ಒಟ್ಟು 56 ಕಡೆಗಳಲ್ಲಿ , 31 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸುವೊ ಜನರಿಗೆ ಸಲಹುವ ದೊರೆಗಳಿನ್ನುಂಟೇವೆಂಕಟೇಶಾ ಪ ಕರುಣಾನಿಧಿ ಮಹಾಮಹಿಮ ನೀನೆಂದು ನಾ ನಂಬಿದೆವೆಂಕಟೇಶಾ ಅ.ಪ. ಬರಿದು ದಂಡಿಸಿ ನಿನ್ನ ಪದ ಹೊಂದುವ ಬಗೆ ತೋರೋವೆಂಕಟೇಶಾ ಬಾಧೆಯ ತಾಳದೆ ಹಾದಿಯ ತಪ್ಪಿದೆ ವೆಂಕಟೇಶಾ 1 ಮಾರಿ ಮುಸುಕಿ ಎನ್ನ ಗಾರು ಮಾಡದೆ ವೆಂಕಟೇಶಾಘೋರ ಜಾರದ ವಾರಿಧಿಯಲಿ ನಾ ಮುಳುಗಿದೆ ವೆಂಕಟೇಶಾ 2 ಪಾರುಗಾಣದೆ ನಿನ್ನ ಮರೆಹೊಕ್ಕೆನೋ ವೆಂಕಟೇಶಾನಾನಾಗಿ ನಿನ್ನ ಗಣ್ಮ್ರತಗರಿಯೊ ವೆಂಕಟೇಶಾ 3 ಚೋರರ ಬಾಧೆಗೆ ಚೀರಿ ಚೀರುತಲಿಹೆನೊ ವೆಂಕಟೇಶಾದೂರ ನೋಡದಿರು ದಾಸರ ದೂತ ವೆಂಕಟೇಶಾ 4 ಹತ್ತು ಒಂಬತ್ತು ವತ್ಸರದಿಂದ ಕುಂಭಿಯೊಳಿದ್ದೆ ವೆಂಕಟೇಶಾಇನ್ನೆಂತು ಪೊಗಳಲಿ ನಿನ್ನ ಕರುಣವು ಬಾರದೆ ವೆಂಕಟೇಶಾ 5 ಕುಂಕುಮ ಅಂಕಿತ ಪದಪಂಕಜ ಶೋಭಿತ ವೆಂಕಟೇಶಾಕಂದನೆಂದು ಪೊರೆಯದಿರೆ ಬಿರಿದುಂಟೆ ವೆಂಕಟೇಶಾ 6 ಜ್ಞಾನದಿ ನಿನ್ನ ಧ್ಯಾನಿಪಲೊಲ್ಲೆ ವೆಂಕಟೇಶಾತೇಜ ತಂದೆವರದಗೋಪಾಲವಿಠಲ ವೆಂಕಟೇಶಾ 7
--------------
ತಂದೆವರದಗೋಪಾಲವಿಠಲರು
ಹರಿಯೆನ್ನ ನರಜನ್ಮ ವ್ಯರ್ಥವಾಯ್ತು ಪರಮ ಭಕ್ತಿಯೊಳಿನ್ನು ಭಜಿಸುವೆನು ಕಾಯೋ ಪ ತೊಡೆಯ ಮೇಲಾಡುತಿಹ ಶಿಶುವಿನಾನುಡಿ ಕೇಳಿ ಕಡು ಮೂರ್ಖತನದಿಂದ ಭ್ರಮೆಗೊಂಡೆನೋ ಸಡಗರದಿ ಕಿವಿಗೊಟ್ಟು ಕಿಂಕಿಣಿಯ ದ್ವನಿಗಳನು ಎಡಬಿಡದೆ ಕೇಳುತಿಹ ಹರಿಣನಂತಾದೇ 1 ತೊಡೆಗÀುಹ್ಯ ಕುಚಗಳಿಗೆ ಅನುದಿನವು ನಲಿಯುತ್ತ ಮಡದಿಯರ ಅಂಗ ಸಂಗದ ನಂಬುತಾ ಒಡಲ ಶಾಂತಿಯಗೊಳಿಸೆ ಬಡಿಗೋಲು ಕೆಡಹಿಕೊಂ ದಡಗುತಿಹ ಮೂಷಕನ ತೆರದಲ್ಲಿ ಕಳೆದೇ 2 ನಿರುತದಿಂ ಪರಸತಿಯ ಲಾವಣ್ಯವನು ನೋಡಿ ಚರಿಸಿತೆನ್ನಯ ಮನವು ಅವಳ ಕೂಟಕ್ಕೇ ಉರಿವ ದೀಪವ ಕಂಡು ಕನಕ ಮಣಿಯೇಯೆಂದ ಎರಗುತಿಹ ಹುಳದಂತೆ ಹಾಳಾದೆ ಬರಿದೇ 3 ಜರಿದು ನಿಜವೃತ್ತಿಯನು ಪರದಾಸ್ಯದಲಿ ಮುಳುಗಿ ಪೊರದೆ ಹೊಟ್ಟೆಯನಾ ಪರಾನ್ನ ಭಕ್ಷದಲೀ ಹರುಷದಿಂ ಬಲೆಯತುದಿ ಮಾಂಸಕ್ಕೆ ಮೆಚ್ಚಿದಾ ಮರುಳಾ ಮೀನಿನ ಗತಿಯು ಯನಗಾಯ್ತು ನಿಜದೀ4 ನಾರಿಯರ ಜಾಲಕ್ಕೆ ಪ್ರತಿದಿನವು ಸಿಲುಕುತ್ತ ಮಾರಿಯರ ಸಾಕಿ ನಾ ಫಲವ ತಿಂದೆ ಭ್ರಮರ ಸಂಪಿಗೆಯಸಳ ಸಾರಿ ಕೊಡಲೆ ಮೃತ್ಯುವಶವಾಗುವಂತೇ 5 ಮೂರಾರು ಶತ್ರುಗಳು ತರಿದೆನ್ನ ಮನವನ್ನು ಗಾರು ಮಾಡುತಲಿಹವು ತಿಳಿಯದಾ ಹರಿಯೇ ನರಸಿಂಹನೇ ಐದು ಇಂದ್ರಿಯವ ಗೆಲಲಾರೆ ಭೂರಿ ಭಕ್ತಿಯೊಳೆರಗಿ ಮರೆಹೊಕ್ಕೆ ಕಾಯೋ 6 ಪನ್ನಗಶಯನ ಶ್ರೀ ವೇಣುಗೋಪಾಲನೆ ಚನ್ನಿಗಕೇಶವನೇ ದೂರ್ವೇಶನೇ ನಿಂನನಾ ಬಿಡಲಾರೆ ಮಾರಮಣ ಪೊರೆಯಂನ ಯೋನಿ ಜನ್ಮಕೆ ಮುಂದೆ ಬರದಂತೆ ಮಾಡೋ 7
--------------
ಕರ್ಕಿ ಕೇಶವದಾಸ
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು
ನಲ್ಲ ಕೃಷ್ಣನ ಬರಹೇಳಿಂದುಮುಖಿಯೇನಿಲ್ಲದೇ ಕರೆತಾರೆ ಪೋಗಿಂದು ಸಖಿಯೇ ಪಗುಲ್ಲು ಮಾಡದೇ ನೀನು ಗುಟ್ಟಾಗಿ ಪೇಳಿನ್ನುಸುಳ್ಳಲ್ಲ ಕಬ್ಬಿಲ್ಲನುರುಬೆ ಸೈರಿಸಲಾರೆ ಅ.ಪತೊಂದರೆ ಏನಿಂದು ಪರ್ವ ದಿವಸವಲ್ಲಸುಂದರ ಮೇಷ ಸಂಕ್ರಾಂತಿ ಏನಲ್ಲಾ ||ಹಿಂದು ಮತದ ಎಳ್ಳಮಾವಾಸೆಯಲ್ಲಾಚಂದಿರ ಮುಖಿ ಯುಗಾದಿಯ ಪಾಡ್ಯವಲ್ಲಾ 1ಭಾನುಬಿದಿಗೆ ಅಕ್ಷತ್ತದಿಗೆ ಏನಲ್ಲಾವಿನಾಯಕನ ಚೌತಿ ನಾಗರಪಂಚಮಿಯಲ್ಲಾ ||ಸಾನುರಾಗದ ಚಂಪಾ ಷಷ್ಠಿ ರಥಸಪ್ತಮಿಗೋಕುಲಾಷ್ಟಮಿಯಲ್ಲಾ ಮಹಾ ನವಮಿಯಲ್ಲ 2ಎತ್ತಿದ ದಶಮಿ ಪ್ರಥಮೈಕಾದಶಿಯಲ್ಲಾಉತ್ಥಾನ ದ್ವಾದಶಿಶನಿತ್ರಯೋದಶಿಯಲ್ಲಾ ||ಉತ್ತಮನಂತ ವ್ರತ ನೂಲಹುಣ್ಣಿಮೆಯಲ್ಲಾಚಿತ್ತಜನಾಟಕ್ಕೆ ಗೋವಿಂದ ಬರಲಿಲ್ಲಾ 3
--------------
ಗೋವಿಂದದಾಸ
ಮಧ್ವಮುನಿಮನಮಂದಿರನಿವಾಸ ಸಿರಿಕೃಷ್ಣಶುದ್ಧರಿಗೆ ಸದ್ಗತಿ ಮಿಶ್ರರಿಗೆ ಮಧ್ಯವುಸತ್ವರಿಗೆ ನವವಿಧ ಭಕುತಿಯನೆ ತೋರಿಸಿಒಬ್ಬರ ಕರ್ಮದಲಿ ಒಬ್ಬರು ರತರಾಗೆದೇಹ ಸಂರಕ್ಷಣೆಯಲ್ಲಿ ಇನ್ನುದುಷ್ಟಜೀವ ದುಷ್ಟಶಾಸ್ತ್ರ ದುಷ್ಟಕರ್ಮಗಳಿನ್ನುಈ ವಿಧದಲಿನಿತ್ಯಪೊರೆದು ಎನ್ನ ಮರೆದೆ
--------------
ಗೋಪಾಲದಾಸರು
ಸತ್ಯಭಾಮಾವಿಲಾಸಶ್ಲೋಕಶ್ರೀ ಬ್ರಹ್ಮೇಶ ಸುರೇಂದ್ರ ಪೋಷಕಹರಿದ್ವಾರಾವತೀಲ್ಬಾಳ್ದನುಶ್ರೀ ಭೈಷ್ಮೀವರ ಸತ್ಯಭಾಮೆಯ ಬಹು ಸಾಸ್ರಾಂಗನೇರಾಳ್ದನುಈ ಭೂಭಾರಹರಾವತಾರ ಯದುಪಂ ನರ್ಲೀಲೆಯಂ ತಾಳ್ದನುಸೌಭಾಗ್ಯಾಂಬುಧಿ ಕೃಷ್ಣನಯ್ಯ ಜನಕಾನಂದಾಬ್ಧಿಲಿಟ್ಟಾಳ್ದನು 1ಸೌಪರ್ಣಾಂಸದಲಿಟ್ಟು ದೇವ ತರುವ ಸತ್ಯ ಸಹಾ ಒಪ್ಪುವಆಪನ್ನಾನ್ವಯ ಕಾಮಧೇನೆನಿಸುವ ಅಧ್ಯಾತ್ಮ ಶ್ರೀಮಾಧವಈ ಪದ್ಯಂಗಳ ಪೇಳಿಸಿದನು ದಯಾಬ್ಧಿ ಪಾರಿಜಾತಾಖ್ಯವಗೋಪಾಲೇಶನ ಪಾದಪದ್ಮ ನೆನೆವೆ ಆನಂದವಂ ಬೇಡುವೆ 2ಪದಶ್ರೀಕೃಷ್ಣ ದ್ವಾರಕಾನಗರದಿ ಪ್ರೇಮದಾನೀಕದಿ ರಾಜಿಸಲಾಗನಾಕದಲರು ಒಂದು ನಾರದ ತಂದಿರೆಶ್ರೀಕಾಂತನಿತ್ತ ರುಕ್ಮಿಣಿಗೆ 3ಒಂದು ಹೂವಿನ ಪರಿಮಳವುನಗರತುಂಬಿಇಂದುವದನೆಸತ್ಯಭಾಮೆಇಂದುಗೋವಿಂದ ರುಕ್ಮಿಣಿಗೆ ಕುಸುಮವಿತ್ತನೆಂದು ಕೇಳ್ದಳು ಸುಸ್ವಭಾವೆ 4ಶ್ಲೋಕಅರ್ಧಾಂಗಿಯಲಿ ಸ್ನೇಹವೆಗ್ಗಳಕಣಾ ಮುದ್ದಿಸಿ ಹೂವಿತ್ತನುಇದ್ದೇನಿನ್ನು ವೃಥಾ ಭುವಿಯಲಿ ಸಖಿ ನಿರ್ದೇಹವಂ ಸಾರ್ವೆನುಕದ್ದು ಬೆಣ್ಣೆಯ ಮೆದ್ದು ಪುಂಶ್ಚಲಿಯರೊಳಿದ್ದಾತನ ಬುದ್ಧಿಯತಿದ್ದಿ ನೋಡಿದೆ ಸೋತೆ ಎನ್ನ ನಳಿತೋಳ್ಹೊದಿಸಿ ನಾ ಶೌರಿಯ 5ಸಾಕಿನ್ನಾತನ ಚಿತ್ತಪಲ್ಲಟಸಟೆಆ ಕಾಮಿನಿಪ್ರಿಯನನೂಕದಿನ್ನಿರೆ ಎನ್ನ ಮಂಚಕೆ ಬರಲ್ಪೋಕ ಸ್ಮರನಯ್ಯನಯಾಕಿನ್ನಾಭರಣಾಂಬರೋತ್ತರಿ ಸಖೀ ಏಕಾಗ್ರನೇಕಾಂಗನನೀಕಂಡ್ಹೇಳವಮಾನ ತಾಳಳು ಸಖಿ ಜೋಕಿನ್ನು ನಿನ್ಬಹುಮಾನ6ಪದಕ್ರೋಧ ಕಳವಳಿಕೆ ಮುನಿಸಿನಿಂದಲಿ ಸತ್ಯವಾದಿ ಸತ್ರಾಜಿತ ಕನ್ಯೆಮೇದಿನಿಮೇಲೆ ಮಲಗಿದಳು ಧೊಪ್ಪನೆ ಮಂಚಕೈದದೆ ನಿತ್ಯಸುಖಿ ಧನ್ಯೆ 7ಬಿಸಿ ಬಿಸಿ ನಿಟ್ಟುಸಿರ್ಗರೆದು ಕೋಮಲ ಮುಖಶಶಿಯ ಕಸ್ತೂರಿ ಅಂಗಯ್ಯಲೊರೆಸಿಬಿಸಜಾಕ್ಷಿ ಕಂಬನಿದುಂಬೆ ಒರತೆಯಿಟ್ಟುಎಸೆವಕಜ್ಜಲಜಲ ಸೂಸಿ 8ಶ್ಲೋಕವಕ್ಷೋಜಾತದ ಹೊನ್ನ ಕುಪ್ಪಸವನು ಅಕ್ಷೋದದಿಂ ತೋಯಿಸಲ್ಸಾಕ್ಷಾನ್ಮಂಗಳ ಮುತ್ತಿನ್ಹಾರ ಕಡಿದಳ್ ಲಕ್ಷಾಭರಣ್ಬಿಟ್ಟಳುತಾ ಕ್ಷೋಣಿಯನು ಹೊಂದಿ ಬಿದ್ದು ಬೆಮರ್ದಳ್ಅಕ್ಷಯಸೌಗಂಧಿಯಳ್ಪಕ್ಷಿವಾಹನ ಮಾಡಿದ ಉಪಕಾರ ಲಕ್ಷಿಸಿ ಹಾಯೆಂದಳು 9ಹಾ ಹಾ ಕೈತವ ಮೀನ ಜೃಂಭಕಮಠಹಾ ಹೈಮದೃಘ್ಘಾತಕಹಾ ಹಾ ನಿಷ್ಕರುಣಾಂಗ ಶಿಕ್ಷಕ ಹರೆ ಹಾ ಹಾ ಬಲಿರ್ವಂಚಕಹಾ ಮಾತೃ ಮೃಗಾರ್ದ ಜಾರವ್ರತ ಹಾ ಹಾ ಹಾ ಕಲಿರ್ಮಾರಕಹಾ ಹಾ ಮದ್ಗøಹ ದೂರಕ ಪರಸಖ ಆಶಾಬ್ಧಿ ಸಂಶೋಷಕ10ಪದತಾಳಿನ್ನು ತಾಳೆಂದು ತವಕದಿ ಸವತಿಯಮೇಲೆ ಕೋಪಿಸಿ ಸತ್ಯಭಾಮೆಜಾಲಕ ಮಾಲೆಯ ಹರಿದು ಚಿಮ್ಮಿದಳತ್ತಮೇಲೆಣ್ಣೆಗಂಟ ಹರಹಿದಳು 11ಮೂರ್ಛೆಯೊಳ್ಮೈಮರೆದಂತೆ ತೇಲ್ಗಣ್ಣ ಹಾಕಿದುಶ್ಚಿಹ್ನ ಲೀಲೆಯ ತೋರೆನಿಶ್ಚಲ ಭಾವೆಯನರಿತೆತ್ತಿ ಒಯ್ದರುಒಚ್ಚೇರೆಗಂಗಳೆಯರು ಬೆದರಿ12ಶ್ಲೋಕಧೈರ್ಯಂಗೆಟ್ಟ ಮೃಗೇಂದ್ರ ನಾರಿಯಿವಳೊ ನ್ಯೆರಾಶ್ಯ ಬಳ್ಳ್ಯಿಹಳೊವೈಮಾನಿಕರ ದೇವತ್ಯಾಕೆ ಮುನಿದಳಯ್ಯಯ್ಯೊ ಸೌಜನ್ಯಳೊಮಯೂರಭ್ರಮುಡೇಳ್ ಮಹಾಪತಿವ್ರತೇಳ್ಮತ್ತೇಭ ಗಾಮಿನಿಯಳ್ಕೈವಲ್ಯಜÕರು ಬಲ್ಲರೀಕೆಯ ಬಗೆ ಕಾಯಯ್ಯ ಕೃಷ್ಣಯ್ಯನೆ 13ಎತ್ತೊಯ್ದು ಮೃದುತಲ್ಪಮಂಚಕವಳ ಮತ್ತಾಲವಟ್ಬೀಸಲುಫೂತ್ಕಾರಂ ಕಿವಿಯೊಳ್ಪೂರೈಸಿ ನುಡಿಸಲ್ಸತ್ಯಂಗನೆ ಸುಮ್ಮನೆಪ್ರತ್ಯುತ್ತರಗೊಡದಿರಲು ಬೆದರಿವರ್ಚಿತ್ತಜನೈಗ್ಹೇಳಿದರುಮುಕ್ತಕೇಶಿಯ ವಾರ್ತೆ ಕೇಳಿದು ಬಹು ಚಿತ್ರವಿಚಿತ್ರೆಂದನು 14ಪದದೂತೇರ ನುಡಿಗ್ಯದುನಾಥನು ಮನ್ನಿಸಿಆತುರದಲಿ ನಡೆತಂದುಪ್ರೀತಿಗಗ್ಗಳೆ ಸತ್ರಾಜಿತ ಸಂಜಾತಳೆನೀತವೆ ನೀ ಮುನಿದಿಹುದು 15ಎಂದು ಮಂಚದಲಿ ಕುಳಿತು ಪ್ರಾಣನಾಥೆ ಬಾಇಂದುವದನೆಮಾತನಾಡೆಕಂದ ಕಂದರ್ಪನಾಣೆ ಕಪಟವಿಲ್ಲೆನ್ನಲ್ಲಿಕಣ್ಣೆರೆದಿತ್ತಲೊಮ್ಮೆ ನೋಡೆ 16ಶ್ಲೋಕಕಸ್ತೂರಿ ತಿಲಕಿಲ್ಲ ನಿನ್ನ ಪಣೆಯೊಳ್ಮುತ್ತಿನ ಬೊಟ್ಟಿಲ್ಲವೆಮತ್ತೇನ್ಭೂಷಣವೇಣಿ ನಿನ್ನ ನೊಸಲೊಳ್ಮುತ್ತಿನಮಣಿಇಲ್ಲವೆರತ್ನಾಂಕಾಭರಣಿಲ್ಲ ನಿನ್ನ ಶ್ರುತಿಯೊಳ್ಮತ್ವಜ್ರದೋಲಿಲ್ಲವೆಹತ್ತೆಗಟ್ಟಿದ ನಿಷ್ಕಕಂಠ ಪದಕಿಲ್ಲ ಒತ್ತಾದ ಹಾರಿಲ್ಲವೆ 17ವ್ಯತ್ಯಸ್ತ ಸ್ತನಪಟ್ಟಿಕೆ ರುಚಿರ ಶ್ರೀ ಗಂಧಾನುಲೇಪಿಲ್ಲವೆಸ್ವಸ್ತಂಬ್ರ ಸ್ಮರಣಿಲ್ಲವೆ ಮಮಸಖಿ ಸ್ವಸ್ಥಾಗುಸುರ್ಭಾವೆ ನಂಬು ಸ್ತ್ರೈಣರ್ಬಗೆ ತೋರಿದೆ ಸ್ವಸುಖದಿ ತಾ ಸ್ತ್ರೈಣನಲ್ನಿಶ್ಚಯಹೇ ಸ್ತ್ರೀರತ್ನಶಿಖಾಮಣಿರಮಣಿ ಕೇಳ್ದುಶ್ಚಿತ್ತ ಮಾಣೆಂದನು 18ಪದಈಪರಿಭಾವೆಯ ಚರಣದೆಡೆ ಕುಳಿತುಶ್ರೀಪತಿ ಪ್ರಾರ್ಥನೆ ಮಾಡೆತಾ ಪತಿಯೊಡನೊಂದು ಮಾತನಾಡಳುಸತಿತಾಪದ್ವಿಗುಣಿಸಿತು ಕೇಳಿ 19ಮಾನಭಂಗವ ಮಾಡಿದ ಮೇಲೆಂತು ಬಹುಮಾನವನೊಲ್ಲದಿಹ ಸತಿಯತಾನೆತ್ತಿ ತೊಡೆ ಮೇಲೆ ಮಲಗಿಸಿಕೊಂಡು ದುಮ್ಮಾನವ ಬಿಡಿಸುವ ಹರಿಯು 20ಶ್ಲೋಕಮಾನವಮನ್ನಿಸಿದಾಕೆಯ ಸ್ಥಿತಿಯನು ಶ್ರೀನಾಥ ಕಂಡೆಂದನುಏನೆಮಾನಿನಿನಿನ್ನ ಕೋಪ ಬಿಡದೆ ನಾ ನೋಡಿದೆ ಕಲ್ಲೆದೆಮನುಷ್ಯರೊಳುದಾವಸ್ತ್ರೀಗೆ ಸಲಿಗೆ ತಾನಿತ್ತವಂಗೀ ಬಗೆತಾನೆ ತೋರಿದೆವಿಶ್ವಶಿಕ್ಷಿಕ ಗಡಾ ಏನಾಶ್ಚರ್ಯ ಗಡಾ 21ಎಚ್ಚೆತ್ತೆನ್ನೊಳು ಮಾತನಾಡೆ ಪ್ರವುಢೆ ಹುಚ್ಚಾಗದಿರೆಂದನುಸಚ್ಚಿನ್ಮೂರ್ತಿಯ ಮಾತಕೇಳಿ ಕುಳಿತಳ್ವಚ್ಚೆರೆಗಣ್ಮುರಿಯಲುಉಚ್ಚಾರಂ ಗದಗದ್ಗಿಸಿ ಸ್ಛುರಿತಾಧರೆಗಚ್ಚಗ ತಾನೆಂದನುಉಚ್ಚಾರದೊಳಗೊಂದು ನಿನ್ನ ಮನದ ಮಚ್ಚಾಟ ಬೇರೆಂದಳು 22ಪದನಾರಿ ಪತಿಯ ಬಿಟ್ಟು ದೂರದಿ ಕುಳಿತಳುವಾರೆ ನೋಟದ ಬೆಡಗಿನಲಿಜಾರಿದ ಸೆರಗೆದೆಗೇರಿಸಿ ಹೊದ್ದು ಮುರಾರಿಗೆ ವಾರೆ ಮುಖದಿರುಹಿ 23ಕಪಟನಾಟಕ ನಿನ್ನ ಮಾಯವಗಾಧವುಕಪಟಗಿತ್ತಿಗೆದಿವ್ಯಕುಸುಮಅಪಮಾನ ಸತ್ಯಳಿಗೆಮಾನಬಂಗಾರಿಗೆಚಪಲತೆ ತಿಳಿಯದು ನಿನ್ನ 24ಶ್ಲೋಕಕೇಳ್ನಾರೀಮಣಿ ನಾರದ ಕುಸುಮದ ಅರಳೊಂದು ಪಾದಾಬ್ಜಕೆನಲ್ವಿಂದರ್ಪಿಸಲಾಗ ಯೋಚಿಸಿದೆ ನಾ ಚೆಲ್ವ ಅಮರ್ಭೂರುಹಬಲ್ವಿಂದೀ ನಗರಕ್ಕೆ ನಿನ್ನ ಮನೆಯಂಗಳದೊಳು ಸ್ಥಾಪಿಸುವಉಲ್ಲಾಸಂ ಪಿಡಿದಿರ್ದೆ ನಾಕುಸುಮಜೇಷ್ಠಳ್ಗೀಯೆ ನೀ ಮುನಿವರೆ25ಹೂವೊಂದಾಕೆಗೆ ಕೊಟ್ಟೆ ಸಾಕು ತರುವ ನಿವಾರಿಸಿ ವಜ್ರಿಯಗರ್ವಿಂ ನಿನ್ನಿದಿರಲ್ಲಿ ಕೊಂಡು ಬಹೆ ನಾ ಭವ್ಯಾಂಗಿ ಕೇಳ್ಭಾಮಿನಿದಿವ್ಯಾಮೋದಮಯ ದ್ರುವiಂ ಸುರರಿಗಂ ಸೇವ್ಯಾದುದ ನಿನ್ನಯಭವ್ಯಂಗಳದೊಳಗಿಟ್ಟು ಮೆಚ್ಚಿಸುವೆ ನಾ ನವ್ಯಾದ್ಭುತಂನೋಡುನೀ26ಬಿನ್ನಣೆ ಮಾತಲ್ಲ ನಿನ್ನಾಣೆಭಾವಕಿಇನ್ನು ದುಮ್ಮಾನವೇಕೆನ್ನುತಾಚೆನ್ನಿಗರರಸನು ರಮಣಿಯ ನಳಿತೋಳಚೆನ್ನಾಗಿ ಸೆಳೆದಪ್ಪಿಕೊಳುತ 27ಎನ್ನ ಶಪಥÀವಿದು ನಿನ್ನೆತ್ತಿ ಖಗವೇರಿಕನ್ನೆ ಶಚಿಯ ಮನೋಹರನಮನೆಗೆ ಹೋಗಿ ವಿಜಯರವದಿ ತಂದುರನ್ನದತರುನಿನಗೀವೆ ನಾ 28ಶ್ಲೋಕಹೀಗೆಂದಾಕೆಯಮೆಚ್ಚಿಸಿದನುಆ ವಿಯೋಗಿಯಸಂಯೋಗಿಯಭೋಗಭಾಗಾಶೆಯ ನಿಯತಿ ಸುಖಿಯಾ ತ್ರೈಗೇಹ ಸಂಸ್ಥಾನಿಯಾಯೋಗೇಶೇಶ್ವರ ತನ್ನ ಪಾಶ್ರ್ವದಿ ದಿವಿಪ ನಾಗೇಶೈರ್ವಂದಿಯಾಶ್ರೀಗೋವಿಂದ ಮನುಷ್ಯರ ತೆರದಲಿ ಹೀಂಗಾಡಿದ ಲೀಲೆಯ 29ಬಾ ಸತ್ರಾಜಿತ ಗರ್ಭಸಿಂಧು ಸುಮಣಿ ಬಾ ಸೋಮಬಿಂಬಾನನೆಬಾ ಸೌಂದರ್ಯದವಾರಿಧಿಪರಮೆ ಬಾ ಬಾ ಸತ್ಯಭಾಮೆ ರಮೆಬಾ ಸಂಧ್ಯಾರುಣದಂಬಕಿ ಸುಕಬರೆ ಬಾ ಸ್ವಚ್ಛ ಬಿಂಬಾಧರೆಬಾ ಸದ್ರತ್ನದ ಭೂಷಣೆ ಪ್ರಸನ್ನವಾಗೆ ಸರ್ವತೋಷಾಂಗನೆ 30ಪದನಿನಗಾಗಿ ವೇದ ಕದ್ದವನ ಕೊಂದೆನಿನಗಾಗಿ ನನ್ನುದಧಿಯಲ್ಲಿ ನಿನ್ನ ತಂದೆನಿನ್ನ ಕದ್ದವನ ಕೊಂದೆ ನೀ ಬರಲೆತ್ತಿದೆನಿನ್ನ ಭಾಗ್ಯದ ಸಖಿ ಹಿಡಿದೆ 31ನಿನ್ನ ಭಾರವ ತೆಗೆದೆ ನಿನಗಾಗ್ಯಟವಿಯಲ್ಲಿದ್ದೆನಿನ್ನಮುನಿಸುತಿಳಿಯ ಬಂದೆನಿನ್ನನೆ ಮೆಚ್ಚಿ ಅನ್ಯ ಕನ್ಯೇರ ವ್ರತವನಳಿದೆನಿನ್ನ ಪುಣ್ಯದ ಬೆಳಸ ಬೆಳೆದೆ 32ಶ್ಲೋಕಶ್ರೀಶೌರಿಸರಸೋಕ್ತಿಯಿಂದ ಸತಿಯ ಲೇಸಾಗಿ ಸಂತೈಸುತಆಸ್ಯಾಬ್ಜಾಂಕಿತ ಸ್ವೇದವನ್ನು ಸುಮುಖವನೊತ್ತಿ ಆರೈದನುಕೇಶ ನೇವರಿಸುತ್ತ ತಾ ಚತುಷ್ಕಪರ್ದಾ ಸತ್ಯಭಾಮಿನಿಗೆಶ್ರೀಶ ಮಂಡಿಸಿ ವೇಣಿಯಲ್ಲಿ ಇಡುವ ಭೂಷಣಗಳನಿಟ್ಟನು 33ಕಸ್ತೂರಿ ತಿಲಕಿಟ್ಟ ನೇತ್ರಯುಗಕೆ ಮತ್ತಂಜನವಿಟ್ಟನುವೃತ್ತಾದ ಸುಕಪೋಲದೊಳ್ಮಕರಿಕಾ ಪತ್ರಂಗಳನಿಟ್ಟನುಮುಕ್ತಾಹಾರಪ್ರವಾಳನೀಲಮಣಿಗಳ್ವತ್ತಾದ ಸ್ವರ್ಣಮಾಲಿಕಾರತ್ನಾಂಕಾಭರಣಿಟ್ಟನು ಯದುಪತಿ ಸತ್ಯಂಗನಾಪ್ರಿಯನು 34ಪದಮುಡಿಗೆ ಮಲ್ಲಿಗೆಯ ಮುಡಿಸಿದ ಮದನನಯ್ಯಮಡದಿಯೆದೆಗೆ ಮಲಯಜವಕಡು ನರ್ಮೋಕ್ತಿಗಳಲ್ಲಿ ಪೂಸಿದ ಘನಶ್ಯಾಮಬಿಡು ನಿನ್ನ ಖತಿಯೆಂದ ದೇವ 35ಕೋಟಿ ಚಂದ್ರಾರ್ಕ ಲಾವಣ್ಯನರ್ಧಾಂಗಿಗೆಕೋಟಿ ಕೋಟ್ಯಾಭರಣಿತ್ತನೋಟ ಬೇಟದಿ ಮನೋರಥವ ಪೂರೈಸಿದನಾಟಕಸೂತ್ರನಿರ್ಲಿಪ್ತ 36ಶ್ಲೋಕಇತ್ಯಾದಿ ಬಹುಮನ್ನಿಸಿ ಗರುಡನ ಹತ್ತಿದ ಸ್ವಸ್ತ್ರೀ ಸಹನಿತ್ಯಾನಂದಮಯ ಸ್ವರೂಪ ಅಮರಾವತಿಗೆ ಪೋಪನ್ನಕಪೃಥ್ವೀಜಾತನು ಮತ್ತನಾಗಿ ಅಮರರ್ಮೊತ್ತವ ಬಾಧಿಸಲುಇತ್ತೀ ಕಾರ್ಯವ ಬಿಟ್ಟು ಮುಂಚೆ ನಡೆದ ಜೆÉೂೀತಿಷ್ಮತಿಸ್ಥಾನಕೆ 37ಹೋಗಿ ಆ ನರಕನ್ನ ಸೀಳಿ ಭೌಮಿಜಗಿತ್ತನು ಭಾಗ್ಯವಸೌಗಂಧಿಯರ ಷೋಡಶ ಸಹಸ್ರರ ಯೋಗಾರ್ಹರಂ ತಂದನುಶ್ರೀ ಗೋಪೀಜನ ಮೋಹನಾಘಹರಣ ಹೋಗ್ವಾಗ ಸ್ವರ್ಧಾಮಕೆಆಗಿತ್ತಾಕುಂಡಲಅದಿತಿಗೆ ಮ್ಯಾಗಿಂದ್ರನಿಂ ಸಂಪೂಜ್ಯನು 38ಪದಶಚಿಯರಸನು ಪೂಜಿಸಿದ ಮೇಲೆ ರಾಣಿಯಉಚಿತಕೆಮಂದರತರುವಮುಚುಕುಂದವರದನು ತರುತಿರೆ ಅಮರರನಿಚಯಸಹಿತ ಕಾದಿದಿಂದ್ರ 39ಗರುಡನ ಗರಿಯ ಗಾಳಿಯಲೆಲ್ಲರೋಡಿಸಿಧÀರೆಗೆ ತಂದನು ದ್ವಾರಾವತಿಗೆಅರಸಿಯಂಗಳದೊಳು ನಿಲಿಸಿದ ತರುಮೂಲಸರಿ ಲೆತ್ತವಾಡುವ ಎಂದಳಾಗೆ 40ಶ್ಲೋಕಪಾರಿಜಾತದ ಮೂಲ ಚೈತ್ಯದಲ್ಲಿನ ಶ್ರೀರಂಗ ರತ್ನಾಸನಸಾರಿ ಇಬ್ಬರು ಲೆತ್ತವಾಡುವಹರಿನಾರೇರ ಮುಂದೆನ್ನನುಭೂರಿಮಾನಿಯಮಾಡುಸ್ವಾಮಿ ಎನಲು ಕಾರುಣ್ಯ ವಾರಿನಿಧಿಧಾರಿಣಿಯಲ್ಲಿ ಸ್ತ್ರೈಣನೆಂಬರು ಸಖಿ ಈ ರೀತಿ ಮಾಣೆಂದನು 41ನೀ ಲೆತ್ತವನು ವೃಕ್ಷ ಮೂಲದಲಿ ಎನ್ನೊಳಾಡ ಒಲ್ಲೆಂದರೆಮೇಲೀಅಂಬರಭೂಷಣೇಕೆ ವಿಭುವೆ ಮೇಲೀ ಶರೀರೇತಕೆಶ್ರೀಲೋಲ ಶರಣೇಚ್ಛದ ಎನಿಸುವ ನಿನ್ನ ಬಿರುದೇತಕೆಬಾಲೇರ್ಮುಂದಪಹಾಸ್ಯವಾಯಿತೆನುತ ಲೋಲಾಕ್ಷಿ ತಾ ಮುನಿದಳು42ಪದಹಂಸದುಪ್ಪಳದ ಸುಪ್ಪತ್ತಿಗೆ ಮಂಚದಿ ರಾಜಹಂಸಗಮನೆ ಮುನಿದು ಮಲಗೆಮಾಂಶಳು ಕದವನಿಕ್ಕಿದಳು 43ನೀನೆಂದ ಮಾತ ನಡೆಸುವೆ ಮುನಿಯದಿರುಮಾನಿನಿರನ್ನೆ ಕದತೆರೆಯೆಶ್ರೀನಾಥ ಹೀಗೆ ಮನ್ನಿಸಿ ಕದತೆರೆಸಿದ ದಯಾನಿಧಿ ಪ್ರಸನ್ವೆಂಕಟೇಶ 44ಶ್ಲೋಕಲಕ್ಷ್ಮೀ ಭೂರಮಣ ಭವಾಬ್ದಿಮಥನಪಕ್ಷೀಂದ್ರಸದ್ವಾಹನಮೋಕ್ಷಾಧೀಶವಿರಿಂಚಿವಾಯುಫಣಿಭೂ ತ್ರ್ಯಕ್ಷೇಂದ್ರ ದೇವಾಯನವಕ್ಷೋಜಾವರ ಸುಂದರಾಗ್ರಣಿ ವರಲಕ್ಷ್ಮೀ ಮನೋನಾಯಕರಕ್ಷಿಸಿದನು ಸ್ವಸ್ತ್ರೀಯ ನೆರೆದನು ಸಾಕ್ಷಾತ್ ಪ್ರಸನ್ವೆಂಕಟ45ಅನಂತಾಬ್ಬ ಭವಾಂಡ ಹುಟ್ಟಿ [ಸಿ] ಸ[ಲಹು] ವತಾನೇ ಬಯಲ್ಮಾಡುವತಾ ನಿರ್ಲಿಪ್ತ ಸದಾಗಮೈಕ ಸುವಿಜಯಾನಂದ ಪೂರ್ಣಾತ್ಮನುಈ ನಾಟ್ಯವನು ತೋರಿದ ಸುಜನರಿಗಾನಂದ ವೃದ್ಧಿಕರತಾನಾಡಿದನು ಲೆತ್ತವ ಸತಿಗೂಡಜ್ಞಾನಿಪ್ರಸನ್ವೆಂಕಟ 46ಪದಮಂಗಳಾತ್ಮಕ ವಿಶ್ವನಾಟಕವಾಡಿದ ಸತ್ಯಂಗನೆಯೊಳು ಲೆತ್ತದಾಟಅಂಗನೆಷೋಡಶ ಸಹಸ್ರರ ಸೋಲಿಸುವರಂಗ ಪ್ರಸನ್ನವೆಂಕಟೇಶ 47ಶ್ರೀ ಸುರವೃಕ್ಷತಳದಿ ರತ್ನಾಭರಣಮಯನೀ ಸೋತೆ ಸತ್ಯಭಾಮಿನಿಯೆಂದರೆಹರಿನೀ ಸೋತ್ಯೊ ಪ್ರಸನ್ನವೆಂಕಟೇಶ 48ಲೇಶ ಹಾಸದಿ ಜಗತ್ಪ್ಪ್ರಪಂಚವ ತೋರುತ್ತವಾಸುದೇವಪ್ರಕೃತಿ ಗೂಡಿಈ ಶೋಭಿಸುವ ದ್ವಾರಕಾ ನಗರದಲಿದ್ದಪ್ರಸನ್ವೆಂಕಟೇಶನ ನೋಡಿ 49ಅನಂತದೇಶದಿ ಅನಂತ ಕಾಲದಿಅನಂತ ಸದ್ಗುಣಸಾಂದ್ರದೀನ ದಯಾನಿಧಿ ಪ್ರಸನ್ನÉಂಕಟ ಕೃಷ್ಣಮನುಷ್ಯಲೀಲೆಯ ತೋರಿದ 50ಈ ಸತ್ಯಭಾಮಾವಿಲಾಸದ ಪದ್ಯಪದಲೇಸಾಗಿ ನರನಾರಿಯರುತೋಷಭರಿತರಾಗಿ ಪಾಡಲು ಸುಖವೀವಶ್ರೀಶ ಪ್ರಸನ್ನವೆಂಕಟೇಶ 51
--------------
ಪ್ರಸನ್ನವೆಂಕಟದಾಸರು