ಯಾದವರಾಯ ಮಾರಬೇಕು ಮೊಸರಾಬಾರೆ ಗೊಲ್ಲ ಮೊಸರು ಮೊಸರೆನುತಲಿ ಮೇಲು-ಗೇರಿಗೆ ಬರುತಿರೆ ಕಂಡು ನೀಲವರ್ಣದ ಗೋವಳಸೆರಗು ಪಿಡಿದು ಲತಾಂಗಿಯ ತಡೆದಾ 1
ಮೊಸರ ಮಾರಬಂದವಳಲಿ ಸೆಣಸದಿರುಶಶಿನೀರೆ ಎಲ್ಲೆಂದಡತನವೆ ಬೇಡ ಈವಸುಧೆಯೊಳರಸಿಲ್ಲವೆ ನೀ ದೂರಸಾರಲೋಪಶುಗಾಹಿ ಬಿಡು ಎನ್ನ 2
ಲಂಡತನವು ನಮ್ಮೊಡನೆ ಕೊಳ್ಳವು ಹೋಗುಕಂಡ ಕಂಡವರಿಗಂಜುವುದ ಬಿಟ್ಟು ನನ್ನದಂಡೆಯ ಪಿಡಿಯದಿರೋ ನಾ ಸಸಾರಲ್ಲೊಗಂಡನುಳ್ಳವಳು ಕಾಣೋ 3
ಉಟ್ಟ ಸೀರೆಯ ಪಿಡಿದೆಳೆಯದಿರೆಲವೋಪಟ್ಟಣ ಕೊಡೆಯರಿಲ್ಲವೆ ಹೇಳಾಪಟ್ಟಗಟ್ಟಿತೆ ನಿನಗೆ ನಾ ಹೇಳುವೆಕಟ್ಟೆಯ ತಳವಾರಗೆ 4
ಶಂಕಶೂರರುಹನ ಪಂಕಜಗಜನಿಮ್ಮಡೊಂಕ ದುರುಬಿಗೆ ಅಂಜುವಳಲ್ಲಬೋಂಕನೆ ಒಳಗಾದರೆ ಕಡೆಗೆ ನಮ್ಮಮಂಕುಮಾಡಿತು ಗೋವಳಾ 5
ಇತ್ತಿತ್ತ ಬಾರೆಲೆ ಸಖಿಮುತ್ತಿನ ಹಾರವನೀವೆ ಎನ್ನಒತ್ತಾರೆ ಕುಳಿತರೆ ಪದಕವನೀವೆ ಎನ್ನಅರ್ತಿಯ ಸಲಿಸಿದರೆ ನಾ ನಿನಗೆಮುತ್ತಿನೋಲೆಯನೀವೆನೆ6
ಅಣಿ ಮುತ್ತಿನ ಕಂಠಮಾಲೆಯ ನಿನಗೀವೆಜಾಣಿಗೊಲ್ಲತಿ ಬಾಲೆ ಎಲೆ ಬಾಲೆ ನಿನ್ನಜಾಣ ಜಡೆ ಲಕ್ಷ್ಮೀನಾರಾಯಣನ ನೆನೆವುತ7