ನಿತ್ಯ ಶುದ್ಧನಾಪ
ಲೋಕಂಗಳ ಮಾಡಿರುವ ಲೋಕಕೆ ತಾನೆ ಗುರುವಲೋಕವೇ ತಾನಾಗಿರುವ ಬಹುಲೋಕ ಲೋಕದ ಹೊರಗಿರುವ ದೇವನೇ 1
ದೃಶ್ಯವೇ ತಾನೆನಿಪ್ಪ ದೃಶ್ಯವ ನೋಡುತಲಿಪ್ಪದೃಶ್ಯಕೆ ಆನಂದಿಪ ಎಲ್ಲ ದೃಶ್ಯಕೆ ಆಧಾರವಿಪ್ಪನೇ 2
ಬೋಧನೆ ತಾನಾಗಿರ್ದ ಬೋಧಾಬೋಧದ ಸಿದ್ಧಬೋಧದಿ ತಾ ಬೆರೆದಿರ್ದಾ ಬರೆ-ಬೋಧಾ ಬೋಧಂಗಳ ಹೊದ್ದದ ದೇವನೇ 3
ನಾದದ ಮನೆಯಾಗಿಪ್ಪ ನಾದವ ಕೇಳುತಲಿಪ್ಪನಾದದಿಂ ನಲಿದಿಪ್ಪ ಮಹಾನಾದನಾದಕೆ ಬೆರೆದಿಪ್ಪ ದೇವನೇ 4
ನಿರುಪಮ ನಿರಾಲಂಬ ನಿರವಯ ನಿಶ್ಚಲಬಿಂಬಶರಣರೊಳು ಬಲಗೊಂಬ ವರಪರಮ ಗುರು ಚಿದಾನಂದ ದೇವನೇ 5