ನಲಿದಾಡು ಬಾರೊ ಗರುಡತುರಂಗಾ ಪ
ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು
ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ 1
ಲೋಲ ಲೋಚನೆಯರ ಆಲಯಗಳ ಪೊಕ್ಕು
ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ 2
(ಭವ ಬಂಧವು ನಾಮಪ್ರಿಯ ಪರಂಧಾಮನೇ) 3
ಆವ ಬಂಧವನ್ನೂ ಬಿಡಿಸಿ ನವನೀತವೀವನೇ
ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ 4
ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ
ನಾಮವ ನೆರೆಸಾರು ರಾಮದಾಸಾರ್ಚಿತ 5