್ಯಾಣನ
ಮಾಧವ ಮುಕುಂದನ 1
ವಿಶ್ವ ಪ್ರಕಾಶನಾ
--ನಂದದಿ ಹೃದಯ ಗೋವಿಂದನ ಬಿಡದಿನ್ನು 2
ಕಂದರ್ಪ ಜನಕನ ಕರಿರಾಜ ವರದನ
ಸಿಂಧುಶಯನ ಹರಿ ಶ್ರೀ ಜಗನ್ನಾಥನ 3
ಸೌಂದರ್ಯ ರೂಪನ ಪುರುಷೋತ್ತಮನ
ಕುಂದರದನ ಹರಿ ಕೋಮಲಾಂಗನ 4
ಪರಮ ಪುರುಷನ ಪತಿತಪಾವನನ
ನರಹರಿರೂಪನ ನಾರಾಯಣನ 5
ಗರುಡಾರೂಢನ ಕರುಣಾಸಾಗರನ
ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ 6
ಉರಗಾದ್ರಿ ವಾಸನ ವಸುದೇವಸುತನಾ
ಭವಪಾಪ ಸಂಹಾರನ 7
ಶರಣರ ಕಾಯುವನ ಶ್ರೀನಿವಾಸನ
ಉರಗಶಯನನ ಹರಿವಾಸುದೇವನಾ 8
ಮಂಗಳಮೂರುತಿ ಮಹಾನುಭಾವನ
ಗಂಗೆಯ ಪಡೆದನ ಘನ ಗಂಭೀರನ9
ಶೃಂಗಾರ ಭೂಷಣನ ಸುಗುಣ ಪ್ರತಾಪನ
ಅಂಗನೆಯರೆಡ ಬಲದಲಿರುವನ 10
ರಂಗನಾಯಕನ ರಾಜಾಧಿರಾಜನ
ಮಂಗಾರಮಣನ ಮಧುಸೂದನನಾ 11
ರಂಗವುಳ್ಳ ಪೀತಾಂಬರ ಧರನಾ
ಕಂಬು ಕಂಧರನಾ 12