ಎಂಥಾತ ಎಂಥಾತನೋ ನಮ್ಮಯ ರಂಗ
ಎಂಥಾತ ಎಂಥಾತನೋ ಪ
ಎಂಥಾತ ಎಂಥಾತ ಚಿಂತಾಯಕ ಭಕ್ತ
ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ
ದಿವನಿಶಿಯಾಗಿಹ್ಯನೋ ತಾನೆ ತ್ರಿ
ಭುವನವ ಬೆಳಗುವನೋ
ಸವಿಯದ ಮಹಿಮರಲವಬಿಡದ್ವೇದ ಒಂದೇ
ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ 1
ತಿಥಿ ವಾರ ಪಕ್ಷ ತಾನೇ ತಾನೆ ಮಾಸ
ನಿತ್ಯ ತಾನೇ
ಶ್ರುತಿತತಿ ಯತಿಗಳು ಸತತ ಪೊಗಳುತಿರೆ
ಮತಿಗೆ ನಿಲುಕದಂಥ ಅತಿ ಚರಿತ್ರನಿವ 2
ನಗುವಳುವರಲಿ ಈತನೇ ನಿಂತುಕೊಂಡು
ಸಿಗಿವ ಬಗಿವರಲೀತನೇ
ನಿಗಮಾತೀತನ ಮಹಿಮದ್ಹಗರಣ ತಿಳಿಯದು
ಸುಗುಣ ಸಂತರೊಶ ಜಗದಯ್ಯ ಶ್ರೀರಾಮ 3